ಯಾವ ಬೆಳೆಗೆ ಎಷ್ಟು ಬೆಳೆ ಹಾನಿ ಪರಿಹಾರ ಹಣ ಜಮೆಯಾಗಿದೆ?

Written by Ramlinganna

Updated on:

crop damage compensation has been deposited  ರೈತರು ತಮ್ಮ ಬಳಿಯಿರುವ ಫೋನ್ ನಲ್ಲೇ ಯಾವ ಬೆಳೆಗೆ ಎಷ್ಟು ಬೆಳೆಹಾನಿ ಪರಿಹಾರ ಹಣ ಜಮೆಯಾಗಿದೆ ಎಂಬುದನ್ನು ಮೊಬೈಲ್ ನಲ್ಲಿ ಚೆಕ್ ಮಾಡಬಹುದು.

ಹೌದು, ಈಗಾಗಲೇ ರಾಜ್ಯದ ಹಲವು ಜಿಲ್ಲೆಗಳಲ್ಲಿ ಬೆಳೆ ಹಾನಿಯಾದ ರೈತರ ಖಾತೆಗೆ ಪರಿಹಾರ ಹಣ ಜಮೆ ಮಾಡಲಾಗುತ್ತಿದೆ. ಕೆಲವು ಜಿಲ್ಲೆಗಳಲ್ಲಿ ನಾಲ್ಕೈದು ಕಂತುಗಳು, ಇನ್ನೂ ಕೆಲವು ಜಿಲ್ಲೆಗಳಲ್ಲಿ ಐದಾರು ಕಂತುಗಳಲ್ಲಿ ಬೆಳೆ ಹಾನಿ ಪರಿಹಾರ ಹಣ ಬಿಡುಗಡೆ ಮಾಡಲಾಗಿದೆ. ರೈತರ ಖಾತೆಗೆ ಜಮೆ ಮಾಡಲಾಗಿದೆ. ರೈತರು ತಮ್ಮ ಫೋನ್ ನಲ್ಲೆ ಯಾವ ಬೆಳೆಗೆ ಎಷ್ಟು ಬೆಳೆಹಾನಿ ಪರಿಹಾರ ಜಮೆಯಾಗಿದೆ ಎಂಬುದನ್ನು ಚೆಕ್ ಮಾಡಬಹುದು.

crop damage compensation has been deposited  ಯಾವ ಬೆಳೆಗೆ ಎಷ್ಟು ಪರಿಹಾರ ಹಣ ಜಮೆಯಾಗಿದೆ ಹೀಗೆ ಚೆಕ್ ಮಾಡಿ

ರೈತರು ತಮ್ಮ ಬಳಿಯಿರುವ ಫೋನ್ ನಲ್ಲಿ ಯಾವ ಬೆಳೆಗೆ ಎಷ್ಟು ಬೆಳೆಹಾನಿ ಪರಿಹಾರ ಹಣ ಜಮೆಯಾಗಿದೆ ಎಂಬುದನ್ನು ಚೆಕ್ ಮಾಡಲು ಈ

https://landrecords.karnataka.gov.in/PariharaPayment/

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಪರಿಹಾರ ಪೇಮೆಂಟ್ ರಿಪೋರ್ಟ್ ಪೇಜ್ ಓಪನ್ ಆಗುತ್ತದೆ. ಅಲ್ಲಿ ರೈತುರ ಆಧಾರ್ ಸಂಖ್ಯೆ ಸೆಲೆಕ್ಟ್ ಮಾಡಬೇಕು.  ನಂತರ ಸೆಲೆಕ್ಟ್ ಕಾಲಾಮಿಟಿ ಟೈಪ್ ಮೇಲೆ ಕ್ಲಿಕ್ ಮಾಡಬೇಕು. ಅಲ್ಲಿ ಫ್ಲಡ್ ಆಯ್ಕೆ ಮಾಡಿಕೊಳ್ಳಬೇಕು. ನಂತರ ಸೆಲೆಕ್ಟ್ ಇಯರ್ ಟೈಪ್ ಮೇಲೆ ಕ್ಲಿಕ್ ಮಾಡಬೇಕು. ನಂತರ 2022-23 ಆಯ್ಕೆ ಮಾಡಿಕೊಳ್ಳಬೇಕು. ಇದಾದಮೇಲೆ ಆಧಾರ್ ಸಂಖ್ಯೆ ನಮೂದಿಸಬೇಕು.ಕ್ಯಾಪ್ಚ್ಯಾ ಕೋಡ್ ನಮೂದಿಸಬೇಕು ನಂತರ ವಿವರಗಳ್ನು ಪಡೆಯಲು ಮೇಲೆ ಕ್ಲಿಕ್ ಮಾಡಬೇಕು. ಆಗ ಇನ್ನೊಂದು ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ರೈತರಿಗೆ ಹಣ ಸಂದಾಯ ವಿವರಘಲು ಕಾಣಿಸುತ್ತದೆ. ರೈತರ ಜಿಲ್ಲೆಯ ಹೆಸರು, ಬ್ಯಾಂಕಿನ ಹೆಸರು ರೈತರಿಗೆ ಎಷ್ಟು ಹಣ ಜಮೆಯಾಗಿದೆ. ರೈತರ ಹೆಸರು, ಬ್ಯಾಂಕ್ ಖಾತೆಯ ಕೊನೆಯ ನಾಲ್ಕು ಅಂಕೆಗಳು, ಯಾವಾಗ ಜಮೆಯಾಗಿದೆ ಎಂಬ ಮಾಹಿತಿ ಇರುತ್ತದೆ. ಅಧರ ಕೆಳಗಡೆ ರೈತರ ಜಿಲ್ಲೆ, ಹೋಬಳಿ, ಗ್ರಾಮ ಹಾಗೂ ಸರ್ವೆ ನಂಬರ್ ಕಾಣಿಸುತ್ತದೆ. ಅದರ ಮುಂದುಗಡೆ ಯಾವ ಬೆಳೆಗೆ ಬೆಳೆಹಾನಿ ಪರಿಹಾರ ಜಿಮೆಯಾಗಿದೆ ಎಷ್ಟು ಎಕರೆಗೆ ಜಮೆಯಾಗಿದೆ ಎಂಬ ಮಾಹಿತಿ ಇರುತ್ತದೆ.

ಯಾವ ಬ್ಯಾಂಕಿಗೆ ಯಾವಾಗ ಪಿಎಂ ಕಿಸಾನ್ ಹಣ ಜಮೆಯ ಸ್ಟೇಟಸ್ ಮೊಬೈಲ್ ನಲ್ಲೇ ಚೆಕ್ ಮಾಡಿ

ರೈತರು ತಮ್ಮಲ್ಲಿರುವ ಮೊಬೈಲ್ ನಲ್ಲಿ ಯಾವ ಬ್ಯಾಂಕಿನಲ್ಲಿ ಇಲ್ಲಿಯವರೆಗೆ ಎಷ್ಟು ಕಂತುಗಳು ಹಣ ಜಮೆಯಾಗಿದೆ ಎಂಬುದನ್ನು ಹಾಗೂ 13ನೇ ಕಂತಿನ ಸ್ಟೇಟಸ್ ಚೆಕ್ ಮಾಡಲು ಈ

https://pmkisan.gov.in/BeneficiaryStatus.aspx

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಅಲ್ಲಿತೆರೆದುಕೊಳ್ಳುವ ಪೇಜ್ ನಲ್ಲಿ ರೈತರು ಮೊಬೈಲ್ ನಂಬರ್ ಹಾಕಬೇಕು. ನಂತರ ಕ್ಯಾಪ್ಚ್ಯಾ ಕೋಡ್ ಹಾಕಿ ಗೆಟ್ ಡಾಟಾ ಮೇಲೆ ಕ್ಲಿಕ್ ಮಾಡಿದರೆ ಸಾಕು, ರೈತರಿಗೆ ಇಲ್ಲಿಯವರೆಗೆ ಪಿಎಂ ಕಿಸಾನ್ ಯೋಜನೆಯ ಎಷ್ಟು ಕಂತುಗಳು ಜಮೆಯಾಗಿದೆ ಯಾವ ಬ್ಯಾಂಕಿಗೆ ಜಮೆಯಾಗಿದೆ ಎಂಬುದನ್ನು ಚೆಕ್ ಮಾಡಬಹುದು. ಇದರೊಂದಿಗೆ 13ನೇ ಕಂತಿನ ಹಣ ಜಮೆಯ ಸ್ಟೇಟಸ್ ಸಹ ಮೊಬೈಲ್ ನಲ್ಲೇ ಚೆಕ್ ಮಾಡಬಹುದು.  ಒಂದು ವೇಳೆ ಪಿಎಂ ಕಿಸಾನ್ ಯೋಜನೆಯಿಂದ ನಿಮಗೆ ಜಮೆಯಾಗುವುದನ್ನು ತಡೆಹಿಡಿದಿದ್ದರೆ ಏತಕ್ಕಾಗಿ ಪಿಎಂ ಕಿಸಾನ್ ಹಣ ಜಮೆಯಾಗಿಲ್ಲ ಎಂಬುದನ್ನು ಸಹ ತೋರಿಸಲಾಗಿರುತ್ತದೆ. ರೈತರ ಸ್ಟೇಟಸ್ ನಲ್ಲಿ ಲ್ಯಾಂಡ್ ಸೀಡಿಂಗ್ ಹಾಗೂ ಇಕೆವೈಸಿ ಸ್ಟೇಟಸ್ ಯಸ್ ಇದ್ದರೆ ಮಾತ್ರ ಮುಂದಿನ ಕಂತಿನ ಹಣ ಜಮೆಯಾಗುತ್ತದೆ ಎಂದು ಹೇಳಲಾಗುತ್ತಿದೆ.

Leave a Comment