ಜನನ ಮರಣ ಪ್ರಮಾಣ ಪತ್ರ ಮೊಬೈಲ್ ನಲ್ಲಿ ಹೀಗೆ ಪಡೆಯಿರಿ

Written by Ramlinganna

Published on:

Birth death certificate download : ಜನನ ಮರಣ ಪ್ರಮಾಣ ಪತ್ರಗಳನ್ನು ಈಗ ಮೊಬೈಲ್ ನಲ್ಲಿ ಪಡೆಯಬಹುದು. ಹೌದು, ಜನನ ಮರಣ ಪ್ರಮಾಣ ಪತ್ರಗಳಿಗಾಗಿ ಈಗ ಕಚೇರಿಗಳ ಮುಂದೆ ಸರತಿಯಲ್ಲಿ ನಿಲ್ಲಬೇಕಿಲ್ಲ. ಮೊಬೈಲ್ ನಲ್ಲೇ ಅರ್ಜಿ ಸಲ್ಲಿಸಿ ಪಡೆಯಬಹುದು. ಅದು ಹೇಗೆ ಅಂದುಕೊಂಡಿದ್ದೀರಾ ಇಲ್ಲಿದೆ ನೋಡಿ ಮಾಹಿತಿ.

ಕರ್ನಾಟಕ ಸರ್ಕಾರವು ಜನನ ಮರಣ ಪ್ರಮಾಣ ಪತ್ರಗಳಿಗಾಗಿ ಅರ್ಜಿ ಸಲ್ಲಿಸಲು ಹಾಗೂ ಪಡೆಯಲು ಆನ್ಲೈನ್ ವ್ಯವಸ್ಥೆ ಮಾಡಿದೆ. ಹೌದು, ಇ ಜನ್ಮ ಪೋರ್ಟಲ್ ಮೂಲಕ ಜನನ ಪ್ರಮಾಣ ಪತ್ರಗಳನ್ನು ಮೊಬೈಲ್ ನಲ್ಲೇ ಪಡೆಯಬಹುದು.

Birth death certificate download ಮೊಬೈಲ್ ನಲ್ಲಿ ಜನನ ಮರಣ ಪ್ರಮಾಣ ಪತ್ರ ಪಡೆಯುವುದು ಹೇಗೆ?

ಸಾರ್ವಜನಿಕರು ತಮ್ಮ ಬಳಿಯಿರುವ ಮೊಬೈಲ್ ನಲ್ಲಿ ಜನನ ಮರಣ ಪ್ರಮಾಣ ಪತ್ರ ಪಡೆಯಲು ಈ

https://ejanma.karnataka.gov.in/

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮಗೆ ಜನನ ಮರಣ ಪ್ರಮಾಣ ಪತ್ರ ಪಡೆಯುವ ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ನೀವು ಬರ್ತ್ ಸರ್ಟಿಫಿಕೇಟ್ ಬೇಕೋ ಅಥವಾ ಡೆತ್ ಸರ್ಟಿಫಿಕೇಟ್ ಬೇಕೋ ಎಂಬುದನ್ನು ನಿರ್ಧರಿಸಿ ಯಾವ ಸರ್ಟಿಫಿಕೇಟ್ ಬೇಕೋ ಅದರ ಮೇಲೆ ಕ್ಲಿಕ್ ಮಾಡಬೇಕು. ಬರ್ತ್ ಸರ್ಟಿಫಿಕೇಟ್ ಬೇಕಾದರೆ ನೋಂದಣಿ ಸಂಖ್ಯೆ ಮತ್ತು ಹುಟ್ಟಿದ ದಿನಾಂಕ ಹಾಕಿ ಕ್ಯಾಪ್ಚ್ಯಾ ಕೋಡ್ ಹಾಕಿ ಬರ್ತ್ ಸರ್ಟಿಫಿಕೇಟ್ ಪಡೆದುಕೊಳ್ಳಬಹುದು.

ಜನನ ಮರಣ ಪ್ರಮಾಣ ಪತ್ರ ಈಗ ನಿಮ್ಮ ಮನೆಯ ಹತ್ತಿರವೂ ಸಿಗಲಿದೆ.

ಇದನ್ನೂ ಓದಿ ನೀವು ನಿಂತಿರುವ ಜಮೀನಿನ ಮಾಲಿಕರು ಯಾರಿದ್ದಾರೆ? ಹೀಗೆ ಚೆಕ್ ಮಾಡಿ

ಇದೀಗ ಗ್ರಾಮ ಪಂಚಾಯತಿಗಳಲ್ಲಿ ಜನನ ಮರಣ ಪ್ರಮಾಣ ಪತ್ರಗಳು ಲಭ್ಯವಾಗಲಿದೆ. ಗ್ರಾಮ ಪಂಚಾಯತಿ ಮಟ್ಟದಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ (ಪಿಡಿಓ)  ಅವರನ್ನು ಜನನ ಮರಣ ಪ್ರಮಾಣ ಪತ್ರಗಳ ವಿತರಣಾಧಿಕಾರಿಗಳನ್ನಾಗಿ ನೇಮಿಸಿ ಸರ್ಕಾರ ಆದೇಶಿಸಿದೆ. ಈ ಮೂಲಕ ಕೂಗಳತೆ ದೂರದಲ್ಲಿರುವ ಗ್ರಾಮ ಪಂಚಾಯತಿಗಳಿಂದಲೇ ಪ್ರಮಾಣ ಪತ್ರವನ್ನು ಪಡೆಯಬಹುದು.

ಗ್ರಾಮ ಪಂಚಾಯತಿಗಳ ಬಾಪೂಜಿ ಸೇವಾ ಕೇಂದ್ರಗಳ ಮೂಲಕ ಸಾರ್ವಜನಿಕರು ಪ್ರಮಾಣ ಪತ್ರಗಳನ್ನು ಪಡೆಯಬಹುದು.

ರಾಜ್ಯದ ಗ್ರಾಮೀಣ ಭಾಗದಲ್ಲಿ ಆನ್ಲೈನ್ ಜನನ ಮರಣ ನೋಂದಣಿ ವ್ಯವಸ್ಥೆಯು 2015ರ  ಏಪ್ರೀಲ್ 1 ರಿಂದಲೇ ಜಾರಿಯಾಗಿದೆ. ಈ ದಿನಾಂಕದ ನಂತರದಲ್ಲಿ ನೋಂದಣಿಯಾದ ದಾಖಲೆಗಳನ್ನು ಸರ್ಕಾರ ನಿಗದಿಪಡಿಸಿದ ದರಗಳನ್ವಯ ಸೇವಾ ಶುಲ್ಕವನ್ನು ಪಾವತಿಸಿ ಅಂದರೆ ಯಾವುದೇ ಮಗು ಜನನವಾದಾಗ ಅಥವಾ ಯಾವುದೇ ವ್ಯಕ್ತಿ ಮರಣ ಹೊಂದಿದಾಗ ನೋಂದಣಿ ಮಾಡಲಾಗಿರುತ್ತದೆ. ಈ ಮಾಹಿತಿ ಗ್ರಾಮ ಲೆಕ್ಕಿಗರ ಬಳಿ ಲಭ್ಯವಿರುತ್ತದೆ. ಈ ನೋಂದಣಿ ಸಂಖ್ಯೆಯ ಮೂಲಕ ಜನನ ಮತ್ತು ಮರಣ ಪ್ರಮಾಣ ಪತ್ರಗಳನ್ನು ಪಡೆಯಬಹುದು.

ನೋಂದಣಿ ಮಾಡುವುದು ಹೇಗೆ?

ಇ ಜನ್ಮ  ಪೋರ್ಟಲ್ ನಲ್ಲಿ ಆಧಾರ್ ಕಾರ್ಡ್ ರೀತಿ ಒಬ್ಬರಿಗೆ ಒಂದು ನಂಬರ್ ಮಾತ್ರ ನೀಡಲಾಗಿದೆ. ಮಗುವೊಂದು ಹುಟ್ಟಿದ ತಕ್ಷಣ ಆಸ್ಪತ್ರೆಯಿಂದ ನೀಡಲಾಗುವ ದಾಖಲಾತಿಯನ್ನು ಸ್ಥಳೀಯ ಸಂಸ್ಥೆಗಳಲ್ಲಿ ನೀಡಬೇಕು. ಅಲ್ಲಿನ ಅಧಿಕಾರಿಗಳು ಇ ಜನ್ಮ ಪೋರ್ಟಲ್ ನಲ್ಲಿ ತಂದೆ-ತಾಯಿ ಹೆಸರು, ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್ ಸೇರಿ ಯಾವುದಾದರೊಂದು ದಾಖಲಾತಿ ನೀಡಿ ಅಪ್ಲೋಡ್ ಮಾಡುತ್ತಾರೆ. ನಂತರ ಸರ್ಟಿಫಿಕೇಟ್ ನೊಂದು ನಂಬರ್ ವೊಂದು ಜನರೇಟರ್ ಆಗಲಿದ್ದು, ಈ ನಂಬರ್ ಪಡೆದು ಎಲ್ಲಿ ಬೇಕಾದರೂ ಮಾಹಿತಿ ತೆಗೆದುಕೊಳ್ಳಬಹುದು

ಡಿಜಿಟಲ್ ಗೆ ಒತ್ತು

ಜನನ ಪ್ರಮಾಣ ಪತ್ರಗಳು ಇಂದಿನ ದಿನಗಳಲ್ಲಿ ಮುಖ್ಯವಾದ ದಾಖಲೆಯಾಗಿದೆ. ಸರ್ಕಾರದ ಕಚೇರಿಗಳಲ್ಲಿ ಜನನ, ಮರಣದ ಕುರಿತ ಸಮಗ್ರ ದಾಖಲೆ ದೊರೆಯದ ಕಾರಣ ಅನೇಕ ಸಮಸ್ಯೆಗಳಿಗೆ ಕಾರಣವಾಗುತ್ತಿತ್ತು. ಶಾಲೆಗಳಲ್ಲಿ ಮಕ್ಕಳ ದಾಖಲಾತಿಗೆ ಜನನ ಪ್ರಮಾಣ ಪತ್ರ ಮುಖ್ಯವಾಗಿದೆ. ಈಗ ಆನ್ ಲೈನ್ ಮೂಲಕ ಪ್ರಮಾಣ ಪತ್ರ ನೋಂದಣಿ ಕ್ರಿಯೆ ಆರಂಭಿಸಲಾಗಿದೆ.

Leave a Comment