neighbor land loan details ರೈತರು ಮನೆಯಲ್ಲಿಯೇ ಕುಳಿತು ತಮ್ಮ ಬಳಿಯಿರುವ ಮೊಬೈಲ್ ನಲ್ಲಿ ತಮ್ಮ ಜಮೀನಿನ ಅಕ್ಕಪಕ್ಕದವರ ಹೆಸರಿಗೆ ಎಷ್ಟು ಎಕರೆ ಜಮೀನಿದೆ? ಎಷ್ಟು ಸಾಲವಿದೆ ಎಂಬುದನ್ನು ಮೊಬೈಲ್ ನಲ್ಲೇ ಚೆಕ್ ಮಾಡಬಹುದು.
ಹೌದು, ರೈತರು ತಮ್ಮ ಬಳಿಯಿರುವ ಮೊಬೈಲ್ ನಲ್ಲಿ ತಮ್ಮ ಜಮೀನಿನೊಂದಿಗೆ ತಮ್ಮ ಅಕ್ಕಪಕ್ಕದಲ್ಲಿರುವ ಜಮೀನು ಯಾರ ಹೆಸರಿಗೆ ಎಷ್ಟು ಎಕರೆ ಜಮೀನಿದೆ? ಹಾಗೂ ಅವರ ಹೆಸರಿಗೆ ಜಮೀನಿನ ಮೇಲೆ ಎಷ್ಟು ಸಾಲವಿದೆ? ಜಮೀನು ಜಂಟಿಯಾಗಿದೆಯೇ ಸೇರಿದಂತೆ ಇನ್ನಿತರ ಜಮೀನಿನ ಮಾಹಿತಿಗಳನ್ನು ಒಂದೇ ನಿಮಿಷದಲ್ಲಿ ರೈತರು ಚೆಕ್ ಮಾಡಬಹುದು. ಅದು ಹೇಗೆ ಅಂದುಕೊಂಡಿದ್ದೀರಾ? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.
neighbor land loan details ರೈತರ ನೆರೆಹೊರೆಯವರ ಹೆಸರಿಗೆ ಎಷ್ಟು ಎಕರೆಯಿದೆ? ಸಾಲವಿದೆ ಚೆಕ್ ಮಾಡಿ
ರೈತರು ತಮ್ಮ ಜಮೀನಿನೊಂದಿಗೆ ತಮ್ಮ ಸರ್ವೆ ನಂಬರ್ ಅಕ್ಕಪಕ್ಕದ ಸರ್ವೆ ನಂಬರುಗಳ ಜಮೀನಿನ ಮಾಲಿಕರ ಹೆಸರಿಗೆ ಎಷ್ಟು ಎಕರೆ ಜಮೀನು ಹಾಗೂ ಸಾಲವಿರುವುದನ್ನು ಚೆಕ್ ಮಾಡಲು ಈ
https://landrecords.karnataka.gov.in/Service11/MR_MutationExtract.aspx
ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಭೂಮಿ ಆನ್ಲೈನ್ ಮುಟೇಶನ್ ಎಕ್ಸಟ್ರ್ಯಾಕ್ಟ್ ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ನಿಮ್ಮ ಜಿಲ್ಲೆಯನ್ನು ಆಯ್ಕೆ ಮಾಡಿಕೊಳ್ಳಬೇಕು. ನಂತರ ತಾಲೂಕು ಆಯ್ಕೆ ಮಾಡಿಕೊಳ್ಳಬೇಕು. ಹೋಬಳಿ ಆಯ್ಕೆ ಮಾಡಿಕೊಂಡ ನಂತರ ಗ್ರಾಮ ಆಯ್ಕೆ ಮಾಡಿಕೊಳ್ಳಬೇಕು. ನಿಮ್ಮ ಸರ್ವೆ ನಂಬರ್ ಆಯ್ಕೆ ಮಾಡಿಕೊಳ್ಳಬೇಕು. Fetch Details ಮೇಲೆ ಕ್ಲಿಕ್ ಮಾಡಬೇಕು. ಆಗ ನೀವು ನಮೂದಿಸಿದ ಸರ್ವೆ ನಂಬರ್ ಹಾಗೂ ಅಕ್ಕಪಕ್ಕದ ಹಿಸ್ಸಾ ನಂಬರ್ ಗಳ ಪಟ್ಟಿ ಕಾಣಿಸುತ್ತದೆ. ಇದರೊಂದಿಗೆ ಆ ಜಮೀನಿನ ಬದಲಾವಣೆ ಅಂದರೆ ಜಮೀನು ಪಿತ್ರಾರ್ಜಿತವಾಗಿದೆಯೋ ಅಥವಾ ಖಾತೆ ಬದಲಾವಣೆಯಾಗಿದೆಯೋ ಅಥವಾ ಪಹಣಿ ಬದಲಾವಣೆಯಾಗಿದೆ ಸೇರಿದಂತೆ ಇನ್ನಿತರ ಮಾಹಿತಿಗಳು ಕಾಣಿಸುತ್ತವೆ. ಅಲ್ಲಿ ಯಾವ ವರ್ಷ ಜಮೀನು ಬದಲಾವಣೆಯಾಗಿದೆ ಎಂಬ ಮಾಹಿತಿ ಕಾಣಿಸುತ್ತದೆ.
ನೀವು ಯಾವ ಮಾಹಿತಿಯನ್ನುಚೆಕ್ ಮಾಡಬೇಕೆಂದುಕೊಂಡಿದ್ದೀರೋ ಅದರ ಹಿಂದುಗಡೆ ಕಾಣುವ ಸೆಲೆಕ್ಟ್ ಮೇಲೆ ಕ್ಲಿಕ್ ಮಾಡಬೇಕು. ಒಂದು ವೇಳೆ ನೀವು ನಿಮ್ಮ ಜಮೀನು ಹಾಗೂ ಅಕ್ಕಪಕ್ಕದ ಜಮೀನಿನ ಮೇಲೆ ಸಾಲವೆಷ್ಟಿದೆ ಎಂಬುದನ್ನು ಚೆಕ್ ಮಾಡಲು ಋಣಗಳು ಕಾಣಿಸುತ್ತವೆ. ಅದರ ಹಿಂದುಗಡೆ ಕಾಣುವ ಸೆಲೆಕ್ಟ್ ಮೇಲೆ ಕ್ಲಿಕ್ ಮಾಡಬೇಕು. ನಂತರ ಅಲ್ಲಿ ಕಾಣುವ Preview ಮೇಲೆ ಕ್ಲಿಕ್ ಮಾಡಬೇಕು. ಆಗ ಇನ್ನೊಂದು ಪೇಜ್ ತೆರೆದುಕೊಳ್ಳುತ್ತದೆ. ಆಗ ಇನ್ನೊಂದು ಪೇಜ್ ಓಪನ್ ಆಗುತ್ತದೆ. ಅಲ್ಲಿ ಯಾವ ಜಮೀನಿನ ಮಾಲಿಕರು ಯಾವ ಬ್ಯಾಂಕಿನಿಂದ ಸಾಲ ಪಡೆದಿದ್ದಾರೆ? ಯಾವ ಬ್ಯಾಂಕಿನಿಂದ ಎಷ್ಟು ಸಾಲ ಪಡೆದಿದ್ದಾರೆ? ಎಂಬುದನ್ನು ಮೊಬೈಲ್ ನಲ್ಲೇ ಚೆಕ್ ಮಾಡಬಹುದು.
ಇದನ್ನೂ ಓದಿ : ಪಿಎಂ ಕಿಸಾನ್ ಹಣ ಯಾರ ರೈತರಿಗೆ ಜಮೆ ಯಾವ ರೈತರಿಗೆ ಜಮೆಯಾಗಲ್ಲ ಮೊಬೈಲ್ ನಲ್ಲೇ ಚೆಕ್ ಮಾಡಿ
ಪೌತಿ ಖಾತೆ ಹಿಂದಿರುವ ಸೆಲೆಕ್ಟ್ ಮೇಲೆ ಕ್ಲಿಕ್ ಮಾಡಿದರೆ ನೀವು ಆಯ್ಕೆ ಮಾಡಿಕೊಂಡ ಸರ್ವೆ ನಂಬರ್ ಹಿಸ್ಸಾ ನಂಬರ್ ನಲ್ಲಿ ಜಮೀನು ಯಾರ ಹೆಸರಿನಿಂದ ಯಾರ ಹೆಸರಿಗೆ ವರ್ಗಾವಣೆಯಾಗಿದೆ? ಎಷ್ಟು ಎಕರೆ ಜಮೀನು ಅವರ ಹೆಸರಿಗೆ ವರ್ಗಾವಣೆ ಮಾಡಲಾಗಿದೆ? ಎಂಬುದನ್ನು ನೋಡಬಹುದು.
ಪಿತ್ರಾರ್ಜಿತ ಹಿಂದಿರುವ ಸೆಲೆಕ್ಟ್ ಮೇಲೆ ಕ್ಲಿಕ್ ಮಾಡಿದರೆ ಜಮೀನು ಯಾರ ಹೆಸರಿನಿಂದ ತಮ್ಮ ಯಾವ ಮಗನ ಹೆಸರಿಗೆ ವರ್ಗಾವಣೆ ಆಗಿದೆ ಎಂಬುದನ್ನು ಚೆಕ್ ಮಾಡಬಹುದು.
ಪೋಡಿ ಹಿಂದಿರುವ ಸೆಲೆಕ್ಟ್ ಮೇಲೆ ಕ್ಲಿಕ್ ಮಾಡಿದ ನಂತರ ಪ್ರವಿವ್ ಮೇಲೆ ಕ್ಲಿಕ್ ಮಾಡಿದರೆ ಸಾಕು, ನೀವು ನಮೂದಿಸಿದ ಸರ್ವೆ ನಂಬರ್ ಒಳಗೆ ಯಾವ ಯಾವ ಜಮೀನಿನ ಮಾಲಿಕರು ಬರುತ್ತಾರೆ? ಅವರ ಹೆಸರಿಗೆ ಎಷ್ಟು ಎಕರೆ ಜಮೀನಿದೆ ಎಂಬುದನ್ನು ಚೆಕ್ ಮಾಡಬಹುದು.