Bagar hokum land sanctioned: ಬಗರ್ ಹುಕುಂನಲ್ಲಿ ಸಾಗುವಳಿ ಮಾಡುತ್ತಿರುವ ರೈತರಿಗೆ ಡಿಜಿಟಲ್ ಸಾಗುವಳಿ ಚೀಟಿ ನೀಡುವ ಪ್ರಕ್ರಿಯೆ ಆರಂಭವಾಗಿದೆ. ಗುಂಡ್ಲುಪೇಟೆ ತಾಲೂಕಿನ ಬೊಮ್ಮನಹಳ್ಳಿ ನಂಜುಂಡಯ್ಯ ಡಿಜಿಟಲ್ ಚೀಟಿ ಪಡೆದ ಮೊದಲ ರೈತರಾಗಿದ್ದಾರೆ.
ಯೂಟೂಬ್ ಚಾನೆಲ್ ಸಬಸ್ಕ್ರೈಬ್ ಮಾಡಿ ಕೃಷಿ ಮಾಹಿತಿ ಪಡೆಯಿರಿ
ಮೂರು-ನಾಲ್ಕು ದಶಕಗಳಿಂದ ಸರ್ಕಾರದ ವಿವಿಧ ಯೋಜನೆಗಳಡಿ ಲಕ್ಷಾಂತರ ರೈತರಿಗೆ ಜಮೀನು ಮಂಜೂರು ಮಾಡಲಾಗಿದೆ. ಆದರೆ ನಾನಾ ಕಾರಣಗಳಿಂದ ಸೂಕ್ತ ದಾಖಲೆಗಳನ್ನು ನೀಡಲಾಗಿಲ್ಲ. ಪರಿಣಾಮ ತಮ್ಮ ಪಾಲಿನ ಜಮೀನು ಇದ್ದರೂ ಪೋಡಿಯಾಗದೆ ಸರ್ಕಾರಿ ಕಚೇರಿಗಳಿಗೆ ಸುತ್ತಿತ್ತಿದ್ದಾರೆ. ಇಂತಹ ಶೋಷಣೆಗಳಿಂದ ರೈತರಿಗೆ ನೆಮ್ಮದಿ ನೀಡಬೇಕು ಎಂಬ ಕಾರಣಕ್ಕಾಗಿ ಕಂದಾಯ ಇಲಾಖೆ ವಿಶೇಷ ಅಭಿಯಾನ ಹಮ್ಮಿಕೊಂಡಿದೆ ಎಂದು ಕೃಷ್ಣಭೈರೇಗೌಡ ತಿಳಿಸಿದ್ದಾರೆ.
ಗುಂಡ್ಲುಪೇಟೆ ತಾಲೂಕು, ತೆರಕಣಾಂಬಿ ಹೋಬಳಿ ಬೊಮ್ಮನ ಹಳ್ಳಿಯ ನಂಜುಂಡಯ್ಯ ಬಿನ್ ಹುಚ್ಚಯ್ಯ ಎಂಬುವವರಿಗೆ ಶುಕ್ರವಾರ ಅಧಿಕೃತ ಸಾಗುವಳಿ ಡಿಜಿಟಲ್ ಚೀಟಿ ನೋಂದಣಿ ಮಾಡಿಸಿಕೊಡಲಾಗಿದೆ.
Bagar hokum land sanctioned ಡಿಜಿಟಲ್ ಸಾಗುವಳಿ ಚೀಟಿ ಹಸ್ತಾಂತರ
ನವೆಂಬರ್ 28 ರಂದು ಶಾಸಕರ ಅಧ್ಯಕ್ಷತೆಯಲ್ಲಿ ನಡೆದ ಸಮಿತಿಯಲ್ಲಿ ಅನುಮೋದನೆ ಪಡೆಯುತ್ತಿದ್ದಂತೆ ಸರ್ಕಾರದ ಪರವಾಗಿ ಗುಂಡ್ಲುಪೇಟೆ ತಹಶೀಲ್ದಾರ್ ರಮೇಶ ಬಾಬು, ಶುಕ್ರವಾರ ಅಧಿಕೃತ ಡಿಜಿಟಲ್ ಸಾಗುವಳಿ ಚೀಟಿಯನ್ನು ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ನೋಂದಾಯಿಸಿ ಫಲಾನುಭವಿಗಳಿಗೆ ಹಸ್ತಾಂತರಿಸಲಾಗಿದೆ.
ಸರ್ಕಾರದ ಈ ನಡೆಯಿಂದ ಇನ್ಮುಂದೆ ರೈತರ ದಾಖಲೆ ಕಳವು, ತಿದ್ದುವುದು ಸೇರಿ ಯಾರೋ ಕೆಲವರು ಮಾಡುವ ಕೃತ್ಯಕ್ಕೆ ಪ್ರತಿ ನಿತ್ಯ ಸರ್ಕಾರಿ ಕಚೇರಿಗಳಿಗೆ ಅಲೆಯುವುದು ತಪ್ಪಲಿದೆ ಎಂದು ಕೃಷ್ಣ ಭೈರೇಗೌಡ ಹೇಳಿದ್ದಾರೆ.
ಯೋಜನೆಯಡಿ ಸಲ್ಲಿಕೆಯಾಗಿರುವ ಅರ್ಜಿಗಳ ಪೈಕಿ ಒಟ್ಟಾರೆ 1.26 ಲಕ್ಷ ಅರ್ಜಿದಾರರನ್ನು ಅರ್ಹರು ಎಂದು ಗುರುತಿಸಲಾಗಿದೆ. ಮೊದಲ ಹಂತದಲ್ಲಿ ಡಿಸೆಂಬರ್ ಅಂತ್ಯದೊಳಗೆ ಕನಿಷ್ಠ 5000 ಜನರಿಗೆ ಡಿಜಿಟಲ್ ಸಾಗುವಳಿ ಚೀಟಿ ನೀಡಬೇಕು ಎಂಬ ಗುರಿ ಹೊಂದಲಾಗಿದೆ.
ಇದನ್ನೂ ಓದಿ ಪಿಎಂ ಕಿಸಾನ್ ಫಲಾನುಭವಿಗಳ ಪಟ್ಟಿಯಲ್ಲಿ ನಿಮ್ಮ ಹೆಸರು ಚೆಕ್ ಮಾಡಿ
ಜನವರಿ ವೇಳೆಗೆ ಈ ಸಂಖ್ಯೆಯನ್ನು 15 ರಿಂದ 20 ಸಾವಿರಕ್ಕೆ ಏರಿಸಲಾಗುವುದು. ಮುಂದಿನ ಆರು ತಿಂಗಳೊಳಗಾಗಿ ಎಲ್ಲರಿಗೂ ಸಾಗುವಳಿ ಚೀಟಿ ನೀಡಬೇಕು ಎಂಬುದು ನಮ್ಮ ಉದ್ದೇಶ ಎಂದು ಹೇಳಿದ್ದಾರೆ.
ದರಖಾಸ್ತು ಪೋಡಿ ಬಗ್ಗೆ ನಿಮಗೆ ಗೊತ್ತೇ?
ದರಖಾಸ್ತು ಪೋಡಿಯಿಂದ ರೈತರಿಗೇನು ಪ್ರಯೋಜನ? ಯಾವ ಜಮೀನುಗಳಿಗೆ ದರಖಾಸ್ತು ಪೋಡಿ ಮಾಡಿಸಲಾಗುತ್ತದೆ ಎಂಬುದರ ಮಾಹಿತಿ ಇಲ್ಲಿದೆ.
ದರಖಾಸ್ತು ಪೋಡಿ ಎಂದರೆ, ಸರ್ಕಾರ ಮಂಜೂರು ಮಾಡಿದ ಜಮೀನಿನಿ ನಿರ್ಧಿಸ್ಟ ಸರ್ವೆ ನಂಬರ್, ವಿಸ್ತೀರ್ಣ ಹಾಗೂ ಸೀಮೆ (ಚೆಕ್ ಬಂದಿ) ಗೊತ್ತುಪಡಿಸಿ, ಆಯಾ ರೈತರಿಗೆ ಅಧಿಕೃತವಾಗಿ ಜಮೀನಿನ ಮಾಲಿಕತ್ವ ನೀಡುವುದನ್ನು ದರಖಾಸ್ತು ಪೋಡಿ ಎಂದು ಕರೆಯುವರು.
ದರಖಾಸ್ತು ಪೋಡಿಯಿಂದ ರೈತರ ಜಮೀನು ಒತ್ತುವರಿ ಸಮಸ್ಯೆ ಬಗೆಹರಿಯಲಿದೆ. ನೈಜವಾಗಿ ಮಂಜೂರಾದಸ್ಟೇ ಜಮೀನು ರೈತರಿಗೆಲಭಿಸುತ್ತದೆ. ಹಾಗೆಯೇ ಸರ್ಕಾರಿ ಜಮೀನು ಲಭ್ಯತೆಗಿಂತ ಹೆಚ್ಚುವರಿ ಮಂಜೂರಾತಿಯಿಂದ ಉಂಟಾಗುವ ಗೊಂದಲವೂ ಇತ್ಯರ್ಥವಾಗಲಿದೆ.
ಈ ದರಖಾಸ್ತು ಪೋಡಿ ಮಾಡುವ ಪ್ರಕ್ರಿಯೆಯನ್ನು ಸಂಪೂರ್ಣ ಆನ್ಲೈನ್ ಮಾಡುವ ಪ್ರಕ್ರಿಯೆ ಆರಂಭಿಸಲಾಗಿದೆ. ಹೌದು, ಗ್ರಾಮ ಆಡಳಿತಾಧಿಕಾರಿ, ಕಂದಾಯ ನಿರೀಕ್ಷಕ, ಶಿರಸ್ತೆದಾರ ಹಾಗೂ ತಹಶೀಲ್ದಾರರು ನಮೂನೆ 1 ರಿಂದ 6 ರ ಮಾಹಿತಿ ಭರ್ತಿ ಮಾಡಿ ಡಿಜಿಟಲ್ ಸಹಿ ಮಾಡುವಂತಹ ತಂತ್ರಾಂಶ ಅಭಿವೃದ್ಧಿಪಡಿಸಿದ್ದು. ಈ ಮೂಲಕ ದರಖಾಸ್ತು ಪೋಡಿ ಪ್ರಕ್ರಿಯೆಯಲ್ಲಿ ಅಕ್ರಮಗಳಿಗೆ ಕಡಿವಾಣ ಹಾಕಲು ಪ್ರಯತ್ನಿಸಲಾಗಿದೆ. ಇನ್ನೂ ಮುಂದೆ ದರಖಾಸ್ತು ಪೋಡಿ ಪ್ರಕರಣಗಳನ್ನು ಸಂಪೂರ್ಣವಾಗಿ ಆನ್ಲೈನ್ ವ್ಯವಸ್ಥೆಯ ಮೋಜಣಿ ತಂತ್ರಾಂಶದಲ್ಲಿ ನಿರ್ವಹಿಸಬೇಕೆಂದು ತಂತ್ರಾಂಶದಲ್ಲಿ ನಿರ್ವಹಿಸಬೇಕೆಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.