Coffee Agriculture Fair ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಕಸಬಾ ಹೋಬಳಿ ಬೆಳೆಗಾರರ ಸಂಘದ ವತಿಯಿಂದ ಮಾರ್ಚ್ 20ರಂದು (Coffee Agriculture Fair on 20th March) ಸಕಲೇಶಪುರ ಪಟ್ಟಣದ ಒಕ್ಕಲಿಗರ ಸಮುದಾಯ ಭವನದಲ್ಲಿ ಕಾಫಿ ಕೃಷಿ ಮೇಳ ಮತ್ತು ವಾರ್ಷಿಕ ಮಹಾಸಭೆ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಅಧ್ಯಕ್ಷ ಎಂ.ಆರ್. ಉದಯ್ಕುಮಾರ್ ತಿಳಿಸಿದ್ದಾರೆ.
ಅವರು ಸಕಲೇಶಪುರ ಪಟ್ಟಣದ ಎಚ್ಡಿಪಿಎ ಸಭಾಂಗಣದಲ್ಲಿ ಹಮ್ಮಿಕೊಂಡ ಕಾಫಿ (Coffee) ಕೃಷಿ ಮೇಳದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
Coffee Agriculture Fair ಕಾಫಿ, ಕಾಳುಮೆಣಸು, ಅಡಿಕೆಗೆ ಸಂಬಂಧಿತ ಕೃಷಿ ಮೇಳ
ಕಾಫಿ, ಕಾಳುಮೆಣಸು ಕೃಷಿಗೆ ಹೆಚ್ಚು ಒತ್ತುಕೊಡುವ ಉದ್ದೇಶದಿಂದ ಹಾಗೂ ಈ ಕುರಿತು ರೈತರಿಗೆ ಮಾಹಿತಿ ನೀಡುವುದಕ್ಕಾಗಿ ಮೇಳ ಆಯೋಜಿಸಲಾಗಿದೆ. ಕಾಫಿ, ಕಾಳುಮೆಣಸು (Pepper), ಅಡಿಕೆ (Areca nut) ಕೃಷಿಗೆ ಸಂಬಂಧಿಸಿದ ತಾಂತ್ರಿಕ ಮಾಹಿತಿ, ಯಂತ್ರೋಪಕರಣಗಳ ಪ್ರದರ್ಶನ ಮತ್ತು ಮಾರಾಟ, ಬೆಳೆಗೆ ತಗುಲುವ ರೋಗಕ್ಕೆ ಹೊಸ ಔಷಧಿ, ಕೀಟನಾಶಕ, ಇಳುವರಿ ಹೆಚ್ಚಿಸುವ ಪೋಷಕಾಂಶಗಳ ಪ್ರದರ್ಶನ ಮತ್ತು ಮಾರಾಟವನ್ನೂ ಏರ್ಪಡಿಸಲಾಗಿದೆ ಎಂದರು.
ಇದನ್ನೂ ಓದಿ 13 ಲಕ್ಷ ರೈತರಿಗೆ ಬೆಳೆ ವಿಮೆ ಪರಿಹಾರ ಬಿಡುಗಡೆ- ಸ್ಟೇಟಸ್ ಚೆಕ್ ಮಾಡಿ
ರೈತರು ಈ ಮೇಳದಲ್ಲಿ ಭಾಗವಹಿಸಿ ಹೆಚ್ಚಿನ ಮಾಹಿತಿ ಪಡೆದುಕೊಳ್ಳಬಹುದು. ಕೇವಲ ಬೆಳೆಗಳ ಪ್ರದರ್ಶನವಲ್ಲದೆ ಬೆಳೆಗಳಿಗೆ ತಗಲುವ ರೋಗ, ಕೀಟನಾಶಕ, ಹೆಚ್ಚಿನ ಇಳುವರಿ ಸೇರಿದಂತೆ ಸಾಲ ಪಡೆಯಲು ಸಿಬಿಲ್ ಸ್ಕೋರ್ ಹೇಗೆ ನೆರವಾಗುತ್ತದೆ ಎಂಬ ಮಾಹಿತಿಯನ್ನು ಸಹ ನೀಡಲಾಗುವುದು.
ಮೇಳದಲ್ಲಿ ಕಾಫಿ ಬೆಳೆಗಾರರ ಸಮಸ್ಯೆ ಬಗ್ಗೆ ಸಮಗ್ರ ಚರ್ಚೆ ನಡೆಸಲಾಗುತ್ತದೆ. ಸಾಲಮನ್ನಾ, ಸಿಬಿಲ್ ಸ್ಕೋರ್ ಸೇರಿದಂತೆ ಹಲವು ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತರುವ ನಿಟ್ಟಿನಲ್ಲಿ ರಾಜ್ಯ ಬೆಳೆಗಾರರ ಒಕ್ಕೂಟ, ಹಾಸನ ಜಿಲ್ಲಾ ಪ್ಲಾಂಟರ್ಸ್ ಸಂಘ, ಹೋಬಳಿ ಹಾಗೂ ಗ್ರಾಮ ಪಂಚಾಯಿತಿ ಮಟ್ಟದ ಬೆಳೆಗಾರರ ಸಂಘಟನೆಗಳ ಪದಾಧಿಕಾರಿಗಳು ಚರ್ಚೆ ನಡೆಸಲಿದ್ದಾರೆ ಎಂದು ತಿಳಿಸಿದರು.
ಶಾಸಕ ಎಚ್.ಕೆ.ಕುಮಾರಸ್ವಾಮಿ ಕೃಷಿ ಮೇಳ ಉದ್ಘಾಟನೆ ಮಾಡಲಿದ್ದಾರೆ. ಕಾಫಿ ಮಂಡಳಿ ಕಾರ್ಯದರ್ಶಿ ಕೆ.ಜಿ. ಜಗದೀಶ್ ಕಾಫಿ ಮೇಳ ಉದ್ಘಾಟಿಸಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ ಎಂದರು.
ಸಂಸದ ಪ್ರಜ್ವಲ್ ರೇವಣ್ಣ, ಉಪವಿಭಾಗಾಧಿಕಾರಿ ಎಂ.ಗಿರೀಶ್ ನಂದನ್, ಕೆಜಿಎಫ್ ಅಧ್ಯಕ್ಷ ಎಚ್.ಟಿ. ಮೋಹನ್ಕುಮಾರ್, ಮಾಜಿ ಅಧ್ಯಕ್ಷ ಯು.ಎಂ.ತೀರ್ಥಮಲ್ಲೇಶ್, ಎಚ್ಡಿಪಿಎ ಅಧ್ಯಕ್ಷ ತೋ.ಚ.ಅನಂತಸುಬ್ಬರಾಯ ಭಾಗವಹಿಸುತ್ತಾರೆ ಎಂದು ತಿಳಿಸಿದ್ದಾರೆ.
ಕಾಫಿ ಮೆಣಸು ಬೆಳೆಗಳಿಗೆ ಮೇಳ ಹಮ್ಮಿಕೊಂಡಿದ್ದು ಅತೀಸಂತಸಕರ ಸಂಗತಿಯಾಗಿದೆ. ಏಕೆಂದರೆ ಎಲ್ಲಾ ರೈತರಿಗೆ ಅನುಕೂಲ ಮಾಡಿಕೊಟ್ಟಂತೆ ಈಘ ಕಾಫಿ,ಮೆಣಸು ಬೆಳೆಯುವ ರೈತರಿಗೂ ಮೇಳದಲ್ಲಿ ಭಾಗವಹಿಸಲು ಅವಕಾಶ ಸಿಗುತ್ತದೆ. ತಮ್ಮಉತ್ಪನ್ನಗಳನ್ನು ಪರಿಚಯಿಸಿಂದಾಗುತ್ತದೆ. ಹಾಗೂ ಹೆಚ್ಚಿನ ಕಡೆ ಪ್ರಸಿದ್ಧಿ ಹೊಂದುತ್ತದೆ. ಉತ್ತಮ ಬೆಲೆಯೂ ರೈತರಿಗೆ ಸಿಗಲಿದೆ. ಇಂತಹ ಮೇಳ ಮತ್ತೆ ಮತ್ತೆ ಹಮ್ಮಿಕೊಳ್ಳಬೇಕುು.