Check your neighbor land records ರೈತರು ತಮ್ಮ ಜಮೀನಿನ ಅಕ್ಕಪಕ್ಕದವರ ಹೆಸರಿಗೆ ಎಷ್ಟುಎಕರೆ ಜಮೀನಿದೆ ಹಾಗೂ ಅವರು ಎಷ್ಟು ಸಾಲ ಪಡೆದಿದ್ದಾರೆ ಎಂಬುದನ್ನು ಮೊಬೈಲ್ ನಲ್ಲೇ ಚೆಕ್ ಮಾಡಬಹುದು.
ಯೂಟೂಬ್ ಚಾನೆಲಿಗೆ ಸಬಸ್ಕ್ರೈಬ್ ಮಾಡಿ
ಹೌದು, ರೈತರು ತಮ್ಮ ಲ್ಲಿರುವ ಮೊಬೈಲ್ ನಲ್ಲೇ ಅತೀ ಸುಲಭವಾಗಿ ಯಾರ ಸಹಾಯವೂ ಇಲ್ಲದೆ ತಮ್ಮ ಜಮೀನಿನಲ್ಲಿ ತೆಗೆದುಕೊಂಡಿರುವ ಸಾಲ ಹಾಗೂ ನೆರೆಹೊರೆಯವರ ಹೆಸರಿಗೆಷ್ಟು ಜಮೀನಿದೆ ಎಂಬುದನ್ನು ಪರಿಶೀಲಿಸಬಹುದು.
Check your neighbor land records ನೆರೆಹೊರೆಯವರ ಹೆಸರಿಗೆಷ್ಟು ಜಮೀನಿದೆ? ಸಾಲವೆಷ್ಟಿದೆ? ಚೆಕ್ ಮಾಡುವುದು ಹೇಗೆ?
ರೈತರು ಜಮೀನಿನ ಮೇಲಿರುವ ಸಾಲ ಹಾಗೂ ನೆರೆಹೊರೆಯವವರು ಜಮೀನಿನ ಮೇಲೆ ತೆಗೆದುಕೊಂಡಿರುವ ಸಾಲದ ಮಾಹಿತಿ ಚೆಕ್ ಮಾಡಲು ಈ
https://landrecords.karnataka.gov.in/Service11/MR_MutationExtract.aspx
ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಇನ್ನೊಂದು ಪೇಜ್ ಓಪನ್ ಆಗುತ್ತದೆ. ಅಲ್ಲಿ ರೈತರು ತಮ್ಮ ಜಿಲ್ಲೆ ಆಯ್ಕೆ ಮಾಡಿಕೊಳ್ಳಬೇಕು. ಇದಾದಮೇಲೆ ತಾಲೂಕು ಆಯ್ಕೆ ಮಾಡಿಕೊಂಡು ಹೋಬಳಿ ಆಯ್ಕೆ ಮಾಡಿಕೊಳ್ಳಬೇಕು. ಗ್ರಾಮ ಆಯ್ಕೆ ಮಾಡಿಕೊಳ್ಳಬೇಕು. ನಂತರ ಸರ್ವೆ ನಂಬರ್ ಹಾಕಿ Fetch Details ಮೇಲೆ ಕ್ಲಿಕ್ ಮಾಡಬೇಕು. ಆಗ ನೀವು ನಮೂದಿಸಿದ ಸರ್ವೆ ನಂಬರಿನಲ್ಲಿ ಬರುವ ಹಿಸ್ಸಾನಂಬರ್ ಗಳ ಮಾಹಿತಿ ಕಾಣುತ್ತದೆ.
ಆ ಹಿಸ್ಸಾ ನಂಬರ್ ನಲ್ಲಿ ಜಮೀನಿನಲ್ಲಿ ಯಾವ ವರ್ಷದಲ್ಲಿ ಜಮೀನು ಬದಲಾವಣೆಯಾಗಿದೆ? ಮುಟೇಶನ್ ನಂಬರ್, ಜಮೀನು ಬದಲಾವಣೆಯ ರೀತಿ ಸೇರಿದಂತೆ ಇನ್ನಿತರ ಮಾಹಿತಿ ಕಾಣುತತ್ದೆ.ಅಲ್ಲಿ ರೈತರು ಸರ್ವೆನಂಬರ್ /*/* ಹಿಂದಿರುವ Selectಮೇಲೆ ಕ್ಲಿಕ್ ಮಾಡಬೇಕು. ಆಗ ಆ ಸರ್ವೆ ನಂಬರಿನಲ್ಲಿ ಯಾವ ಯಾವ ರೈತರು ಬರುತ್ತಾರೆ. ಅವರ ಹೆಸರು, ತಂದೆಯ ಹೆಸರುಹಾಗೂ ಅವರ ಹೆಸರಿಗೆ ಎಷ್ಟು ಎಕರೆ ಜಮೀನಿದೆ? ಜಮೀನು ಜಂಟಿಯಾಗಿದೆಯೋ ಅಥವಾ ಪ್ರತ್ಯೇಕವಾಗಿ ಅವರ ಹೆಸರಿಗೆದೆಯೋ ಎಂಬ ಮಾಹಿತಿಯನ್ನು ನೋಡಬಹುದು.
ಇದನ್ನೂ ಓದಿ : ಒಂದೇ ನಿಮಿಷದಲ್ಲಿ ನಿಮ್ಮ ಜಮೀನಿನ ಮ್ಯಾಪ್ ಮೊಬೈಲ್ ನಲ್ಲಿ ಡೌನ್ಲೋಡ್ ಮಾಡಿ: ಇಲ್ಲಿದೆ ಮಾಹಿತಿ
ಸರ್ವೆ ನಂಬರ್ ಹಿಸ್ಸಾ ನಂಬರ್ ನಲ್ಲಿ ಒಟ್ಟು ಜಮೀನು ಎಷ್ಟಿದೆ? ಖರಾಬು ಜಮೀನು ಎಷ್ಟಿದೆ ಎಂಬ ಮಾಹಿತಿ ಪ್ರತ್ಯೇಕವಾಗಿ ಅಂದರೆ ಹಿಸ್ಸಾ ನಂಬರ್ ಪ್ರಕಾರ ತೋರಿಸಲಾಗಿರುತ್ತದೆ. ಅದರ ಕೆಳಗಡೆ ನೀವು ನಮೂದಿಸಿದ ಸರ್ವೆ ನಂಬರಿನಲ್ಲಿ ಎಷ್ಟು ಎಕರೆ ಜಮೀನು ಬರುತ್ತದೆ? ಅದರ ಕೆಳಗಡೆ ರೈತರ ಮಾಹಿತಿ ಇರುತ್ತದೆ.
ಯಾರು ಎಷ್ಟು ಸಾಲ ಪಡೆದಿದ್ದಾರೆ ಚೆಕ್ ಮಾಡುವುದು ಹೇಗೆ?
ರೈತರು ಯಾವ ಬ್ಯಾಂಕಿನಲ್ಲಿ ಎಷ್ಟು ಸಾಲ ಪಡೆದಿದ್ದಾರೆ ಎಂಬುದನ್ನು ಚೆಕ್ ಮಾಡಲು ಸರ್ವೆ ನಂಬರ್ /*/* ಎಂದು ಕಾಣುವ ಹಕ್ಕು ಮತ್ತು ಋಣ ಕಾಲಂ ನಲ್ಲಿರುವ ಹಿಂದುಗಡೆ Select ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮ್ಮ ಸರ್ವೆ ನಂಬರ್ ಸಹಿತಿ ನೆರೆಹೊರೆಯ ಸರ್ವೆ ನಂಬರಿನಲ್ಲಿಬರುವ ರೈತರು ಎಷ್ಟು ಸಾಲ ಪಡೆದಿದ್ದಾರೆ? ಯಾವ ಬ್ಯಾಂಕಿನಲ್ಲಿ ಸಾಲ ಪಡೆದಿದ್ದಾರೆ ಎಂಬುದನ್ನು ನೋಡಬಹುದು. ಇಲ್ಲಿ ಸರ್ವೆ ನಂಬರ್, ಹಿಸ್ಸಾನಂಬರ್, ಜಮೀನು ಮಾಲಿಕರ ಹೆಸರು, ಯಾವ ಬ್ಯಾಂಕನಲ್ಲಿ ಸಾಲ ಪಡೆಯಲಾಗಿದೆ? ಯಾವಾಗ ಸಾಲ ಪಡೆಯಲಾಗಿದೆ? ಎಷ್ಟು ಸಾಲ ತೆಗೆದುಕೊಳ್ಳಲಾಗಿದೆ ಎಂಬ ಮಾಹಿತಿಯನ್ನು ಚೆಕ್ ಮಾಡಬಹುದು.
ರೈತರಿಗೆ ಮನೆಯಲ್ಲಿಯೇ ಜಮೀನಿನ ದಾಖಲೆಗಳನ್ನು ಪರಿಶೀಲಿಸಲು ಸರ್ಕಾರವು ಭೂಮಿ ತಂತ್ರಾಂಶದಲ್ಲಿ ಈ ವ್ಯವಸ್ಥೆಯನ್ನು ಮಾಡಿದೆ. ಈ ವ್ಯವಸ್ಥೆಯಲ್ಲಿ ರೈತರು ಜಮೀನಿಗೆ ಸಂಬಂಧಿಸಿದ ದಾಖಲೆಗಳನ್ನು ಪರಿಶೀಲಿಸುವುದಷ್ಟೇ ಅಲ್ಲ, ಡೌನ್ಲೋಡ್ ಸಹ ಮಾಡಿಕೊಳ್ಳಬಹುದು. ರೈತರ ಬಳಿ ಸ್ಮಾರ್ಟ್ ಫೋನ್ ಇದ್ದರೆ ಸಾಕು, ಎಲ್ಲಾ ಮಾಹಿತಿ ಅಂಗೈಯಲ್ಲೇ ಸಿಗುತ್ತದೆ.