Check your CIBIL Score in mobile ಸಾಮಾನ್ಯ ಜನರು ತಮ್ಮ ಕ್ರೇಡಿಟ್ ಸ್ಕೋರ್ ನ್ನು ಮೊಬೈಲ್ ನಲ್ಲೇ ಚೆಕ್ ಮಾಡಬಹುದು. ಹೌದು, ರೈತರ ಬಳಿ ಸ್ಮಾರ್ಟ್ ಫೋನ್ ಇದ್ದರೆ ಸಾಕು, ಸಾರ್ವಜನಿಕರು ಉಚಿತವಾಗಿ ಮನೆಯಲ್ಲಿಯೇ ಕುಳಿತು ಕ್ರೆಡಿಟ್ ಸ್ಕೋರ ಅಂದರೆ ಸಿಬಿಲ್ ಸ್ಕೋರ್ ನ್ನು ಚೆಕ್ ಮಾಡಬಹುದು. ಸಿಬಿಲ್ ಸ್ಕೋರ್ ಎಂದರೇನು? ಸಾಲ ಪಡೆಯಲು ಸಿಬಿಲ್ ಸ್ಕೋರ್ ಎಷ್ಟಿರಬೇಕು? ಸಿಬಿಲ್ ಸ್ಕೋರ್ ಹೆಚ್ಚಿಸಲು ಏನು ಮಾಡಬೇಕು? ನೀವು ಯಾವ ಬ್ಯಾಂಕಿನಲ್ಲಿ ಎಷ್ಟು ಸಾಲ ಪಡೆದಿದ್ದೀರಿ? ನಿಮಗೆ ಗೊತ್ತಿಲ್ಲದೆ ನಿಮ್ಮ ದಾಖಲೆಯಿಂದ ಸಾಲ ಪಡೆಯಲಾಗಿದೆ ಎಂಬುದನ್ನು ಚೆಕ್ ಮಾಡುವ ಸಂಪೂರ್ಣ ಮಾಹಿತಿ ಇಲ್ಲಿದೆ.
ಯಾವುದೇ ಬ್ಯಾಂಕಿನಿಂದ ಸಾಲ ಪಡೆಯುವ ಮುನ್ನ ಸಾಲ ನೀಡಲು ಕ್ರೆಡಿಟ್ ಸ್ಕೋರ್ ಚೆಕ್ ಮಾಡಲಾಗುವುದು. ನಿಮ್ಮ ಕ್ರೆಡಿಟ್ ಸ್ಕೋರ್ ಕಡಿಮೆಯಿದ್ದರೆ ನಿಮಗೆ ಹೆಚ್ಚು ವೇತನವಿದ್ದರೂ ಬ್ಯಾಂಕಿನವರು ಸಾಲ ನೀಡಲು ನಿರಾಕರಿಸುತ್ತಾರೆ. ನಿಮ್ಮ ಸಿಬಿಲ್ ಸ್ಕೋರ್ ಎಷ್ಟಿದೆ ಎಂಬುದನ್ನುಇಲ್ಲೇ ಚೆಕ್ ಮಾಡಿ.
Check your CIBIL Score in mobile ಸಿಬಿಲ್ ಸ್ಕೋರ್ ಚೆಕ್ ಮಾಡುವುದು ಹೇಗೆ?
ಸಾರ್ವಜನಿಕರು ತಮ್ಮ ಮೊಬೈಲ್ ನಲ್ಲೇ ಉಚಿತವಾಗಿ ಸಿಬಿಲ್ ಸ್ಕೋರ್ ಚೆಕ್ ಮಾಡಲು ಈ
https://homeloans.sbi/getcibil
ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಎಸ್.ಬಿ.ಐ ಬ್ಯಾಂಕಿನ ಸಿಬಿಲ್ ಸ್ಕೋರ್ ಅಂದರೆ ಕ್ರೇಡಿಟ್ ಸ್ಕೋರ್ ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ನಿಮ್ಮ ಹೆಸರು, ಕೊನೆಯ ಹೆಸರು ನಮೂದಿಸಬೇಕು. ನಂತರ ನಿಮ್ಮ ಹುಟ್ಟಿದ ವರ್ಷ, ತಿಂಗಳ ದಿನ ಆಯ್ಕೆ ಮಾಡಿಕೊಳ್ಳಬೇಕು. ನಿಮ್ಮ ವಿಳಾಸ ನಮೂದಿಸಿ ನಿಮ್ಮ ನಗರ, ಪಿನ್ ಕೋಡ್ ನಮೂದಿಸಬೇಕು. ನಿಮ್ಮ ಗುರುತಿನ ಚೀಟಿಯಲ್ಲಿ ಪ್ಯಾನ್ ಕಾರ್ಡ್ ಇದ್ದರೆ ಯುಸ್ ಪ್ಯಾನ್ ಕಾರ್ಡ್ ಆಯ್ಕೆ ಮಾಡಿಕೊಳ್ಳಬೇಕು.
ಪ್ಯಾನ್ ಕಾರ್ಡ್ ಇಲ್ಲದಿದ್ದರೆ ನೋ ಮೇಲೆ ಕ್ಲಿಕ್ ಮಾಡಿ ಆಧಾರ್ ಕಾರ್ಡ್. ಡ್ರೈವಿಂಗ್ ಲೈಸೆನ್ಸ್, ಪಾಸ್ಪೋರ್ಟ್ ಹಾಗೂ ರೇಶನ್ ಕಾರ್ಡ್ ಆ ಆಯ್ಕೆ ಮಾಡಿಕೊಳ್ಳಬೇಕು. ನಂದರ ಕಾರ್ಡ್ ನಂಬರ್ ನಮೂದಿಸಬೇಕು. ನಂತರ ನಿಮ್ಮ ಮೊಬೈಲ್ ನಂಬರ್ ಹಾಕಬೇಕು. ನಿಮ್ಮ ಮೇಲ್ ಐಡಿ ಇದ್ದರೆ ಮೇಲ್ ಐಡಿ ಹಾಕಬೇಕು. Terms and Condition ಆಯ್ಕೆ ಮಾಡಿಕೊಂಡು ಸಬ್ಮಿಟ್ ಮೇಲೆ ಕ್ಲಿಕ್ ಮಾಡಬೇಕು ಆಗ ನಿಮ್ಮ ಮೊಬೈಲಿಗೆ ಪಿಡಿಎಪ್ ಫೈಲ್ ಓಪನ್ ಮಾಡುವ ಪಾಸ್ವರ್ಡ್ ಬರುತ್ತದೆ. ಆ ಪಾಸ್ವರ್ಡ್ ನಮೂದಿಸಿ ಫೈಲ್ ಓಪನ್ ಮಾಡಬೇಕು.
ಆಗ ನೀವು ಯಾವ ಯಾವ ಬ್ಯಾಂಕಿನಂದ ಸಾಲ ಪಡೆದಿದ್ದೀರಿ ನಿಮ್ಮ ಸಿಬಿಲ್ ಸ್ಕೋರ್ ಎಷ್ಟಿದೆ? ಎಂಬ ಮಾಹಿತಿ ಕಾಣುತ್ತದೆ. ನಿಮ್ಮ ಸಿಬಿಲ್ ಸ್ಕೋರ ಪೂವರ್ ಇದ್ದರೆ ನಿಮಗೆ ಸಾಲ ಸಿಗುವುದಿಲ್ಲ. ಗುಡ್, ಎಕ್ಸಲೆಂಟ್ ಇದ್ದರೆ ನಿಮಗೆ ಬ್ಯಾಂಕಿನವರು ಸಾಲ ನೀಡಲು ಮುಂದಾಗುತ್ತಾರೆ. ಇಲ್ಲದಿದ್ದರೆ ಸಾಲ ನೀಡಲು ನಿರಾಕರಿಸುತ್ತಾರೆ.
ಕ್ರೇಡಿಟ್ ಸ್ಕೋರ್ ಸುಧಾರಿಸುವುದು ಹೇಗೆ?
ಗ್ರಾಹಕರು ಸಾಲ ಪಡೆದಿದ್ದರೆ ಸರಿಯಾದ ಸಮಯಕ್ಕೆ ಸಾಲ ಮರುಪಾವತಿಸಬೇಕು. ಇಎಮ್ಐ ಗಳನ್ನು ನಿಗದಿತ ದಿನಾಂಕದಂದು ಅಥವಾ ಮೊದಲೇ ಪಾವತಿಸಬೇಕು.
ಇದನ್ನು ಓದಿ : ನಿಮ್ಮ ಖಾತೆಗೆ ಬೆಳೆ ಹಾನಿ ಪರಿಹಾರ ಹಣ ಜಮೆಯಾಯಿತೇ? ಮೊಬೈಲ್ ನಲ್ಲೇ ಸ್ಟೇಟಸ್ ಚೆಕ್ ಮಾಡಿ
ಸಾಲ ಪಡೆಯುವವರಾಗಿದ್ದರೆ ದೀರ್ಘಾವಧಿಗೆ ಸಾಲ ಪಡೆದು ಸರಿಯಾದ ಸಮಯಕ್ಕೆ ಕಂತುಗಳನ್ನು ಪಾವತಿಸುತ್ತಿರಬೇಕು. ಇಎಮ್ಐ ಕಡಿಮೆ ಇದ್ದರೆ ಸರಿಯಾದ ಸಮಯಕ್ಕೆ ಪಾವತಿಸಲು ಅನುಕೂಲವಾಗುತ್ತದೆ.
ಏನಿದು ಸಿಬಿಲ್ ಸ್ಕೋರ್?
CIBIL ಎಂದರೆ Credit Information Bureau (india) Limited. ಗ್ರಾಹಕರು ಈ ಹಿಂದೆ ಸಾಲಗಳನ್ನು ಪಡೆದಿರೋದು ಹಾಗೂ ಮರುಪಾವತಿಸಿದ ಬಗ್ಗೆ ಬ್ಯಾಂಕುಗಳು ಹಾಗೂ ಸಾಲಗಾರರು ನಿಯಮಿತವಾಗಿ ಸಿಬಿಲ್ ಗೆ ನೀಡಿರುವ ಮಾಹಿತಿಗಳನ್ನು ಆಧರಿಸಿರುತ್ತದೆ. ಸಿಬಿಲ್ ಸ್ಕೋರ್ ಮಾಹಿತಿ ಸಂಗ್ರಹಿಸಲು ಆರ್.ಬಿ.ಐ ನಾಲ್ಕು ಏಜೆನ್ಸಿಗಳಿಗೆ ನೇಮಿಸಿದೆ.
ಸಿಬಿಲ್ ಸ್ಕೋರ್ ಗಳು
ಸಿಬಿಲ್ ಸ್ಕೋರ್ 0 ದಿಂದ 900 ರವರೆಗೆ ಇರುತ್ತದೆ. 300-550ಇದ್ದರೆ ಪೂವರ್ , 550-650 ಇದ್ದರೆ ಆ್ಯವರೇಜ್, 650-750 ಇದ್ದರೆ ಗುಡ್ ಹಾಗೂ 750-900 ಇದ್ದರೆ ಎಕ್ಸಲೆಂಟ್ ಎಂದು ಪರಿಗಣಿಸಲಾಗುತ್ತದೆ.