Belevimege last date : ಬೆಳೆ ವಿಮೆ ಮಾಡಿಸಲು ಕೊನೆಯ ದಿನಾಂಕ ಯಾವುದು? ಯಾವ ಬೆಳೆಗೆ ವಿಮೆ ಎಷ್ಟು ಕಟ್ಟಬೇಕು? ಎಂಬುದರ ಮಾಹಿತಿ ಮಾಹಿತಿ ಇದೆ.
ಮಳೆಗಾಲ ಪ್ರಾರಂಭವಾಗಿದ್ದು, ರೈತರು ಬಿತ್ತನೆ ಕಾರ್ಯ ಆರಂಭಿಸಿದ್ದು, ಭವಿಷ್ಯದಲ್ಲಿ ಪ್ರಕೃತಿ ವಿಪತ್ತಿನಿಂದ ತಲೆದೂರಬಹುದಾದ ಸಮಸ್ಯೆಗಳನ್ನು ಹಾಗೂ ಬೆಳೆ ವಿಮೆಯ ಅವಶ್ಯಕತೆಯನ್ನು ರೈತರಿಗೆ ಮನದಟ್ಟು ಮಾಡುವ ಮೂಲಕ ಬೆಳೆ ಸಾಲಗಳಿಗೆ ವಿಮೆ ಮಾಡಿಸಲು ರೈತರಲ್ಲಿ ಅರಿವು ಮೂಡಿಸಬೇಕೆಂದು ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಇಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಬೆಳೆ ಸಾಲ ನೀಡುವ ಬ್ಯಾಂಕ್ ಅಧಿಕಾರಿಗಳ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು ಜಿಲ್ಲೆಯಲ್ಲಿ ವಿವಿಧ ಬ್ಯಾಂಕ್ಗಳಿಂದ 3 ಲಕ್ಷ ರೈತರಿಗೆ ಒಟ್ಟು 3800 ಕೋಟಿ ಬೆಳೆ ಸಾಲವನ್ನು ನೀಡಲಾಗಿದ್ದು, ಅವರಿಗೆ ಬೆಳೆ ವಿಮೆ ಬಗ್ಗೆ ಅರಿವು ಮೂಡಿಸುವುದು ಪ್ರತಿಯೊಬ್ಬ ಬ್ಯಾಂಕ್ ಅಧಿಕಾರಿಯ ಕರ್ತವ್ಯ ಆಗಿರುತ್ತದೆ ಎಂದರು.
ಬೆಳೆ ವಿಮೆ ಕಂತು ಅತ್ಯಂತ ಚಿಕ್ಕ ಮೊತ್ತವಾಗಿದ್ದು, ಅದನ್ನು ತುಂಬುವುದರಿಂದ ಭವಿಷ್ಯದಲ್ಲಿ ತಲೆದೂರಬಹುದಾದ ಸಮಸ್ಯೆಗಳಿಗೆ ಸಹಾಯಕವಾಗಲಿದೆ. ಜುಲೈ 31 ರೊಳಗೆ ಜಿಲ್ಲೆಯ ಬೆಳೆ ವಿಮೆ ಸಾಲ ಪಡೆದಿರುವ 3 ಲಕ್ಷ ರೈತರಿಗೆ ಮನವೊಲಿಸುವ ಮೂಲಕ ಬೆಳೆ ವಿಮೆಯಲ್ಲಿ ಶೇಕಡ 100 ರ ರಷ್ಟು ಗುರಿ ಸಾಧಿಸಬೇಕು.
ಮುಂಗಾರು ಹಂಗಾಮಿನಲ್ಲಿ ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ (ವಿಮಾ) ಯೋಜನೆಯಡಿ ತಾಲ್ಲೂಕುವಾರು ಮುಖ್ಯ ಬೆಳೆಗಳ ಮತ್ತು ಇತರೆ ಬೆಳೆಗಳನ್ನು ಮತ್ತು ರೈತರು ಮಾಡಿರುವ ಬೆಳೆ ಸಾಲವನ್ನು ವಿಂಗಡಿಸಿ ಪ್ರತಿ ರೈತರನ್ನು ತಲುಪಲು ಅಗತ್ಯ ವ್ಯವಸ್ಥೆ ಮಾಡಿಕೊಂಡು ಮನವೊಲಿಸುವ ಕಾರ್ಯ ಮಾಡದಿದ್ದರೆ ಅಂತವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು.
ಸದರಿ ಯೋಜನೆಯಡಿ ಮುಖ್ಯ ಬೆಳೆಗಳನ್ನು ಜಿಲ್ಲೆಯ ಎಲ್ಲಾ ತಾಲ್ಲೂಕು ಮತ್ತು ಗ್ರಾಮ ಪಂಚಾಯತಿ ಮಟ್ಟಕ್ಕೆ ಹಾಗೂ ಉಳಿದ ಬೆಳೆಗಳನ್ನು ಹೋಬಳಿ ಮಟ್ಟದಲ್ಲಿ ಅನುಷ್ಠಾನಗೊಳಿಸಬೇಕೆಂದರು.
ಕಲಬುರಗಿ ಜಿಲ್ಲೆಯಲ್ಲಿ 2025-26 ರ ಮುಂಗಾರು ಹಂಗಾಮಿಗೆ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ ಅನುಷ್ಠಾನಗೊಳಿಸಲು ಇಪ್ಕೋ ಟೋಕಿಯೋ ಇನ್ಸುರೆನ್ಸ್ ಕಂಪನಿ.ಲಿ ಬೆಂಗಳೂರು ವಿಮಾ ಸಂಸ್ಥೆಯನ್ನು ನಿಗಧಿಪಡಿಸಲಾಗಿದೆ.
ರೈತರು ಹೆಚ್ಚಿನ ಮಾಹಿತಿಗಾಗಿ ಸಹಾಯವಾಣಿ ಸಂಖ್ಯೆ: 1800-200-5142 ತಮ್ಮ ತಾಲ್ಲೂಕಿನ ಹತ್ತಿರದ ರೈತ ಸಂಪರ್ಕ ಕೇಂದ್ರ ಅಥವಾ ಸಹಾಯಕ ಕೃಷಿ ನಿರ್ದೇಶಕರ ಕಚೇರಿಗೆ ಸಂಪರ್ಕಿಸಬಹುದಾಗಿದೆ.
ವಿವಿಧ ಮಾಧ್ಯಮಗಳ ಮೂಲಕ ರೈತರಲ್ಲಿ ಬೆಳೆವಿಮೆ ಮಾಡಿಸುವ ಕುರಿತಂತೆ ಜಾಗೃತಿ ಮೂಡಿಸಲು ಕೃಷಿ ಇಲಾಖೆ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಸೂಚಿಸಿದರು.
ಸಭೆಯಲ್ಲಿ ಕಲಬುರಗಿಯ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಸಮದ್ ಪಟೇಲ್ ಸೇರಿದಂತೆ ವಿವಿಧ ಬ್ಯಾಂಕ್ಗಳ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.
ಮೊಬೈಲ್ ನಲ್ಲಿ ವಿಮೆ ಹಣ ಎಷ್ಟು ಹಣ ಕಟ್ಟಬೇಕು ಹಾಗೂ ಎಷ್ಟು ಹಣ ಜಮೆಯಾಗುವುದು ಎಂಬುದನ್ನು ಚೆಕ್ ಮಾಡಲು ಈ
https://samrakshane.karnataka.gov.in/
ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಬೆಳೆ ವಿಮೆ ಚೆಕ್ ಮಾಡುವ ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ಮುಂದೆ ಮೇಲೆ ಕ್ಲಿಕ್ ಮಾಡಬೇಕು. ಇದಾದ ನಂತರ ಇನ್ನೊಂದು ಪೇಜ್ ತೆರೆದುಕೊಳ್ಳುತ್ತದೆ.
ಅಲ್ಲಿ Farmers ಕೆಳಗಡೆ ನಿಮಗೆ Premium Calculator ಕಾಣಿಸುತ್ತದೆ. ಅದರ ಮೇಲೆ ಕ್ಲಿಕ್ ಮಾಡಬೇಕು. ಆಗ ಇನ್ನೊಂದು ಪೇಜ್ ಓಪನ್ ಆಗುವುದು. ಅಲ್ಲಿ ನೀವು ನಿಮ್ಮ ಜಿಲ್ಲೆ ಆಯ್ಕೆ ಮಾಡಿಕೊಳ್ಳಬೇಕು. ತಾಲೂಕು ಆಯ್ಕೆ ಮಾಡಿಕೊಳ್ಳಬೇಕು. ಹೋಬಳಿ ಆಯ್ಕೆ ಮಾಡಿಕೊಳ್ಳಬೇಕು. ನಿಮ್ಮ ಊರು ಆಯ್ಕೆ ಮಾಡಿಕೊಳ್ಳಬೇಕು.
ಇದನ್ನೂ ಓದಿ : Panchatantra 2.0: ನಿಮ್ಮ ಗ್ರಾಪಂ ಮಾಹಿತಿ Mobileನಲ್ಲೇ ಚೆಕ್ ಮಾಡಿ
ಯಾವ ಬೆಳೆಗೆ ಎಷ್ಟು ಎಕರೆಗೆ ಬೆಳೆ ವಿಮೆ ಚೆಕ್ ಮಾಡಬೇಕೆಂದುಕೊಂಡಿದ್ದೀರೋ ಆ ಬೆಳೆ ಆಯ್ಕೆ ಮಾಡಿಕೊಳ್ಳಬೇಕು. ನಂತರ ನೀವು ಎಷ್ಟು ಎಕರೆಗೆ ಬೆಳೆ ವಿಮೆ ಮಾಡಿಸಬೇಕೆಂದುಕೊಂಡಿದ್ದೀರೋ ಎಕರೆ ನಮೂದಿಸಬೇಕು. ಗುಂಟೆಯಲ್ಲಿ ಜಮೀನಿದ್ದರೂ ಗುಂಟೆ ನಮೂಡಿಸಬೇಕು. ಇದಾದ ನಂತರ Show Premium ಮೇಲೆ ಕ್ಲಿಕ್ ಮಾಡಬೇಕು. ಆಗ ನೀವು ನಮೂದಿಸಿದ ಎಕರೆ, ಒಟ್ಟು ಎಷ್ಟು ಬೆಳೆ ವಿಮೆ ಪರಿಹಾರ ಜಮೆಯಾಗಬಹುದು ಎಂಬ ಮಾಹಿತಿ ಕಾಣಿಸುತ್ತದೆ. ಇದರೊಂದಿಗೆ ರಾಜ್ಯ, ಕೇಂದ್ರ ಹಾಗೂ ನಿಮ್ಮ ಪಾವತಿಸಿದ ಒಟ್ಟು ಬೆಳೆ ವಿಮೆ ಹಣ ಕಾಣಸುತ್ತದೆ. ಅದರ ಮುಂದುಗಡೆ ನೀವೆಷ್ಟು ಹಣ ಪಾವತಿಸೇಬಾಕುಗುತ್ತದೆ ಎಂಬ ಮಾಹಿತಿಯೂ ಕಾಣಿಸುತ್ತದೆ. ಪ್ರಾಕೃತಿಕ ವಿಕೋದಿಂದಾಗಿ ಬೆಳೆ ಹಾಳಾದರೆ ನಿಮಗೆಷ್ಟು ಬೆಳೆ ವಿಮೆ ಹಣ ಜಮೆಯಾಗಬಹುದು ಎಂಬ ಮಾಹಿತಿ ಸಹ ಕಾಣಿಸುತ್ತದೆ.





