ಡಿ. 14 ರಂದು ಬಿಡಿಎ ಫ್ಲ್ಯಾಟ್ ಮೇಳ: ದರ ಎಷ್ಟಿದೆ? ಇಲ್ಲಿದೆ ಮಾಹಿತಿ

Written by Ramlinganna

Published on:

BDA Flats for sale : ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಮೈಸೂರು ರಸ್ತೆಯಲ್ಲಿರುವ ಕಣಿಮಿಕೆಯ ಬಡಾವಣೆಯಲ್ಲಿ ಡಿಸೆಂಬರ್14 ರಂದು ಫ್ಲ್ಯಾಟ್ ಗಳ ಮೇಳ ಆಯೋಜಿಸಿದೆ..

ಹೌದು, ಕಣಿಮಿಣಿಕೆ ಮತ್ತು ತಿಪ್ಪಸಂದ್ರ ಯೋಜನೆಗಳಲ್ಲಿ ಲಭ್ಯವಿರುವ 2 ಮತ್ತು 3 ಬಿಎಚ್ಕೆ ಫ್ಲ್ಯಾಟ್ ಗಳನ್ನು ಹಂಚಿಕೆಮಾಡಲು ಮೇಳವನ್ನು ಆಯೋಜಿಸಲಾಗಿದೆ. ಬೆಳಗ್ಗೆ 9 ರಿಂದ 5 ರವರೆಗೆ ಮೇಳ ನಡೆಯಲಿದೆ. ಕಣಿಮಿಣಿಕೆಯಲ್ಲಿ ಖಾಲಿಯಿರುವ ಫ್ಲ್ಯಾಟ್ ಗಳನ್ನು ಆಸಕ್ತರು  ಖರೀದಿಸಬಹುದು  ಎಂದು ಬಿಡಿಎ ಅಧಿಕಾರಿಗಳು ತಿಳಿಸಿದ್ದಾರೆ.

ಕಣಿಮಿಣಿಕೆ ವಸತಿ ಯೋಜನೆಯು 1, 2, 3, 4 ಹಾಗೂ 5 ನೇ ಹಂತವನ್ನು ಒಳಗೊಂಡಿದೆ. ಫ್ಲ್ಯಾಟ್ ಖರೀದಿಸಲು ಬಯಸುವವರು ಠೇವಣಿ ಮೊತ್ತವನ್ನು ಡಿಡಿ ಅಥವಾ ಆನ್ಲೈನ್ ಮೂಲಕ ಪಾವತಿಸಿ ತಾತ್ಕಾಲಿಕವಾದ ಹಂಚಿಕೆ ಪತ್ರವನ್ನು ಪಡೆಯಬಹುದು. ಸ್ಥಳದಲ್ಲೇ ವಿವಿಧ ಬ್ಯಾಂಕ್ ಗಳು  ಫಲಾನುಭವಿಗಳಿಗೆ ಸಾಲ ಸೌಲಭ್ಯ ನೀಡಲಾಗುವುದು. ಗ್ರಾಹಕರು ಖಾಲಿಯಿರುವ ಫ್ಲ್ಯಾಟ್ ಗಳನ್ನು ಖರೀದಿಸಬಹುದು.

ಫ್ಲ್ಯಾಟ್ ನ ಮಾರಾಟಾ ಮೊತ್ತದ ಮೇಲೆ ಮುಂಗಡವಾಗಿ ಶೇ.  ರಷ್ಟು ನಿರ್ವಹಣಾ ಶುಲ್ಕ ಪಡೆಯಬಹುದು. ಬೆಂಗಳೂರು ಮೈಸೂರುಹೆದ್ದಾರಿಯಿಂದ 1 ಕಿ.ಮೀ ಮತ್ತು ಚಲ್ಲಘಟ್ಟ ನಮ್ಮ ಮೆಟ್ರೋ ನಿಲ್ದಾಣದಿಂದ 3 ಕಿ.ಮೀ ವರೆಗೆ ದೂರವಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಇದನ್ನೂಓದಿ ಭಾಗ್ಯಲಕ್ಷ್ಮೀ ಯೋಜನೆ ಹಣ ಜಮೆಯಾಗಿಲ್ಲವೇ? ಈ ದಾಖಲೆ ಸಲ್ಲಿಸಿ

ಕಣಿಮಿಣಿಕೆ ವಸತಿ ಯೋಜನೆಯು 50 ಎಕರೆ ಪ್ರದೇಶದಲ್ಲಿ ಹಸಿರು ವಾತಾವರಣದಲ್ಲಿ ನಿರ್ಮಾಣಗೊಂಡಿದೆ. ಆಧುನಿಕ ತಂತ್ರಜ್ಞಾನವನ್ನು ಬಳಕೆ ಮಾಡಿಕೊಂಡು ಇಲ್ಲಿ ಮನೆ ಅಥವಾ ಫ್ಲ್ಯಾಟ್ ನಿರ್ಮಾಣ ಮಾಡಲಾಗಿದೆ. ಮಂಚನಬೆಲೆ ಡ್ಯಾಂನಿಂದ ಈ ಪ್ರದೇಶಕ್ಕೆ ಶಾಶ್ವತ ನೀರು ಸೌಕರ್ಯವಿದೆ.  ಜುಡಿಶಿಯಲ್ ಲೇಔಟ್ ಮೂಲಕ ಬೆಂಗಳೂರು ಮೈಸೂರು ಹೆದ್ದಾರಿಯನ್ನು ತಲುಪಬಹುದು.  ಹತ್ತಿರದಲ್ಲೇ ನಾರಾಯಣ ಯೂನಿರ್ವಿಸಿಟಿ, ಕ್ರೈಸ್ಟ್ ಯೂನಿವರ್ಸಿಟಿ, ದೆಹಲಿ ಪಬ್ಲಿಕ್ ಸ್ಕೂಲ್ ಇದೆ.

BDA Flats for sale ಅರ್ಜಿ ಸಲ್ಲಿಸುವುದು ಹೇಗೆ?

ಫ್ಲ್ಯಾಟ್  ಹಂಚಿಕೆಯನ್ನು ಮೊದಲು ಬಂದವರಿಗೆ ಆದ್ಯತೆ ಮೇಲೆ ಹಂಚಿಕೆ ಮಾಡಲಾಗುವುದು. ಫ್ಲ್ಯಾಟ್ ಗಳನ್ನು ಆನ್ಲೈನ್ ಮೂಲಕ ಅಥವಾ ಅರ್ಜಿಯನ್ನು ಬಿಡಿಎ ಕಚೇರಿಯಲ್ಲಿ ಸಲ್ಲಿಸುವ ಮೂಲಕ ನಿಮ್ಮ ಆಯ್ಕೆಯ ಬಿಡಿಎ ಫ್ಲ್ಯಾಟ್ ಪಡೆಯಬಹುದು. ದಿಕ್ಕು ಹಾಗೂ ಮಹಡಿವಾರು ಫ್ಲ್ಯಾಟ್ ನ ಮೊತ್ತದಲ್ಲಿಶೇ. 0.5 ರಷ್ಟು ಏರಿಕೆಯಾಗುತ್ತದೆ ಎಂದು ಬಿಡಿಎ  ಅಧಿಕಾರಿಗಳು ತಿಳಿಸಿದ್ದಾರೆ.

ಫ್ಲ್ಯಾಟ್ ದರ ಎಷ್ಟಿದೆ ನಿಮಗೆ ಗೊತ್ತೇ?

ಕಣಿಮಿಣಿಕೆ ಹಂತ 2 (2ಬಿಹೆಚ್ಕೆ) 25 ಲಕ್ಷ ರೂಪಾಯಿ.

ಕಣಿಮಿಣಿಕೆ ಹಂತ 3 (2 ಬಿಹೆಚ್ಕೆ) 30 ಲಕ್ಷ ರೂಪಾಯಿ

ಕಣಿಮಿಣಿಕೆ ಹಂತ 4 (3ಬಿಹೆಚ್ಕೆ) 40 ಲಕ್ಷ ರೂಪಾಯಿ

ಕಣಿಮಿಣಿಕೆ ಹಂತ 5 (3ಬಿಹೆಚ್ಕೆ) 64 ಲಕ್ಷ ರೂಪಾಯಿತಿ

ತಿಪ್ಪಸಂದ್ರ (1ಬಿಹೆಚ್ಕೆ) 14.5 ಲಕ್ಷ ರೂಪಾಯಿ

ಕೋನದಾಸಪುರ (2ಬಿಹೆಚ್ಕೆ) 50 ಲಕ್ಷ ರೂಪಾಯಿ

ಕಣಿಮಿಣಿಕೆ ವಸತಿ ಯೋಜನೆ ಮಾಹಿತಿಗಾಗಿ 6362512234/ 8747877469 ಸಂಖ್ಯೆಗೆ ಮತ್ತು ತಿಪ್ಪಸಂದ್ರ ವಸತಿ ಯೋಜನೆಯ ಮಾಹಿತಿಗಾಗಿ 7795869883 ಸಂಖ್ಯೆಗೆ ಕರೆ ಮಾಡಬಹುದು.

Leave a Comment