ಈ ರೈತರಿಗೆ ಜಮೆಯಾಯಿತು ಮುಂಗಾರು ಬೆಳೆ ವಿಮೆ ಹಣ

Written by Ramlinganna

Updated on:

insurance money credited to these farmers 2021-22ನೇ ಸಾಲಿನ ಮುಂಗಾರು ಹಂಗಾಮಿನ ಬೆಳೆಗಳಿಗೆ ವಿಮೆ ಮಾಡಿಸಿದ ರೈತರಿಗೆ ಬೆಳೆ ವಿಮೆ ಹಣ ಜಮೆಯಾಗಿದೆ. ಹೌದು, ಬೆಳೆ ವಿಮೆಗಾಗಿ ಕಾಯುತ್ತಿರುವ ರೈತರಿಗೆ ಇದೊಂದು ಸಂತಸದ ಸುದ್ದಿಯಾಗಿದೆ.

ರೈತರು ಮಂಗಾರು ಹಂಗಾಮಿನ ಬೆಳೆಗಳಿಗೆ ಎಕರೆಗೆ ಎಷ್ಟು ಹಣ ಜಮೆಯಾಗಿದೆ ಎಂಬ ಸ್ಟೇಟಸ್ ನ್ನು ಮೊಬೈಲ್ ನಲ್ಲೇ ಚೆಕ್ ಮಾಡಬಹುದು.  ಇದರೊಂದಿಗೆ ಯಾವ ಜಿಲ್ಲೆಗೆ  ಎಷ್ಟು  ರೈತರಿಗೆ ವಿಮೆ ಹಣ ಜಮೆಯಾಗಿದೆ ಎಂಬ ಮಾಹಿತಿ ಇಲ್ಲಿದೆ.

2021-22ನೇ ಸಾಲಿನಲ್ಲಿ ಬೆಳೆ ವಿಮೆ ಮಾಡಿಸಿದ ಕಲಬುರಗಿ, ಚಿತ್ರದುರ್ಗ ಜಿಲ್ಲೆ ಸೇರಿದಂತೆ ಇತರ ಜಿಲ್ಲೆಗಳಿಗೆ ಬೆಳೆ ವಿಮೆ ಹಣ ಜಮೆಯಾಗಿದೆ.ಈಗಾಗಲೇ ಮುಂಗಾರು ಹಂಗಾಮಿಗೆ ಬೆಳೆ ವಿಮೆ ಮಾಡಿಸಿದ ಕಲಬುರಗಿ ಹಾಗೂ ಚಿತ್ರದುರ್ಗ ಜಿಲ್ಲೆಯ ರೈತರ  ಖಾತೆಗೂ ಹಣ ಜಮೆಯಾಗಿದೆ.

2021-22ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಕಲಬುರಗಿ ಜಿಲ್ಲೆಯಲ್ಲಿ ಪಿಎಂ ಫಸಲ್ ಬಿಮಾ ಯೋಜನೆಯಡಿ ಬೆಳೆ ವಿಮೆಗೆ ನೋಂದಣಿ ಮಾಡಿಸಿದ 79277 ರೈತರ ಪೈಕಿ ಬೆಳೆ ಹಾನಿಯಾದ 28848 ರೈತರಿಗೆ ಸ್ಥಳೀಯ ನಿರ್ಧಿಷ್ಟ ವಿಕೋಪದಡಿ31,84,41,769 ರೂಪಾಯಿ ಪರಿಹಾರ ಪಾವತಿಸಲಾಗಿದೆ. ಇದಲ್ಲದೆ ಬೆಳೆ ಕಟಾವು ಪ್ರಯೋಗದ ಆಧಾರದ ಮೇರೆಗೆ 21,679 ರೈತರಿಗೆ 22,81,19,854 ರೂಪಾಯಿ ಪಾವತಿ ಪ್ರಕ್ರಿಯೆ ನಡೆಯುತ್ತಿದೆ ಎಂದು ಕಲಬುರಗಿ ಜಿಲ್ಲಾಧಿಕಾರಿ ಡಿ. ಯಶವಂತ ವಿ ಗುರುಕರ್ ತಿಳಿಸಿದ್ದಾರೆ.

ಇದನ್ನೂ ಓದಿ ನಿಮ್ಮ ಜಮೀನಿನ ಅಕ್ಕಪಕ್ಕ ಯಾರಿಗೆಷ್ಟು ಜಮೀನಿದೆ? ಚೆಕ್ ಮಾಡಿ

ಚಿತ್ರದುರ್ಗ ಜಿಲ್ಲೆಗೆ 82 ಕೋಟಿ ರೂಪಾಯಿ ಹಣ ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ ಬಿಡುಗಡೆ ಮಾಡಲಾಗಿದೆ ಎಂದು ಶಾಸಕ ಜಿ.ಹೆಚ್. ತಿಪ್ಪಾರೆಡ್ಡಿ ತಿಳಿಸಿದ್ದಾರೆ.

ಚಿತ್ರದುರ್ಗ ನಗರದದಲ್ಲಿ ಕೃಷಿ ಅಭಿಯಾನದ ಪ್ರಚಾರ ವಾಹನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ವಿಮೆ ಹಣ ಬರುತ್ತೋ ಇಲ್ಲವೋ ಎಂಬ ಬಗ್ಗೆ ರೈತರು ಆತಂಕಕ್ಕೆ ಒಳಗಾಗುವುದು ಬೇಡ. ಬೆಳೆ ವಿಮೆ ಹಣ ಜಮೆಯಾಗದ ರೈತರ ಖಾತೆಗೂ ಅತೀ ಶೀಘ್ರದಲ್ಲಿ ಹಣ ಜಮೆಯಾಗುತ್ತದೆ ಎಂದು ತಿಳಿಸಿದ್ದಾರೆ.

insurance money credited to these farmers ಬೆಳೆ ವಿಮೆ ಹಣ ನಿಮ್ಮ ಖಾತೆಗೆ ಜಮೆಯಾಗಿದೆಯೋ ಇಲ್ಲವೋ ಸ್ಟೇಟಸ್ ಚೆಕ್ ಮಾಡಿ

ರೈತರು ಮನೆಯಲ್ಲಿಯೇ ಕುಳಿತು ತಮ್ಮ ಖಾತೆಯಲ್ಲಿಬೆಳೆ ವಿಮೆ ಹಣ ಜಮೆಯಾಗಿದೆಯೋ ಇಲ್ಲವೋ ಎಂಬುದನ್ನು ನೋಡಬಹುದು. ಅಷ್ಟೇ ಅಲ್ಲ, ಬೆಳೆ ವಿಮೆಯ ಅರ್ಜಿಯ ಸ್ಟೇಟಸ್ ಸಹ ಮೊಬೈಲ್ ನಲ್ಲೇ ಚೆಕ್ ಮಾಡಬಹುದು. ಹೌದು, ರೈತರು ಈ

https://www.samrakshane.karnataka.gov.in/Premium/CheckStatusMain_aadhaar.aspx

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಬೆಳೆ ವಿಮೆಯ ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ರೈತರು ಮೊಬೈಲ್ ನಂಬರ್ ಆಯ್ಕೆ ಮಾಡಿಕೊಳ್ಳಬೇಕು. ನಂತರ  ತಮ್ಮ ಮೊಬೈಲ್ ನಂಬರ್ ನಮೂದಿಸಿ ಕ್ಯಾಪ್ಚ್ಯಾ ಕೋಡ್ ಕರೆಕ್ಟ್ ಆಗಿ ನಮೂದಿಸಿ ಸರ್ಚ್ ಮೇಲೆ ಕ್ಲಿಕ್ ಮಾಡಬೇಕು.  ಆಗ ನಿಮ್ಮ ಅಪ್ರೂವಲ್ ಆಗಿದೆಯೋ ಇಲ್ಲವೋ ಎಂಬುದನ್ನು ಚೆಕ್ ಮಾಡಿಕೊಳ್ಳಬಹುದು.

ಬೆಳೆ ವಿಮೆ ಪರಿಹಾರ ಮೊತ್ತದ ಲೆಕ್ಕಾಚಾರ ಹೀಗೆ ಮಾಡುತ್ತಾರೆ?

ಉದಾಹರಣೆಗೆ ತೊಗರಿ ಮಳೆಯಾಶ್ರಿತ ಬೆಳೆಗೆ ರೈತನೊಬ್ಬ ಪ್ರತಿ ಹೆಕ್ಟೇರಿಗೆ 800 ರೂಪಾಯಿ ಪ್ರಿಮಿಯಂ ಹಣ ಪಾವತಿಸಿದರೆ ಆತನನಿಗೆ ಪ್ರತಿ ಹೆಕ್ಟೇರಿಗೆ ಗರಿಷ್ಟ40 ಸಾವಿರ ರೂಪಾಯಿ ಸಿಗಲಿದೆ. ಈ ಮೊತ್ತವನ್ನು ಬೆಳೆಯ ವಿವಿಧ ಹಂತದ ಆಧಾರದ ಮೇಲೆ ನೀಡಲಾಗುತ್ತದೆ. ಮೊಳಕೆ ಹಂತದಲ್ಲಿದ್ದಾಗ ಬೆಳೆ ಹಾನಿಯಾದರೆ ವಿಮಾ ಮೊತ್ತದ ಶೇ. 46 ರಂತೆ 18400 ರೂಪಾಯಿ, ಬೆಳವಣಿಗೆ ಹಂತದಲ್ಲಿ ಹಾನಿಯಾದಲ್ಲಿ ಶೇ. 75 ರಂತೆ 30 ಸಾವಿರ ರೂಪಾಯಿ, ಮಾಗುವ ಹಂತದಲ್ಲಿ ಹಾನಿಯಾದರೆ ಶೇ. 80 ರಂತೆ 32 ಸಾವಿರ ರೂಪಾಯಿ, ಕೊಯ್ಲು ಹಂತದಲ್ಲಿ ಹಾನಿಯಾದರೆ ಶೇ. 100 ರಂತೆ ಅಂದರೆ 40 ಸಾವಿರ ರೂಪಾಯಿ ಪರಿಹಾರ ಹಣ ನೀಡಲಾಗುವುದು.

Leave a Comment