which farmers have FRUITSID : ಈ ಪಟ್ಟಿಯಲ್ಲಿ ನಿಮ್ಮ ಹೆಸರಿದ್ದರೆ ನಿಮಗೆ ಬರಗಾಲ ಪರಿಹಾರ ಹಣ ಜಮೆಯಾಗಲಿದೆ.
ಹೌದು, ಕೇಂದ್ರ ಸರ್ಕಾರದ ವತಿಯಿಂದ ಬಿಡುಗಡೆಯಾದ ಬರ ಪರಿಹಾರ ಹಣ ಜಮೆಯ ಪ್ರಕ್ರಿಯೆ ಈಗಾಗಲೇ ಆರಂಭವಾಗಿದೆ. ನಿಮ್ಮ ಹೆಸರಿಗೆ ಫ್ರೂಟ್ಸ್ ಐಡಿ ಇರುವುದನ್ನು ಇಲ್ಲೆ ಚೆಕ್ ಮಾಡಿಕೊಳ್ಳಿ ರೈತರು ತಮ್ಮ ಹೆಸರಿಗೆ ಫ್ರೂಟ್ಸ್ ಐಡಿ ಆಗಿದೆಯೋ ಇಲ್ಲವೋ ಎಂಬುದನ್ನು ತಮ್ಮ ಮೊಬೈಲ್ ನಲ್ಲೇ ಚೆಕ್ ಮಾಡಬಹುದು. ಹೌದು, ರೈತರು ಮನೆಯಲ್ಲಿಯೇ ಕುಳಿತು ತಮ್ಮ ಬಳಿಯಿರುವ ಫೋನ್ ನಲ್ಲೇ ಚೆಕ್ ಮಾಡಬಹುದು.
ರೈತರು ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳ ಸಹಾಯಧನ ಪಡೆಯಬೇಕಾದರೆ ಫ್ರೂಟ್ಸ್ ಐಡಿ ಕಡ್ಡಾಯವಾಗಿದೆ. ಬೆಳೆ ವಿಮೆಯಾಗಲಿ, ಬೆಳೆ ಹಾನಿ ಪರಿಹಾರವಾಗಲಿ, ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿವಿಧ ಯೋಜನೆಗಳಡಿಯಲ್ಲಿ ಸೌಲಭ್ಯ ಗಳು ಪಡೆಯಬೇಕಾದರೆ ಫ್ರೂಟ್ಸ್ ಐಡಿ ಬೇಕೇ ಬೇಕು. ಫ್ರೂಟ್ಸ್ ಐಡಿ ಇದ್ದರೆ ಮಾತ್ರ ರೈತರು ಬಿತ್ತನೆಯಿಂದ ಹಿಡಿದು ಕೊಯ್ಲುವರೆಗೆ ಯಂತ್ರೋಪಕರಣಗಳ ಖರೀದಿಗೆ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ.
ಕೃಷಿ ಇಲಾಖೆಯು ಆರಂಭದಲ್ಲಿ ರೈತರ ದಾಖಲೆಗಳನ್ನು ಪ್ರೂಟ್ಸ್ ಐಡಿಯಲ್ಲಿ ಅಪ್ಲೋಡ್ ಮಾಡಿದೆ. ಆದರೆ ಕೆಲವು ರೈತರ ಹೆಸರು ಸೇರ್ಪಡೆಯಾಗಿಲ್ಲ. ಇನ್ನೂ ಯಾವ ಯಾವ ರೈತರ ಫ್ರೂಟ್ಸ್ ಐಡಿಯಾಗಿಲ್ಲವೋ ಅವರು ಮೊಬೈಲ್ ನಲ್ಲೇ ಅರ್ಜಿ ಸಲ್ಲಿಸಬಹುದು.ಅಥವಾ ತಮ್ಮಹತ್ತಿರದ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು. ತಮ್ಮಹೆಸರಿಗೆ ಪ್ರೂಟ್ಸ್ ಐಡಿ ಇದೆಯೋ ಇಲ್ಲವೋ ಎಂಬುದನ್ನು ಚೆಕ್ ಮಾಡುವುದು ಹೇಗೆ? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.
which farmers have FRUITSID ತಮ್ಮ ಹೆಸರಿಗೆ ಫ್ರೂಟ್ಸ್ ಐಡಿ ಇರುವದನ್ನು ಚೆಕ್ ಮಾಡುವುದು ಹೇಗೆ?
ರೈತರು ತಮ್ಮ ಹೆಸರಿಗೆ ಫ್ರೂಟ್ಸ್ ಐಡಿ ಇದೆಯೋ ಇಲ್ಲವೋ ಎಂಬುದನ್ನು ಚೆಕ್ ಮಾಡಲು ಈ
https://fruitspmk.karnataka.gov.in/MISReport/GetDetailsByAadhaar.aspx
ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಫ್ರೂಟ್ಸ್ ಪಿಎಂ ಕಿಸಾನ್ ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ರೈತರು ತಮ್ಮ ಆಧಾರ್ ಕಾರ್ಡ್ ನಮೂದಿಸಬೇಕು. ನಂತರ ಸರ್ಚ್ ಮೇಲೆ ಕ್ಲಿಕ್ ಮಾಡಿದರೆ ಸಾಕು, ನಿಮ್ಮ ಹೆಸರಿಗೆ ಫ್ರೂಟ್ಸ್ ಐಡಿ ಆಗಿದೆಯೋ ಇಲ್ಲವೋ ಎಂಬುದನ್ನು ಚೆಕ್ ಮಾಡಬಹುದು. ಹೌದು, ಫ್ರೂಟ್ ಐಡಿ ಆಗಿದ್ದರೆ Fruits ID ಕೆಳಗಡೆ FID947584034750475 ಹೀಗೆ ನಿಮ್ಮ ಹೆಸರಿಗೆ ಪ್ರತ್ಯೇಕವಾಗಿ ಐಡಿ ಕೊಟ್ಟಿರಲಾಗಿರುತ್ತದೆ.ೇ
ಆಧಾರ್ ಕಾರ್ಡ್ ಎಷ್ಟು ಮುಖ್ಯವಾಗಿದೆ.ಯೋ ಅಷ್ಟೇ ಮುಖ್ಯವಾಗಿ ಫ್ರೂಟ್ಸ್ ಐಡಿಯಾಗಿರುತ್ತದೆ. ಇದನ್ನು ರೈತರು ತಮ್ಮ ಆಧಾರ್ ಕಾರ್ಡ್ ನಂತೆ ನೆನಪಿಟ್ಟುಕೊಳ್ಳಬೇಕು. ಅಥವಾ ಬರೆದಿಟ್ಟುಕೊಳ್ಳಬಹುದು. ಫ್ರೂಟ್ಸ್ ಐಡಿ ಕೆಳಗಡೆ ನಿಮ್ಮ ಹೆಸರು ಇರುತ್ತದೆ. ಹಾಗೂ ಪಿಂಕೆಐಡಿ ಇರುತ್ತದೆ.
ರೈತರಿಗೇಕೆ ಫ್ರೂಟ್ಸ್ ಐಡಿ ಬೇಕು?
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವತಿಯಿಂದ ತೋಟಗಾರಿಕೆ ಇಲಾಖೆ, ಕೃಷಿ ಇಲಾಖೆ, ಪಶುಸಂಗೋಪನೆ, ಮೀನುಗಾರಿಕೆ, ಹಾಗೂ ರೇಷ್ಮೆ ಇಲಾಖೆಗಳ ವತಿಯಿಂದ ವಿವಿಧ ಯೋಜನೆಗಳಡಿಯಲ್ಲಿ ಸೌಲಭ್ಯಗಳನ್ನು ಒದಗಿಸಲು ಅರ್ಜಿ ಕರೆಯಲಾಗಿರುತ್ತದೆ.
ಇದನ್ನೂ ಓದಿ : ತೋಟಗಾರಿಕೆ ಇಲಾಖೆಯಿಂದ ಈ ಯಂತ್ರೋಪಕರಣಗಳ ಖರೀದಿಗೆ ಸಿಗಲಿದೆ ಸಬ್ಸಿಡಿ: ಮೊಬೈಲ್ ನಲ್ಲೇ ಚೆಕ್ ಮಾಡಿ
ತೋಟಗಾರಿಕೆ ಇಲಾಖೆಯ ವತಿಯಿಂದ ಕೃಷಿ ಯಂತ್ರೋಪಕರಣಗಳ ಖರೀದಿಗೆ, ಹಾಗೂ ಪಶು ಇಲಾಖೆಯಿಂದ ಕೌ ಮ್ಯಾಟ್, ಕುರಿ ಕೋಳಿ ಸಾಕಾಣಿಕೆಗೆ ಘಟಕ, ಕೃಷಿ ಇಲಾಖೆಯಿಂದ ಯಂತ್ರೋಪಕರಣಗಳ ಖರೀದಿಗೆ ಅರ್ಜಿ ಆಹ್ವಾನಿಸಲಾಗುವುದು. ಆಗ ಫ್ರೂಟ್ಸ್ ಐಡಿ ಇದ್ದರೆ ಮಾತ್ರ ನೀವು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತೀರಿ.
ಫ್ರೂಟ್ಸ್ ಐಡಿ ಮಾಡಿಸಲು ಯಾವ ಯಾವ ದಾಖಲೆ ಬೇಕು?
ಫ್ರೂಟ್ಸ್ ಐಡಿ ಮಾಡಿಸಲು ರೈತರ ಬಳಿ ಆಧಾರ್ ಕಾರ್ಡ್ ಇರಬೇಕು. ಜಮೀನಿನ ದಾಖಲೆ ಅದರೆ ಆರ್.ಟಿಸಿ ಪಹಣಿ ಇರಬೇಕು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಾಗಿದ್ದರೆ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಇರಬೇಕು. ಬ್ಯಾಂಕ್ ಪಾಸ್ ಬುಕ್ ಇರಬೇಕು.ಈ ಎಲ್ಲಾ ದಾಖಲೆಗಳನ್ನು ಪಡೆದುಕೊಂಡು ರೈತರು ತಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ಫ್ರೂಟ್ಸ್ ಐಡಿಗೆ ಅರ್ಜಿ ಸಲ್ಲಿಸಬಹುದು. ಅಥವಾ ಮೊಬೈಲ್ ನಲ್ಲೇ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಬಹುದು.
ಬೆಳೆ ವಿಮೆ, ಬೆಳೆ ಹಾನಿ ಪರಿಹಾರ, ಬೆಳೆ ಸಾಲ, ಸಬ್ಸಿಡಿಯಲ್ಲಿ ಯಂತ್ರೋಪಕರಣಗಳ ಖರೀದಿ, ಬೆಂಬಲ ಬೆಲೆ ಸೇರಿದಂತೆ ಇನ್ನಿತರ ಕೃಷಿ ಚಟವಟಿಕೆಗೆ ಸಹಾಯಧನ ಪಡೆಯಲು ಪ್ರೂಟ್ಸ್ ಐಡಿ ಬೇಕಾಗುತ್ತದೆ. ಹಾಗಾಗಿ ಪ್ರತಿಯೊಬ್ಬ ರೈತರು ಫ್ರೂಟ್ಸ್ ಐಡಿ ಪಡೆದಿರಬೇಕು.