Crop insurance rejected list : ಬೆಳೆ ವಿಮಾ ಯೋಜನೆಯಡಿ ನೋಂದಣ ಮಾಡಿದ ಕೆಲವು ರೈತರ ದಾಖಲಾತಿ ಕೊರತೆಯಿಂದ ತಿರಸ್ಕೃತಗೊಂಡಿದೆ. ಯಾರ ಯಾರ ಹೆಸರು ತಿರಸ್ಕೃತಗೊಂಡಿದೆ. ಬೆಳೆ ವಿಮೆ ಹಣ ಜಮೆಯಾಗಲು ಅವರೇನು ಮಾಡಬೇಕು ಎಂಬುದರ ಮಾಹಿತಿ ಇಲ್ಲಿದೆ.
2023-24 ನೇಸಾಲಿನ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ ಅಡಿಯಲ್ಲಿ ಮುಂಗಾರು ಹಾಗೂ ಹಿಂಗಾರು ಹಂಗಾಮಿನಲ್ಲಿ ಬೆಳೆ ವಿಮೆಗೆ ನೋಂದಣಿಯಾಗಿರುವ ಮಂಡ್ಯ ತಾಲೂಕಿನ 20 ಸಾವಿರಕ್ಕೂ ಹೆಚ್ಚು ರೈತರ ಪ್ರಸ್ತಾವನೆಗಳ ಪೈಕಿ 2648 ಪ್ರಸ್ತಾವನೆಗಳು ಬೆಳೆ ಸಂರಕ್ಷಣೆ ಪೋರ್ಟಲ್ ನಲ್ಲಿ ದಾಖಲಾಗಿರುವ ದತ್ತಾಂಶಕ್ಕೂ ತಾಳೆ ಬಾರದ ಹಿನ್ನೆಲೆಯಲ್ಲಿ ವಿಮಾ ಸಂಸ್ಥೆಯಿಂದ ತಿರಸ್ಕೃತಗೊಂಡಿರುತ್ತದೆ.
ಈ ಪ್ರಸ್ತಾವನೆಗಳನ್ನು ಸಹಾಯಕ ಕೃಷಿ ನಿರ್ದೇಶಕರ ಕಚೇರಿ, ರೈತ ಸಂಪರ್ಕ ಕೇಂದ್ರ ಹಾಗೂ ಆಯಾ ಗ್ರಾಮ ಪಂಚಾಯತ್ ಕಚೇರಿಗಳ ಸೂಚನಾ ಫಲಕಗಳಲ್ಲಿ ಪ್ರಕಟಿಸಲಾಗಿದೆ.
ಇದನ್ನೂ ಓದಿ : ಯಾವ ಯಾವ ಸರ್ವೆ ನಂಬರಿಗೆ FID ಲಿಂಕ್ ಆಗಿವೆ? ಇಲ್ಲೇ ಚೆಕ್ ಮಾಡಿ
ಈ ಸಂಬಂಧ ರೈತರು ಆಕ್ಷೇಪಣೆ ಸಲ್ಲಿಸಲು 15 ದಿನಗಳ ಕಾಲಾವಕಾಶವಿರುತ್ತದೆ. ಹಾಗಾಗಿ ರೈತರು ಸೂಕ್ತ ದಾಖಲಾತಿಗಳೊಂದಿಗೆ ತಮ್ಮ ವ್ಯಾಪ್ತಿಯ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿಗಳನ್ನು ಸಂಪರ್ಕಿಸಬಹುದು ಎಂದು ಸಹಾಯಕ ಕೃಷಿ ನಿರ್ದೇಶಕ ಆರ್. ಹರೀಶ್ ಪ್ರಕಟಣೆಯಲ್ಲಿ ಕೋರಿದ್ದಾರೆ.
Crop insurance rejected list ಯಾರು ಯಾರಿಗೆ ಬೆಳೆ ವಿಮೆ ಜಮೆಯಾಗಿದೆ? ಹೀಗೆ ಚೆಕ್ ಮಾಡಿ
ಪ್ರಸಕ್ತ ಸಾಲಿನಲ್ಲಿ ಮುಂಗಾರು ಹಂಗಾಮಿಗೆ ಬೆಳೆ ವಿಮೆ ಮಾಡಿಸಿದ ರೈತರಿಗೆ ಗುಡ್ ನ್ಯೂಸ್ ಇಲ್ಲಿದೆ. ಹೌದು, 2024-25ನೇ ಸಾಲಿನಲ್ಲಿ ಮುಂಗಾರು ಹಂಗಾಮಿಗೆ ಬೆಳೆ ವಿಮೆ ಮಾಡಿಸಿದ ರೈತರಿಗೆ ವಿಮೆ ಹಣ ಜಮೆಯಾಗಿದೆ.
ಹೌದು, ಮುಂಗಾರು ಹಂಗಾಮಿಗೆ ಹೆಸರು, ಉದ್ದು, ಹತ್ತಿ ಹಾಗೂ ತೊಗರಿ ಬೆಳೆಗೆ ವಿಮೆ ಮಾಡಿಸಿದ ರೈತರಿಗೆ ಮಂಗಳವಾರ ಬೆಳೆವಿಮೆ ಹಣ ಜಮೆ ಮಾಡಲಾಗಿದೆ. ಹೌದು, ಕೆಲವು ರೈತರಿಗೆ 5 ಸಾವಿರ ರೂಪಾಯಿ ಜಮೆಯಾದರೆ ಇನ್ನೂ ಕೆಲವರಿಗೆ 10 ಸಾವಿರ ರೂಪಾಯಿ ಜಮೆಯಾಗಿದೆ. ಹಾಗಾದರೆ ಯಾರು ಯಾರಿಗೆ ಬೆಳೆ ವಿಮೆ ಹಣ ಜಮೆಯಾಗಿದೆ? ಯಾರಿಗೆ ವಿಮೆ ಹಣ ಜಮೆಯಾಗಿಲ್ಲ ಎಂಬ ಮಾಹಿತಿ ಇಲ್ಲಿದೆ.
ನಿಮಗೆ ಬೆಳೆ ವಿಮೆ ಹಣ ಜಮೆಯಾಗಿದೆಯೋ ಇಲ್ಲವೋ? ಇಲ್ಲೇ ಚೆಕ್ ಮಾಡಿ ನೋಡಿ
ಮುಂಗಾರು ಹಂಗಾಮಿಗೆ ಬೆಳೆ ವಿಮೆ ಮಾಡಿಸಿದ ರೈತರು ತಮ್ಮ ಖಾತೆಗೆ ವಿಮೆ ಹಣ ಜಮೆಯಾಗಿದೆಯೋ ಇಲ್ಲವೋ ಎಂಬುದನ್ನು ಚೆಕ್ ಮಾಡಲು ಈ
https://www.samrakshane.karnataka.gov.in/
ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ವಿಮೆ ಸಂರಕ್ಷಣೆ ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ನೀವು ಋತು ಆಯ್ಕೆ ಖಾರೀಪ್ ಆಯ್ಕೆ ಮಾಡಿಕೊಳ್ಳಬೇಕು. ನಂತರ ಮುಂದೆ ಮೇಲೆ ಕ್ಲಿಕ್ ಮಾಡಬೇಕು. ನಂತರ ಇನ್ನೊಂದು ಪೇಜ್ ಓಪನ್ ಆಗುತ್ತದೆ. ಫಾರ್ಮರ್ಸ್ ಕಾಲಂ ಕೆಳಗಡೆ ಕಾಣುವ Check Status ಮೇಲೆ ಕ್ಲಿಕ್ ಮಾಡಬೇಕು. ಆಗ ಇನ್ನೊದು ಪೇಜ್ ತೆರೆದುಕೊಳ್ಳುತ್ತದೆ.
ಅಲ್ಲಿ ನಿಮಗೆ Proposal ಹಾಗೂ Mobile No. ಮತ್ತು Aadhaar ಆಯ್ಕೆಗಳು ಕಾಣಿಸುತ್ತವೆ. ಅದರಲ್ಲಿ ನೀವು ಮೊಬೈಲ್ ನಂಬರ್ ಬಾಕ್ಸ್ ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ. ನಂತರ ಬೆಳೆ ವಿಮೆ ಮಾಡಿಸುವಾಗ ಯಾವ ಮೊಬೈಲ್ ನಂಬರ್ ಕೊಟ್ಟಿರುತ್ತಾರೋ ಆ ಮೊಬೈಲ್ ನಂಬರ್ ನಮೂದಿಸಬೇಕು. ಇದಾದ ಮೇಲೆ ಕ್ಯಾಪ್ಚ್ಯಾ ಕೋಡ್ ಹಾಕಬೇಕು. ಒಂದು ವೇಳೆ ಕ್ಯಾಪ್ಚ್ಯಾ ಕೋಡ್ ಸರಿಯಾಗಿ ಕಾಣಿಸದಿದ್ದರೆ ರಿಫ್ರೆಶ್ ಬಟನ್ ಮೇಲೆ ಕ್ಲಿಕ್ ಮಾಡಬೇಕು. ಆಗ ಹೊಸ ಕ್ಯಾಪ್ಚ್ಯಾ ಕೋಡ್ ಅಪ್ಡೇಟ್ ಆಗುತ್ತದೆ. ಅಲ್ಲಿ ಕಾಣುವ ಕ್ಯಾಪ್ಚ್ಯಾ ಕೋಡ್ ನಮೂದಿಸಿ ಸರ್ಚ್ ಬಟನ್ ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮಗೆ ಬೆಳೆ ವಿಮೆ ಹಣ ಜಮೆಯಾಗಿದೆಯೋ ಇಲ್ಲವೋ ಎಂಬುದು ಕಾಣಿಸುತ್ತದೆ.