ಬಿಮಾ ಸಖಿ ಯೋಜನೆಯಡಿ ಮಹಿಳೆಯರಿಗೆ ಸಿಗಲಿದೆ 7000 ರೂಪಾಯಿ

Written by Ramlinganna

Published on:

bima sakhi scheme benefits : ಗ್ರಾಮೀಣ ಮಹಿಳೆಯರಿಗೆ ಗುಡ್ ನ್ಯೂಸ್ ಇಲ್ಲಿದೆ.  ಹೌದು, ಮಹಿಳೆಯರಿಗಾಗಿಯೇ ಈ  ಬಿಮಾ ಸಖಿ ಯೋಜನೆನ್ನು  ಜಾರಿಗೆ ತರಲಾಗುತ್ತಿದೆ. ಸಂಪೂರ್ಣ ಮಾಹಿತಿ ಇಲ್ಲಿದೆ.

ನಮ್ಮ ಯೂಟೂಬ್ ಚಾನೆಲ್ ಸಬಸ್ಕ್ರೈಬ್ ಮಾಡಿ ಇಂತಹ ಮಾಹಿತಿ ಪಡೆಯಿರಿ

ಬಿಮಾ ಸಖಿ ಎಂಬ ಯೋಜನೆಯಡಿ ಮಹಿಳೆಯರಿಗೆ ಪ್ರತಿ ತಿಂಗಳು 7 ಸಾವಿರ ರೂಪಾಯಿ ಪ್ರೋತ್ಸಾಹ ಧನ ನೀಡುವ ಉದ್ದೇಶದಿಂದ ಈ ಬಿಮಾ ಸಖಿ ಯೋಜನೆಯನ್ನು ಜಾರಿಗೆ ತರಲಾಗುತ್ತಿದೆ.

ಬಿಮಾ ಸಖಿ ಯೋಜನೆಯಡಿ ಯಾವ ಮಹಿಳೆಯರು ಅರ್ಜಿ ಸಲ್ಲಿಸಬಹುದು. ಪ್ರತಿ ತಿಂಗಳು 7 ಸಾವಿರ ರೂಪಾಯಿ ಹೇಗೆ ಪಡೆಯಬಲ್ಲರು ಇದಕ್ಕಾಗಿ ಬೇಕಾಗುವ ಅರ್ಹತೆ ಏನು ಎಂಬುದರ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ

ಭಾರತೀಯ ಜೀವ ವಿಮಾ ನಿಗಮದ ಮೂಲಕ ಬಿಮಾ ಸಖಿ ಯೋಜನೆಯನ್ನು ಜಾರಿಗೆ ತರಲಾಗುತ್ತಿದೆ. ಕುಟುಂಬ ನಿಭಾಯಿಸುವಲ್ಲಿ ಮಹಿಳೆಯರ ಪಾತ್ರ ಮುಖ್ಯವಾಗಿದೆ. ಹೀಗಾಗಿ ಈ ಯೋಜನೆಯನ್ನು ಮಹಿಳೆಯರಿಗಾಗಿ ಜಾರಿಗೆ ತರಲಾಗುತ್ತಿದೆ.  ಡಿಸೆಂಬರ್ 9 ರಂದು ಪ್ರಧಾನಿ ನರೇಂದ್ರ ಮೋದಿಯವರು ಹರಿಯಾಣ ರಾಜ್ಯದ ಪಾನಿಪತ್ ನಲ್ಲಿ ಬಿಮಾ ಸಖಿ ಯೋಜನೆಗೆ ಚಾಲನೆ ನೀಡಲಿದ್ದಾರೆ.

bima sakhi scheme benefits ಯಾರು ಅರ್ಜಿ ಸಲ್ಲಿಸಬೇಕು? 

18 ರಿಂದ 50 ವಯೋಮಾನದ ಮಹಿಳೆಯರು ಈ ಯೋಜನೆಗೆ ಅರ್ಜಿಸಲ್ಲಿಸಬಹುದು.  10ನೇ ತರಗತಿ ಪಾಸಾಗಿರಬೇಕು.  ಹಾಗೂ  ಗ್ರಾಮೀಣ ಪ್ರದೇಶದ ಮಹಿಳೆಯರಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು.

ಬಿಮಾ ಸಖಿ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸಿದ ಮಹಿಳೆಯರಿಗೆ ಪ್ರಥಮ ವರ್ಷದಲ್ಲಿ ಪ್ರತಿ ತಿಂಗಳು 7 ಸಾವಿರ ರೂಪಾಯಿ ಸ್ಟೈಫಂಡ್ ಅಂದರೆ ಪ್ರೋತ್ಸಾಹ ಧನ ಮತ್ತು ಕಮಿಷನ್ ನೀಡಲಾಗುವುದು. 2ನೇ ವರ್ಷದಲ್ಲಿ ಪ್ರತಿ ತಿಂಗಳು 6 ಸಾವಿರ ರೂಪಾಯಿ ಪ್ರೋತ್ಸಾಹ ಧನ ಹಾಗೂ ಕಮಿಷನ್ ನೀಡಲಾಗುವುದು. ಅದೇ ರೀತಿ ಮೂರನೇ ವರ್ಷದಲ್ಲಿಯೂ ಪ್ರತಿ ತಿಂಗಳು 5 ಸಾವಿರ ರೂಪಾಯಿ ಪ್ರೋತ್ಸಾಹ ಧನ ಹಾಗೂ ಕಮಿಷನ್ ನೀಡಲಾಗುವುದು.  ನಂತರ ಮುಂದಿನ ವರ್ಷಗಳಿಂದ  ಮಹಿಳೆಯರು ವಿಮೆ ಮಾಡಿಸಿದಂತೆಅವರಿಗೆ ಕಮಿಷನ್ ನೀಡಲಾಗುವುದು.

ಇದನ್ನೂ ಓದಿ ಬೆಳೆ ಹಾನಿಯಾದ ಈ ರೈತರ ಖಾತೆಗೆ ವಾರದೊಳಗೆ ಪರಿಹಾರ ಜಮೆ

ಮಹಿಳೆಯರಿಗೆ ಆರ್ಥಿಕ ಸ್ವಾತಂತ್ರ್ಯಹಾಗೂ  ಸ್ವಯಂ ಉದ್ಯೋಗಾವಕಾಶಗಳನ್ನು ಹೆಚ್ಚಿಸುವ ಉದ್ದೇಶದಿಂದ ಈ ಯೋಜನೆಯನ್ನು ಜಾರಿಗೆ ತರಲಾಗಿದೆ.

ಉಚಿತವಾಗಿ 20 ನಾಟಿ ಕೋಳಿ ಮರಿ ವಿತರಣೆಗೆ ಅರ್ಜಿ ಆಹ್ವಾನ

ಗ್ರಾಮೀಣ ಪ್ರದೇಶದ ಮಹಿಳೆಯರಿಗೆ ಗುಡ್ ನ್ಯೂಸ್ ಇಲ್ಲಿದೆ. ಹೌದು,  ಗ್ರಾಮಾಂತರ ಪ್ರದೇಶದಲ್ಲಿವಾಸಿಸುತ್ತಿರುವ ಮಹಿಳೆಯರಿಗೆ 20 ನಾಟಿ ಕೋಳಿ ಮರಿಗಳನ್ನು ಉಚಿತವಾಗಿ ವಿತರಿಸಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಎಲ್ಲಿ ಸಲ್ಲಿಸಬೇಕು? ಅರ್ಜಿಅರ್ಜಿ ಸಲ್ಲಿಸಲು ಯಾವ ಯಾವ ದಾಖಲೆ ಬೇಕು ಎಂಬುದರ ಮಾಹಿತಿ ಇಲ್ಲಿದೆ.

ರಾಜ್ಯದ ಮಹಿಳಾ ಫಲಾನಭವಿಗಳಿಗೆ ಉಚಿತವಾಗಿ 20 ನಾಟಿ ಕೋಳಿ ಮರಿಗಳ ವಿತರಣೆಗೆ ಅರ್ಜಿ ಆಹ್ವಾನಿಸಲಾಗಿದೆ. ಐದು ವಾರದ ಕೋಳಿ ಮರಿಗಳನ್ನು ರೈತರಿಗೆ ಉಚಿತವಾಗಿ ನೀಡಲಾಗುವುದು.

ಗ್ರಾಮೀಣ ಭಾಗದ ಎಸ್.ಸಿ, ಎಸ್.ಟಿ ಮಹಿಳೆಯರು ಸೇರಿದಂತೆ ಸಾಮಾನ್ಯ ವರ್ಗದ ಮಹಿಳಯರಿಗೂ ತಲಾ 20 ನಾಟಿ ಕೋಳಿ ಮರಿಗಳನ್ನು ನೀಡಲಾಗುವುದು.

ಅರ್ಜಿ ಯಾರು ಯಾರು ಸಲ್ಲಿಸಬೇಕು?

ಮಹಿಳೆಯರ ಬಳಿ ಆಧಾರ್ ಕಾರ್ಡ್ ಇರಬೇಕು. ಜಾತಿ ಪ್ರಮಾಣ ಪತ್ರ ಇರಬೇಕು. ಯಾವ ತಾಲೂಕಿನಲ್ಲಿ ಅರ್ಜಿ ಸಲ್ಲಿಸುತ್ತಾರೋ ಆ ಆ ತಾಲೂಕಿನ ನಿವಾಸಿಯಾಗಿರಬೇಕು.  ಇದೇ ರೀತಿ ಸ್ವ ಸಾಹಯ ಗುಂಪಿನ ಸದಸ್ಯರು, ಪ್ರಾಥಮಿಕ ಕೋಳಿ ಸಹಕಾರ ಸಂಘಗಳಿರುವ ಮಹಿಳಾ ಸದಸ್ಯರು ಮತ್ತು ರೈತ ಉತ್ಪಾದಕರ ಸಂಸ್ಥೆಯ ಫಲಾನುಭವಿಗಳು ಸಹ ಅರ್ಜಿ ಸಲ್ಲಿಸಬಹುದು.

ಅರ್ಜಿ ಎಲ್ಲಿ ಯಾವಾಗ ಸಲ್ಲಿಸಬೇಕು?

ಚಿತ್ರದುರ್ಗ ಜಿಲ್ಲೆಯ ಎಲ್ಲಾ ತಾಲೂಕಿನ ಮಹಿಳೆಯರು ಡಿಸೆಂಬರ್ 15 ರೊಳಗಾಗಿ ಆಯಾ ತಾಲೂಕಿನ  ಪಶು ವೈದ್ಯಾಧಿಕಾರಿ ಅಥವಾ ಸಹಾಯಕ ನಿರ್ದೇಶಕರಿಗೆ ಅರ್ಜಿ ಸಲ್ಲಿಸಬಹುದು.

ಹೆಚ್ಚಿನ ಮಾಹಿತಿಗಾಗಿ ಇಲ್ಲಿನೀಡಲಾಗಿರುವ ಮೊಬೈಲ್ ನಂಬರಿಗೆ ಸಂಪರ್ಕಿಸಬಹುದು.

ಚಿತ್ರದುರ್ಗ ತಾಲೂಕಿನವರು : 9482943111, ಚಳ್ಳಕೆರೆ ತಾಲೂಕಿನವರು: 9448816499, ಹೊಳಲ್ಕೆರೆ ತಾಲೂಕಿನವರು : 9972965479, ಹೊದುರ್ಗ ತಾಲೂಕಿನವರು: 9945298407, ಹಿರಿಯೂರು ತಾಲೂಕಿನವರು: 9483451044, ಮೊಳಕಾಲ್ಮೂರು ತಾಲೂಕಿನವರು: 9900964820 ಮೊಬೈಲ್ ನಂಬರುಗಳಿಗೆ ಸಂಪರ್ಕಿಸಬಹುದು.

Leave a Comment