ನಿಮ್ಮ ಜಮೀನಿನ ಐಡಿ ನಿಮಗೆ ಗೊತ್ತೇ? ಮೊಬೈಲ್ ನಲ್ಲೇ ಚೆಕ್ ಮಾಡಿ

Written by Ramlinganna

Published on:

Check your land ID Number ರೈತರು ತಮ್ಮ ಜಮೀನಿನ ಐಡಿಯನ್ನು ಮೊಬೈಲ್ ನಲ್ಲೇ ಚೆಕ್ ಮಾಡಬಹುದು. ಹೌದು, ಇದಕ್ಕಾಗಿ ರೈತರು ಯಾರ ಬಳಿಯೂ ಹೋಗಬೇಕಿಲ್ಲ. ಮನೆಯಲ್ಲಿಯೇ ಕುಳಿತು ತಮ್ಮ ಬಳಿಯಿರುವ ಮೊಬೈಲ್ ನಲ್ಲೇ ಚೆಕ್ ಮಾಡಬಹುದು.  ಅದು ಹೇಗೆ ಅಂದುಕೊಂಡಿದ್ದೀರಾ?  ಇಲ್ಲಿದೆ ಮಾಹಿತಿ.

Check your land ID Number ರೈತರು ತಮ್ಮ ಜಮೀನಿನ ಐಡಿ ಚೆಕ್ ಮಾಡುವುದು ಹೇಗೆ?

ರೈತರು ತಮ್ಮ ಜಮೀನಿನ ಐಡಿಯನ್ನು ಮೊಬೈಲ್ ನಲ್ಲೇ ಚೆಕ್ ಮಾಡಲು ಈ

https://landrecords.karnataka.gov.in/Service2/

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಕಂದಾಯ ಇಲಾಖೆಯ ಪೇಜೆ ಓಪನ್ ಆಗುತ್ತದೆ. ಅಲ್ಲಿ ನಿಮ್ಮ ಜಿಲ್ಲೆಯನ್ನು ಆಯ್ಕೆ ಮಾಡಿಕೊಳ್ಳಬೇಕು. ನಂತರ ನಿಮ್ಮ ತಾಲೂಕು ಆಯ್ಕೆ ಮಾಡಿಕೊಳ್ಳಬೇಕು. ಇದಾದನಂತರ ಹೋಬಳಿ ಆಯ್ಕೆ ಮಾಡಿಕೊಳ್ಳಬೇಕು. ನಂತರ ನಿಮ್ಮ ಊರು, ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ. ನಂತರ ನಿಮ್ಮ ಜಮೀನಿನ ಸರ್ವೆ ನಂಬರ್ ಹಾಕಬೇಕು. ನಂತರ ಗೋ ಮೇಲೆ ಕ್ಲಿಕ್ ಮಾಡಲೇಬೇಕು.

ಆಗಲೇ ನಿಮಗೆ ಸರ್ನೋಕ್ ಆ್ಯಕ್ಟಿವ್ ಆಗುತ್ತದೆ. ಅಲ್ಲಿ ನೀವು ಸ್ಟಾರ್ ಆಯ್ಕೆ ಮಾಡಿಕೊಳ್ಳಬೇಕು. ನಂತರ ಹಿಸ್ಸಾ ನಂಬರ್ ನಲ್ಲಿ ಸ್ಟಾರ್ ಆಯ್ಕೆ ಮಾಡಿಕೊಳ್ಳಬೇಕು. ನಂತರ ಪಿರಿಯಡ್ ನಲ್ಲಿ2022- 2023 ಆಯ್ಕೆ ಮಾಡಿಕೊಂಡ ನಂತರ ಇಯರ್ ನಲ್ಲಿಯೂ 2022-2023 ಆಯ್ಕೆ ಮಾಡಿಕೊಳ್ಳಬೇಕು. ನಂತರ Fetch Details ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮಗೆ ನಿಮ್ಮಜಮೀನಿನ ಐಡಿ ಕಾಣಿಸುತ್ತದೆ. Your Land IS is…… ಎದುರುಗಡೆ ಐಡಿ ನಂಬರ್ ಕಾಣಿಸುತ್ತದೆ.

ಅದರ ಕೆಳಗಡೆ ನೀವು ನಮೂದಿಸಿದ ಸರ್ವೆ ನಂಬರ್ ನಲ್ಲಿ ಯಾವ ಯಾವ ಜಮೀನಿನ ಮಾಲಿಕರು ಬರುತ್ತಾರೆ. ಅವರ ಹೆಸರಿಗೆ ಎಷ್ಟೆಷ್ಟು ಎಕರೆ ಜಮೀನಿದೆ ಎಂಬ ಮಾಹಿತಿ ಇರುತ್ತದೆ. ಇಧರ ಜೊತೆಗೆ ಆ ಜಮೀನಿನ ಮಾಲಿಕರ ಖಾತಾ ನಂಬರ್ ಸಹ ಕಾಣಿಸುತ್ತದೆ.

ಇದನ್ನೂ ಓದಿ ಈ ಲಿಸ್ಟ್ ನಲ್ಲಿರುವ ರೈತರಿಗೆ ಪಿಎಂ ಕಿಸಾನ್ ಹಣ ಜಮೆಯಾಗಲ್ಲ ನಿಮ್ಮ ಹೆಸರಿದೆಯೇ  ಚೆಕ್ ಮಾಡಿ

ಅಲ್ಲೇ ಕಾಣುವ ವೀವ್ ಮೇಲೆ ಕ್ಲಿಕ್ ಮಾಡಿದರೆ ಸಾಕು, ನಿಮ್ಮ ಜಮೀನಿನ ಪಹಣಿ (ಆರ್.ಟಿ.ಸಿ) ಓಪನ್ ಆಗುತ್ತದೆ.  ಆ ಪಹಣಿಯಲ್ಲಿ ಜಮೀನಿನ ಮಾಲಿಕರ ಹೆಸರು ಜಂಟಿಯಾಗಿದ್ದರೆ ಎಷ್ಟು ಎಕರೆಯಲ್ಲಿ ಎಷ್ಟು ಜನ ಜಮೀನಿನ ಮಾಲಿಕರು ಜಂಟಿಯಾಗಿದ್ದಾರೆ ಎಂಬ ಮಾಹಿತಿ ಇರುತ್ತದೆ. ಜಮೀನು ಯಾವಾಗ ಮುಟೇಶನ್ ಆಗಿದೆ ಅಲ್ಲಿಮುಟೇಶನ್ ನಂಬರ್ ಸಹ ಇರುತ್ತದೆ.

ಒಂದು ವೇಳೆ ಜಮೀನಿನ ಮಾಲಿಕರು ಬ್ಯಾಂಕಿನಿಂದ ಸಾಲ ಪಡೆದಿದ್ದರೆ ಯಾವ ಬ್ಯಾಂಕಿನಿಂದ ಎಲ್ಲಿ ಎಷ್ಟು ಸಾಲ ಪಡೆದಿದ್ದಾರೆ ಎಂಬ ಮಾಹಿತಿಯೂ ಇರುತ್ತದೆ.

ಈ ಪಹಣಿಯನ್ನು ನೀವು ವೀಕ್ಷಿಸಬಹುದು. ಓರಿಜಿನಲ್ ಪಹಣಿ ಬೇಕಾದರೆ ಅದಕ್ಕೆ ಶುಲ್ಕ ಪಾವತಿಸಿ ಪಡೆಯಬಹುದು. ಈ ಪಹಣಿಯನ್ನು ಈಗ ರಾಜ್ಯದ ಎಲ್ಲಿ ಬೇಕಾದರೆ ಪಡೆಯಬಹುದು.  ನಿಮ್ಮ ತಾಲೂಕಿನ ನಾಡ ಕಚೇರಿಗೆ ಅಥವಾ ತಹಶೀಲ್ದಾರ ಕಚೇರಿಗೆ ಹೋಗಬೇಕಿಲ್ಲ. ರೈತರಿಗೆ ದಾಖಲೆ ಪಡೆಯಲು ಅನುಕೂಲವಾಗಲೆಂದು ಆನ್ಲೈನ್ ವ್ಯವಸ್ಥೆ ಮಾಡಲಾಗಿದೆ.

ಹಾಗಾಗಿ ರೈತರು ತಮಗೆ ಬೇಕಾದಾಗ ಎಲ್ಲಿ ಬೇಕಾದರಲ್ಲಿ ಜಮೀನಿನ ಪಹಣಿಯನ್ನು ಪ್ರಿಂಟ್ ತೆಗೆದುಕೊಳ್ಳಬಹುದು. ಅದಷ್ಟೇ ಅಲ್ಲ, ನಿಮ್ಮ ಮೊಬೈಲ್ ನಲ್ಲೇ ನೀವು ಆಗಾಗ ಜಮೀನಿಗೆ ಸಂಬಂಧಿಸಿದ ದಾಖಲೆಗಳನ್ನು ಪರಿಶೀಲಿಸುವ ವ್ಯವಸ್ಥೆಯೂ ಮಾಡಲಾಗಿದೆ.

ಭೂಮಿ ಎಂಬ ಆ್ಯಪ್ ಸಹ ಅಭಿವೃದ್ಧಿ ಪಡಿಸಲಾಗಿದೆ. ಆ ಆ್ಯಪ್ ನಿಮ್ಮ ಮೊಬೈಲ್ ನಲ್ಲಿ ಡೌನ್ಲೋಡ್ ಮಾಡಿಕೊಂಡರೆ ಸಾಕು, ಆಗಾಗ ನಿಮ್ಮ ಜಮೀನಿಗೆ ಸಂಬಂಧಿಸಿದ ಮಾಹಿತಿಗಳನ್ನು ಪರಿಶೀಲಿಸಬಹುದು. ಭೂಮಿ ಆ್ಯಪ್ ಒಮ್ಮೆ ನಿಮ್ಮ ಮೊಬೈಲಿಗೆ ಇಸಸ್ಟಾಲ್ ಮಾಡಿಕೊಂಡರೆ ಸಾಕು, ಮತ್ತೆ ಮತ್ತೆ ಇನಸ್ಟಾಲ್ ಮಾಡಿಕೊಳ್ಳುವ ಅಗತ್ಯವಿಲ್ಲ.

Leave a Comment