FRUITS ID ಫ್ರೂಟ್ಸ್ ತಂತ್ರಾಂಶದಲ್ಲಿ ರೈತರ ಯಾವ ಯಾವ ಸರ್ವೆ ನಂಬರ್ ಗಳು ಲಿಂಕ್ ಆಗಿದೆ ಎಂಬುದನ್ನು ರೈತರು ಮನೆಯಲ್ಲಿಯೇ ಕುಳಿತು ಮೊಬೈಲ್ ನಲ್ಲೇ ಚೆಕ್ ಮಾಡಬಹುದು.
ಜನಜಾಗರಣ ಯೂಟೂಬ್ ಚಾನೆಲಿಗೆ ಇಲ್ಲಿ ಸಬಸ್ಕ್ರೈಬ್ ಮಾಡಿ
ಹೌದು, ರೈತರಿಗೆ ಫ್ರೂಟ್ಸ್ ತಂತ್ರಾಂಶದಲ್ಲಿ ಎಲ್ಲಾ ಸರ್ವೆ ನಂಬರ್ ಗಳನ್ನು ಸೇರಿಸಬೇಕೆಂದು ಕೃಷಿ ಇಲಾಖೆಯು ಅಭಿಯಾನವನ್ನೇ ಆರಂಭಿಸಿದೆ. ಏಕೆಂದರೆ ಇನ್ನು ಮುಂದೆ ಬರಗಾಲ ಪರಿಹಾರ, ಬೆಳೆ ವಿಮೆ, ಬೆಳೆ ಹಾನಿ ಪರಿಹಾರ ಹಣ ರೈತರಿಗೆ ಜಮೆಯಾಗಬೇಕಾದರೆ ರೈತರಿಗೆ ಎಫ್ಐಡಿ ಆಗಿರಬೇಕು. ಇದರೊಂದಿಗೆ ರೈತರು ಜಮೀನು ಹೊಂದಿರುವ ಎಲ್ಲಾ ಸರ್ವೆ ನಂಬರ್ ಗಳನ್ನು ಫ್ರೂಟ್ಸ್ ತಂತ್ರಾಂಶದಲ್ಲಿ ಸೇರಿಸುವುದು ಕಡ್ಡಾಯಗೊಳಿಸಿದೆ.
ಈಗ ರೈತರು ಫ್ರೂಟ್ಸ್ ಐಡಿ ಹೊಂದಿರವುದರ ಜೊತೆಗೆ ಎಷ್ಟು ಸರ್ವೆ ನಂಬರ್ ಗಳನ್ನು ಸೇರಿಸಿದ್ದಾರೋ ಆ ಸರ್ವೆ ನಂಬರ್ ಗಳ ಆಧಾರದ ಮೇಲೆ ರೈತರಿಗೆ ಪರಿಹಾರ ಹಣ ಜಮೆಯಾಗಲಿದೆ. ಮೊದಲಿಗೆ ನಿಮ್ಮ ಹೆಸರಿಗೆ ಎಫ್ಐಡಿ ಇದೆಯೋ ಇಲ್ಲವೋ ಚೆಕ್ ಮಾಡಬಹುದು.
ರೈತರು ತಮ್ಮ ಹೆಸರಿಗೆ FRUITS ID ಇದೆಯೋ ಇಲ್ಲವೋ? ಚೆಕ್ ಮಾಡುವುದು ಹೇಗೆ?
ರೈತರು ತಮ್ಮ ಹೆಸರಿಗೆ ಎಫ್ಐಡಿ ಇದೆಯೋ ಇಲ್ಲವೋ ಎಂಬುದನ್ನು ಚೆಕ್ ಮಾಡಲು ಈ
ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ನಂತರ ಫ್ರೂಟ್ಸ್ ತಂತ್ರಾಂಶದಲ್ಲಿ ರೈತರು ತಮ್ಮ ಆಧಾರ್ ಕಾರ್ಡ್ ನಮೂದಿಸಬೇಕು. ಇದಾದ ನಂತರ ಸರ್ಚ್ ಮೇಲೆ ಕ್ಲಿಕ್ ಮಾಡಬೇಕು. ಒಂದು ವೇಳೆ ರೈತರ ಹೆಸರಿಗೆ ಫ್ರೂಟ್ಸ್ ಐಡಿ ಆಗಿದ್ದರೆ ಹೆಸರು, ಪಿಎಂಕೆಐಡಿ ಹಾಗೂ ಫ್ರೂಟ್ಸ್ ಐಡಿ ಅಂದರೆ ಎಫ್ಐಡಿ ಕಾಣಿಸುತ್ತದೆ.
FRUITS ID ಗೆ ಯಾವ ಯಾವ ಸರ್ವೆ ನಂಬರ್ ಗಳು ಸೇರಿಸಲಾಗಿದೆ? ಚೆಕ್ ಮಾಡುವುದು ಹೇಗೆ?
ರೈತರು ಫ್ರೂಟ್ಸ್ ಐಡಿಗೆ ಯಾವ ಯಾವ ಸರ್ವೆ ನಂಬರ್ ಗಳು ಆ್ಯಡ್ ಆಗಿವೆ ಎಂಬುದನ್ನು ಚೆಕ್ ಮಾಡಲು ಈ
https://fruits.karnataka.gov.in/OnlineUserLogin.aspx
ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಒಂದು ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ನಿಮ್ಮ ಮೊಬೈಲ್ ನಂಬರ್ ಹಾಕಿ ಪಾಸ್ವರ್ಡ್ ನಮೂದಿಸಬೇಕು. ಅಲ್ಲಿ ಕಾಣುವ ಕ್ಯಾಪ್ಚ್ಯಾ ಕೋಡ್ ಹಾಕಿ ಚೆಕ್ ಮಾಡಬಹುದು.
ಪಾಸ್ವರ್ಡ್ ನೆನಪಿಲ್ಲದಿದ್ದರೇನು ಮಾಡಬೇಕು?
ನಿಮಗೆ ಪಾಸ್ವರ್ಡ್ ನೆನಪಿಲ್ಲದಿದ್ದರೆ Reset Password ಮೇಲೆ ಮೇಲೆ ಕ್ಲಿಕ್ ಮಾಡಬೇಕು. ನಂತರ ನಿಮ್ಮ ಮೊಬೈಲ್ ನಂಬರ್ ನಮೂದಿಸಿ ರಿಸೆಟ್ ಪಾಸ್ವರ್ಡ್ ಮೇಲೆ ಕ್ಲಿಕ್ ಮಾಡಬೇಕು. ನಂತರ ಓಕೆ ಮೇಲೆ ಕ್ಲಿಕ್ ಮಾಡಬೇಕು.
ಆಗ ನಿಮ್ಮ ಮೊಬೈಲಿಗೆ ಪಾಸ್ವರ್ಡ್ ಕಳಿಸಲಾಗುವುದು. ನಂತರ ಲಾಗಿನ್ ಮೇಲೆ ಕ್ಲಿಕ್ ಮಾಡಬೇಕು. ಅಲ್ಲಿ ನಿಮ್ಮ ಮೊಬೈಲ್ ನಂಬರ್ ಹಾಗೂ ಪಾಸ್ವರ್ಡ್ ನಂತರ ಕ್ಯಾಪ್ಚ್ಯಾ ಕೋಡ್ ಹಾಕಿ ಲಾಗಿನ್ ಮೇಲೆ ಕ್ಲಿಕ್ ಮಾಡಬೇಕು. ನಿಮಗೆ ಕಳಿಸಲಾಗಿರುವ ಪಾಸ್ವರ್ಡ್ ಹಾಕಿ ನೀವು ಹೊಸ ಪಾಸ್ವರ್ಡ್ ಕ್ರಿಯೇಟ್ ಮಾಡಿಕೊಳ್ಳಬೇಕು.ನಂತರ ಅದೇ ಪಾಸ್ವರ್ಡ್ ಹಾಕಿ ಲಾಗಿನ್ ಆಗಬೇಕು. ನಿಮ್ಮ ಮೊಬೈಲ್ ನಂಬರ್ ಹಾಗೂ ಪಾಸ್ವರ್ಡ್ ಹಾಕಿ ಅಲ್ಲಿ ಕಾಣುವ ಕ್ಯಾಪ್ಚ್ಯಾ ಕೋಡ್ ಹಾಕಿ ಲಾಗಿನ್ ಮೇಲೆ ಕ್ಲಿಕ್ ಮಾಡಬೇಕು. ಆಗ ಇನ್ನೊಂದು ಪೇಜ್ ತೆರೆದುಕೊಳ್ಳುತ್ತದೆ.
ಇದನ್ನೂ ಓದಿ : ಪಿಎಂ ಕಿಸಾನ್ ಗ್ರಾಮವಾರು ಪಟ್ಟಿಯಲ್ಲಿ ನಿಮ್ಮ ಹೆಸರು ಚೆಕ್ ಮಾಡಿ
ಅಲ್ಲ್ಲಿ ಕಾಣುವ ಆನ್ಲೈನ್ ರೆಜಿಸ್ಟ್ರೇಶನ್ ಮೇಲೆ ಕ್ಲಿಕ್ ಮಾಡಿದಾಗ ನಿಮ್ಮ ಹೆಸರು ನಿಮ್ಮ ವಿಳಾಸ, ತಂದೆಯ ಹೆಸರು, ನಿಮ್ಮ ಮೊಬೈಲ್ ನಂಬ ರ್, ಎಫ್ಐಡಿ, ಆಧಾರ್ ಕಾರ್ಡ್, ಅದರ ಕೆಳಗಡೆ ನಿಮ್ಮ ಯಾವ ಯಾವ ಸರ್ವೆ ನಂಬರ್ ಗಳು ಆ್ಯಡ್ ಆಗಿದ್ದಾವೆ ಎಂಬ ಪಟ್ಟಿ ಕಾಣಿಸುತ್ತದೆ. ಅದರ ಕೆಳಗಡೆ ಯಾವ ಬ್ಯಾಂಕ್ ಲಿಂಕ್ ಆಗಿದೆ. ಎಂಬುದು ಸಹ ಕಾಣಿಸುತ್ತದೆ.
ನಿಮಗೆ ಇನ್ನೂ ಯಾವುದಾದರೂ ಸರ್ವೆ ನಂಬರ್ ಗಳು ಸೇರಿಸಬೇಕಾದರೆ ನಿಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ಪಹಣಿ ನೀಡಿ ಸರ್ವೆ ನಂಬರ್ ಗಳನ್ನು ಆ್ಯಡ್ ಮಾಡಿಸಬಹುದು.