Check your land transfer details ನಿಮ್ಮ ಜಮೀನು ಯಾವ ವರ್ಷ ನಿಮ್ಮ ಹೆಸರಿಗೆ ವರ್ಗಾವಣೆಯಾಗಿದೆ ಹಾಗೂ ನಿಮ್ಮ ಜಮೀನಿನ ಖಾತಾ ನಂಬರ್ ಮುಟೇಶನ್ ನಂಬರ್ ಮೊಬೈಲ್ ನಲ್ಲೇ ಚೆಕ್ ಮಾಡಬಹುದು.
ಹೌದು, ರೈತರ ಬಳಿ ಸ್ಮಾರ್ಟ್ ಫೋನ್ ಇದ್ದರೆ ಸಾಕು, ಮನೆಯಲ್ಲಿಯೇ ಕುಳಿತು ಜಮೀನು ತಮ್ಮ ಹೆಸರಿಗೆ ಯಾವಾಗ ವರ್ಗಾವಣೆಯಾಗಿದೆ ಹಾಗೂ ಖಾತಾ ನಂಬರ್ ಮತ್ತು ಮುಟೇಶನ್ ನಂಬರ್ ಚೆಕ್ ಮಾಡಬಹುದು. ಅದು ಹೇಗೆ ಅಂದುಕೊಂಡಿದ್ದೀರಾ.. ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.
Check your land transfer details ಯಾವ ವರ್ಷ ನಿಮ್ಮ ಜಮೀನು ಹೆಸರಿಗೆ ವರ್ಗಾವಣೆಯಾಗಿದೆ?
ಮೊಬೈಲ್ ಲ್ಲಿ ಜಮೀನು ಯಾವ ವರ್ಷ ತಮ್ಮ ಹೆಸರಿಗೆ ವರ್ಗಾವಣೆಯಾಗಿದೆ ಎಂಬುದನ್ನು ಚೆಕ್ ಮಾಡಲು ಈ
https://landrecords.karnataka.gov.in/service53/
ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಭೂಮಿ ಆನ್ಲೈನ್ ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿSurvey No. Wise ಆಯ್ಕೆ ಮಾಡಿಕೊಳ್ಳಬೇಕು. ನಂತರ ನಿಮ್ಮ ಜಿಲ್ಲೆ ಆಯ್ಕೆ ಮಾಡಿಕೊಳ್ಳಬೇಕು. ತಾಲೂಕು ಆಯ್ಕೆ ಮಾಡಿಕೊಳ್ಳಬೇಕು. ಹೋಬಳಿ ಆಯ್ಕೆ ಮಾಡಿಕೊಳ್ಳಬೇಕು. ನಂತರ ನಿಮ್ಮ ಗ್ರಾಮ ಆಯ್ಕೆ ಮಾಡಿಕೊಳ್ಳಬೇಕು. ನಿಮ್ಮ ಸರ್ವೆ ನಂಬರ್ ಹಾಕಬೇಕು. ಸರ್ನೋಕ್ ನಲ್ಲಿ ಸ್ಟಾರ್ ಆಯ್ಕೆ ಮಾಡಿಕೊಳ್ಳಬೇಕು. ಹಿಸ್ಸಾ ನಂಲ್ಲಿ ಸ್ಟಾರ್ ಆಯ್ಕೆ ಮಾಡಿಕೊಳ್ಳಬೇಕು. ಇದಾದ ಮೇಲೆ View Land Data ಮೇಲೆ ಕ್ಲಿಕ್ ಮಾಡಬೇಕು.
ಆಗ ಇನ್ನೊಂದು ಪೇಜ್ ತೆರೆದುಕೊಳ್ಳುತ್ತದೆ. ಅದು ಆರ್.ಟಿ.ಸಿ ಫಾರ್ಮ್ ನಂಬರ್ 16 ಆಗಿರುತ್ತದೆ. ಇದರಲ್ಲಿ ನಿಮ್ಮ ತಾಲೂಕು, ಹೋಬಳಿ, ಗ್ರಾಮ, ಸರ್ವೆ ನಂಬರ್ ಈಮಾಹತಿ ಯಾವ ವರ್ಷ ದಿಂದ ವ್ಯಾಲಿಡ್ ಆಗಿರುತ್ತದೆ ಎಂಬ ಮೆಸೆಜ್ ಇರುತ್ತದೆ. ಇದರ ಕೆಳಗಡೆ ನೀವು ನಮೂದಿಸಿ ಸರ್ವೆ ನಂಬರ್ ನ ಒಟ್ಟುಜಮೀನು ಎಷ್ಟು ಎಕರೆ ಗುಂಟೆಯಲ್ಲಿ ದೆ ಎಂಬ ಮಾಹಿತಿಸಿಗುತ್ತದೆ.
ಖರಾಬು ಎ ಮತ್ತು ಖರಾಬು ಬಿ ಜಮೀನು ಎಷ್ಟಿದೆ ಎಂಬ ಮಾಹಿತಿಯೂ ಒಳಗೊಂಡಿರುತ್ತದೆ. ಜಮೀನು ಯಾವ ಪ್ರಕಾರದ್ದಾಗಿದೆ ಆ ಸರ್ವೆ ನಂಬರಿನಲ್ಲಿಎಷ್ಟು ಗಿಡಗಳಿವೆ? ಜಮೀನುಪಟ್ಟಾ ಆಗಿದೆಯೋ ಇಲ್ಲವೋ ಎಂಬ ಮಾಹಿತಿ ಸಿಗುತ್ತದೆ.
ಇದನ್ನೂ ಓದಿ : ಮೊಬೈಲ್ ನಂಬರ್ ಹಾಕಿ ಯಾವ ಯೋಜನೆಯಡಿ ಎಷ್ಟು ಹಣ ನಿಮಗೆ ಜಮೆಯಾಗಿದೆ? ಮೊಬೈಲ್ ನಲ್ಲೇ ಚೆಕ್ ಮಾಡಿ
ಸಿರಿಯಲ್ ನಂಬರ್ 9 ರಲ್ಲಿ ಜಮೀನು ಮಾಲಿಕರ ಹೆಸರು ತಂದೆಯ ಹೆಸರು ಅವರ ಹೆಸರಿಗೆ ಎಷ್ಟು ಎಕರೆ ಜಮೀನಿದೆ? ಮಾಲಿಕರ ಜಮೀನಿನ ಖಾತಾ ನಂಬರ್ ಹಾಗೂ ಜಮೀನು ಯಾವಾಗ ಖರೀದಿ ಮಾಡಲಾಗಿದೆ ಅಥವಾ ಅವರ ಹೆಸರಿಗೆ ಬದಲಾಗಿದೆ ಅಂದರೆ ಯಾವ ದಿನಾಂಕ ಮತ್ತು ಯಾವ ತಿಂಗಳು ಹಾಗೂ ವರ್ಷ ಎಂಬ ಸಂಪೂರ್ಣ ಮಾಹಿತಿ ಸಿಗುತ್ತದೆ.
ಒಂದು ವೇಳೆ ಜಮೀನಿನ ಮೇಲೆ ಸಾಲ ಪಡೆದಿದ್ದರೂ ಯಾವ ಬ್ಯಾಂಕಿನಿಂದ ಎಷ್ಟು ಸಾಲ ಪಡೆಯಲಾಗಿದೆ. ಎಂಬ ಮಾಹಿತಿ ಇರುತ್ತದೆ. ಜಮೀನು ಜಂಟಿಯಾಗಿದ್ದರೆ ಯಾರ ಯಾರ ಹೆಸರಿಗೆ ಜಂಟಿಯಾಗಿದೆ. ಅವರ ಹೆಸರು ಮತ್ತು ತಂದೆಯ ಹೆಸರು ಎಷ್ಟು ಎಕರೆ ಜಂಟಿಯಾಗಿದೆ ಎಂಬ ಮಾಹಿತಿ ಇಲ್ಲೇ ಸಿಗುತ್ತದೆ.
ಜಮೀನಿನಲ್ಲಿ ಪ್ರಸಕ್ತ ವರ್ಷ ಹಾಗೂ ಹಿಂದಿನ ವರ್ಷ ಯಾವ ಯಾವ ಬೆಳೆ ಹಾಕಲಾಗಿದೆ? ಎಷ್ಟು ಎಕರೆಯಲ್ಲಿ ಬಿತ್ತನೆ ಮಾಡಲಾಗಿದೆ ಎಂಬ ಮಾಹಿತಿ ರೈತರಿಗೆ ಕುಳಿತಲ್ಲಿಯೇ ಸಿಗುತ್ತದೆ. ಮುಂಗಾರು. ಹಿಂಗಾರು ಹಾಗೂ ಬೇಸಿಗೆ ಹಂಗಾಮಿನಲ್ಲಿ ಯಾವ ಯಾವ ಬೆಳೆ ಹಾಕಲಾಗಿದೆ ಎಂಬ ಮಾಹಿತಿ ರೈತರಿಗೆ ಸಿಗುತ್ತದೆ. ಇದರೊಂದಿಗೆ ಜಮೀನಿನ ಮಾಲಿಕರ ಹೆಸರು ಹಾಗೂ ತಂದೆಯ ಹೆಸರಿನೊಂದಿಗೆ ಜಮೀನಿನಲ್ಲಿ ಏನೇನು ಬಿತ್ತಲಾಗಿದೆ ಎಂಬ ಮಾಹಿತಿಯೂ ಕ್ಷಣಮಾತ್ರದಲ್ಲಿ ರೈತರಿಗೆ ಸಿಗಲಿದೆ.