ಮೇ ತಿಂಗಳಲ್ಲಿ 12 ದಿನ ಬ್ಯಾಂಕ್ ರಜೆ…. ಇಲ್ಲಿದೆ ಮಾಹಿತಿ

Written by By: janajagran

Updated on:

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಕ್ಯಾಲೆಂಡರ್ ಪಟ್ಟಿಯ ಪ್ರಕಾರ ದೇಶಾದ್ಯಂತ ಇರುವ ಖಾಸಗಿ ಅಥವಾ ಸಾರ್ವಜನಿಕ ವಲಯದ ಎಲ್ಲಾ ಬ್ಯಾಂಕುಗಳು ಈ ತಿಂಗಳಲ್ಲಿ (Bank holidays 2021) 12 ದಿನ ರಜೆ ಇರಲಿದೆ.

ಹೌದು ಈ ತಿಂಗಳ  ಎರಡನೇ ಶನಿವಾರ-ಭಾನುವಾರ ಮತ್ತು ನಾಲ್ಕನೇ ಶನಿವಾರ-ಭಾನುವಾರದಂದು ಬ್ಯಾಂಕುಗಳು ರಜೆಗಳೊಂದಿಗೆ ಒಟ್ಟು 12 ದಿನ ಬ್ಯಾಂಕ್ ಕ್ಲೋಸ್ ಆಗಿರಲಿವೆ. ಬ್ಯಾಂಕುಗಳ ಕೆಲಸವಿದ್ದರೆ ಆದಷ್ಟು ಬೇಗ ಮುಗಿಸಿಕೊಳ್ಳಿ. ಕೋವಿಡ್-19 ತಡೆಯುವುದಕ್ಕಾಗಿ ಹೇರಲಾದ ಜನತಾ ಕರ್ಫ್ಯೂ ಹೊಸ ಮಾರ್ಗಸೂಚಿಗಳ ಪ್ರಕಾರ ಬ್ಯಾಂಕುಗಳು ಬೆಳಿಗ್ಗೆ 10 ರಿಂದ ಮಧ್ಯಾಹ್ನ 2 ರವರೆಗೆ ಕಾರ್ಯನಿರ್ವಹಿಸುತ್ತವೆ.

Bank holidays 2021 ಯಾವ ಯಾವ ದಿನಾಂಕದಂದು ಬ್ಯಾಂಕುಗಳು ಕ್ಲೋಸ್ ಆಗಿರಲಿವೆ. ಇಲ್ಲಿದೆ ಪಟ್ಟಿ.

ಮೇ 1 ಮೇ ಶನಿವಾರ ಕಾರ್ಮಿಕ ದಿನಾಚರಣೆ, ಮೇ 2 ರಂದು  ಭಾನುವಾರ, ಮೇ 7 ರಂದು  ಶುಕ್ರವಾರ ಜುಮಾತ್-ಉಲ್-ವಿದಾ, ಮೇ 8ರಂದು ಎರಡನೇ ಶನಿವಾರ ಮೇ 9 ರಂದು ಭಾನುವಾರ. ಮೇ 10 ಸೋಮವಾರ ಶಾಬ್-ಎ-ಖಾದ್ರ್ ಮೇ. 13 ರಂದು ಗುರುವಾರ ಈದ್ ಉಲ್ ಫಿತರ್ ಮೇ. 14 ರಂದು ಶುಕ್ರವಾರ ಪರಶುರಾಮ್ ಜಯಂತಿ, ಮೇ 16 ರಂದು  ಭಾನುವಾರ ಮೇ. 22 ರಂದು ನಾಲ್ಕನೇ ಶನಿವಾರ ಮೇ 23 ರಂದು  ಭಾನುವಾರ, ಮೇ 26 ರಂದು ಬುಧವಾರ ಬುದ್ಧ ಪೂರ್ಣಿಮಾ ಮೇ 30 ರಂದು ಭಾನುವಾರ.

ಇದನ್ನೂ ಓದಿ ಅನ್ನಭಾಗ್ಯದ ಹಣ ನಿಮಗೆಷ್ಚು ಜಮೆ ಆಗಿದೆ? ಚೆಕ್ ಮಾಡಿ

ಅನ್ನಭಾಗ್ಯ ಯೋಜನೆಯಡಿಯಲ್ಲಿ ಪಡಿತರ ಚೀಟಿದಾರರ ಕುಟುಂಬಗಳಿಗೆ ನೀಡಲಾಗುವು 5 ಕೆ.ಜಿ ಅಕ್ಕಿ ಹೆಚ್ಚುವರಿ ಬದಲಾಗಿ ಡಿಬಿಟಿ ಮೂಲಕ ನಗದು ಹಣವನ್ನು ಪಾವತಿ ಮಾಡಲಾಗುತ್ತಿದೆ. ನಿಮಗೆಷ್ಟು ಜಮೆಯಾಗಿದೆ? ಮೊಬೈಲ್ ನಲ್ಲೇ ಚೆಕ್ ಮಾಡಬಹುದು.

ಅನ್ನಭಾಗ್ಯ ಯೋಜನೆಯಡಿಯಲ್ಲಿ ನೋಂದಣಿ ಮಾಡಿಸಿದ ಫಲಾನುಭವಿಗಳ ಖಾತೆಗೆ ಕಳೆದ ಐದು ಕಂತುಗಳಲ್ಲಿ ಹಣ ಜಮೆ ಮಾಡಲಾಗುತ್ತಿದೆ. ರೇಶನ್ ಕಾರ್ಡ್ ನಲ್ಲಿ ಕುಟುಂಬದ ಮುಖ್ಯಸ್ಥರೆಂದು ನಮೂದಾಗಿರುವ ಮುಖ್ಯಸ್ಥರ ಖಾತೆಗೆ ಅನ್ನಭಾಗ್ಯ ಹಣ ಜಮೆ ಮಾಡಲಾಗುತ್ತಿದೆ.

ಅನ್ನಭಾಗ್ಯ ಯೋಜನೆಯಡಿಯಲ್ಲಿ ನೋಂದಣಿ ಮಾಡಿಸಿಕೊಂಡ ಫಲಾನುಭವಿಗಳು ತಮ್ಮ ಯಾವ ಖಾತೆಗೆ ಹಣ ಜಮೆಯಾಗಿದೆ ಎಂಬುದನ್ನು ಚೆಕ್ ಮಾಡಲು ಈ

https://ahara.kar.nic.in/lpg/

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು.  ಆಗ ನಿಮಗೆ ರೇಶನ್ ಕಾರ್ಡ್ ನಮೂದಿಸಿ ಸ್ಟೇಟಸ್ ಚೆಕ್ ಮಾಡುವ ಲಿಂಕ್ ಗಳು ಕಾಣಿಸುತ್ತವೆ. ನೀವು ಯಾವ ಜಿಲ್ಲೆಯವರಾಗಿದ್ದೀರೋ ಆ ಜಿಲ್ಲೆಯ ಮೇಲ್ಗಡೆ ಇರುವ ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ನಂತರ ಇನ್ನೊಂದು ಪೇಜ್ ಓಪನ್ ಆಗುತ್ತದೆ. ಅಲ್ಲಿ ನೀವು ಸ್ಟೇಟಸ್ ಆಫ್ ಡಿಬಿಟಿ ನೇರ ನಗದು ವರ್ಗಾವಣೆಯ ಸ್ಥಿತಿ ಪೇಜ್ ಕಾಣಿಸುತ್ತದೆ. ಅದ ಮೇಲೆ ಕ್ಲಿಕ್ ಮಾಡಿದ ನಂತರ   ತೆರೆದುಕೊಳ್ಳುವ ಪೇಜ್ ನಲ್ಲಿ ತಿಂಗಳು ಆಯ್ಕೆ ಮಾಡಿಕೊಳ್ಳಬೇಕು.  ನಿಮ್ಮ ರೇಶನ್ ಕಾರ್ಡ್ ನಮೂದಿಸಿ ಅಲ್ಲಿ ಕಾಣುವ ಕ್ಯಾಪ್ಚ್ಯಾ ಕೋಡ್ ಹಾಕಿ  ಗೋ ಮೇಲೆ ಕ್ಲಿಕ್ ಮಾಡಿ ಸ್ಟೇಟಸ್ ಚೆಕ್ ಮಾಡಬಹುದು.

ಅಲ್ಲಿ ನಿಮ್ಮ ಹೆಸರು ಕಾಣಿಸುತ್ತದೆ. ನಂತರ ನಿಮ್ಮ ಕುಟುಂಬದಲ್ಲಿ ಎಷ್ಟು ಜನ ಸದಸ್ಯರಿದ್ದಾರೆ. ಅವರ ಎಷ್ಟು ಹಣ ಜಮೆಯಾಗಿದೆ ಎಂಬ ಮಾಹಿತಿ ಕಾಣಿಸುತ್ತದೆ.

 

Leave a Comment