ಬೆಳೆ ಹಾನಿ ಹಾಗೂ ಬೆಳೆ ವಿಮೆ ಹಣ ಬಿಡುಗಡೆ ಯಾರಿಗೆಷ್ಟು ಜಮೆ? ಇಲ್ಲಿ ಚೆಕ್ ಮಾಡಿ

Written by Ramlinganna

Published on:

Crop loss money release : ಬೆಳೆ ವಿಮೆ ಹಾಗೂ ಬೆಳೆ ಹಾನಿ ಪರಿಹಾರ ಹಣ ಬಿಡುಗಡೆಯಾಗಿದೆ. ಆದರೆ ಬಹುತೇಕ ರೈತರಿಗೆ ಬೆಳೆ  ಹಾನಿ ಹಣ ಯಾವುದು ಹಾಗೂ ಬೆಳೆ ವಿಮೆ ಹಣ ಯಾವುದು ಯಾರಿಗೆ ಬೆಳೆ ವಿಮೆ ಹಣ ಜಮೆಯಾಗುವುದು ಯಾವ ರೈತರಿಗೆ ಬೆಳೆ ಹಾನಿ ಪರಿಹಾರ ಹಣ ಜಮೆಯಾಗುವುದು ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ.

ಮುಂಗಾರು ಹಂಗಾಮಿಗೆ ಬೆಳೆ ಹಾನಿಯಾದ ರೈತರ ಖಾತೆಗೆ ಈಗಾಗಲೇ 1033.60 ಕೋಟಿ ರೂಪಾಯಿ ಬೆಳೆ ಹಾನಿ ಪರಿಹಾರ ಹಣ ಬಿಡುಗಡೆ ಮಾಡಲಾಗಿದೆ. ಬಹುತೇಕ ಎಲ್ಲಾ ರೈತರಿಗೂ ಅಂದರೆ ಯಾವ ಯಾವ ರೈತರ ಬೆಳೆ ಹಾನಿಯಾಗಿದೆಯೋ ಅವರ ಖಾತೆಗೆ ಹಣವೂ ಜಮೆಯಾಗಿದೆ.

ಹೌದು, ರಾಜ್ಯ ಸರ್ಕಾರವು ಗರಿಷ್ಠ 2 ಹೆಕ್ಟೇರಿಗೆ ಸೀಮಿತವಾಗಿ ಮಳೆಯಾಶ್ರಿತ ಬೆಳೆಗೆ ಹೆಕ್ಟೇರ್ ಒಂದಕ್ಕೆ 8500 ರೂಪಾಯಿಯಿಂದ 17 ಸಾವಿರ ರೂಪಾಯಿ ಜಮೆ ಮಾಡಲಾಗಿದೆ. ನೀರಾವರಿ ಬೆಳೆಗಳಿಗೆ ಹೆಕ್ಟೇರಿಗೆ 17 ಸಾವಿರ ರೂಪಾಯಿಯಿಂದ 25 ಸಾವಿರ ರೂಪಾಯಿ ಹಾಗೂ ವಾರ್ಷಿಕ ಬೆಳೆಗಳಿಗೆ ಹೆಕ್ಟೇರಿಗೆ 22500 ರೂಪಾಯಿಯಿಂದ 31 ಸಾವಿರ ರೂಪಾಯಿಯವರೆಗೆ ಜಮೆ ಮಾಡಲಾಗುತ್ತಿದೆ.

Crop loss money release ನಿಮ್ಮ ಖಾತೆಗೆ ಹಣ ಜಮೆಯಾಗಿದೆಯೋ ಇಲ್ಲವೋ ಹೀಗೆ ಚೆಕ್ ಮಾಡಿ

ನಿಮಗೆ  ಬೆಳೆ ಹಾನಿ ಪರಿಹಾರ ಹಣ ಜಮೆಯಾಗಿದೆಯೋ ಇಲ್ಲವೋ ಎಂಬುದನ್ನು ಚೆಕ್ ಮಾಡಲು ಈ

https://parihara.karnataka.gov.in/service89/PaymentDetailsReport.aspx

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು ಅಲ್ಲಿ ತೆರೆದುಕೊಳ್ಳುವ ಪೇಜ್ ನಲ್ಲಿ  ನೀವು Select Year  ನಲ್ಲಿ 225-26 ಆಯ್ಕೆ ಮಾಡಿಕೊಳ್ಳಬೇಕು. Select Season ನಲ್ಲಿ Kharif/ಮುಂಗಾರು ಆಯ್ಕೆ ಮಾಡಿಕೊಳ್ಳಬೇಕು. Select  Calamity ನಲ್ಲಿ Flood/ ಪ್ರವಾಹ ಆಯ್ಕೆ ಮಾಡಿಕೊಳ್ಳಬೇಕು. ನಂತರ ನಿಮ್ಮ ಜಿಲ್ಲೆ, ತಾಲೂಕು, ಹೋಬಳಿ ಹಾಗೂ ಗ್ರಾಮ ಆಯ್ಕೆ ಮಾಡಿಕೊಂಡು  Get Report ವರದಿ ಪಡೆಯಿರಿ ಮೇಲೆ ಕ್ಲಿಕ್ ಮಾಡಿ ನಿಮಗೆ ಹಣ ಜಮೆಯಾಗಿದೆಯೋ ಇಲ್ಲವೋ ಎಂಬುದನ್ನು ಚೆಕ್ ಮಾಡಬಹುದು.

Crop loss money release ಬೆಳೆ ವಿಮೆ ಹಣ ಜಮೆಯಾಗಿದೆಯೋ ಇಲ್ಲವೋ  ಹೀಗೆ ಚೆಕ್ ಮಾಡಿ

ಬೆಳೆ ವಿಮೆ ಹಣ ಜಮೆಯಾಗಿದೆಯೋ ಇಲ್ಲವೋ ಎಂಬುದನ್ನು ಚೆಕ್ ಮಾಡಲು  ಈ ನೀವು ಗೂಗಲ್ ನಲ್ಲಿ samrakshane ಎಂದು ಟೈಪ್ ಮಾಡಬೇಕು. ಆಗ samrakshane Karnataka crop insurance application ಕಾಣಿಸುತ್ತದೆ. ಅದರ ಮೇಲೆ ಕ್ಲಿಕ್ ಮಾಡಬೇಕು.  ಅಲ್ಲಿ ನೀವು ವರ್ಷ 2025-2026 ರ ಕೆಳಗಡೆ ಖಾರೀಫ್ ಆಯ್ಕೆ ಮಾಡಿಕೊಳ್ಳಬೇಕು. ನಂತರ ಮುಂದೆ ಮೇಲೆ ಕ್ಲಿಕ್ ಮಾಡಬೇಕು.  ನಂತರ  Check status ಮೇಲೆ ಕ್ಲಿಕ್ ಮಾಡಬೇಕು. ನಂತರ ಮೊಬೈಲ್ ನಂಬರ್ ಬಾಕ್ಸ್ ಆಯ್ಕೆ ಮಾಡಿಕೊಳ್ಳಬೇಕು. ನಂತರ Captha ಕೋಡ್ ನಮೂದಿಸಿ Search ಮೇಲೆ ಕ್ಲಿಕ್ ಮಾಡಬೇಕು.  View Details ಮೇಲೆ ಕ್ಲಿಕ್ ಮಾಡಬೇಕು. ಪ್ರಸಕ್ತ ಸಾಲಿನಲ್ಲಿ ರೈತರು ಮುಂಗಾರು ಹಿಂಗಾರು ಹಂಗಾಮಿಗೆ ಬೆಳೆ ಮಾಡಿಸಿದವರು ಹಾಗೂ ಕಳೆದ ಸಾಲಿನಲ್ಲಿ ಬೆಳೆ ವಿಮೆ ಮಾಡಿಸಿದ ರೈತರೂ ಸಹ ತಮ್ಮ ಬೆಳೆ ವಿಮೆಯ ಅರ್ಜಿಯ ಸ್ಟೇಟಸ್ ಚೆಕ್ ಮಾಡಿಕೊಳ್ಳಬಹುದು.

ಬೆಳೆ ವಿಮೆ ಹಾಗೂ ಬೆಳೆ ಹಾನಿಗಿರುವ ವ್ಯತ್ಯಾಸವೇನು?

ಬೆಳೆ ಹಾನಿ ಹಣವನ್ನು  ಮಳೆ ಪ್ರವಾಹದಿಂದ ಬೆಳೆ ಹಾನಿಯಾದರೆ ಸರ್ಕಾರವು ಯಾವ ಯಾವ ಬೆಳೆ ಹಾನಿಯಾಗಿದೆ ಅದರ ಆಧಾರದ ಮೇಲೆ ಸರ್ಕಾರ ನಿರ್ಧಾರಮಾಡುತ್ತದೆ.ಇಲ್ಲಿ ರೈತರು ಯಾವುದೇ ಕಟ್ಟುವುದಿಲ್ಲ

ಇದನ್ನೂ ಓದಿ ಪಿಎಂ ಕಿಸಾನ್ ಹಣ ಯಾವಾಗ ಯಾರಿಗೆ ಜಮೆಯಾಗಲಿದೆ? ಇಲ್ಲಿದೆ ಮಾಹಿತಿ

ಬೆಳೆ ವಿಮೆಯಲ್ಲಿ ರೈತರು ಸ್ವಲ್ಪ ಹಣವನ್ನು ವಿಮಾ ಕಂಪನಿಗೆ ಕಟ್ಟುತ್ತದೆ. ನಂತರ ಬೆಳೆ ಹಾನಿಯಾದರೆ ಯಾವ ಪ್ರಮಾಣದಲ್ಲಿ ಬೆಳೆ ಹಾನಿಯಾಗಿದೆಯೋ ಆ ಆಧಾರದ ಮೇಲೆ ವಿಮಾ ಕಂಪನಿ ರೈತರಿಗೆ ಪರಿಹಾರ ಹಣ ಜಮೆಮಾಡುತ್ತದೆ. ಇದಕ್ಕೆರೈತರು ಬೆಳೆ ಹಾನಿಯಾದಾಗ ವಿಮಾ ಕಂಪನಿಗೆ ದೂರು ನೀಡಬೇಕು. ಆಗ ವಿಮಾ ಕಂಪನಿಯ ಸಿಬ್ಬಂದಿಗಳು ಜಮೀನಿಗೆ ಬಂದು ಬೆಳೆ ಹಾನಿ ಪ್ರಮಾಣ ನೋಡಿ ಘೋಷಣೆ ಮಾಡುತ್ತದೆ.

Leave a Comment