ತರಕಾರಿ, ಹೂವು, ಹಣ್ಣು ಬೆಳೆದ ರೈತರ ಖಾತೆಗೆ ಪರಿಹಾರ ಹಣ ಜಮೆ

Written by By: janajagran

Updated on:

ಕೊರೋನಾ ಲಾಕ್ಡೌನ್ ಹಿನ್ನೆಲೆಯಲ್ಲಿ ಸರ್ಕಾರ ಘೋಷಣೆ ಮಾಡಿರುವ ಪರಿಹಾರವನ್ನು ಸಂಕಷ್ಟಕ್ಕೊಳಗಾದ ತರಕಾರಿ,  ಹೂವು,  ಹಣ್ಣು ಬೆಳೆದ ರೈತರ ಖಾತೆಗೆ ನೇರವಾಗಿ ಜಮೆ (compensation without application to farmers)ಮಾಡಲಾಗುವುದು. ಇದಕ್ಕಾಗಿ ಪ್ರತ್ಯೇಕವಾಗಿ ಅರ್ಜಿ ಸಲ್ಲಿಸಬೇಕಾಗಿಲ್ಲ. ಇ-ಆಡಳಿತ ಇಲಾಖೆಯಲ್ಲೇ ತರಕಾರಿ, ಹಣ್ಣು ಹಾಗೂ ಹೂವು ಬೆಳೆಗಾರರ ದತ್ತಾಂಶ ಆಧರಿಸಿ ಪರಿಹವಾರ ರೈತರ ಖಾತೆಗೆ ಜಮೆ ಮಾಡಲು ನಿರ್ಧರಿಸಲಾಗಿದೆ.

compensation without application to farmers ಯಾವ ರೈತರಿಗೆ ಪರಿಹಾರ ನೀಡಲಾಗುವುದು?

ಸರ್ಕಾರದ ಪರಿಹಾರ ಪ್ಯಾಕೇಜ್ ನಡಿ ನೆರವು ಪಡೆಯಲು ರೈತರು ಪ್ರತ್ಯೇಕವಾಗಿ ಅರ್ಜಿ ಸಲ್ಲಿಸಬೇಕಿಲ್ಲ. ಕಂದಾಯ ಇಲಾಖೆಯಲ್ಲಿ ಪ್ರತಿ ರೈತರ ಭೂ ದಾಖಲೆ ಮತ್ತು ಬೆಳೆ ಕುರಿತ ಮಾಹಿತಿಯನ್ನು ಸಂಗ್ರಹಿಸಲಾಗಿದೆ. ಇದರೊಂದಿಗೆ ರೈತರ ಆಧಾರ್ ಮತ್ತು ಬ್ಯಾಂಕ್ ಖಾತೆಯ ಮಾಹಿತಿಯೂ ಲಭ್ಯವಿದ್ದು, ಏಪ್ರೀಲ್ ಮತ್ತು ಮೇ ತಿಂಗಳಲ್ಲಿ ಸಂತ್ರಸ್ತರಾದ ರೈತರಿಗೆ ಈ ಸೌಲಭ್ಯ ದೊರೆಯಲಿದೆ. ಏಪ್ರೀಲ್ ಮತ್ತು ಮೇ ತಿಂಗಳಲ್ಲಿ ಸಂತ್ರಸ್ತರಾದ ರೈತರಿಗೆ ಮಾತ್ರ ಈ ಸೌಲಭ್ಯ ಸಿಗಲಿದೆ ಎಂದು ಇ-ಆಡಳಿತ ಇಲಾಖೆ ಮಾಹಿತಿ ನೀಡಿದೆ.

ಇದನ್ನೂ ಓದಿ ಮಹಿಳೆಯರಿಗೆ ಗುಡ್ ನ್ಯೂಸ್- 5ನೇ ಕಂತಿನ ಹಣ ಬಿಡುಗಡೆ

ಸರ್ಕಾರದ ಅನೇಕ ಸೌಲಭ್ಯಗಳನ್ನು ನೇರ ವರ್ಗಾವಣೆ ಮೂಲಕ ರೈತರ ಖಾತೆಗೆ ಸಂದಾಯ ಮಾಡುತ್ತಿದ್ದು, ಕಳೆದ ಬಾರಿ ರಾಜ್ಯ ಸರ್ಕಾರ ಘೋಷಣೆ ಮಾಡಿದ್ದ ಪರಿಹಾರವನ್ನು ಕೂಡ ನೇರವಾಗಿ ರೈತರ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಲಾಗಿತ್ತು.

ನಷ್ಟದ ಮಾಹಿತಿ ಈಗಾಗಲೇ ಲಭ್ಯವಿದೆ. ಮಾಹಿತಿಗಳ ಪ್ರಕಾರ ಸುಮಾರು32 ಸಾವಿರ ಹೂವು ಬೆಳೆಗಾರರು, 35 ಸಾವಿರ ಹಣ್ಣು ಬೆಳೆಗಾರರು, 40 ಸಾವಿರ ತರಕಾರಿ ಬೆಳೆಗಾರರಿಗೆ ಈ ಸೌಲಭ್ಯ ಸಿಗಲಿದೆ.

ತರಕಾರಿ, ಹೂವು ಹಣ್ಣು ಬೆಳೆದ ರೈತರಿಗೆ ಪರಿಹಾರ ಹಣ ಜಮೆಯಾಗದಿದ್ದರೆ ಕೂಡಲೇ ನಿಮ್ಮ ಹತ್ತಿರದ ಕಂದಾಯ ಇಲಾಖೆಗೆ ಸಂಪರ್ಕಿಸಬಹುದು. ಏಕೆಂದರೆ ಪರಿಹಾರ ಹಣ ಕಂದಾಯ ಇಲಾಖೆಯಿಂದ ಬಿಡುಗಡೆಯಾಗಿರುತ್ತದೆ

 ಬೆಳೆ ಹಾನಿ ಪರಿಹಾರ ಹಣ ಜಮೆಯಾಗಿದೆ? ಚೆಕ್ ಮಾಡುವುದು ಹೇಗೆ?

ಮುಂಗಾರು ಹಂಗಾಮು ಸೇರಿದಂತೆ ಹಿಂದೆ ಎರಡು ವರ್ಷ ಯಾವ ಹಂಗಾಮಿಗೆ ಎಷ್ಟು ಬೆಳೆ ಹಾನಿ ಪರಿಹಾರ ಹಣ ಜಮೆಯಾಗಿದೆ ಎಂಬುದನ್ನು ಸಹ ಇಲ್ಲೇ ಚೆಕ್ ಮಾಡಬಹುದು. ಅದು ಹೇಗೆ ಅಂದುಕೊಂಡಿದ್ದೀರಾ. ಇಲ್ಲಿದೆ ನೋಡಿ ಮಾಹಿತಿ.

ಬೆಳೆ ಹಾನಿ ಪರಿಹಾರದ ಸ್ಟೇಟಸ್ ಚೆಕ್ ಮಾಡಲು ಈ

https://landrecords.karnataka.gov.in/PariharaPayment/

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಪರಿಹಾರ ಹಣ ಸಂದಾಯ ವರದಿ ಕಾಣಿಸುತ್ತದೆ. ಅಲ್ಲಿ ಆಧಾರ್ ಸಂಖ್ಯೆ ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ.. ಇಲ್ಲಿ ಸೆಲೆಕ್ಟ್ ಕಾಲಾಮಿಟಿ ಟೈಪ್ ನಲ್ಲಿ ಫ್ಲಡ್ ಅಥವಾ ಡ್ರಾಟ್ ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ. ನಂತರ 2023ನೇ  ವರ್ಷ ಆಯ್ಕೆ ಮಾಡಿಕೊಳ್ಳಬೇಕು. ನಂತರ ನಿಮ್ಮ ಆಧಾರ್ ಕಾರ್ಡ್ ನಂಬರ್ ನಮೂದಿಸಬೇಕು. ನಂತರ ಕ್ಯಾಪ್ಚ್ಯಾ ಕೋಡ್ ಹಾಕಿ ವಿವರಗಳನ್ನು ಪಡೆಯಿರಿ ಮೇಲೆ ಕ್ಲಿಕ್ ಮಾಡಿದ ನಂತರ ನಿಮಗೆ ಜಮೆಯಾಗಿರುವ ಸ್ಟೇಟಸ್ ಚೆಕ್ ಮಾಡಬಹುದು.

 

Leave a Comment