Check Ration card status ರೇಶನ್ ಕಾರ್ಡ್ ಗಾಗಿ ಹೊಸದಾಗಿ ಅರ್ಜಿ ಸಲ್ಲಿಸಿದವರು ಹಾಗೂ ಈಗಾಗಲೇ ರೇಶನ್ ಕಾರ್ಡ್ ಪಡೆದವರು ತಮ್ಮ ರೇಶನ್ ಕಾರ್ಡ್ ಸ್ಟೇಟಸ್ ನ್ನು ಮೊಬೈಲ್ ನಲ್ಲೇ ಚೆಕ್ ಮಾಡಬಹುದು.
ಹೌದು, ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಿದವರ ಹಾಗೂ ಪಡಿತರ ಚೀಟಿ ಹೊಂದಿದವರ ಹೆಸರು ತೆಗೆಯಲಾಗಿದೆಯೇ ಎಂಬುದನ್ನು ಕೇವಲ ಒಂದೇ ನಿಮಿಷದಲ್ಲಿ ಚೆಕ್ ಮಾಡಬಹುದು. ಅದು ಹೇಗೆ ಅಂದುಕೊಂಡಿದ್ದೀರಾ? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.
ರೇಶನ್ ಕಾರ್ಡ್ ಹೊಂದಿದವರು ಈಗ ಬೇರೆ ಬೇರೆ ನಗರಗಳಿಗೆ ವಲಸೆ ಹೊಗಿರುತ್ತಾರೆ. ಹಾಗೂ ಕೆಲಸ ಅರಸಿ ಬೇರೆ ನಗರ, ಪಟ್ಟಣ ಪ್ರದೇಶಗಳಿಗೆ ಹೋಗಿರುವವರು ತಮ್ಮ ರೇಷನ್ ಕಾರ್ಡ್ ಸ್ಟೇಟಸ್ ಏನಿದೆ ಎಂಬುದರ ಮಾಹಿತಿ ಪಡೆಯಬಹುದು.
Check Ration card status ಪಡಿತರ ಚೀಟಿಯಲ್ಲಿ ನಿಮ್ಮ ಹೆಸರಿದೆಯೇ ? ಮೊಬೈಲ್ ನಲ್ಲಿ ಚೆಕ್ ಮಾಡಿ
ರೇಶನ್ ಕಾರ್ಡ್ ಪಟ್ಟಿಯಲ್ಲಿ ನಿಮ್ಮ ಹೆಸರಿದೆಯೋ ಇಲ್ಲವೋ ಎಂಬುದನ್ನು ಚೆಕ್ ಮಾಡಲು ಈ
https://ahara.kar.nic.in/Home/EServices
ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಎಡಗಡೆ ನಿಮಗೆ ಕೆಲವು ಆಯ್ಕೆಗಳು ಕಾಣಿಸುತ್ತವೆ. ಅದರಲ್ಲಿ ಪಡಿತರ ಚೀಟಿಯಲ್ಲಿ ನಿಮ್ಮ ಹೆಸರಿದೆಯೋ ಇಲ್ಲವೋ ಎಂಬುದನ್ನ ಚೆಕ್ ಮಾಡಲು ಇ ನ್ಯಾಯಬೆಲೆ ಅಂಗಡಿ ಮೇಲೆ ಕ್ಲಿಕ್ ಮಾಡಬೇಕು. ಆಘ ನಿಮಗೆ ಮತ್ತೆ ಕೆಲವು ಆಯ್ಕೆಗಳು ಕಾಣಿಸುತ್ತವೆ. ಅಲ್ಲಿ ಪ.ಚೀ. ಪಟ್ಟಿಯನ್ನು ತೋರಿಸು ಮೇಲೆ ಕ್ಲಿಕ್ ಮಾಡಬೇಕು.
ಆಗ ತೆರೆದುಕೊಳ್ಳುವ ಪೇಜ್ ನಲ್ಲಿ ನಿಮ್ಮ ಜಿಲ್ಲೆ ಆಯ್ಕೆ ಮಾಡಿಕೊಳ್ಳಬೇಕು. ನಂತರ ತಾಲೂಕು ಆಯ್ಕೆ ಮಾಡಿಕೊಳ್ಳಬೇಕು. ನಂತರ ಶಾಪ್ ಎದುರುಗಡೆ ನಿಮ್ಮ ಊರಿನ ನ್ಯಾಯಬೆಲೆ ಅಂಗಡಿ ಅಥವಾ ನೀವು ಯಾವ ಗ್ರಾಪಂ ನಲ್ಲಿ ಬರುತ್ತೀರೋ ಆ ಅಂಗಡಿ ಆಯ್ಕೆ ಮಾಡಿಕೊಳ್ಳಬೇಕು. ನಂತರ ಗೋ ಮೇಲೆ ಕ್ಲಿಕ್ ಮಾಡಬೇಕು.
ಇದನ್ನೂ ಓದಿ : 23 ಕೋಟಿ ರೂಪಾಯಿ ಬೆಳೆ ಹಾನಿ ಪರಿಹಾರ ಹಣ ಬಿಡುಗಡೆ – ಯಾವ ರೈತರಿಗೆ ಜಮೆ? ಮೊಬೈಲ್ ನಲ್ಲೇ ಚೆಕ್ ಮಾಡಿ
ಆಗ ನೀವು ಆಯ್ಕೆ ಮಾಡಿಕೊಂಡ ಗ್ರಾಮದಲ್ಲಿ ಯಾವ ಯಾವ ಜನರ ಹೆಸರು ರೇಶನ್ ಕೈಾರ್ಡ್ ಪಟ್ಟಿಯಲ್ಲಿದ್ದಾರೆ ಎಂಬ ಹೆಸರುಗಳುಕಾಣಿಸುತ್ತವೆ. ಅಲ್ಲಿ ಕೆಳಗಡೆ 1, 2,3,4 ಹೀಗೆ ಪೇಜ್ ಗಳಿರುತ್ತವೆ. ಅಧರ ಮೇಲೆ ಕ್ಲಿಕ್ ಮಾಡುತ್ತಾ ನಿಮ್ಮ ಪತ್ನಿ ಅಥವಾ ನಿಮ್ಮಹೆಸರು ಕಾಣಿುತ್ತದೆ. ರೇಶನ್ ಕಾರ್ಡ್ ಪಟ್ಟಿಯಲ್ಲಿ ಎಸ್ಟು ಜನರಿದ್ದಾರೆ ಹಾಗೂ ನಿಮ್ಮ ರೇಶನ್ ಕಾರ್ಡ್ ಯಾವಾಗ ಮಾಡಿಸಲಾಗಿದೆ ರೇಶನ್ ಕಾರ್ಡ್ ನಂಬರ್, ರೇಶನ್ ಕಾರ್ಡ್ ಯಾರ ಹೆಸರಿನಲ್ಲಿದೆ ಹಾಗೂ ವಿಳಾಸ ಸೇರಿದಂತೆ ಇನ್ನಿತರ ಮಾಹಿತಿ ಇರುತ್ತದೆ. ಇಲ್ಲಿ ಕೇವಲ ನಿಮ್ಮ ಹೆಸರಸ್ಟೇ ಅಲ್ಲ, ನಿಮ್ಮ ಊರಿನಲ್ಲಿ ಯಾರು ಯಾರು ರೇಶನ್ ಕಾರ್ಡ್ ಮಾಡಿಸಿದ್ದಾರೆ? ಎಲ್ಲರ ಹೆಸರು ಕಾಣಿಸುತ್ತವೆ.
ರೇಷನ್ ಕಾರ್ಡ್ ಸ್ಟೇಟಸ್ ಚೆಕ್ ಮಾಡುವುದು ಹೇಗೆ?
ರೇಶನ್ ಕಾರ್ಡ್ ಸ್ಟೇಟಸ್ ಮೇಲೆ ಚೆಕ್ ಮಾಡಲು ಇ ಪಡಿತರ ಚೀಟಿ ಮೇಲೆ ಕ್ಲಿಕ್ ಮಾಡಬೇಕು. ಅಲ್ಲಿ ಪಡಿತರ ಚೀಟಿ ತೋರಿಸು ಮೇಲೆ ಕ್ಲಿಕ್ ಮಾಡಬೇಕು.ನಂತರ ಓಪನ್ ಆಗುವ ಪೇಜ್ ನಲ್ಲಿ ನಿಮ್ಮ ರೇಶನ್ ಕಾರ್ಡ್ ನಂಬರ್ ಹಾಕಬೇಕು. ನಂತರ ಗೋ ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮಗೆ ಸದಸ್ಯರನ್ನು ಆಯ್ಕೆ ಮಾಡಿ ಬಾಕ್ಸ್ ಕಾಣಿಸುತ್ತದೆ. ಅಲ್ಲಿ ಸೆಲೆಕ್ಟ್ ಮೇಲೆ ಕ್ಲಿಕ್ ಮಾಡಿದರೆ ಸಾಕು ಆ ರೇಶನ್ ಕಾರ್ಡ್ ನಲ್ಲಿ ಯಾರ ಯಾರ ಹೆಸರಿದೆ ಎಂಬುದು ಕಾಣಿಸುತ್ತದೆ. ನಿಮ್ಮ ಹೆಸರು ಆ್ಯಕ್ಟಿವ್ ಇದೆಯೋ ಇಲ್ಲವೋ ಎಂಬುದನ್ನು ಚೆಕ್ ಮಾಡಬಹುದು. ನಂತರ ಓಟಿಪಿ ಮೂಲಕ ಸ್ಟೇಟಸ್ ಚೆಕ್ ಮಾಡಬಹುದು. ನಿಮ್ಮ ಮೊಬೈಲಿಗೆ ಬಂದ ಓಟಿಪಿಯನ್ನು ಅಲ್ಲಿ ನಮೂದಿಸಿ ನಿಮ್ಮ ರೇಶನ್ ಕಾರ್ಡನ್ನು ಓಪನ್ ಮಾಡಬಹುದು.