Check land owner here : ರೈತರಿಗೆ ಗುಡ್ ನ್ಯೂಸ್. ಈಗ ರೈತರು ತಮ್ಮ ಬಳಿಯಿರುವ ಮೊಬೈಲ್ ನಲ್ಲಿಯೇ ತಾವು ಯಾವುದೇ ಪ್ರದೇಶದಲ್ಲಿ ನಿಲ್ಲಲಿ ಆ ಜಮೀನಿನ ಮಾಲಿಕರು ಯಾರಿದ್ದಾರೆ ಜಮೀನು ಯಾರ ಹೆಸರಿಗಿದೆ ಎಂಬುದನ್ನು ಕೇವಲ ಒಂದೇ ನಿಮಿಷದಲ್ಲಿ ಚೆಕ್ ಮಾಡಬಹುದು ಅದು ಹೇಗೆ ಅಂದುಕೊಂಡಿದ್ದೀರಾ ಇಲ್ಲಿದೆ ನೋಡಿ ಮಾಹಿತಿ.
Check land owner here ನೀವು ನಿಂತಿರುವ ಜಮೀನಿನ ಮಾಲಿಕರು ಯಾರಿದ್ದಾರೆ?
ನೀವು ನಿಂತಿರುವ ಜಮೀನಿನ ಮಾಲಿಕರು ಯಾರಿದ್ದಾರೆ ಎಂಬುದನ್ನು ಚೆಕ್ ಮಾಡಲು ಈ
https://play.google.com/store/apps/details?id=com.ksrsac.sslr&hl=en_IN&pli=1
ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮಗೆ ದಿಶಾಂಕ್ ಎಂಬ ಯಾಪ್ ಓಪನ್ ಆಗುತ್ತದೆ. ಅಲ್ಲಿ ನೀವು install ಮೇಲೆ ಕ್ಲಿಕ್ ಮಾಡಬೇಕಾಗುತ್ತದೆ. ಇದಾದ ನಂತರ ನೀವು ಅಲ್ಲಿ ಕಾಣುವ ಓಪನ್ ಮೇಲೆ ಕ್ಲಿಕ್ ಮಾಡಬೇಕಾಗುತ್ತದೆ. ಇದಾದ ನಂತರ while using the App ಮೇಲೆ ಕ್ಲಿಕ್ ಮಾಡಬೇಕಾಗುತ್ತದೆ. ಇದಾದ ನಂತರ ನೀವು ಭಾಷೆ ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ. ನೀವು ಕನ್ನಡ ಭಾಷೆಯನ್ನು ಆಕೆ ಮಾಡಿಕೊಳ್ಳಬೇಕು. ನಂತರ ನೀವು ನಿಮ್ಮ ಹೆಸರು, ಈ ಮೇಲ್ ಐಡಿ ಹಾಗೂ ಮೊಬೈಲ್ ನಂಬರ್ ನಮೂದಿಸಬೇಕಾಗುತ್ತದೆ. ಇದಾದ ನಂತರ ಮೊಬೈಲಿಗೆ ಓಟಿಪಿ ಪಡೆಯಿರಿ ಮೇಲೆ ಕ್ಲಿಕ್ ಮಾಡಬೇಕು. ನಂತರ ನೀವು ನಮೂದಿಸಿದ ಮೊಬೈಲಿಗೆ ಓಟಿಪಿ ಬರುತ್ತದೆ. ಆ ಓಟಿಪಿಯನ್ನು ಅಲ್ಲಿ ಹಾಕಬೇಕು. ನಂತರ ಅಲ್ಲಿ ಕಾಣುವ ನೋಂದಾಯಿಸಿ ಮೇಲೆ ಕ್ಲಿಕ್ ಮಾಡಬೇಕು.
ಇದಾನ ನಂತರ ನಿಮ್ಮ ನಿಮ್ಮ ಮೊಬೈಲಿನಲ್ಲಿ Dishank App ಓಪನ್ ಆಗುತ್ತದೆ. ಆಘ ನೀವು ಯಾವ ಸ್ಥಳದಲ್ಲಿ ನಿಂತಿದ್ದೀರೋ ಆ ಜಾಗದ ಪಾಯಿಂಟ್ ಕಾಣಿಸುತ್ತದೆ. ನೀವು ಝೂಮ್ ಮಾಡಿ ನೋಡಿದಾಗ ಯಾವ ಸರ್ವೆ ನಂಬರಿನಲ್ಲಿ ನಿಂತಿರುತ್ತೀರೋ ಆ ಸ್ಥಳದ ಪಾಯಿಂಟ್ ಕಾಣಿಸುತ್ತದೆ. ಆ ಸ್ಥಳದ ಜಮೀನಿನ ಮಾಲಿಕರು ಯಾರಿದ್ದಾರೆ. ಇದರೊಂದಿಗೆ ಆ ಜಮೀನಿನ ಸುತ್ತಮುತ್ತಲು ಅಕ್ಕಪಕ್ಕದ ಜಮೀನು ಯಾರ ಯಾರ ಹೆಸರಿನಲ್ಲಿದೆ ಎಂಬ ಮಾಹಿತಿ ಕಾಣಿಸುತ್ತದೆ. ಇದಷ್ಟೇ ಅಲ್ಲ, ನೀವು ನಗರ ಗ್ರಾಮಂತರ ಪ್ರದೇಶಗಳಲ್ಲಿ ಪ್ಲಾಟ್ ಯಾರ ಹೆಸರಿನಲ್ಲಿದೆ ಎಂಬ ಮಾಹಿತಿಯೂ ಕಾಣಿಸುತ್ತದೆ. ಅಲ್ಲಿ ಕಾಣುವ ಪಾಯಿಂಟ್ ಮೇಲೆ ಕ್ಲಿಕ್ ಮಾಡಿದರ ನಂತರ ಸರ್ವೆ ನಂಬರ್, ಗ್ರಾಮದ ಹೆಸರು, ಹೋಬಳಿ, ತಾಲೂಕು ಹಾಗೂ ಜಿಲ್ಲೆಯ ಮಾಹಿತಿ ನಿಮಗೆ ಕಾಣಿಸುತ್ತದೆ.
ಸರ್ವೆ ನಂಬರ್ ಹಿಸ್ಸಾ ನಂಬರ್ ಮಾಲೀಕರು ಯಾರು?
ಹೆಚ್ಚಿನ ವಿವರಗಳು ಮೇಲೆ ಕ್ಲಿಕ್ ಮಾಡಿದರೆ ಮತ್ತೊಂದು ಪೇಜ್ ಓಪನ್ ಆಗುತ್ತದೆ. ಅಲ್ಲಿ ಸರ್ನೋಕ್ ಸಂಖ್ಯೆಯಲ್ಲಿ ಸ್ಟಾರ್ ಹಾಗೂ ಹಿಸ್ಸಾ ನಂಬರ್ ನಲ್ಲಿ ಹಿಸ್ಸಾ ನಂಬರ್ ನೊಂದಿಗೆ ಆ ಹಿಸ್ಸಾ ನಂಬರ್ ಮಾಲಿಕರು ಯಾರಿದ್ದಾರೆ ಎಂಬ ಮಾಹಿತಿ ಕಾಣಿಸುತ್ತದೆ. ಇದಷ್ಟೇ ಅಲ್ಲ ಆ ಜಮೀನಿನ ಮಾಲಿಕರೊಂದಿಗೆ ಆ ಜಮೀನಿನ ವಿಸ್ತೀರ್ಣ ಎಷ್ಟಿದೆ ಜಮೀನು ಜಂಟಿಯಾಗಿದೆಯೇ ಹಾಗಾದರೆ ಯಾರ ಯಾರ ಹೆಸರಿನಲ್ಲಿ ಜಂಟಿ ಜಮೀನಿದೆ ಎಂಬ ಮಾಹಿತಿ ಕಾಣಿಸುತ್ತದೆ.
ಇದನ್ನೂ ಓದಿ ನಿಮ್ಮ ಜಮೀನಿನ ಮೇಲೆ ಬೆಳೆ ಸಾಲ ಎಷ್ಟಿದೆ? ಮೊಬೈಲ್ ನಲ್ಲಿ ಹೀಗೆ ಚೆಕ್ ಮಾಡಿ
ರೈತರಿಗೆ ಅನುಕೂಲವಾಗಲಿ ಸಹಾಯವಾಗಲಿ ಎಂಬ ಉದ್ದೇಶದಿಂದ ಜಮೀನಿಗೆ ಸಂಬಂಧಿಸಿದ ಮಾಹಿತಿಗಳನ್ನು ಇಲ್ಲಿ ಬರೆಯಲಾಗುತ್ತಿದೆ. ಇನ್ನೂ ಯಾವ ಯಾವ ಮಾಹಿತಿಗಳನ್ನು ಹಾಕಬಹುದು ಎಂಬುದನ್ನು ತಾವು ತಿಳಿಸಬಹುದು. ನಿಮಗೆ ಬೇಕಾದ ಮಾಹಿತಿಗಳನ್ನು ಇಲ್ಲಿ ನೀಡಲಾಗುವುದು.
ಜಮೀನಿಗೆ ಸಂಬಂದಿಸಿದ ಮಾಹಿತಿಗಳನ್ನೇ ಇಲ್ಲಿ ಹೆಚ್ಚು ನೀಡಲಾಗುವುದು. ಗ್ರಾಮಾಂತರ ಪ್ರದೇಶಗಳಲ್ಲಿ ವಾಸಿಸುತ್ತಿರುವ ಬಹುತೇಕ ರೈತರಿಗೆ ಮೊಬೈಲ್ ನಲ್ಲಿ ಜಮೀನಿನ ಮಾಹಿತಿಯನ್ನು ಹೇಗೆ ವೀಕ್ಷಿಸಬಹುದು ಎಂಬುದು ತಿಳಿದಿರುವುದಿಲ್ಲ. ಅಂತಹ ರೈತರಿಗೆ ಅನುಕೂಲವಾಗಲಿದೆ ಎಂದು ಸುಲಭವಾಗಿ ರೈತರಿಗೆ ಅರ್ಥವಾಗುವಂತೆ ಇಲ್ಲಿ ಬರೆಯಲಾಗುತ್ತಿದೆ.





