ಆಧಾರ್ ಕಾರ್ಡಿಗೆ ಬ್ಯಾಂಕ್ ಅಕೌಂಟ್ ಲಿಂಕ್ ಆಗಿದೆಯೇ ? ಇಲ್ಲಿ ಚೆಕ್ ಮಾಡಿ

Written by Ramlinganna

Published on:

Bank adharcard link status :ರೈತರು, ಸಾರ್ವಜನಿಕರು ತಮ್ಮ ಬ್ಯಾಂಕ್ ಅಕೌಂಟ್ ಗೆ ಹಾಗೂ ಆಧಾರ್ ಕಾರ್ಡ್ ಲಿಂಕ್ ಆಗಿದೆಯೋ ಇಲ್ಲವೋ ಎಂಬುದನ್ನು ಮೊಬೈಲ್ ನಲ್ಲೇ ಚೆಕ್ ಮಾಡಬಹುದು.

ಹೌದು, ತಮ್ಮ ಬಳಿ ಮೊಬೈಲ್ ಇದ್ದರೆ ಸಾಕು, ಇಲ್ಲಿ ನೀಡಲಾದ ಮಾಹಿತಿಯಂತೆ ಕೇವಲ ಒಂದೇ ನಿಮಿಷದಲ್ಲಿ ಆಧಾರ್ ಕಾರ್ಡ್ ಹಾಗೂ ಬ್ಯಾಂಕ್ ಅಕೌಂಟ್ ಲಿಂಕ್ ಆಗಿದೆಯೋ ಇಲ್ಲವೋ ಎಂಬುದನ್ನು ಚೆಕ್ ಮಾಡಬಹುದು. ಅದು ಹೇಗೆ ಅಂದುಕೊಂಡಿದ್ದೀರಾ ಇಲ್ಲಿದೆ ನೋಡಿ ಮಾಹಿತಿ.

Bank adharcard link status ಆಧಾರ್ ಬ್ಯಾಂಕ್ ಅಕೌಂಟ್ ಲಿಂಕ್ ಸ್ಟೇಟಸ್ ಚೆಕ್ ಮಾಡುವುದು ಹೇಗೆ ?

ಆಧಾರ್ ಕಾರ್ಡಿಗೆ ಬ್ಯಾಂಕ್ ಅಕೌಂಟ್ ಲಿಂಕ್ ಆಗಿದೆಯೋ ಇಲ್ಲವೋ ಎಂಬುದನ್ನು ಚೆಕ್ ಮಾಡಲು ಈ

https://myaadhaar.uidai.gov.in/

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು.  ನಂತರ ಅಲ್ಲಿ ಕಾಣುವ Login ಮೇಲೆ ಕ್ಲಿಕ್ ಮಾಡಬೇಕಾಗುತ್ತದೆ. ಇದಾದ ನಂತರ ಇನ್ನೊಂದು ಪೇಜ್ ತೆರೆದುಕೊಳ್ಳುತ್ತದೆ.  ಅಲ್ಲಿ ನೀವು ನಿಮ್ಮ ಆಧಾರ್ ಕಾರ್ಡ್ ನಂಬರ್ ನಮೂದಿಸಬೇಕು. ನಂತರ ಅಲ್ಲಿ ಕಾಮುವ ಕ್ಯಾಪ್ಚ್ಯಾ ಕೋಡ್ ನಮೂದಿಸಿ ಲಾಗಿನ್ ವಿತ್ ಓಟಿಪಿ ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮ್ಮ ಮೊಬೈಲಿಗೆ ಒಂದು ಓಟಿಪಿ ಬರುತ್ತದೆ. ಆ ಓಟಿಪಿಯನ್ನು ನಮೂದಿಸಿದ ನಂತರ ಲಾಗಿನ್ ಮೇಲೆ ಕ್ಲಿಕ್ ಮಾಡಬೇಕು. ಇದಾದ ನಂತರ ಇನ್ನೊಂದು ಪೇಜ್ ಓಪನ್ ಆಗುತ್ತದೆ. ಅಲ್ಲಿ ಕಾಣುವ ಬ್ಯಾಂಕ್ ಸೀಡಿಂಗ್ ಸ್ಥಿತಿ (Bank seeding Status) ಶೀರ್ಶಿಕೆಯ ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮ್ಮ ಯಾವ ಬ್ಯಾಂಕ್ ಕಾತೆಯು ಆಧಾರ್ ಸಂಖ್ಯೆಯೊಂದಿಗೆ ಲಿಂಗ್ ಆಗಿದೆಯ ಎಂಬ ಮಾಹಿತಿ ತಿಳಿಯುತ್ತದೆ.

ಇದನ್ನೂ ಓದಿ ಪಿಎಂ ಕಿಸಾನ್ 22ನೇ ಕಂತಿನ ಹಣ ಈ ಹೊಸ ಪಟ್ಟಿಯಲ್ಲಿರುವ ರೈತರ ಖಾತೆಗೆ ಜಮೆ

ಬ್ಯಾಂಕ್ ಖಾತೆಯೊಂದಿಗೆ ಆಧಾರ್ ಬ್ಯಾಂಕ್ ಲಿಂಕ್ ಸ್ಟೇಟಸ್ ಸಕ್ರೀಯ ಅಥವಾ ನಿಷ್ಕ್ರೀಯ ಎಂದು ಕಾಣಿಸುತ್ತದೆ. ಇದಲ್ಲದೆ ಬ್ಯಾಂಕ್ ಸೀಡಿಂಗ್ ಮಾಹಿತಿ ಕಾಣಿಸುತ್ತದೆ.

ಮೊದಲನೆಯದು ಆಧಾರ್ ಸಂಖ್ಯೆಯ ಕೊನೆಯ ನಾಲ್ಕು ಅಂಕಿಗಳು, ಅದರಲ್ಲಿ ಉಳಿದ ಅಂಕೆಗಳನ್ನು ಮರೆಮಾಡಲಾಗುತ್ತದೆ. ಬ್ಯಾಂಕ್ ಹೆಸರು, ಬ್ಯಾಂಕ್ ಸೀಡಿಂಗ್ ಸ್ಟೇಟಸ್ ಮಾಹಿತಿ ಕಾಣಿಸುತ್ತದೆ.

ಬ್ಯಾಂಕ್ ಆಧಾರ್ ಲಿಂಕ್ ಏಕೆ ಮಾಡಿಸಬೇಕು ?

ರೈತರು ಸರ್ಕಾರದ ಸೌಲಭ್ಯ ಪಡೆಯಬೇಕಾದರೆ ಅಂದರೆ ವಿವಿಧ ಯೋಜನೆಗಳಿಂದ ಸಬ್ಸಿಡಿ ಪಡೆಯಬೇಕಾದರೆ ಬ್ಯಾಂಕ್ ಆಧಾರ್ ಕಾರ್ಡ್ ಸೀಡಿಂಗ್ ಕಡ್ಡಾಯವಾಗಿದೆ. ಒಂದು ವೇಳೆ ನೀವು ಬ್ಯಾಂಕ್ ಮತ್ತು ಆಧಾರ್ ಕಾರ್ಡ್ ಸೀಡಿಂಗ್ ಮಾಡಿಸದಿದ್ದರೆ ನೀವು ಎಲ್ಲಾ ಅರ್ಹತೆ ಹೊಂದಿದ್ದರೂ ಸಹ ನಿಮಗೆ ಸರ್ಕಾರದ ಸಬ್ಸಿಡಿ ಹಣಗಳು ಸಿಗುವುದಿಲ್ಲ.

ಬೆಳೆ ಹಾನಿ ಪರಿಹಾರ, ಬೆಳೆ ವಿಮೆ ಹಣ, ಪಿಎಂ ಕಿಸಾನ್ ಹಣ ಹಾಗೂ ಸರ್ಕಾರದ ಯಂತ್ರೋಪಕರಣಗಳ ಸಬ್ಸಿಡಿ ಹಣ ಪಡೆಯಲು ಆಧಾರ್ ಸೀಡ್ ಮಾಡಿಸುವುದು ಕಡ್ಡಾಯವಾಗಿದೆ.

ಆಧಾರ್ ಸೀಡ್ ಎಲ್ಲಿ ಮಾಡಿಸಬೇಕು ?

ರೈತರು ಸರ್ಕಾರದ ಸಬ್ಸಿಡಿ ಹಣ ತಮ್ಮ ಖಾತೆಗೆ ಜಮೆಯಾಗಬೇಕಾದರೆ ಆಧಾರ್ ಸೀಡ್ ಮಾಡಿಸಬೇಕು. ರೈತರು ಯಾವ ಬ್ಯಾಂಕ್ ಶಾಖೆಯಲ್ಲಿ ಅಕೌಂಟ್ ಹೊಂದಿರುತ್ತಾರೋ ಅದೇ ಬ್ಯಾಂಕ್ ಶಾಖೆಗೆ ಹೋಗಬೇಕು. ನಿಮ್ಮ ಆಧಾರ್ ಕಾರ್ಡ್ ಇರಬೇಕು. ಬ್ಯಾಂಕ್ ಆಧಾರ್ ಸೀಡ್ ಅರ್ಜಿ ಪಡೆದು ಅಲ್ಲಿ ಕೇಳಲಾದ ಮಾಹಿತಿಗಳನ್ನು ಸರಿಯಾಗಿ ಭರ್ತಿ ಮಾಡಿ ಬ್ಯಾಂಕ್ ಅಥಿಕಾರಿಗಳಿಗೆ ಸಲ್ಲಿಸಬೇಕು. ಅವರು ಬ್ಯಾಂಕ್ ಖಾತೆಗೆ ಆಧಾರ್ ಸೀಡ್ ಮಾಡಿಸುತ್ತಾರೆ. ಇದು ಮಾಡಿದ ನಂತರವೇ ನಿಮ್ಮ ಖಾತೆಗೆ ಸರ್ಕಾರದ ಸಬ್ಸಿಡಿ ಹಣ ಜಮೆಯಾಗುತ್ತದೆ.

ಒಂದು ವೇಳೆ ನೀವು ಆಧಾರ್ ಸೀಡ್ ಮಾಡಿಸಿಲ್ಲವಾದರೆ ಕೂಡಲೇ ನಿಮ್ಮ ಹತ್ತಿರದ ಬ್ಯಾಂಕ್ ಶಾಖೆಗೆ ಹೋಗಿ ಆಧಾರ್ ಸೀಡ್ ಮಾಡಿಸಿಕೊಳ್ಳಬಹುದು.

Leave a Comment