Annabhagya fund released : ಆಗಸ್ಟ್ ತಿಂಗಳ ಅನ್ನಭಾಗ್ಯದ ಹಣ ಬಿಡುಗಡೆಯಾಗಿದೆ. ಪಡಿತರ ಚೀಟಿದಾರರು ತಮಗೆಷ್ಟು ಜಮೆಯಾಗಿದೆ ಎಂಬುದನ್ನು ಮೊಬೈಲ್ ನಲ್ಲೇ ಚೆಕ್ ಮಾಡಬಹುದು.
ಹೌದು, ಕಾಂಗ್ರೆಸ್ ಸರ್ಕಾರವು ಜಾರಿಗೆ ತಂದ ಯೋಜನೆಗಳಲ್ಲಿ ಅನ್ನಭಾಗ್ಯ ಯೋಜನೆಯೂ ಒಂದಾಗಿದೆ. ಈ ಯೋಜನೆಯಡಿಯಲ್ಲಿ ಆಗಸ್ಟ್ ತಿಂಗಳ ಹಣ ಫಲಾನುಭವಿಗಳ ಖಾತೆಗೆ ಜಮೆಯಾಗಿದೆ. ಅನ್ನಭಾಗ್ಯ ಯೋಜನೆಯ ಜುಲೈ ತಿಂಗಳ ಹಣ ಈಗಾಗಲೇ ಜನರ ಖಾತೆಗೆ ಜಮಾ ಆಗಿದೆ. ಇದೀಗ ಆಗಸ್ಟ್ ತಿಂಗಳ ಹಣ ಕೂಡ ಬಿಡುಗಡೆ ಮಾಡಲಾಗಿದೆ.
ಅನ್ನಭಾಗ್ಯ ಯೋಜನೆಯಡಿ 5 ಕೆಜಿ ಅಕ್ಕಿಯ ಹೆಚ್ಚುವರಿ ಪಡಿತರಕ್ಕೆ ಅಕ್ಕಿಯ ಬದಲಾಗಿ ನೀಡುವ ಹಣವನ್ನು ನೇರವಾಗಿ ಫಲಾನುಭವಿಗಳ ಖಾತೆಗೆ ಜಮೆ ಮಾಡಲಾಗುತ್ತಿದೆ. ಕಳೆದ ತಿಂಗಳಿನಿಂದ ಆಗಸ್ಟ್ ತಿಂಗಳ ಹಣವನ್ನು ಈಗಾಗಲೇ ಫಲಾನುಭವಿಗಳ ಖಾತೆಗೆ ಜಮೆ ಮಾಡಲಾಗುತ್ತಿದೆ.
31 ಜಿಲ್ಲೆಗಳ ಪೈಕಿ ಬೀದರ್, ಚಿತ್ರದುರ್ಗ, ದಾವಣಗೆರೆ ಹಾಗೂ ರಾಮನಗರ ಜಿಲ್ಲೆಗಳ ಪಡಿತರದಾರರ ಖಾತೆಗೆ ಹಣ ಸಂದಾಯವಾಗಿದ್ದು ಇನ್ನೂ ಐದು ದಿನಗಳಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳ ಫಲಾನುಭವಿಗಳ ಖಾತೆಗೆ ಜಮೆ ಮಾಡಲಾಗುವುದು.
Annabhagya fund released: ನಿಮಗೆಷ್ಟು ಜಮೆಯಾಗಿದೆ? ಮೊಬೈಲ್ ನಲ್ಲೇ ಚೆಕ್ ಮಾಡಿ
ಅನ್ನಭಾಗ್ಯದ ಯೋಜನೆಯಡಿಯಲ್ಲಿ ತಮಗೆಷ್ಟು ಹಣ ಜಮೆಯಾಗಿದೆ ಎಂಬುದನ್ನು ಚೆಕ್ ಮಾಡಲು ಈ
https://ahara.kar.nic.in/lpg/
ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ನಂತರ ವಿಭಾಗವಾರು ಜಿಲ್ಲೆಗಳು ಕಾಣಿಸುತ್ತದೆ. ಅಲ್ಲಿ ನೀವು ಯಾವ ಜಿಲ್ಲೆಗೆ ಸೇರಿದ್ದೀರೋ ಆ ಜಿಲ್ಲಾ ವಿಭಾಗದ ಮೇಲ್ಗಡೆ ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಇನ್ನೊಂದು ಪೇಜ್ ಓಪನ್ ಆಗುತ್ತದೆ. ನಿಮಗೆ ನೇರ ನಗದು ವರ್ಗಾವಣೆಯ ಸ್ಥಿತಿ (BDT) ಮೇಲೆಕ್ಲಿಕ್ ಮಾಡಬೇಕು. ಆಗ ತೆರೆದುಕೊಳ್ಳುವ ಪೇಜ್ ಮೇಲೆ ಆಗಸ್ಟ್ ತಿಂಗಳು ಆಯ್ಕೆ ಮಾಡಿಕೊಳ್ಳಬೇಕು. ಅಲ್ಲಿ ಕಾಣುವ ಕ್ಯಾಪ್ಚ್ಯಾ ಕೋಡ್ ಹಾಕಿ GO ಮೇಲೆ ಕ್ಲಿಕ್ ಮಾಡಬೇಕು.
ಆಗ ನಿಮಗೆ ಆಗಸ್ಟ್ ತಿಂಗಳ ಅನ್ನಭಾಗ್ಯದ ಹಣ ಎಷ್ಟು ಜಮೆಯಾಗಿದೆ ಎಂಬುದು ಕಾಣಿಸುತ್ತದೆ. ಒಂದು ವೇಳೆ ಜಮೆಯಾಗದಿದ್ದರೆ ಈಗಿನ ಸ್ಟೇಟಸ್ ಕಾಣಿಸುತ್ತದೆ. ನಿಮಗೆ ಒಟ್ಟು ಎಷ್ಟು ಹಣ ಜಮೆಯಾಗಲಿದೆ ಎಂಬುದರ ಕುರಿತು ಎಷ್ಟು ನಗದು ಹಣ ಪಾವತಿಗೆ ಅರ್ಹರಾಗಿದ್ದೀರಿ ಎಂಬ ಮಾಹಿತಿ ಕಾಣಿಸುತ್ತದೆ. ಅದರ ಕೆಳಗಡೆ ಪಾವತಿ ಪ್ರಗತಿಯಲ್ಲಿದೆ ಎಂಬ ಮಾಹಿತಿ ಸಹ ಕಾಣಿಸುತ್ತದೆ.
ಕಾಂಗ್ರೆಸ್ ಸರ್ಕಾರವು ಜುಲೈ ತಿಂಗಳಿನಿಂದ ರಾಜ್ಯದ ಬಿಪಿಎಲ್ ಹಾಗೂ ಅಂತ್ಯೋದಯ ಕಾರ್ಡ್ ಹೊಂದಿರುವವರಿಗೆ ಹೆಚ್ಚುವರಿ 5 ಕೆಜಿ ಅಕ್ಕಿಯನ್ನು ನೀಡಲು ಘೋಷಣೆ ಮಾಡಿತ್ತು. ಆದರೆ ಅಕ್ಕಿ ಖರೀದಿಗೆ ಸಮಸ್ಯೆಯಾಗಿದ್ದರಿಂದ ಅಕ್ಕಿಯ ಬದಲಾಗಿ ಹಣ ನೀಡಲು ಘೋಷಣೆ ಮಾಡಿತ್ತು. ಸರ್ಕಾರ ಘೋಷಣೆ ಮಾಡಿದಂತೆ ಈಗ ಅಕ್ಕಿಯ ಬದಲಾಗಿ ಜುಲೈ ತಿಂಗಳಿಂದ ಪ್ರತಿ ಸದಸ್ಯರನುಗುಣವಾಗಿ ನೇರವಾಗಿ ಕುಟುಂಬದ ಮುಖ್ಯಸ್ಥರ ಖಾತೆಗೆ ಹಣ ಜಮೆ ಮಾಡುತ್ತಿದೆ.
ಇದನ್ನೂ ಓದಿ : ಬೆಳೆ ಹಾನಿ, ಬೆಳೆ ವಿಮೆ ಹಾಗೂ ಪಿಎಂ ಕಿಸಾನ್ ಸ್ಟೇಟಸ್ ಹೀಗೆ ಚೆಕ್ ಮಾಡಿ
ಕುಟುಂಬದಲ್ಲಿರುವ ಪ್ರತಿಯೊಬ್ಬ ಸದಸ್ಯರಿಗೆ ಕೆಜಿ ಅಕ್ಕಿಗೆ 34 ರೂಪಾಯಿಯಂತೆ ಒಬ್ಬ ಸದಸ್ಯರಿಗೆ 170 ರೂಪಾಯಿ ನೀಡಲಾಗುತ್ತಿದೆ. ಕಾರ್ಡ್ ನಲ್ಲಿರುವ ಎಲ್ಲಾ ಸದಸ್ಯರ ಒಟ್ಟು ಹಣವನ್ನು ಯಜಮಾನರ ಖಾತೆಗೆ ನೇರವಾಗಿ ಜಮೆ ಮಾಡಲಾಗುತ್ತಿದೆ.
ಒಂದು ಕುಟುಂಬದಲ್ಲಿ ಪತಿ ಪತ್ನಿಹಾಗೂ ಇಬ್ಬರು ಮಕ್ಕಳಿದ್ದರೆ ತಲಾ ಒಬ್ಬ ಸದಸ್ಯರಿಗೆ 170 ಒಟ್ಟು ನಾಲ್ಕು ಜನ ಸದಸ್ಯರಿಗೆ ಒಟ್ಟು 680 ರೂಪಾಯಿ ಐದು ಜನ ಸದಸ್ಯರಿದ್ದರೆ 850 ರೂಪಾಯಿ ಹಣವನ್ನು ಕುಟುಂಬದ ಮುಖ್ಯಸ್ಥರ ಖಾತೆಗೆ ಜಮೆ ಮಾಡಲಾಗುವುದು. ಆದರೆ ಎಪಿಲ್ ಕಾರ್ಡ್ ಹೊಂದಿರುವವರಿಗೆ ಅನ್ನಭಾಗ್ಯದ ಯೋಜನೆಯಡಿಯಲ್ಲಿ ಯಾವುದೇ ಹಣ ಜಮೆಯಾಗುವುದಿಲ್ಲ. ಬಿಪಿಎಲ್ ಹಾಗೂ ಅಂತ್ಯೋದಯ ಕಾರ್ಡ್ ಚಾಲ್ತಿಯಲ್ಲಿರಬೇಕು. ಕಳೆದ ಮೂರು ತಿಂಗಳಲ್ಲಿ ಅನ್ನಭಾಗ್ಯದ ಯೋಜನೆಯಡಿ ಪಡಿತರ ಪಡಿದಿರಬೇಕು. ಅಂತಹವರಿಗೆ ಮಾತ್ರ ಈ ಹಣ ಜಮೆಯಾಗಲಿದೆ.