ಬೆಳೆ ವಿಮೆ ಹಣ ಜಮೆಯಾಗಿಲ್ಲವೇ? ಇಲ್ಲಿ ಅರ್ಜಿ ಸಲ್ಲಿಸಿ

Written by Ramlinganna

Updated on:

Crop insurance objection allowed ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ 2020-21ನೇ ಸಾಲಿನ ಮುಂಗಾರು ಹಂಗಾಮಿನ ಬೆಳೆ ವಿಮೆ ಸಮೀಕ್ಷೆಯಲ್ಲಿ ತಿರಸ್ಕೃತಗೊಂಡ ರೈತರ ವಿವರವನ್ನು ರೈತ ಸಂಪರ್ಕ ಕೇಂದ್ರ ಹಾಗೂ ಕೃಷಿ ಇಲಾಖೆಯಲ್ಲಿ ಪ್ರದರ್ಶಿಸಲಾಗಿದೆ.

ಇದಕ್ಕೆ ಆಕ್ಷೇಪಣೆಗಳಿದ್ದಲ್ಲಿ ವಿವಿಧ ಜಿಲ್ಲೆಗಳ ರೈತ ಸಂಪರ್ಕ ಕೇಂದ್ರ ಹಾಗೂ ಕೃಷಿ ಇಲಾಖೆಯಲ್ಲಿ ಅಗತ್ಯ ದಾಖಲಗಳನ್ನು ಸಲ್ಲಿಸಲು ಕೋರಲಾಗಿದೆ.

Crop insurance objection allowed ಬೆಳೆ ವಿಮೆ ತಿರಸ್ಕಾರ ಆಕ್ಷೇಪಣೆಗೆ ಅವಕಾಶ

ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ರೈತರಿಗೆ ಬೆಳೆ ವಿಮೆ ಹಣ ಜಮೆಯಾಗದೆ ಅರ್ಜಿ ತಿರಸ್ಕೃತಗೊಂಡಿದ್ದರೆ ಅಂತಹ ರೈತರು ಡಿಸೆಂಬರ್ 9 ರೊಳಗೆ ಅಗತ್ಯ ದಾಖಲೆಗಳನ್ನು ಸಲ್ಲಿಸಲು ಸೂಚಿಸಲಾಗಿದೆ.

ರೈತರ ಖಾತೆಗೆ ಆಧಾರ್ ಲಿಂಕ್ ಆಗದ ಕಾರಣ 2019-20 ಹಾಗೂ 2021-22 ನೇ ಸಾಲಿನ ಯೋಜನೆ ಅಡಿ ಮೊತ್ತ ಜಮೆ ಆಗಿಲ್ಲ. ಅಂತಹ ರೈತರು ಕೂಡಲೇ ಬ್ಯಾಂಕಿಗೆ ಭೇಟಿ ನೀಡಿ ಎನ್.ಪಿ.ಸಿ.ಐ ಹೊಂದಾಣಿಕೆ  ಮಾಡಿಸಬೇಕು. ಇಲ್ಲವೇ ಸಮೀಪದ ಅಂಚೆ ಕಚೇರಿಯಲ್ಲಿ ಹೊಸ ಖಾತೆ ತೆರೆಯಬೇಕೆಂದು ಸಹಾಯಕ ಕೃಷಿ ನಿರ್ದೇಶಕಿ ಭಾರತಿ ಮೆಣಸಿನಕಾಯಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನಿಮ್ಮಅರ್ಜಿಯ ಸ್ಟೇಟಸ್ ಇಲ್ಲೇ ಚೆಕ್ ಮಾಡಿ

2020-21 ರಲ್ಲಿ  ಬೆಳೆ ವಿಮೆ ಪಾವತಿಸಿದ ರೈತರು ತಮ್ಮ ಅರ್ಜಿಯ ಸ್ಟೇಟಸ್ ಚೆಕ್ ಮಾಡಲು ಈ

https://www.samrakshane.karnataka.gov.in/publichome.aspx

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು.  ನಂತರ ಅಲ್ಲಿ ಓಪನ್ ಆಗುವ ಪೇಜ್ ನಲ್ಲಿ ಚೆಕ್ ಸ್ಟೇಟಸ್ ಮೇಲೆ ಕ್ಲಿಕ್ ಮಾಡಿ ನಿಮ್ಮ ಮೊಬೈಲ್ ನಂಬರ್ ಆಯ್ಕೆ ಮಾಡಿಕೊಳ್ಳಬೇಕು.  ಮೊಬೈಲ್ ನಂಬರ್ ಹಾಗೂ ಕ್ಯಾಪ್ಚ್ಯಾ ಕೋಡ್ ಹಾಕಿ ಸ್ಟೇಟಸ್ ಚೆಕ್ ಮಾಡಬಹುದು.

ಬೆಳೆ ವಿಮೆ ಅರ್ಜಿ ತಿರಸ್ಕೃತ ಆಕ್ಷೇಪಣೆ ಸಲ್ಲಿಕೆಗೆ ಡಿಸೆಂಬರ್ 12 ಕೊನೆಯ ದಿನ

2020-21ನೇ ಸಾಲಿನ ಮುಂಗಾರು ಹಿಂಗಾರು ಹಂಗಾಮಿನಲ್ಲಿ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯ ಸಮೀಕ್ಷೆಯಡಿ ದಾಖಲಾದ ಬೆಳೆಯು ಹೊಂದಾಣಿಕೆಯಾಗದೆ ವಿಮೆ ಸಂಸ್ಥೆಯಿಂದ ಅರ್ಜಿ ತಿರಸ್ಕೃತಗೊಂಡಿದೆ. ಅಂತಹ ರೈತರ ಪಟ್ಟಿಯನ್ನು ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನಲ್ಲಿ ಬರುವ ವಿವಿಧ ಗ್ರಾಮ ಪಂಚಾಯತ್, ರೈತ ಸಂಪರ್ಕ ಕೇಂದ್ರ, ಸಹಾಯಕ ಕೃಷಿ ನಿರ್ದೇಶಕರ ಕಚೇರಿಯಲ್ಲಿ ಪ್ರದರ್ಶಿಸಲಾಗಿದೆ.  ಅರ್ಜಿ ತಿರಸ್ಕಾರಗೊಂಡ ರೈತರು ಡಿಸೆಂಬರ್ 12 ರೊಳಗೆ ಅಗತ್ಯ ದಾಖಲೆ ಸಲ್ಲಿಸಿ ಆಕ್ಷೇಪಣೆ ಸಲ್ಲಿಸಬಹುದು.

ಬೆಳೆ ನಮೂದಾದ 2020-21ರ ಪಹಣಿ ಪತ್ರಿಕೆಯಲ್ಲಿ (ಆರ್.ಟಿ.ಸಿ) ವಿಮೆಗೆ ನೋಂದಾಯಿಸಿದ ಬೆಳೆ ನಮೂದಾಗಿರಬೇಕು. ಬೀಜ ಖರೀದಿ ಮಾಡಿದ ರಸೀದಿ ಇದ್ದರೆ ಸಲ್ಲಿಸಬೇಕು. ವಿಮೆ ಮಾಡಿಸಿದ ಬೆಳೆಗೆ ಬೆಂಬಲ ಬೆಲೆ ಪ್ರಯೋಜನ ಪಡೆದಲ್ಲಿ ರಸೀದಿ ಸಲ್ಲಿಸಬೇಕು.

ಇದನ್ನೂ ಓದಿ : ಈ ರೈತರಿಗೆ 5.38 ಕೋಟಿ ರೂಪಾಯಿ ಬೆಳೆ ಹಾನಿ ಪರಿಹಾರ ಬಿಡುಗಡೆ

ವಿಮೆಗೆ ನೋಂದಾಯಿತ ಬೆಳೆಯ ಉತ್ಪನ್ನವನ್ನು ಎಪಿಎಂಸಿ ಮಾರುಕಟ್ಟೆಗೆ ಮಾರಿದ್ದಲ್ಲಿ ಸದರಿ ದಾಖಲೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗೆ ಕೃಷಿ ಅಧಿಕಾರಿ, ಸಹಾಯಕ ಕೃಷಿ ನಿರ್ದೇಶಕರನ್ನು ಸಂಪರ್ಕಿಸುವಂತೆ ಕೃಷಿ ನಿರ್ದೇಶಕ ಶ್ರೀನಾಥ ಚಿಮ್ಮಲಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬೆಳೆ ವಿಮೆ ತಿರಸ್ಕೃತ ಅರ್ಜಿ ಆಕ್ಷೇಪಣೆ

ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ 2020-21ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಬೆಳೆ ವಿಮೆಗೆ ನೋಂದಾಯಿಸಿ ಬೆಳೆ ಸಮೀಕ್ಷೆಯಲ್ಲಿ ಹೊಂದಾಣಿಕೆಯಾಗದೆ ವಿಮಾ ಸಂಸ್ಥೆಯಿಂದ ತಿರಸ್ಕೃತಗೊಂಡ ರೈತರ ಪ್ರಸ್ತಾವನೆಗಳನ್ನು ತಾಲೂಕಿನ ರೈತ ಸಂಪರ್ಕ ಕೇಂದ್ರ, ಸಹಾಯಕ ಕೃಷಿ ನಿರ್ದೇಶಕರ ಕಚೇರಿಯಲ್ಲಿ ಪ್ರಕಟಿಸಲಾಗಿದೆ.

ತಿರಸ್ಕೃತಗೊಂಡ ಪ್ರಸ್ತಾವನೆಗಳ ರೈತರ ಆಕ್ಷೇಪಣೆಗಳಿದ್ದಲ್ಲಿ ಡಿಸೆಂಬರ್ 15 ರೊಳಗೆ ದಾಖಲೆಗಳೊಂದಿಗೆ ಆಕ್ಷೇಪಣೆಸಲ್ಲಿಸಬಹುದು.  2020-2021ನೇ ಸಾಲಿನಲ್ಲಿ ಬೆಳೆ ನಮೂದಾಗಿರುವ ಪಹಣಿ, ಕನಿಷ್ಠ ಬೆಂಬಲ ಬೆಲೆ ಪ್ರಯೋಜನ ಪಡೆದಿದ್ದಲ್ಲಿ ರಸೀದಿ, ಎಪಿಎಂಸಿ ಕೇಂದ್ರದಲ್ಲಿ ಬೆಳೆ ಉತ್ಪನ್ನ ಮಾರಾಟ ಮಾಡಿರುವ ಬಗ್ಗೆ ದಾಖಲೆಗಳನ್ನು ಸಂಬಂಧಿಸಿದ ಹೋಬಳಿ ರೈತ ಸಂಪರ್ಕ ಕೇಂದ್ರಗಳಿಗೆ ಅಥವಾ ಸಹಾಯಕ ಕೃಷಿ ನಿರ್ದೇಶಕರ ಕಚೇರಿ, ಚಿಕ್ಕಮಗಳೂರು ಇವರಿಗೆ ಸಲ್ಲಿಸಬಹುದು ಎಂದು ಸಹಾಯಕ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.

ಇದೇ ರೀತಿ ಉತ್ತರ ಕನ್ನಡ ಜಿಲ್ಲೆ ಮುಂಡಗೋಡ ತಾಲೂಕಿನ ರೈತರು ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ರೈತರು  ಸಹ ಡಿಸೆಂಬರ್ 15 ರೊಳಗೆ ಆಕ್ಷೇಪಣೆ ಸಲ್ಲಿಸಲು ಕೋರಲಾಗಿದೆ.

Leave a Comment