ನೀವು ಯಾವ ಯಾವ ಬೆಳೆಗೆ ವಿಮೆ ಮಾಡಿಸಬಹುದು? ಇಲ್ಲಿದೆ ಮಾಹಿತಿ

Written by Ramlinganna

Published on:

bele vime calculation : ರೈತ ಬಾಂಧವರಿಗೆ ಗುಡ್ ನ್ಯೂಸ್. ಈಗ ನೀವು ಮನೆಯಲ್ಲಿಯೇ ಕುಳಿತು ನಿಮ್ಮ ಜಿಲ್ಲೆಯಲ್ಲಿ ಯಾವ ಯಾವ ಬೆಳೆಗೆ ವಿಮೆ ಮಾಡಿಸಬಹುದು. ಹಾಗೂ ವಿಮೆ ಮಾಡಿಸಲು ಕೊನೆಯ ದಿನಾಂಕ ಯಾವುದು ಎಂಬುದನ್ನು ತಿಳಿದುಕೊಳ್ಳಬಹುದು. ಅದು ಹೇಗೆ ಅಂದುಕೊಂಡಿದ್ದೀರಾ ಇಲ್ಲಿದೆ ನೋಡಿ ಮಾಹಿತಿ.

ಯಾವ ಯಾವ ಬೆಳೆಗೆ ವಿಮೆ ಮಾಡಿಸಬಹುದು? ಹೀಗೆ ಚೆಕ್ ಮಾಡಿ

ನೀವು ಯಾವ ಯಾವ ಬೆಳೆಗೆ ವಿಮೆ ಮಾಡಿಸಬಹುದು ಹಾಗೂ ಯಾವ ಬೆಳೆಗೆ ವಿಮೆ ಮಾಡಿಸಲು ಕೊನೆಯ ದಿನಾಂಕ ಯಾವುದು ಎಂಬುದನ್ನು ಚೆಕ್ ಮಾಡಲು ಈ

https://www.samrakshane.karnataka.gov.in/

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮಗೆ ಬೆಳೆ ವಿಮೆ ಪೇಜ್ (ಸಂರಕ್ಷಣೆ)l ತೆರೆದುಕೊಳ್ಳುತ್ತದೆ. ಅಲ್ಲಿ ನೀವು ನಿಮ್ಮ ಜಿಲ್ಲೆಯನ್ನು ಆಯ್ಕೆಮಾಡಿಕೊಂಡರೆ ಸಾಕು, ನೀವು ನಿಮ್ಮ ಜಿಲ್ಲೆಯಲ್ಲಿ ಯಾವ ಯಾವ ಬೆಳೆಗೆ ವಿಮೆ ಮಾಡಿಸಬಹುದು ಎಂಬ ಪಟ್ಟಿ  ಕಾಣಿಸುತ್ತದೆ. ಅದು ಮುಂದೆ ಕಕೊನೆಯ ದಿನಾಂಕ ಹಾಗೂ ಇನ್ನೂ ಎಷ್ಟು ದಿನ ವಿಮೆ ಮಾಡಿಸಲು ಬಾಕಿ ಇದೆ ಎಂಬ ಮಾಹಿತಿ ಕಾಣಿಸುತ್ತದೆ.

ಮುಂಗಾರು ಹಂಗಾಮಿಗೆ ಬೆಳೆ ವಿಮೆ ಮಾಡಿಸಲು ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ. ಹೌದು, ಬೆಳೆವಿಮೆ ನೋಂದಣಿಗೆ ಜುಲೈ 31 ಕೊನೆಯ ದಿನವಾಗಿದೆ. ಹಾಗಾದರೆ ಯಾವ ಯಾವ ಬೆಳೆಗಳಿಗೆ ವಿಮೆ ಮಾಡಿಸಬಹುದು? ಬೆಳೆ ವಿಮೆ ಮಾಡಿಸಲುಕೊನೆಯ ದಿನಾಂಕ ಯಾವುದು ಹಾಗೂ ಯಾವ ಬೆಳೆಗೆ ಎಷ್ಟು ವಿಮೆ ಹಣ ಪಾವತಿಸಬೇಕು ಎಂಬುದರ ಮಾಹಿತಿ ಇಲ್ಲಿದೆ.

bele vime calculation  ಬೆಳೆ ವಿಮೆ ಮಾಡಿಸಲು ಅರ್ಜಿ ಆಹ್ವಾನ

2025-2026 ರ ಮುಂಗಾರು ಹಂಗಾಮಿನಲ್ಲಿ ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ ಜಿಲ್ಲೆಯಲ್ಲಿ ಬೆಳೆದಿರುವ ಕೆಳಕಂಡ ಬೆಳೆಗಳಿಗೆ ರೈತರು ತಮ್ಮ ಹತ್ತಿರದ ಗ್ರಾಮ್-ಒನ್, ಸಿ.ಎಸ್.ಸಿ ಕೇಂದ್ರ, ಬ್ಯಾಂಕ್ ಅಥವಾ ಪೋಸ್ಟ್ ಆಫೀಸ್‌ಗಳಲ್ಲಿ ನೋಂದಣಿ ಮಾಡಿಸಿಕೊಳ್ಳಬೇಕೆಂದು ಕಲಬುರಗಿ ಜಂಟಿ ನಿರ್ದೇಶಕರಾದ ಸಮದ್ ಪಟೇಲ್ ಅವರು ತಿಳಿಸಿದ್ದಾರೆ.

ಬೆಳೆವಾರು ರೈತರು ಪಾವತಿಸಬೇಕಾದ ವಂತಿಕೆ ವಿವರ ಇಂತಿದೆ. ಹೆಸರು (ಮಳೆಆಶ್ರಿತ) ಪ್ರತಿ ಎಕರೆಗೆ 269.13 ರೂ. ವಂತಿಕೆ,  ಉದ್ದು (ಮಳೆಆಶ್ರಿತ) ಪ್ರತಿ ಎಕರೆಗೆ ರೂ. 265.08 ವಂತಿಕೆ, ತೊಗರಿ (ಮಳೆಆಶ್ರಿತ) ಪ್ರತಿ ಎಕರೆಗೆ 388.51 ರೂ. ವಂತಿಕೆ, ತೊಗರಿ (ನೀರಾವರಿ) ಪ್ರತಿ ಎಕರೆಗೆ ರೂ. 406.72 ವಂತಿಕೆ, ಹತ್ತಿ (ಮಳೆಆಶ್ರಿತ) ಪ್ರತಿ ಎಕರೆಗೆ ರೂ. 865.75 ವಂತಿಕೆ, ಹತ್ತಿ (ನೀರಾವರಿ) ಪ್ರತಿ ಎಕರೆಗೆ ರೂ. 1492.33 ವಂತಿಕೆ ಹಾಗೂ ಸೂಯಾಅವರೆ (ಮಳೆಆಶ್ರಿತ) ಪ್ರತಿ ಎಕರೆಗೆ ರೂ. 331.85 ವಂತಿಕೆಯನ್ನು ರೈತರು ಪಾವತಿಸಬೇಕು. ರೈತರು ನೋಂದಣಿ ಮಾಡಿಕೊಳ್ಳಲು 2025ರ ಜುಲೈ 31 ಕೊನೆಯ ದಿನವಾಗಿದೆ.

ಇದನ್ನೂಓದಿ ನಿಮ್ಮ ಆಧಾರ್ ಕಾರ್ಡ್ ಎಲ್ಲೆಲ್ಲಿ ಬಳಕೆಯಾಗಿದೆ? ಇಲ್ಲೇ ಚೆಕ್ ಮಾಡಿ

ಕಲಬುರಗಿ ಜಿಲ್ಲೆಯಲ್ಲಿ ಮುಂಗಾರು ಬಿತ್ತನೆ ಭರದಿಂದ ಸಾಗಿದ್ದು, ಅತೀವೃಷ್ಟಿ, ಅನಾವೃಷ್ಟಿ, ಅಕಾಲೀಕ ಮಳೆಯಂತಹ ಪ್ರಕೃತಿ ವಿಕೋಪಗಳು ಹಾಗೂ ಯಾವುದೇ ಹಂತದಲ್ಲಿ ಬೆಳೆನಾಶವಾಗಬಹುದು. ಆದ್ದರಿಂದ ರೈತಭಾಂದವರು ಬಿತ್ತನೆ ಕಾರ್ಯಕೈಗೊಳ್ಳುವುದಷ್ಟೇ ಅಲ್ಲದೆ, ಬಿತ್ತಿದ ಬೆಳೆಯ ಕ್ಷೇತ್ರವನ್ನು ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ ವ್ಯಾಪ್ತಿಗೆ ನೊಂದಾಯಿಸುವುದು ಸಹ ಪ್ರಮುಖವಾಗಿದೆ.

ಕಳೆದ 3 ಮೂರು ವರ್ಷಗಳಲ್ಲಿ ಕಲಬುರಗಿ ಜಿಲ್ಲೆಯಲ್ಲಿ 561082 ಲಕ್ಷ ರೈತರು ಬೆಳೆವಿಮೆ ನೋಂದಣಿ ಮಾಡಿದ್ದು, 59.39 ಕೋಟಿ ರೈತರ ವಂತಿಕೆ ಪಾವತಿ ಮಾಡಿರುತ್ತಾರೆ ಹಾಗೂ 954.61 ಕೋಟಿ ಪರಿಹಾರಧನವನ್ನು ರೈತರ ಖಾತೆಗೆ ಪಾವತಿಸಲಾಗಿದೆ. ಕಳೆದ ಮೂರು ವರ್ಷದ ಮಾಹಿತಿ ನೊಡಿದಾಗ ರೈತರಿಗೆ ಬೆಳೆವಿಮೆ ಯೋಜನೆ ಬಹಳ ಅನುಕೂಲಕರವಾಗಿದೆ. ಕಲಬುರಗಿ ಜಿಲ್ಲೆಯಲ್ಲಿ ಶೇ 90 ರಷ್ಟು ಪ್ರದೇಶ ಮಳೆಯಾಶ್ರಿತವಾಗಿರುವುದರಿಂದ ಅತೀವೃಷ್ಟಿ ಹಾಗೂ ಅನಾವೃಷ್ಟಿಗೆ ಸತತವಾಗಿ ಬೆಳೆಗಳು ತುತ್ತಾಗಿರುತ್ತವೆ ಎಂದು ಅವರು ತಿಳಿಸಿದ್ದಾರೆ.

Leave a Comment