Birthday calculator : ನೀವು ಯಾವ ವಾರ ಹುಟ್ಟಿದ್ದೀರಿ ನಿಮಗೆ ಗೊತ್ತೇ? ನೀವು ಯಾವ ವಾರ ಹುಟ್ಟಿದ್ದೀರಿ ಎಂಬುದು ಈಗ ಮೊಬೈಲ್ ನಲ್ಲೇ ಗೊತ್ತಾಗುತ್ತದೆ. ಹೌದು, ಕೇವಲ ಒಂದೇ ನಿಮಿಷದಲ್ಲಿ ನೀವು, ನಿಮ್ಮ ಮಕ್ಕಳು, ನಮ್ಮ ತಂದೆ ತಾಯಿ ಯಾವ ವಾರ ಹುಟ್ಟಿದ್ದಾರೆ ಎಂಬುದನ್ನು ಚೆಕ್ ಮಾಡಬಹುದು. ಅದು ಹೇಗೆ ಅಂದುಕೊಂಡಿದ್ದೀರಾ… ಇಲ್ಲಿದೆ ನೋಡಿ ಮಾಹಿತಿ.
ತಮಗೆಲ್ಲಾ ಗೊತ್ತಿದ್ದ ಹಾಗೆ ನಾವು ಹುಟ್ಟಿದ್ದ ದಿನಾಂಕ, ತಿಂಗಳು ಹಾಗೂ ವರ್ಷ ಗೊತ್ತಿರುತ್ತದೆ. ಆದರೆ ಯಾವ ವಾರ ಹುಟ್ಟಿದ್ದೇವೆ ಎಂಬುದರ ಬಗ್ಗೆ ನೆನಪಿರುವುದಿಲ್ಲ. ಏಕೆಂದರೆ ನಾವು ಕೇವಲ ಯಾವ ದಿನಾಂಕ ಹುಟ್ಟಿದ್ದೇವೆ ಎಂಬುದು ಗೊತ್ತಿರುತ್ತದೆ. ನಮ್ಮ ಮಕ್ಕಳು ಯಾವ ಸಮಯದಲ್ಲಿ ಹುಟ್ಟದ್ದಾರೆ? ಹಗಲು ಹುಟ್ಟಿದ್ದಾರೋ ರಾತ್ರಿ ಹುಟ್ಟಿದ್ದಾರೋ ಎಂಬುದರ ಬಗ್ಗೆ ನೆನಪಿರುತ್ತದೆ. ಆದರೆ ಯಾವ ವಾರ ಹುಟ್ಟಿದ್ದು ಬಹುತೇಕ ಜನರಿಗೆ ನೆನಪಿರುವುದಿಲ್ಲ. ಅಂತಹವರು ಇಲ್ಲಿ ಕೆಳಗೆ ನೀಡಿರುವ ಲಿಂಕ್ ಬಳಸಿ ಚೆಕ್ ಮಾಡಬಹುದು. ಅದು ಹೇಗೆಅಂದುಕೊಂಡಿದ್ದೀರಾ… ಇಲ್ಲಿದೆ ಮಾಹಿತಿ.
40 ವರ್ಷಗಳ ಹಿಂದೆ ಬಹುತೇಕ ಜನರ ಹುಟ್ಟಿದ ದಿನಾಂಕ ಬರೆದರಿಲಾಗಿರುವುದಿಲ್ಲ. ಅಂತಹವರಿಗೆ ಶಾಲೆಗೆ ಸೇರಿಸುವಾಗ ಜೂನ್ 1 ರಂದೇ ಬರೆಯಲಾಗಿರುತ್ತದೆ. ಅಂತಹವರು ಸಹ ತಾವು ಯಾವ ವಾರ ಹುಟ್ಟಿದ್ದಾರೆ ಎಂಬುದನ್ನು ಚೆಕ್ ಮಾಡಿಕೊಳ್ಳಬಹುದು. ಒಮ್ಮೆ ನಿಮ್ಮಕುಟುಂಬದ ಸದಸ್ಯರ ತಂದೆ, ತಾಯಿ, ಮಕ್ಕಳ, ಪತ್ನಿ ಹೀಗೆ ಎಲ್ಲರ ಹುಟ್ಟಿದ ವಾರ ಚೆಕ್ ಮಾಡಬಹುದು.
ನೀವು ಹುಟ್ಟಿದ ವಾರ ಯಾವುದು?ಚೆಕ್ ಮಾಡುವುದು ಹೇಗೆ?
ನೀವು ಯಾವ ವಾರ ಹುಟ್ಟಿದ್ದೀರಿ ಎಂಬುದನ್ನು ಚೆಕ್ ಮಾಡಲು ಈ
https://www.thecalculatorsite.com/misc/birthday-calculator.php
ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮಗೊಂದು ಪೇಜ್ ಓಪನ್ ಆಗುತ್ತದೆ. ಹೌದು, ನಿಮಗೆ Birthday Calculator ಪೇಜ್ ಕಾಣಿಸುತ್ತದೆ., ಅಲ್ಲಿ ಯಾವ ತಿಂಗಳಲ್ಲಿ ಯಾವ ದಿನಾಂಕ ಹಾಗೂ ಯಾವ ವರ್ಷದಲ್ಲಿ ನಿಮ್ಮ ಜನನವಾಗಿದೆ ಎಂಬುದನ್ನು ಆಯ್ಕೆ ಮಾಡಿಕೊಳ್ಳಬೇಕು. ನಂತರ calculator ಮೇಲೆ ಕ್ಲಿಕ್ ಮಾಡಬೇಕು. ಆಗ ನೀವು ಯಾವ ವಾರ ಹುಟ್ಟಿದ್ದೀರಿ? ನಿಮಗೆ ಎಷ್ಟು ವರ್ಷ, ಎಷ್ಟು ತಿಂಗಳು ಹಾಗೂ ಎಷ್ಟು ದಿನ ಆಗಿದೆ ಎಂಬ ಮಾಹಿತಿ ಕಾಣಿಸುತ್ತದೆ. ಅದರ ಕೆಳಗಡೆ ನಿಮ್ಮ ರಾಶಿ ಚಕ್ರ ಯಾವುದು ಎಂಬ ಮಾಹಿತಿ ಸಹ ಕಾಣಿಸುತ್ತದೆ. ಅದರ ಕುರಿತು ಮಾಹಿತಿ ಸಹ ನೀಡಲಾಗಿರುತ್ತದೆ.
ಇದೇ ರೀತಿ ನೀವು 1910 ರಿಂದ ಇಲ್ಲಿಯವರೆಗೆ ಅಂದರೆ 2024ರವರೆಗೆ ಯಾರು ಯಾವ ವಾರದಲ್ಲಿ ಜನಿಸಿದ್ದಾರೆ ಎಂಬ ಮಾಹಿತಿಯನ್ನು ಕೇವಲ ಒಂದೇ ನಿಮಿಷದಲ್ಲಿ ಚೆಕ್ ಮಾಡಬಹುದು.
ನಿಮ್ಮ ಸಂಗಾತಿಯ, ಗೆಳೆಯರು ಹಾಗೂ ಗೆಳತಿಯರಿಗೆ ಅವರು ಯಾವ ವಾರದಲ್ಲಿ ಜನಿಸಿದ್ದಾರೆ ಎಂಬುದನ್ನು ಹೇಳಬಹುದು. ಇದರಿಂದ ಅವರು ಸಂತಸ ವ್ಯಕ್ತಪಡಿಸುವುದರಲ್ಲದೆ ನಿಮಗೆ ಅಭಿನಂದಿಸುತ್ತಾರೆ.
ಇದನ್ನು ಓದಿ : Ration card status ಮೊಬೈಲ್ ನಲ್ಲಿ ಹೀಗೆ ಚೆಕ್ ಮಾಡಿ
ಒಮ್ಮೆ ನೀವು ಮೊಬೈಲ್ ನಲ್ಲಿ ನೀವು ಯಾವ ವಾರ ಹುಟ್ಟಿದ್ದೀರಿ ಎಂಬುದನ್ನು ಚೆಕ್ ಮಾಡಿ, ನೀವು ನಿಮ್ಮ ಮಕ್ಕಳು ಯಾವ ಯಾವ ವಾರದಲ್ಲಿ ಜನಿಸಿದ್ದಾರೆ ಎಂಬುದನ್ನು ಚೆಕ್ ಮಾಡಿ ಸರಿ ಎನಿಸಿದರೆ ಕಾಮೆಂಟ್ ಮಾಡಿ ತಿಳಿಸಬಹುದು.
ನಿಮ್ಮ ಕಾಮೆಂಟ್ ನಮಗೆ ಅಭಿನಂದಿಸಿದಂತಾಗುತ್ತದೆ. ಮುಂದೆ ಇಂತಹ ಆಸಕ್ತಿಕರ ಸಂಗತಿಗಳನ್ನು ನಿಮ್ಮ ಮುಂದೆ ಇಡಲು ಹುರಿದುಂಬಿಸಿದಂತಾಗುತ್ತದೆ.
ನಿಮಗೆ ಮೇಲಿನ ಲೇಖನ ಇಷ್ಟವಾದರೆ ಒಂದು ಸಣ್ಣ ಕಾಮೆಂಟ್ ಮಾಡಿ ತಿಳಿಸಬಹುದು. ಒಂದು ವೇಳೆ ಈ ಲೇಖನ ಇಷ್ಟವಾಗದಿದ್ದರೂ ನಾನು ನೀಡಿದ ಲೇಖನದ ಮಾಹಿತಿ ಸುಳ್ಳು ಎನಿಸಿದರೂ ತಾವು ಕಾಮೆಂಟ್ ನಲ್ಲಿ ತಿಳಿಸಬಹುದು. ನಾನು ನೀಡಿದ ಲೇಖಲದಲ್ಲಿ ಆದ ತಪ್ಪುಗಳನ್ನು ಸರಿಪಡಿಸಿಕೊಳ್ಳಲು ಸಹಾಯವಾಗುತ್ತದೆ.