your land Id ರೈತರ ತಮ್ಮ ಜಮೀನಿಗೆ ಸಂಬಂಧಿಸಿದ ದಾಖಲೆಗಳನ್ನು ಮೊಬೈಲ್ ನಲ್ಲೇ ಚೆಕ್ ಮಾಡುವುದರೊಂದಿಗೆ ನಿಮ್ಮ ಜಮೀನಿನ ಐಡಿಯನ್ನು ಸಹ ಮೊಬೈಲ್ ನಲ್ಲೇ ವೀಕ್ಷಿಸಬಹುದು.
ಹೌದು, ಇದಕ್ಕಾಗಿ ರೈತರು ಯಾರ ಬಳಿಯೂ ಹೋಗಬೇಕಿಲ್ಲ. ಮನೆಯಲ್ಲಿಯೇ ಕುಳಿತು ತಮ್ಮ ಬಳಿಯಿರುವ ಮೊಬೈಲ್ ನಲ್ಲೇ ಚೆಕ್ ಮಾಡಬಹುದು. ಅದು ಹೇಗೆ ಅಂದುಕೊಂಡಿದ್ದೀರಾ? ಇಲ್ಲಿದೆ ಮಾಹಿತಿ.
ರೈತರು ತಮ್ಮ your land Id ಜಮೀನಿನ ಐಡಿ ಚೆಕ್ ಮಾಡುವುದು ಹೇಗೆ?
ರೈತರು ತಮ್ಮ ಜಮೀನಿನ ಐಡಿಯನ್ನು ಮೊಬೈಲ್ ನಲ್ಲೇ ಚೆಕ್ ಮಾಡಲು ಈ
https://landrecords.karnataka.gov.in/Service2/
ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಕಂದಾಯ ಇಲಾಖೆಯ ಪೇಜೆ ಓಪನ್ ಆಗುತ್ತದೆ. ಅಲ್ಲಿ ನಿಮ್ಮ ಜಿಲ್ಲೆಯನ್ನು ಆಯ್ಕೆ ಮಾಡಿಕೊಳ್ಳಬೇಕು. ನಂತರ ನಿಮ್ಮ ತಾಲೂಕು ಆಯ್ಕೆ ಮಾಡಿಕೊಳ್ಳಬೇಕು. ಇದಾದ ನಂತರ ಹೋಬಳಿ ಆಯ್ಕೆ ಮಾಡಿಕೊಳ್ಳಬೇಕು. ನಂತರ ನಿಮ್ಮ ಊರು, ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ. ನಂತರ ನಿಮ್ಮ ಜಮೀನಿನ ಸರ್ವೆ ನಂಬರ್ ಹಾಕಬೇಕು. ನಂತರ ಗೋ ಮೇಲೆ ಕ್ಲಿಕ್ ಮಾಡಲೇಬೇಕು.
ಆಗಲೇ ನಿಮಗೆ ಸರ್ನೋಕ್ ಆ್ಯಕ್ಟಿವ್ ಆಗುತ್ತದೆ. ಅಲ್ಲಿ ನೀವು ಸ್ಟಾರ್ ಆಯ್ಕೆ ಮಾಡಿಕೊಳ್ಳಬೇಕು. ನಂತರ ಹಿಸ್ಸಾ ನಂಬರ್ ನಲ್ಲಿ ಸ್ಟಾರ್ ಆಯ್ಕೆ ಮಾಡಿಕೊಳ್ಳಬೇಕು. ನಂತರ ಪಿರಿಯಡ್ ನಲ್ಲಿ 2023– 2024 ಆಯ್ಕೆ ಮಾಡಿಕೊಂಡ ನಂತರ ಇಯರ್ ನಲ್ಲಿಯೂ 2023-2024 ಆಯ್ಕೆ ಮಾಡಿಕೊಳ್ಳಬೇಕು. ನಂತರ Fetch Details ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮಗೆ ನಿಮ್ಮಜಮೀನಿನ ಐಡಿ ಕಾಣಿಸುತ್ತದೆ. ಅಂದರೆ ಖಾತಾ ನಂಬರ್ ಇದೇ ಜಮೀನಿನ ಐಡಿ ಆಗಿರುತ್ತದೆ.
ಅದರ ಕೆಳಗಡೆ ನೀವು ನಮೂದಿಸಿದ ಸರ್ವೆ ನಂಬರ್ ನಲ್ಲಿ ಯಾವ ಯಾವ ಜಮೀನಿನ ಮಾಲಿಕರು ಬರುತ್ತಾರೆ. ಅವರ ಹೆಸರಿಗೆ ಎಷ್ಟೆಷ್ಟು ಎಕರೆ ಜಮೀನಿದೆ ಎಂಬ ಮಾಹಿತಿ ಇರುತ್ತದೆ. ಇದರ ಎದುರಗುಡೆ ಇತರ ಜಮೀನಿನ ಮಾಲಿಕರ ಖಾತಾ ನಂಬರ್ ಸಹ ಕಾಣಿಸುತ್ತದೆ.
ಇದನ್ನೂ ಓದಿ : ರಾಜ್ಯದ 35 ಲಕ್ಷ ರೈತರಿಗೆ 65 ಕೋಟಿ ಬರಗಾಲ ಪರಿಹಾರ ಹಣ ಬಿಡುಗಡೆ
ಜಮೀನಿನ ಸರ್ವೆ ನಂಬರ್ ಒಂದೇ ಆಗಿದ್ದರೂ ಖಾತಾ ನಂಬರ್ ಬೇರೆ ಬೇರೆ ಯಾಗಿರುತ್ತದೆ.ರೈತರು ಖಾತಾ ನಂಬರ್ ನೆನಪಿಟ್ಟುಕೊಂಡು ಕಂದಾಯ ಇಲಾಖೆಯಿಂದ ಖಾತಾ ಪ್ರತಿ ಪಡೆದುಕೊಳ್ಳಬಹುದು.
ಅಲ್ಲೇ ಕಾಣುವ ವೀವ್ ಮೇಲೆ ಕ್ಲಿಕ್ ಮಾಡಿದರೆ ಸಾಕು, ನಿಮ್ಮ ಜಮೀನಿನ ಪಹಣಿ (ಆರ್.ಟಿ.ಸಿ) ಓಪನ್ ಆಗುತ್ತದೆ. ಆ ಪಹಣಿಯಲ್ಲಿ ಜಮೀನಿನ ಮಾಲಿಕರ ಹೆಸರು ಜಂಟಿಯಾಗಿದ್ದರೆ ಎಷ್ಟು ಎಕರೆಯಲ್ಲಿ ಎಷ್ಟು ಜನ ಜಮೀನಿನ ಮಾಲಿಕರು ಜಂಟಿಯಾಗಿದ್ದಾರೆ ಎಂಬ ಮಾಹಿತಿ ಇರುತ್ತದೆ. ಜಮೀನು ಯಾವಾಗ ಮುಟೇಶನ್ ಆಗಿದೆ ಅಲ್ಲಿಮುಟೇಶನ್ ನಂಬರ್ ಸಹ ಇರುತ್ತದೆ.
ಒಂದು ವೇಳೆ ಜಮೀನಿನ ಮಾಲಿಕರು ಬ್ಯಾಂಕಿನಿಂದ ಸಾಲ ಪಡೆದಿದ್ದರೆ ಯಾವ ಬ್ಯಾಂಕಿನಿಂದ ಎಲ್ಲಿ ಎಷ್ಟು ಸಾಲ ಪಡೆದಿದ್ದಾರೆ ಎಂಬ ಮಾಹಿತಿಯೂ ಇರುತ್ತದೆ.
ಈ ಪಹಣಿಯನ್ನು ವೀಕ್ಷಿಸಬಹುದು. ಅಂದರೆ ನಿಮ್ಮ ಜಮೀನಿನ ದಾಖಲೆಯಲ್ಲಿ ಏನೇನು ಬದಲಾವಣೆಯಾಗಿದೆ ಎಂಬುದನ್ನು ಚೆಕ್ ಮಾಡಬಹುದು.
ಇದನ್ನೂ ಓದಿ : ಆಧಾರ್ ವೋಟರ್ ಐಡಿ ಲಿಂಕ್ ಮಾಡುವುದು ಹೇಗೆ? ಇಲ್ಲಿದೆ ಮಾಹಿತಿ
ಓರಿಜಿನಲ್ ಪಹಣಿ ಬೇಕಾದರೆ ಅದಕ್ಕೆ ಶುಲ್ಕ ಪಾವತಿಸಿ ಪಡೆಯಬಹುದು. ಈ ಪಹಣಿಯನ್ನು ಈಗ ರಾಜ್ಯದ ಎಲ್ಲಿ ಬೇಕಾದರೆ ಪಡೆಯಬಹುದು. ನಿಮ್ಮ ತಾಲೂಕಿನ ನಾಡ ಕಚೇರಿಗೆ ಅಥವಾ ತಹಶೀಲ್ದಾರ ಕಚೇರಿಗೆ ಹೋಗಬೇಕಿಲ್ಲ. ರೈತರಿಗೆ ದಾಖಲೆ ಪಡೆಯಲು ಅನುಕೂಲವಾಗಲೆಂದು ಆನ್ಲೈನ್ ವ್ಯವಸ್ಥೆ ಮಾಡಲಾಗಿದೆ.
ಹಾಗಾಗಿ ರೈತರು ತಮಗೆ ಬೇಕಾದಾಗ ಎಲ್ಲಿ ಬೇಕಾದರಲ್ಲಿ ಜಮೀನಿನ ಪಹಣಿಯನ್ನು ಪ್ರಿಂಟ್ ತೆಗೆದುಕೊಳ್ಳಬಹುದು. ಅದಷ್ಟೇ ಅಲ್ಲ, ನಿಮ್ಮ ಮೊಬೈಲ್ ನಲ್ಲೇ ನೀವು ಆಗಾಗ ಜಮೀನಿಗೆ ಸಂಬಂಧಿಸಿದ ದಾಖಲೆಗಳನ್ನು ಪರಿಶೀಲಿಸುವ ವ್ಯವಸ್ಥೆಯೂ ಮಾಡಲಾಗಿದೆ.