pond subsidy ರಾಮನಗರ, ಬಾಗಲಕೋಟೆ, ವಿಜಯಪುರ ಹಾಗೂ ಬಳ್ಳಾರಿ ಸೇರಿದಂತೆ ಇತರ ಜಿಲ್ಲೆಗಳಿಂದ ಕೃಷಿ ಹೊಂಡ ನಿರ್ಮಾಣಕ್ಕೆ ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ.
ಹೌದು, 2023-24ನೇ ಸಾಲಿನಲ್ಲಿ ಕೃಷಿ ಭಾಗ್ಯ ಯೋಜನೆಯಲ್ಲಿ ಕೃಷಿ ಹೊಂಡ ನಿರ್ಮಿಸಲು ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲೂಕು ಸಹಾಯಕ ಕೃಷಿ ನಿರ್ದೇಶಕ ಎಂ. ಎಚ್. ಯರಝರಿ ತಿಳಿಸಿದ್ದಾರೆ.
ಬಸವನಬಾಗೇವಾಡಿ, ಮನಗೂಳಿ, ಹೂವಿನ ಹಿಪ್ಪರಗಿ, ನಿಡಗುಂದಿ ಹಾಗೂ ಕೋಲಾರ ಹೋಬಳಿಗಳ ರೈತರು ಡಿಸೆಂಬರ್ 31 ರೊಳಗಾಗಿ ಮೂಲ ದಾಖಲಾತಿಗಳೊಂದಿಗೆ ಎಫ್ಐಡಿ ಮಾಡಿದ ಅರ್ಜಿ, ರೈತರ ಭಾವಚಿತ್ರ, ಆಧಾರ್ ಕಾರ್ಡ್ ಪ್ರತಿ, ಜಾತಿ ಪ್ರಮಾಣ ಪತ್ರ, ಬ್ಯಾಂಕ್ ಪಾಸ್ ಬುಕ್ ಪ್ರತಿ ಸಲ್ಲಿಸಬೇಕು. ಅರ್ಜಿ ನಮೂನೆ -1 ರೈತರ ಸ್ವಯಂ ಘೋಷಣೆ, ಅನುಬಂಧ-3 ಎ ಹಾಗೂ ನಿರಪೇಕ್ಷಣಾ ಪತ್ರ ಸಲ್ಲಿಸಬೇಕೆಂದು ಎಂ.ಎಚ್.ಯರಝರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
pond subsidy ಕೃಷಿ ಭಾಗ್ಯ ಯೋಜನೆಗೆ ಅರ್ಜಿ ಆಹ್ವಾನ
2023-24ನೇ ಸಾಲಿನ ಬಾಗಲಕೋಟೆ ಜಿಲ್ಲೆಯ ಗುಳೇದಗುಡ್ಡ ತಾಲೂಕಿನಲ್ಲಿರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಕೃಷಿ ಭಾಗ್ಯ ಯೋಜನೆಯನ್ನು ಪ್ಯಾಕೇಜ್ ಮಾದರಿಯಲ್ಲಿ ಸರ್ಕಾರ ಕೃಷಿ ಬದು, ಕೃಷಿ ಹೊಂಡ, ಹೊಂಡದ ಸುತ್ತ ಬೇಲಿ, ತಾಡಪಾಲ ಹೊದಿಕೆ, ಆಯಿಲ್ ಎಂಜಿನ್, ಸ್ಪಿಂಕ್ಲರ್ ಹೀಗೆ ಒಟ್ಟು6 ಘಟಕಗಳನ್ನೊಳಗೊಂಡ ಈ ಯೋಜನೆಯಡಿಯಲ್ಲಿ ಗುಳೇದಗುಡ್ಡ ತಾಲೂಕಿಗೆ ಸಂಬಂಧಪಟ್ಟಂತೆ ಸಾಮಾನ್ಯ ವರ್ಗದಲ್ಲಿ 14, ಪರಿಶಿಷ್ಟ ಜಾತಿಯಲ್ಲಿ3, ಪರಿಶಿಷ್ಟ ಪಂಗಡದಲ್ಲಿ1 ಒಟ್ಟು 18 ಫಲಾನುಭವಿಗಳನ್ನು ಆಯ್ಕೆ ಮಾಡಲೇಕಾಗಿರುವದರಿಂದ ಆಸಕ್ತ ರೈತರು ರೈತ ಸಂಪರ್ಕ ಕೇಂದ್ರಕ್ಕೆ ಬಂದು ಅರ್ಜಿ ಸಲ್ಲಿಸಲು ಕೋರಲಾಗಿದೆ.ಅರ್ಜಿ ಸಲ್ಲಿಸಲು ಜನವರಿ 3 ಕೊನೆಯ ದಿನವಾಗಿದೆ.
ಇದನ್ನೂಓದಿ : ನನ್ನ ಖಾತೆಗೆ ಜಮೆಯಾಯಿತು ಬೆಳೆ ಹಾನಿ ಪರಿಹಾರ – ನಿಮಗೆಷ್ಟು ಜಮೆ? ಚೆಕ್ ಮಾಡಿ
ಹೆಚ್ಚಿನ ಮಾಹಿತಿಗಾಗಿ ರೈತ ಸಂಪರ್ಕ ಕೇಂದ್ರವನ್ನು ಸಂಪರ್ಕಿಸಲು ಕೃಷಿ ಅಧಿಕಾರಿ ಆನಂದಗೌಡ ಗೌಡರ್ ಪ್ರಕಟಣೆ ಮೂಲಕ ತಿಳಿಸಿದ್ದಾರೆ.
ಹೊಸಪೇಟಿ ತಾಲೂಕಿನಿಂದ ಕೃಷಿ ಭಾಗ್ಯ ಯೋಜನೆಗೆ ಅರ್ಜಿ ಆಹ್ವಾನ
ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲೂಕಿನ ಕೃಷಿ ಇಲಾಖೆಯ ವತಿಯಿಂದ ಕೃಷಿ ಭಾಗ್ಯ ಯೋಜನೆಯಡಿ ಅರ್ಹ ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ.
ಕೃಷಿ ಭಾಗ್ಯ ಯೋಜನೆಯು ಅತ್ಯಂತ ಜನಪ್ರಿಯ ಹಾಗೂ ಉಪಯುಕ್ತವಾಗಿತ್ತು. ಈ ಯೋಜನೆಯನ್ನು ಮಹಾತ್ಮಗಾಂಧಿ ಉದ್ಯೋಗ ಖಾತ್ರಿ ಯೋಜನೆಯೊಂದಿಗೆ ಸಂಯೋಜಿಸಿ 100 ಕೋಟಿ ವೆಚ್ಚದಲ್ಲಿ ಮರು ಜಾರಿಗೊಳಿಸಲಾಗುವುದು ಎಂದು ಸರ್ಕಾರ ಘೋಷಿಸಿದೆ.
ಅರ್ಜಿ ಸಲ್ಲಿಸಲು ರೈತರ ಒಟ್ಟು ಸಾಗುವಳಿ ಕ್ಷೇತ್ರದ ಒಂದು ಸರ್ವೆ ನಂಬರ್ ನಲ್ಲಿ ಕನಿಷ್ಟ ಒಂದು ಎಕರೆ ಇರಬೇಕು. ಆಸಕ್ತ ರೈತರು ಅರ್ಜಿ ನಮೂನೆಯನ್ನು ಸಂಬಂಧಿಸಿದ ಹೋಬಳಿಯ ರೈ ಸಂಪರ್ಕ ಕೇಂದ್ರಗಳಲ್ಲಿ ಪಡೆದು ಡಿಸೆಂಬರ್ 31 ರೊಳಗೆ ಸಲ್ಲಿಸಬೇಕು. ಯೋಜನೆ ಸಂಪೂರ್ಣ ವಿವರ, ಅರ್ಹತೆಗಳು ಹಾಗೂ ಹೆಚ್ಚಿನ ಮಾಹಿತಿಗಾಗಿ ಸಂಬಂಧಿಸಿದ ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಅಥವಾ ರೈತ ಸಂಪರ್ಕ ಕೇಂದ್ರದ ಅಧಿಕಾರಿಗಳನ್ನು ಸಂಪರ್ಕಿಸಬಹುದು ಎಂದು ಜಂಟಿ ಕೃಷಿ ನಿರ್ದೇಶಕ ಶರಣಪ್ಪ ಬಿ. ಮುದಗಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರಾಮನಗರ ಜಿಲ್ಲೆಯಿಂದ ಕೃಷಿ ಭಾಗ್ಯ ಯೋಜನೆಗೆ ರೈತರಿಂದ ಅರ್ಜಿ ಆಹ್ವಾನ
ಕೃಷಿ ಭಾಗ್ಯ ಯೋಜನೆಯು ಮಳೆಯಾಶ್ರಿತ ರೈತರ ಜೀವನ ಮಟ್ಟವನ್ನು ಸುಧಾರಿಸುವುದರೊಂದಿಗೆ ಬರ ಉಪ ಶಮನದ ಮುಖ್ಯ ಗುರಿ ಹೊಂದಿದ್ದು, ರಾಜ್ಯದ 5 ಒಣ ಹವಾಮಾನ ವಲಯಗಳ 24 ಬರಪೀಡಿತ ಜಿಲ್ಲೆಗಳಲ್ಲಿನ 106 ತಾಲೂಕುಗಳಲ್ಲಿ ರೈತರ ಹಿತದೃಷ್ಟಿಯಿಂದ ಪ್ರಸಕ್ತ ಆಯವ್ಯಯದಲ್ಲಿ ಮರುಜಾರಿ ಮಾಡಲಾಗಿದೆ. ಜಿಲ್ಲೆಯ ಮಳೆಯಾಶ್ರಿತ ಕೃಷಿಯನ್ನು ಸುಸ್ಥಿರ ಕೃಷಿಯನ್ನಾಗಿ ರೂಪಾಂತರಗೊಳಿಸುವುದು, ಸಮರ್ಪಕ ಮಳೆ ನೀರಿನ ಸಂಗ್ರಹಣೆ ಹಾಗೂ ಕೃಷಿ ಉತ್ಪಾದನೆ ಉತ್ತಮಪಡಿಸುವುದು. ಆದಾಯ ಹೆಚ್ಚಿಸುವುದು, ಮಳೆ ನೀರನ್ನು ವ್ಯರ್ಥ ಮಾಡದೆ ಕೃಷಿ ಹೊಂಡ ತೆಗೆದು ಸಂಗ್ರಹಿಸಿ ಬೆಳೆಗಳಿಗೆ ಸಂದಿಗ್ದ ಹಂತಗಳಲ್ಲಿ ರಕ್ಷಣಾತ್ಮಕ ನೀರಾವರಿ ಒದಗಿಸುವುದು. ಕ್ಷೇತ್ರ ಬದು ನಿರ್ಮಾಣ, ನೀರು ಸಂಗ್ರಹಣಾ ರಚನೆ ನಿರ್ಮಾಣ, ನೀರು ಇಂಗದಂತೆ ತಡೆಯಲು ಪ್ಯಾಲಿಥಿನ್ ಹೊದಿಕೆ, ಕೃಷಿ ಹೊಂಡದ ಸುತ್ತಲೂ ತಂತಿ ಬೇಲಿ, ಹೊಂಡದಿಂದ ನೀರು ಎತ್ತಲು ಡೀಸೆಲ್ ಟ್ರೋಲ್ ಸೋಲಾರ್ ಪಂಪ್ ಸೆಟ್ ವಿತರಣೆ ಸೇರಿದಂತೆ ಇತ್ಯಾದಿ ಕೃಷಿ ಸೌಲಭ್ಯ ಒದಗಿಸಲು ಕೃಷಿ ಭಾಗ್ಯ ಯೋಜನೆಯನ್ನುಜಾರಿಗೆ ತರಲಾಗಿದೆ. ಈ ಯೋಜನೆಯಡಿಯಲ್ಲಿ ಅರ್ಜಿ ಸಲ್ಲಿಸಲು ಡಿಸೆಂಬರ್31 ಕೊನೆಯ ದಿನವಾಗಿದೆ.
ಹೆಚ್ಚಿನ ಮಾಹಿತಿಗಾಗಿ ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಮಾಗಡಿ 82779324406, ಚನ್ನಪಟ್ಟಣ 8277932446, ಕನಕಪುರ ಹಾಗೂ ಹಾರೋಹಳ್ಳಿ 8277932446, ರಾಮನಗರ 8277932404 ಇಲ್ಲಿಗೆ ಸಂಪರ್ಕಿಸಲು ಕೋರಲಾಗಿದೆ.