Anganawadi karyakarteyara job notification ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಶಿಶು ಅಭಿವೃದ್ಧಿ ಯೋಜನೆಯಲ್ಲಿ ಖಾಲಿಯಿರುವ ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ.
ಹೌದು ರಾಮನಗರ ಜಿಲ್ಲೆಯ ಮಾಯಾಗಾನಹಳ್ಳಿ ಕಾಲೋನಿ ಮಿನಿ, ಚಿಕ್ಕಭೈರಮಂಗಲ ಮಿನಿ, ಭೈರಮಂಗಲ-2 ಮಿನಿ, ಅಂಗರಪಾಳ್ಯ ಮಿನಿ, ಗೊಲ್ಲಚೆನ್ನಯ್ಯನದೊಡ್ಡಿ ಮಿನಿ, ಪರಸನಪಾಳ್ಯ ಮಿನಿ, ತೋಪ್ ಖಾನ್ ಮೊಹಲ್ಲಾ ಮಿನಿ ಅಂಗನವಾಡಿ ಕೇಂದ್ರ ಹಾಗೂ ಮರ್ದ ಸಾಬ್ರು ದೊಡ್ಡಿ, ಯಾಕೂಬ್ ನಗರ-2, ಕೋಡಿ ಹಳ್ಳಿ, ಕೋಡಿದೊಡ್ಡಿ ಪಾಳ್ಯ, ಡಣಾಯಕನಪುರ, ಚುಂಚುಗ, ತಿಮ್ಮೇಗೌಡನದೊಡ್ಡಿ, ಕಾಕರಾಮನಹಳ್ಳಿ, ಗುಡ್ಡದಹಳ್ಳಿ, ಮನಮಾನಹಳ್ಳಿ, ಕುಂಬಾಪುರ ಕಾಲೋನಿ, ನಾಲಬಂದವಾಡಿ, ಅಬ್ಬನಕುಪ್ಪೆ, ಕೆಂಜಿಗರಹಳ್ಳಿ ಸಹಾಯಕಿಯರ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸಲು ಜೂನ್ 21 ಕೊನೆಯ ದಿನವಾಗಿದೆ. ಹೆಚ್ಚಿನ ಮಾಹಿತಿಗೆ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿ, ಜಿಲ್ಲಾ ಪಂಚಾಯತ್ ಎದುರು, ಬಿ.ಎಂ. ರಸ್ತೆ ರಾಮನಗರ, ದೂರವಾಣಿ ಸಂಖ್ಯೆ 08027273912 ಗೆ ಸಂಪರ್ಕಿಸಬಹುದು.
Anganawadi karyakarteyara job notification ದಾವಣಗೆರೆ ಜಿಲ್ಲೆಯಲ್ಲಿಯೂ ಅರ್ಜಿ ಆಹ್ವಾನ
ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನಲ್ಲಿ ಖಾಲಿಯಿರುವ 3 ಅಂಗನವಾಡಿ ಕಾರ್ಯಕರ್ತೆ, 1 ಮಿನಿ ಅಂಗನವಾಡಿ ಕಾರ್ಯಕರ್ತೆ, 20 ಅಂಗನವಾಡಿ ಸಹಾಯಕಿಯರ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಮೀಸಲಾತಿಗೆ ಅನುಗುಣವಾಗಿ ಅರ್ಹ ಸ್ಥಳೀಯ ಮಹಿಳಾ ಲಿಂಗತ್ವ ಅಲ್ಪಸಂಖ್ಯಾತ ಅಭ್ಯರ್ಥಿಗಳು ಅರ್ಜಿ ನಮೂನೆಯನ್ನು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಯಲ್ಲಿ ಪಡೆದು ಜೂನ್ 26 ರಂದು ಸಾಯಂಕಾಲ 5.30 ಗಂಟೆಯೊಳಗಾಗಿ ಭರ್ತಿ ಮಾಡಿ ಸಲ್ಲಿಸಬೇಕು.
ಇದನ್ನೂ ಓದಿ : ಅಂಗನವಾಡಿ ಕಾರ್ಯಕರ್ತೆ. ಸಹಾಯಕಿಯರ 200 ಕ್ಕೂ ಹೆಚ್ಚು ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ
ಹೆಚ್ಚಿನ ಮಾಹಿತಿಗಾಗಿ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿ, ಪಿಎಲ್ಡಿ ಬ್ಯಾಂಕ್ ಬಿಲ್ಡಿಂಗ್, ಶಿವಮೊಗ್ಗ ರೋಡ್, ಹರಿಹರ ಹಾಗೂ ದೂರವಾಣಿ ಸಂಖ್ಯೆ 08192 241431 ಗೆ ಸಂಪರ್ಕಿಸಲು ಕೋರಲಾಗಿದೆ.
ಚಾಮರಾಜನಗರ ಜಿಲ್ಲೆಯಿಂದಲೂ ಅರ್ಜಿ ಆಹ್ವಾನ
ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕು ವ್ಯಾಪ್ತಿಯ ಅಂಗನವಾಡಿ ಕೇಂದ್ರಗಳಲ್ಲಿ ಖಾಲಿಯಿರುವ 18 ಅಂಗನವಾಡಿ ಕಾರ್ಯಕರ್ತೆ ಾಹಗೂ 41 ಸಹಾಯಕಿಯರ ಹುದ್ದೆಗಳಿಗೆ ಗೌರವ ಸೇವೆಯಆಧಾರದ ಮೇಲೆ ನೇಮಕ ಮಾಡಿಕೊಳ್ಳಲಾಗುವುದು. ಮಹಿಳಾ ಅಭ್ಯರ್ಥಿಗಳು ಹಾಗೂ ಮಹಿಳಾ ಲಿಂಗತ್ವ ಅಲ್ಪಸಂಖ್ಯಾತರಿಂದ ಆಫ್ಲೈನ್ ನಲ್ಲಿ ಅರ್ಜಿ ಆಹ್ವಾನಿಸಲಾಗಿದೆ.
ಹೊರೆಯಾಲ ಗ್ರಾಪಂ ರಂಗಾಪೂರ (ಇತರೆ), ವಡ್ಡಗೆರೆ ಗ್ರಾಪಂ ಹೆಗ್ಗವಾಡಿ (ಪರಿಶಿಷ್ಟ ಜಾತಿ), ಮಂಗಲ ಗ್ರಾಪಂ ಚೆನ್ನಿಕಟ್ಟೆ (ಮಿನಿ) ಪರಿಶಿಷ್ಟ ಪಂಗಡ), ಹುಂಡಿಪುರ ಗ್ರಾಪಂ ಯ ಹುಡಿಪುರ (ಇತರೆ), ಬಾಚಹಳ್ಳಿ ಗ್ರಾಪಂನ ಹುಂಡಿಯಪುರ (ಇತರೆ) ಬಾಚಹಳ್ಳಿ ಗ್ರಾಪಂನ ಮಾಲಾಪೂರ (ಇತರೆ), ಕುತನೂರು ಗ್ರಾಪಂ ನ (ಕುತನೂರು-2 (ಇತರೆ), ಬೇರಂಬಾಡಿ ಗ್ರಾಪಂನ ಬೇರಂಬಾಡಿ ಕಾಲೋನಿ (ಮಿನಿ) ಪರಿಶಿಷ್ಟ ಜಾತಿ, ಲಕ್ಷ್ಮಿಪುರ (ಮಿನಿ) ಇತರೆ, ಬರಗಿ ಗ್ರಾಪಂ ಬರಗಿ ಕಾಲೋನಿ (ಮಿನಿ) ಪರಿಶಿಷ್ಟ ಪಂಗಡ), ಬರಗಿ (ಇತರೆ). ಅಲತ್ತೂರು ಗ್ರಾಪಂ ದೇಶೀಪುರ ಕಾಲೋನಿ (ಮಿನಿ) (ಪರಿಶಿಷ್ಟ ಪಂಗಡ), ತೆರಕಣಾಂಬಿ ಗ್ರಾಪಂ ತೆರಕಣಾಂಬಿ-5, (ಪರಿಶಿಷ್ಟ ಪಂಗಡ), ಅಲತ್ತೂರುಗ್ರಾಪಂ ಮಂಚಹಳ್ಳಿ -2 (ಪರಿಶಿಷ್ಟ ಪಂಗಡ), ಅಲತ್ತೂರು ಗ್ರಾಪಂ ಮಂಚಹಳ್ಳಿ-2) (ಪರಿಶಿಷ್ಟ ಪಂಗಡ), ಹುಂಡಿಪುರ ಗ್ರಾಪಂ (ಕೆಬ್ಬೇಪುರ (ಇತರೆ), ಪುತ್ತನಪುರ (ಗ್ರಾಪಂನ ಹಂಗಳಾಪುರ (ಇತರೆ) ಗುಂಡ್ಲುಪೇಟೆ ಪುರಸಭೆಯ ವ್ಯಾಪ್ತಿಯ ಅರಳಿಕಟ್ಟೆ ರಾಮಮಂದಿರ ವಾರ್ಡ್ ನಂಬ. 14 ಗುಂಡ್ಲುಪೇಟೆ ಟೌನ್ (ಪರಿಶಿಷ್ಟ ಪಂಗಡ) ಅಂಗನವಾಡಿ ಕೇಂದ್ರಗಳಲ್ಲಿ ಕಾರ್ಯಕರ್ತೆಯರ ಹುದ್ದೆಗಳು ಖಾಲಿಯಿವೆ.
ಅರ್ಜಿಗಳನ್ನು ಜೂನ್ 16 ರ ಸಂಜೆಯ 5.30 ಗಂಟೆಯೊಳಗೆ ಸಲ್ಲಿಸಬಹುದು. ಅರ್ಜಿ ಹಾಗೂ ಹೆಚ್ಚಿನ ವಿವರಗಳಿಗೆ ಗುಂಡ್ಲುಪೇಟೆ ಊಟ ರಸ್ತೆಯಲ್ಲಿರುವ ಮಿನಿ ವಿಧಾನಸೌಧ(ರೂಂ.ನಂ5) ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕಚೇರಿ 08239 222286,8748913018) ಶಿಶು ಅಭಿವೃದ್ಧಿ ಯೋಜನಾಧಿಕಾರಿ ತಿಳಿಸಿದ್ದಾರೆ.