Anmol Buffalo 23 crore : ಇದು ಅಂತಿಂಥ ಕೋಣವಲ್ಲ. ‘ಬಾಹುಬಲಿ’ ಸಿನಿಮಾದಲ್ಲಿನ ಗ್ರಾಫಿಕ್ಸ್ ಕೋಣವನ್ನೂ ಸರಿಗಟ್ಟುವಂತಹ ದೃಢಕಾಯ ಕೋಣ. ಅದನ್ನು ನೋಡಿದರೆ ಸಾಕು, ಬೆಚ್ಚಿಬೀಳುವುದು ಖಂಡಿತಾ. ಅದರ ಮೈಕಟ್ಟು ಎಂಥಹವರನ್ನೂ ಚಕಿತಗೊಳಿಸುತ್ತದೆ. ಇದರ ಬೆಲೆ ಕೇಳಿದರೆ ತಲೆ ಸುತ್ತಿ ಬೀಳಬಹುದು,
ಯೂಟೂಬ್ ಚಾನೆಲ್ ಸಬಸ್ಕ್ರೈಬ್ ಮಾಡಿ
ಹೌದು ಈ ಕೋಣದ ಬೆಲೆ ಬರೋಬ್ಬರಿ 23 ಕೋಟಿ ರೂಪಾಯಿ, ಇದನ್ನು ನಂಬಲೇಬೇಕು ಈ ಕೋಣ ಇಸ್ಟೇಕೆ ದುಬಾರಿ, , ಇದರ ಖರ್ಚು ಎಷ್ಟಿದೆ ಇದರ ವಿಶೇಶತೆ ಬಗ್ಗೆ ತಿಳಿದುಕೊಳ್ಳೋಣ ಬನ್ನಿ
ಹರಿಯಾಣದ ಈ ಕೋಣಕ್ಕೆ ಅನ್ಮೋಲ್ ಎಂದು ಅದರ ಮಾಲಿಕ ಹೆಸರಿಟ್ಟಿದ್ದಾನೆ. ಹೆಸರಿಗೆ ತಕ್ಕಂತೆ ಇಧು ಅತ್ಯಂತ ವಿಶಿಸ್ಟವಾದ ಕೋಣವಾಗಿದ್ದು, ಈಗ ರಾಷ್ಟ್ರ ವ್ಯಾಪಿ ಸುದ್ದಿಯಾಗಿದೆ.
ಪುಷ್ಕರ್ ಹಾಗೂ ಮೀರತ್ ನಲ್ಲಿ ಇತ್ತೀಚಗೆ ನಡೆದ ಅಖಿಲ ಭಾರತ ಕೃಷಿ ಮೇಳದಲ್ಲಿ ಸುಮಾರು 1500 ಕೆ.ಜಿ. ತೂಕವಿರುವ ಸೂರ್ತಿ ತಳಿಯ ಅನ್ಮೋಲ್ ಎಲ್ಲರ ಗಮನ ಸೆಳೆದಿತ್ತು.
Anmol Buffalo 23 crore
ಹರಿಯಾಣದ ಸಿರ್ಸಾ ಜಿಲ್ಲೆಯ ಹಿಸ್ಸು ಗ್ರಾಮದ ನಿವಾಸಿ ಪಾಲ್ಮಿಂದ್ರ ಗಿಲ್ ಅವರು ಸಾಕಿರುವ ಈ ಕೋಣವು, ತನ್ನ ದೈತ್ಯಾಕಾರದಿಂದಲೇ ಸುತ್ತಲಿನ ಹಳ್ಳಿಗಳಲ್ಲಿ ಹೆಸರುವಾಸಿಯಾಗಿದೆ. ಒಂದೂವರೆ ಟನ್ಗಿಂತಲೂ ಹೆಚ್ಚು ತೂಗುವ ಈ ಕೋಣ, ಪುಷ್ಕರ ಮೇಳದಲ್ಲಿ ಗಮನ ಸೆಳೆದಿತ್ತು.
ಅನ್ಮೋಲ್ನ ಮಾಲೀಕ ತನ್ನ ಮುದ್ದಿನ ಕೋಣಕ್ಕೆ ಪ್ರತಿ ದಿನ 1500 ರೂಪಾಯಿ ಖರ್ಚು ಮಾಡುತ್ತಿದ್ದಾನೆ .
ಇದನ್ನೂ ಓದಿ ನಿಮ್ಮ ಜಮೀನಿನ ಮ್ಯಾಪ್ ಮೊಬೈಲಿನಲ್ಲಿ ಹೀಗೆ ಡೌನ್ಲೋಡ್ ಮಾಡಿ
ಪ್ರತಿ ದಿನ 200 ಗ್ರಾಮ್ ಬಾದಾಮಿ, 30 ಬಾಳೆ ಹಣ್ಣು, 4 ಕೆಜಿ ದಾಳಿಂಬೆ ಹಣ್ಣು, 5 ಲೀಟರ್ ಹಾಲು ಮತ್ತು 20 ಮೊಟ್ಟೆಗಳನ್ನು ನೀಡುತ್ತಾನಂತೆ.
ಇದರ ಜತೆಗೆ ಆಯಿಲ್ ಕೇಕ್, ಹಸಿರು ಹುಲ್ಲು, ತುಪ್ಪ, ಸೋಯಾಬೀನ್ಸ್ ಮತ್ತು ಜೋಳವನ್ನೂ ಕೊಡುತ್ತಿದ್ದಾರೆ.
ಪ್ರತಿ ದಿನ ಬೆಳಿಗ್ಗೆ ಮತ್ತು ಸಾಯಂಕಾಲ ಸ್ನಾನ ಮಾಡಿಸಲಾಗುತ್ತದೆ. ಇದರ ಮೈಯನ್ನು ತೊಳಿಸಿ ಇದರ ಅಂದ ಚೆಂದ ಕಾಪಾಡುವುದಕ್ಕೆ ಆದ್ಯತೆ ನೀಡಲಾಗುತ್ತದೆ. ಬಾದಾಮಿ ಹಾಗೂ ಸಾಸಿವೆ ಎಣ್ಣೆ ಹಚ್ಚುತ್ತಾನೆ. ಹಾಗಾಗಿ ಇದರ ಹೊರಮೈ ಫಳ ಫಳ ಹೊಳೆಯುತ್ತದೆ.
ವಾರಕ್ಕೆ ಎರಡು ಬಾರಿ ಅನ್ಮೋಲ್ನ ವೀರ್ಯವನ್ನು ಸಂಗ್ರಹಿಸಲಾಗುತ್ತದೆ. ಇದಕ್ಕೆ ಭಾರಿ ಡಿಮಾಂಡ್ ಇದೆ. ಪ್ರತಿ ವೀರ್ಯ ಸಂಗ್ರಹಕ್ಕೆ 250 ರೂಪಾಯಿ ದರವಿದೆ. ಪ್ರತಿ ಬಾರಿ ತೆಗೆಯುವ ವೀರ್ಯವನ್ನು 300-900 ಜಾನುವಾರುಗಳ ಗರ್ಭದಾರಣೆಗೆ ಬಳಸಬಹುದು. ಹೀಗೆ ಕೋಣದ ವೀರ್ಯದಿಂದಲೇ ತಿಂಗಳಿಗೆ 4 ರಿಂದ 5 ಲಕ್ಷ ರೂಪಾಯಿ ಸಂಪಾದಿಸುತ್ತಿದ್ದಾನೆ .
ಇದನ್ನೂ ಓದಿ ನಿಮ್ಮ ಜಮೀನಿನ ಅಕ್ಕಪಕ್ಕದ ರೈತರಿಗೆ ಎಷ್ಟು ಎಕರೆ ಜಮೀನಿದೆ? ಚೆಕ್ ಮಾಡಿ
ಉತ್ತರಪ್ರದೇಶದಲ್ಲಿ ನಡೆದ ಜಾತ್ರೆಯಲ್ಲಿ ಉದ್ಯಮಿಯೊಬ್ಬರು 23 ಕೋಟಿ ರೂಪಾಯಿಗೆ ಇದರ ಖರೀದಿಗೆ ಪ್ರಸ್ತಾಪಿಸಿದ್ದರು. ಆದರೆ, ಅದರ ಮಾಲಿಕ ಅದಕ್ಕೊಪ್ಪಲಿಲ್ಲ. .ಈ ಅನ್ಮೋಲ್ ನನ್ನ ಕುಟುಂಬದ ಸದಸ್ಯನಿದ್ದಾನೆ. ಹಾಗಾಗಿ ಮಾರುವುದಿಲ್ಲವೆಂದು ಹೇಳಿದ್ದಾರೆ