ಅಂಗನವಾಡಿ ಕಾರ್ಯಕರ್ತೆಯರ ಹುದ್ದೆಗೆ ಅರ್ಜಿ ಆಹ್ವಾನ

Written by Ramlinganna

Updated on:

Anganawadi worker helpers notification ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ ಶಿಶು ಅಭಿವೃದ್ಧಿ ಯೋಜನೆಗಳ ಅಂಗನವಾಡಿ ಕೇಂದ್ರಗಳಲ್ಲಿ ಖಾಲಿಯಿರುವ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ.

ಹೌದು, ಅಂಗನವಾಡಿ ಕಾರ್ಯಕರ್ತೆ 106  ಮತ್ತು ಅಂಗನವಾಡಿ ಸಹಾಯಕಿಯರ 278 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ.

ಈ ಹುದ್ದೆಗಳಿಗೆ ಮಹಿಳಾ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದ್ದು, ಹುದ್ದೆಗಳ ವಿವರ, ವಿದ್ಯಾರ್ಹತೆ, ವಯೋಮಿತಿ, ಇತರೆ ಹೆಚ್ಚಿನ ಮಾಹಿತಿಗಳನ್ನು ಇಲ್ಲಿ ನೀಡಲಾಗಿದೆ.

ವಿದ್ಯಾರ್ಹತೆ

ಅಂಗನವಾಡಿ ಕಾರ್ಯಕರ್ತೆಯರ ಹುದ್ದೆಗೆ 12ನೇ ತರಗತಿ, ಡಿಪ್ಲೋಮಾ, ತತ್ಸಮಾನ ಶಿಕ್ಷಣ ಯಾವುದಾದರೊಂದು ಪಾಸ್ ಆಗಿರಬೇಕು. ಅಂಗನವಾಡಿ ಸಹಾಯಕಿಯರ ಹುದ್ದೆಗೆ 10 ನೇ ತರಗತಿ ಪಾಸ್ ಆಗಿರಬೇಕು.

ಅರ್ಜಿ ಯಾವಾಗ ಸಲ್ಲಿಸಬೇಕು?

ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಜನವರಿ 10 ರಿಂದ ಆರಂಭವಾಗಿದೆ. ಫೆಬ್ರವರಿ 5 ರವರೆಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.

Anganawadi worker helpers notification ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು

ಜನನ ಪ್ರಮಾಣ ಪತ್ರ / ಜನ್ಮ ದಿನಾಂಕ ಇರುವ ಎಸ್ಎಸ್ಎಲ್ಸಿ , ಪಿಯುಸಿ ಅಂಕಪಟ್ಟಿ ಇರಬೇಕು. ವಾಸಸ್ಥಳ ಪ್ರಮಾಣ ಪತ್ರ ಇರಬೇಕು. ವಿದ್ಯಾರ್ಹತೆ ಬಗ್ಗೆ ಪ್ರಮಾಣ ಪತ್ರ ಪಡೆದಿರಬೇಕು.

ಅಂಗನವಾಡಿ ಕಾರ್ಯಕರ್ತೆ ನೇಮಕಾತಿಗಳಲ್ಲಿ ವಿಕಲಚೇತನರಿಗೆ 10 ವರ್ಷ  ವಯೋಮಿತಿ ಸಡಿಲಿಕೆ ನೀಡಲಾಗಿದೆ. ಈ ಅಭ್ಯರ್ಥಿಗಳು ಸಹ ಪ್ರಮಾಣ ಪತ್ರ ಸಲ್ಲಿಸಬೇಕು.

ಮೀಸಲಾತಿ ಮತ್ತು ಜಾತಿ ಪ್ರಮಾಣ ಪತ್ರ ಸಲ್ಲಿಸುವುದು ಕಡ್ಡಾಯವಾಗಿದೆ. ವಿಧೆಯೆಯಾಗಿದ್ದಲ್ಲಿ ಪತಿಯ ಪ್ರಮಾಣ ಪತ್ರ ಸಲ್ಲಿಸೇಕು.  ಯೋಜನಾ ನಿರಾಶ್ರಿತರಾಗಿದ್ದಲ್ಲಿ ಪ್ರಮಾಣ ಪತ್ರ ಸಲ್ಲಿಸಬೇಕು. ವಿಚ್ಛೇದಿತರಾಗಿದಲ್ಲಿ ಪ್ರಮಾಣ ಪತ್ರ ಸಲ್ಲಿಸಬೇಕು.

ಅರ್ಜಿ ಸಲ್ಲಿಸಲು ಬೇಕಾಗುವ ವಯೋಮಿತಿ

ಯಾವುದೇ ಹುದ್ದೆಗೆ ಅರ್ಜಿ ಸಲ್ಲಿಸಲು ಕನಿಷ್ಠ 18 ವರ್ಷ ತುಂಬಿರಬೇಕು. 35 ವರ್ಷ ವಯಸ್ಸು ಮೀರಿರಬಾರದು.

ಅರ್ಜಿ ಎಲ್ಲಿ ಸಲ್ಲಿಸಬೇಕು.

ಅರ್ಜಿ ಸಲ್ಲಿಸಲು ಆಸಕ್ತ ಹೊಂದಿರುವ ಮಹಿಳಾ ಅಭ್ಯರ್ಥಿಗಳು

https://karnemakaone.kar.nic.in/abcd/home.aspx

ಅಲ್ಲಿ ನಿಮಗೆ ಕೆಲವು ಆಯ್ಕೆಗಳು ಕಾಣಿಸುತ್ತವ. ಹುದ್ದೆಗೆ ಅರ್ಜಿ ಸಲ್ಲಿಸುವ ಲಿಂಕ್, ಭಾವಚಿತ್ರ ಅಪ್ಲೋಡ್ ಮಾಡುವ ಲಿಂಕ್, ಬಳಕೆದಾರರ ಕೈಪಿಡಿ ಹೀಗೆ ವಿವಿಧ ಆಯ್ಕೆಗಳು ಕಾಣಿಸುತ್ತವೆ.

ಅಂಗನವಾಡಿ ಕಾರ್ಯಕರ್ತೆ ಸಹಾಯಕಿಯರ ಹುದ್ದೆಗೆ ಅರ್ಜಿ ಸಲ್ಲಿಸಿ ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸುವ ಮಹಿಳಾ ಮತ್ತಿು ಮಕ್ಕಳ ಅಭಿವೃದ್ಧಿ ಇಲಾಖೆಯ ಪೇಜ್ ತೆರೆದುಕೊಳ್ಳುತ್ತದೆ.

ಇದನ್ನೂ ಓದಿ ಗೃಹಲಕ್ಷ್ಮೀ ಹಣ ಯಾರಿಗೆ ಜಮೆ? ಯಾರಿಗೆ ಜಮೆಯಾಗಲ್ಲ? ಇಲ್ಲಿದೆ ಮಾಹಿತಿ

ಅಲ್ಲಿ ನಿಮ್ಮಜಿಲ್ಲೆಯನ್ನು ಆಯ್ಕೆ ಮಾಡಿಕೊಳ್ಳಬೇಕು. ನಂತರ ನಿಮ್ಮ ತಾಲೂಕು ಆಯ್ಕೆ ಮಾಡಿಕೊಳ್ಳಬೇಕು. ನಂತರ ನೀವು ಯಾವ ಹುದ್ದೆಗೆ ಅರ್ಜಿ ಸಲ್ಲಿಸಬಯಸುತ್ತೀರೋ ಆ ಹುದ್ದೆ ಆಯ್ಕೆ ಮಾಡಿಕೊಳ್ಳಬೇಕು. ಜಾತಿ ಆಯ್ಕೆ ಮಾಡಿಕೊಳ್ಳಬೇಕು. ಪರಿಶಿಷ್ಟ ಜಾತಿಯವರಾಗಿದ್ದರೆ ಆರ್.ಡಿ ಸಂಖ್ಯೆ ನಮೂದಿಸಬೇಕು. ನಂತರ ಸಬ್ಮಿಟ್ ಮೇಲೆ ಕ್ಲಿಕ್ ಮಾಡಬೇಕು. ಇದಾದನಂತರ ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಬೇಕು.  ಹೆಚ್ಚಿನ ಮಾಹಿತಿಗಾಗಿ 08138232315 ಗೆ ಸಂಪರ್ಕಿಸಲು ಕೋರಲಾಗಿದೆ.

ನಂತರ ನಿಮ್ಮ ಜಿಲ್ಲೆ ಆಯ್ಕೆ ಮಾಡಿಕೊಳ್ಳಬೇಕು. ನಂತರ ತಾಲೂಕು, ಶಿಶು ಅಭಿವೃದ್ಧಿ ಯೋಜನೆ ಮತ್ತು ನೇಮಕಾತಿ ಬಯಸುವ ಹುದ್ದೆಯನ್ನು ಆಯ್ಕೆ ಮಾಡಿಕೊಳ್ಳಬೇಕು.

ನಂತರ ಅಂಗನವಾಡಿ ಕೇಂದ್ರವನ್ನು ಆಯ್ಕೆ ಮಾಡಿಕೊಳ್ಳಬೇಕು. ಆಗ ಅಪ್ಲಿಕೇಶನ್ ಫಾರ್ಮ್ ತೆರೆದುಕೊಳ್ಳುತ್ತದೆ. ಅಗತ್ಯ ದಾಖಲೆಗಳನ್ನು ಆಯಾ ಬಟನ್ ಕ್ಲಿಕ್ಮಾಡಿ ಅಪ್ಲೋಡ್ ಮಾಡಬೇಕು.

Leave a Comment