Bike subsidy ಸಬ್ಸಿಡಿಯಲ್ಲಿ ಬೈಕ್ ಖರೀದಿ ಮಾಡಿ ಜೀವನ ನಡೆಸುವ ಆಸಕ್ತರಿಗೆ ಹಾಗೂ ಆರ್ಥಿಕವಾಗಿ ಸಮಸ್ಯೆಯಿರುವ ವ್ಯಾಪಾರ ಮಾಡಿ ಬದುಕಲು ಆಸಕ್ತಿಯಿರುವ ರೈತರಿಗೆ ಇಲ್ಲಿದೆ ಗುಡ್ ನ್ಯೂಸ್.
ಸರ್ಕಾರಗಳು ಆರ್ಥಿಕವಾಗಿ ಹಿಂದುಳಿದವರಿಗೆ ಸಬ್ಸಿಡಿಯಲ್ಲಿ ವಿವಿಧ ವಾಹನಗಳ ಖರೀದಿ ಮಾಡಲು ಅವಕಾಶ ನೀಡುತ್ತದೆ. ಇದನ್ನು ಸದುಪಯೋಗ ಪಡೆದುಕೊಂಡು ಜೀವನ ನಡೆಸಬಹುದು. ಹಾಗಾದರೆ ಬೈಕ್ ಖರೀದಿಗೆ ಯಾವ ಇಲಾಖೆಯಿಂದ ಸಬ್ಸಿಡಿ ನೀಡಲಾಗುವುದು ಎಂಬುದರ ಮಾಹಿತಿ ಇಲ್ಲಿದೆ.
ಮೀನುಗಾರಿಕೆ ಇಲಾಖೆಯ ವತಿಯಿಂದ 2024-25 ನೇ ಸಾಲಿನ ಮತ್ಸ್ಯ ವಾಹಿನಿ ಯೋಜನೆ ಅಡಿಯಲ್ಲಿ ದ್ವಿ ಚಕ್ರ ವಾಹನ ಮತ್ತು ಐಸ್ ಬಾಸ್ಕ್ ಖರೀದಿಸಿದವರಿಗೆ ಸಹಾಯಧನನೀಡಲು ಅರ್ಜಿ ಆಹ್ವಾನಿಸಲಾಗಿದೆ.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟಪಂಗಡ ವರ್ಗದ ಮೀನುಗಾರಿಕೆಗೆ ಉಚಿತವಾಗಿ ಮೀನುಗಾರಿಕೆ ಸಲಕರಣೆ ಕಿಟ್ ವಿತರಣೆ ಮಾಡಲು ಅರ್ಹ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
Bike subsidy ದ್ವಿಚಕ್ರ ವಾಹನ ಖರೀದಿ ಮಾಡಿದ ನಂತರ ಏನು ಮಾಡಬೇಕು?
ಮೀನು ಮಾರಾಟಕ್ಕೆ ದ್ವಿಚಕ್ರ ವಾಹನ ಅಥವಾ ಪ್ಲಾಸ್ಟಿಕ್ ಕ್ರೇಟ್ಸ್ ಖರೀದಿಗೆ ಸಹಾಯಧನ ಯೋಜನೆ ಅಡಿಯಲ್ಲಿ ಖರೀದಿಸಿದ ವಾಹನಗಳನ್ನು 5 ವರ್ಷಗಳವರೆಗೆ ಮಾರಾಟ ಮಾಡಲಾಗುವುದಿಲ್ಲ. ಗುತ್ತಿಗೆ ನೀಡುವುದಿಲ್ಲ ಎಂಬ ಬಗ್ಗೆ 100 ರೂಪಾಯಿಗಳ ಕರಾರು ಪತ್ರದಲ್ಲಿ ನೋಟರೀಕರಿಸಿ ಸಲ್ಲಿಸಲಾಗುವುದು.
ದ್ವಿ ಚಕ್ರ ವಾಹನ ಖರೀದಿಗೆ ಬ್ಯಾಂಕಿನಿಂದ ಸಾಲ ಸೌಲಭ್ಯ ಪಡೆದಿದ್ದಲ್ಲಿ ಫಲಾನುಭವಿಯು ಅರ್ಜಿ ಸಲ್ಲಿಸುವಾಗ ಬ್ಯಾಂಕಿನಿಂದ ಸಾಲ ನೀಡುವ ಒಪ್ಪಿಗೆ ಪತ್ರವನ್ನು ಸಲ್ಲಿಸಬೇಕು.
ಇದನ್ನೂ ಓದಿ : ನೀವು ನಿಂತಿರುವ ಜಮೀನು ಯಾರ ಹೆಸರಿಗಿದೆ? ಚೆಕ್ ಮಾಡಿ
ದ್ವಿಚಕ್ರವಾಹನ ಖರೀದಿಯ ಫಲಾನುಭವಿಯು ಡಿಎಲ್ ಅಥವಾ ಎಲ್ಎಲ್ಆಲ್ ಹೊಂದಿದ್ದಲ್ಲಿ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸುವಾಗ ಹೌದು ಎಂದು ನಮೂದಿಸಬೇಕು.
ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸುವಾಗ ಯಾವ ಯಾವ ದಾಖಲೆ ಬೇಕು?
ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಈ ಕೆಳಗೆ ನೀಡಲಾದ ದಾಖಲೆಗಳು ಬೇಕಾಗುತ್ತವೆ. ಫೋಟೋ, ಜಾತಿ ಪ್ರಮಾಣ ಪತ್ರ ಸಲ್ಲಿಸಬೇಕು. ವಿಕಲಚೇತನ, ವಿಧವೆ ಅಥವಾ ಹೆಚ್.ಐವಿ ಪೀಡಿತ ಪ್ರಮಾಣ ಪತ್ರ (ಅನ್ವಯವಾದಲ್ಲಿ) ಲಗತ್ತಿಸಬೇಕು. ವಾಹನ ಖರೀದಿ ಮತ್ತು ಪ್ಲಾಸ್ಟಿಕ್ ಕ್ರೇಟ್ಸ್ಬಿಲ್. ಮೀನುಗಾರಿಕೆ ಚಟುವಟಿಕೆ ಪ್ರಮಾಣ ಪತ್ರ ನೀಡಬೇಕು. ಡ್ರೈವಿಂಗ್ ಲೈಸೆನ್ಸ್ ವಾಹನ ವಿಮಾ ಪತ್ರ ನೀಡಬೇಕು. ಬ್ಯಾಂಕ್ ಪಾಸ್ ಬುಕ್ ಪ್ರತಿಲಗತ್ತಿಸಬೇಕು.
ಅರ್ಜಿಗಳನ್ನುಸೆಪ್ಟೆಂಬರ್ 30 ರೊಳಗೆ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗಾಗಿ ಮೀನುಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕರು, ಮುಂಡರಗಿ ಹಾಗೂ ಉಪ ನಿರ್ದೇಶಕರು ಮೊಬೈಲ್ ಸಂಖ್ಯೆ 8095792530 ಗೆ ಸಂಪರ್ಕಿಸಲು ಕೋರಲಾಗಿದೆ.
ಆನ್ಲೈನ್ ಮೂಲಕ ಅರ್ಜಿ ಎಲ್ಲಿ ಸಲ್ಲಿಸಬೇಕು?
ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು
ಈ https://gadag.nic.in/ ಲಿಂಕ್
ಮೇಲೆ ಕ್ಲಿಕ್ ಮಾಡಬೇಕು. ಅಲ್ಲಿ ನಿಮಗೆ ಮೀನುಗಾರಿಕೆ ಇಲಾಖೆ ಗದಗ ಜಿಲ್ಲೆಯ ಫಲಾನುಭವಿಗಳ ಆಯ್ಕೆಗಾಗಿ ಆನ್ಲೈನ್ ಅರ್ಜಿಗಳು ಎಂಬ ಬಾಕ್ಸ್ಕಾಣಿಸುತ್ತದೆ. ಅದರ ಮೇಲೆ ಕ್ಲಿಕ್ ಮಾಡಬೇಕು. ಆಗ ಇನ್ನೊಂದು ಪೇಜ್ ಓಪನ್ ಆಗುತ್ತದೆ.
ಅಲ್ಲಿ ಮೀನುಗಾರಿಕೆ ಇಲಾಖೆ ಮುಂದುಗಡೆ ಇರುವ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ ಮೇಲೆ ಕ್ಲಿಕ್ ಮಾಡಬೇಕು. ಆಗ ಓಕೆ ಮೇಲೆ ಕ್ಲಿಕ್ ಮಾಡಬೇಕು ಆಗ ಇನ್ನೊಂದು ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ನಿಮ್ಮ ಜಿಲ್ಲೆ ಆಯ್ಕೆ ಮಾಡಿಕೊಳ್ಳಬೇಕು. ಸ್ಕೀಮ್ ಆಯ್ಕೆಯಲ್ಲಿ ದ್ವಿಚಕ್ರ ವಾಹನ ಮತ್ತು ಶಾಖ ನಿರೋಧಕ ಪೆಟ್ಟಿಗೆ ಆಯ್ಕೆಮಾಡಿಕೊಳ್ಳಬೇಕು. ನಂತರ ನಿಮ್ಮತಾಲೂಕು ಆಯ್ಕೆ ಮಾಡಿಕೊಳ್ಳಬೇಕು. ಇದಾದ ನಂತರ ನಿಮ್ಮ ಫೋಟೋ ಅಪ್ಲೋಡ್ ಮಾಡಬೇಕು. ನಿಮ್ಮತಂದೆಯ ಹೆಸರು ನಮೂದಿಸಬೇಕು. ನಿಮ್ಮ ಹುಟ್ಟಿದ ದಿನಾಂಕ ಲಿಂಗ, ಕೆಟಗೇರಿ ಆಯ್ಕೆ ಮಾಡಿಕೊಳ್ಳಬೇಕು.ನಂತರ ಅಲ್ಲಿ ಕೇಳಲದಾ ಮಾಹಿತಿ ಭರ್ತಿ ಮಾಡಿ ಅರ್ಜಿ ಸಲ್ಲಿಸಬಹುದು.