check you land Map in mobile ರೈತಬಾಂಧವರಿಗೆ ಸಂತಸದ ಸುದ್ದಿ. ನಿಮ್ಮ ಯಾವುದಾದರೂ ಆಸ್ತಿಯ ನಿಖರವಾಗಿ ಸರ್ವೆ ನಂಬರ್ ನಿಮಗೆ ಗೊತ್ತಾಗುತ್ತಿಲ್ಲವೇ.? ಅದು ಸರ್ಕಾರಕ್ಕೆ ಸೇರಿದ್ದೇ…. ಅಥವಾ ಗೋಮಾಳವೇ ಅಥವಾ ಕೆರೆಯ ಮೀಸಲು ಪ್ರದೇಶದ ವ್ಯಾಪ್ತಿಯಲ್ಲಿದೆಯೇ ಅಥವಾ ಒತ್ತುವರಿಯಾಗಿದೆಯೇ ಎಂಬುದನ್ನು ತಿಳಿಯಲು ಈಗ ನೀವು ಯಾವ ಕಚೇರಿಗಳಿಗೂ ಅಲೆಯುವ ಅವಶ್ಯಕಯಿಲ್ಲ. ಮನೆಯಲ್ಲಿಯೇ ಕುಳಿತು (Dishank app) ಮೂಲಕ ತಿಳಿದುಕೊಳ್ಳಬಹುದು. ಇಷ್ಟೇ ಅಲ್ಲ, ನೀವು ಯಾವ ಸರ್ವೆ ನಂಬರ್ ನಲ್ಲಿ ನಿಂತಿದ್ದೀರಿ ಎಂಬುದನ್ನು ಸಹ ತಿಳಿದುಕೊಳ್ಳಬಹುದು.
ಹೌದು, ಕಂದಾಯ ಇಲಾಖೆಯು ಈಗ ಹೊಸ ದಿಶಾಂಕ್ ಆ್ಯಪ್ ಪರಿಚಯಿಸಿದೆ. ಈ App ಸಹಾಯದಿಂದ ನೀವು ನಿಮ್ಮ ಆಸ್ತಿಯ ವಿವರಗಳನ್ನೆಲ್ಲ ಕ್ಷಣಮಾತ್ರದಲ್ಲಿ ತಿಳಿದುಕೊಳ್ಳಬಹುದು. ಇದು ಸಾಕಷ್ಟು ಜನರಿಗೆ ತುಂಬಾ ಪ್ರಯೋಜನಕಾರಿಯಾಗಿದೆ. ಅದುಕು ಹೇಗೆ ಅಂದುಕೊಂಡಿದ್ದೀರಾ… ಇಲ್ಲಿದೆ ಸಂಪೂರ್ಣ ಮಾಹಿತಿ… ಕಂದಾಯ ಇಲಾಖೆಯಲ್ಲಿ ಲಭ್ಯವಿರುವ 1960 ರ ಸರ್ವೆ ನಕಾಶೆಗಳ ಆಧಾರದಲ್ಲಿ ಈ Appನ್ನು ಅಭಿವೃದ್ಧಿಪಡಿಸಲಾಗಿದೆ.
check you land Map in mobile ಏನಿದು ದಿಶಾಂಕ್ ಅಪ್ಲಿಕೇಷನ್
ದಿಶಾಂಕ್ ಎನ್ನುವ ಅಪ್ಲಿಕೇಶನ್ ಸಾಮಾನ್ಯ ಜನರಿಗೆ ಅತ್ಯುತ್ತಮ ಸಾಧನವಾಗಿದೆ. ಈ ಅಪ್ಲಿಕೇಶನ್ ಅನ್ನು ಸುಮಾರು ಅರ್ಧ ಮಿಲಿಯನ್ ಗಿಂತಲೂ ಹೆಚ್ಚು ಜನರು ಡೌನ್ಲೋಡ್ ಮಾಡಿದ್ದಾರೆ. ಅದನ್ನು ಅವರ ಅರಿಶೀಲನೆಗಾಗಿ ನಿತ್ಯವೂ ಬಳಸುತ್ತಿದ್ದಾರೆ. ನಾವು ನಿಂತಿರುವ ಭೂಮಿಯ ಸಮೀಕ್ಷೆಯ ಸಂಖ್ಯೆಯನ್ನು ದಿಶಾಂಕ್ ಅಪ್ಲಿಕೇಶನ್ ತಿಳಿಸಿಕೊಡುತ್ತದೆ. ನೀವು ನಿಂತಿರುವ ಅಥವಾ ಖರೀದಿಸಲಿರುವ ಭೂಮಿಯು ಸರ್ಕಾರಿ ಜಾಗವೇ ಅಥವಾ ಖಾಸಗೀ ಜಾಗವೇ ಎನ್ನುವ ಸ್ಪಷ್ಟ ಮಾಹಿತಿಯನ್ನು ನೀಡುತ್ತದೆ. ನೀವು ನಿಂತಿರುವ ಭೂಮಿಯು ಕೆರೆಯ ವ್ಯಾಪ್ತಿಗೆ ಬರುವುದೇ? ಅರಣ್ಯ ವ್ಯಾಪ್ತಿಗೆ ಬರುವುದೇ? ರಾಜ ಕಾಲುವೆ ವ್ಯಾಪ್ತಿಗೆ ಒಳಗಾಗಿರುವುದೇ? ಎನ್ನುವಂತಹ ಅನೇಕ ಮಾಹಿತಿಯನ್ನು ತಿಳಿಯಬಹುದು. ದಿಶಾಂಕ್ ಆ್ಯಪ್ ಬೆಂಗಳೂರು ಮಾತ್ರವಲ್ಲದೇ ರಾಜ್ಯದ 30 ಜಿಲ್ಲೆಯಗಳ ಪ್ರತಿ ಭೂ ಭಾಗದ ಮಾಹಿತಿಯನ್ನು ಹೊಂದಿದೆ.
ಇದನ್ನೂ ಓದಿ: ನಿಮ್ಮ ಜಮೀನಿನ ಪಹಣಿಯ ವಿವರ ತಿಳಿಯಲು ಈಗ ಇಲ್ಲಿ ಕ್ಲಿಕ್ ಮಾಡಿ
ಆಸ್ತಿಯು ಕೆರೆಕುಂಟೆಗಳ ಆಸುಪಾಸಿನಲ್ಲಿ ಹೊಂದಿರುವವರು, ರಾಜಕಾಲುವಗಳ ಪಕ್ಕದಲ್ಲಿರುವರು, ಅದು ಯಾರ ಹೆಸರಿನಲ್ಲಿದೆ, ಮೀಸಲು ಪ್ರದೇಶದ ವ್ಯಾಪ್ತಿಯಲ್ಲಿದೆಯೇ ಎಂಬುದನ್ನು ನೋಡಿಕೊಳ್ಳಲು ಅಭಿವೃದ್ಧಿಪಡಿಸಿದೆ. ಇದರಲ್ಲಿ ಕಾಣಿಸುವ ನಕಾಶೆ ಸಾಂಕೇತಿಕವಾದದ್ದು. ಪ್ರತಿ ಸರ್ವೆ ನಂಬರ್ ಗಳ ಗಡಿರೇಖೆಗಳನ್ನು ತೋರಿಸುತ್ತದೆ.
ಗೂಗಲ್ ಆಂಡ್ರಾಯ್ಡ್ ಪ್ಲೇ ಸ್ಟೋರ್ ನಲ್ಲಿ ಈ ಆ್ಯಪ್ ಲಭ್ಯವಿದ್ದು, ನಿಮ್ಮ ಮೊಬೈಲಿನಲ್ಲಿ ಈ App ಡೌನ್ಲೋಡ್ ಮಾಡಿಕೊಂಡು ಸ್ಥಳದ (Location) ಅಪಡೇಟ್ ಮಾಡಿದರೆ ಆ ಸ್ಥಳವು ಯಾವ ಸರ್ವನೆಂಬರ್ ನಲ್ಲಿದೆ. ಈ ಜಾಗದಲ್ಲಿ ರಸ್ತೆಯಿದೆಯೋ ಅಥವಾ ಇಲ್ಲವೋ ಎಂಬುದನ್ನು ತಿಳಿದುಕೊಳ್ಳಬಹುದು. ಆಸ್ತಿ ಖರೀದಿಸುವುದಕ್ಕಿಂತ ಮುಂಚಿತವಾಗಿ ಈ ವಿವರಗಳನ್ನು ತಿಳಿದುಕೊಳ್ಳುವುದು ಒಳ್ಳೆಯದು.ಖಾತಾದಲ್ಲಿ ನಮೂದಿಸಿರುವ ಸರ್ವೆ ನಂಬರ್ ಸರಿಯಾಗಿದೆಯೇ ಎಂಬುದನ್ನು ಸಹ ಪರಿಶೀಲಿಸಬಹುದು.
ದಿಶಾಂಕ್ ಆ್ಯಪ್ಗಾಗಿ ಈ ಲಿಂಕ್ https://play.google.com/store/apps/details?id=com.ksrsac.sslr ಮೇಲೆ ಕ್ಲಿಕ್ ಮಾಡಿ ಡೌನ್ಲೋಡ್ ಮಾಡಿಕೊಳ್ಳಬಹುದು.
ಆದಾಗ್ಯೂ, ದಿಶಾಂಕ್ ಅಪ್ಲಿಕೇಶನ್ ನಿಂದ ಪಡೆದ ಮಾಹಿತಿಯು ಕಾನೂನು ಬದ್ಧವಾಗಿ ಸಮರ್ಥನೀಯವಲ್ಲ. ಇದನ್ನು ಕೇವಲ ಸೂಚಕ ಉದ್ದೇಶಗಳಿಗೆ ಅಥವಾ ಮಾಹಿತಿಗಳಿಗಾಗಿ ಮಾತ್ರ ಬಳಸಲಾಗುವುದು.