Agniveer vayu appointment : ಅಗ್ನಿಪಥ ಯೋಜನೆಯಡಿ ಭಾರತೀಯ ವಾಯು ಸೇನೆಯಲ್ಲಿ ಅಗ್ನಿವೀರ ವಾಯು ಹುದ್ದೆಗೆ ಅರ್ಹ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸಲು ಬೇಕಾಗುವ ಅರ್ಹತೆಗಳು, ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಹಾಗೂ ಅರ್ಜಿ ಎಲ್ಲಿ ಹೇಗೆ ಸಲ್ಲಿಸಬೇಕು ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ.
ಅರ್ಜಿ ಸಲ್ಲಿಸಲು ಬೇಕಾಗುವ ಅರ್ಹತೆಗಳು
ಅಗ್ನಿವೀರ ವಾಯು ಹುದ್ದೆಗೆ ಅರ್ಜಿ ಸಲ್ಲಿಸಲು ಕನಿಷ್ಠ 17 ½ ವರ್ಷದಿಂದ ಗರಿಷ್ಠ 21 ವರ್ಷದೊಳಗಿರಬೇಕು. ಅಂದರೆ ಅರ್ಜಿ ಸಲ್ಲಿಸುವ ಅವಿವಾಹಿತ ಪುರುಷ – ಮಹಿಳೆಯರು 02 ಜನವರಿ 2004 ಮತ್ತು 02 ಜುಲೈ 2007 ರ ನಡುವೆ ಜನಿಸಿರಬೇಕು.
ಅಗ್ನಿವೀರ ವಾಯು ಹುದ್ದೆಗೆ ಪಿಯುಸಿಯಲ್ಲಿ ಶೇ. 50 ರಷ್ಟು ಹಾಗೂ ಆಂಗ್ಲ ಭಾಷೆಯಲ್ಲಿ ಪ್ರತಿಶತ ಶೇ. 50 ರಷ್ಟು ಅಂಕಗಳನ್ನು ಪಡೆದು ಉತ್ತೀರ್ಣರಾಗಿರಬೇಕು. ಅಗ್ನಿವೀರ ವಾಯು ಹುದ್ದೆಗೆ ಡಿಪ್ಲೋಮಾದಲ್ಲಿ ಪ್ರತಿಶತ ಶೇ. 50 ರಷ್ಟು ಅಂಕಗಳನ್ನು ಪಡೆದು ಉತ್ತೀರ್ಣರಾಗಿರಬೇಕು.
ಫೆಬ್ರವರಿ 6 ರೊಳಗೆ ಅಭ್ಯರ್ಥಿಗಳು ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕು.
Agniveer vayu appointment : ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸುವುದು ಹೇಗೆ?
ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಈ
https://agnipathvayu.cdac.in/
ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ನಂತರ ಅಲ್ಲಿ ಕೇಳಲಾದ ಮಾಹಿತಿಗಳನ್ನು ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ ಆನ್ಲೈನ್ ನಲ್ಲೇ ಅರ್ಜಿ ಸಲ್ಲಿಸಬೇಕಾಗುತ್ತದೆ.
ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು
10ನೇ ತರಗತಿಯ ಅಂಕಪಟ್ಟಿ.
12ನೇ ತರಗತಿ ವಿಜ್ಞಾನ ವಿಭಾಗ / ತತ್ಸಮಾನ ವಿದ್ಯಾರ್ಹತೆ ದಾಖಲೆ
2 ವರ್ಷದ ವೃತ್ತಿಪರ ಕೋರ್ಸ್ ಪಾಸ್ ಮಾಡಿದ ಸರ್ಟಿಫಿಕೇಟ್
ಪಾಸ್ಪೋರ್ಟ್ ಅಳತೆಯ ಭಾವಚಿತ್ರ
ಅಭ್ಯರ್ಥಿ ಸಹಿ ಸ್ಕ್ಯಾನ್ ಕಾಪಿ
ಅಭ್ಯರ್ಥಿ ಎಡಗೈ ಹೆಬ್ಬೆರಳು ಥಂಬ್ ಇಂಪ್ರಿಶನ್ ಸ್ಕ್ಯಾನ್ ಕಾಪಿ
ಪೋಷಕರ ಸಹಿ
ಆಯ್ಕೆ ಪ್ರಕ್ರಿಯೆ ಹೇಗೆ ನಡೆಯುತ್ತದೆ?
ಲಿಖಿತ ಪರೀಕ್ಷೆ, ದೈಹಿಕ ಸಾಮರ್ಥ್ಯ ಪರೀಕ್ಷೆ, ವೈದ್ಯಕೀಯ ಪರೀಕ್ಷೆ, ಸಹಿಷ್ಣುತೆ ಪರೀಕ್ಷೆಗಳನ್ನು ನಡೆಸುವ ಮೂಲಕ ಅಭ್ಯರ್ಥಿಗಳ ಆಯ್ಕೆ ಮಾಡಲಾಗುತ್ತದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದರ ಆಯ್ಕೆ ಪರೀಕ್ಷೆಗಳು ಮಾರ್ಚ್ 17 ರಿಂದ ಆರಂಭವಾಗಲಿದೆ.
ಇದನ್ನೂ ಓದಿ ಅನ್ನಭಾಗ್ಯ ಹಣ ನಿಮಗೆ ಜಮೆಯಾಗಿಲ್ಲವೇ? ಸ್ಟೇಟಸ್ ಚೆಕ್ ಮಾಡಿ
ಅಗ್ನಿವೀರರ ವೇತನ
ಮೊದಲನೇ ವರ್ಷ 30 ಸಾವಿರ ಹಾಗೂ ಇತರೆ ಭತ್ಯೆ
ಎರಡನೇ ವರ್ಷ 33 ಸಾವಿರ ಹಾಗೂ ಇತರೆ ಭತ್ಯೆ
ಮೂರನೇ ವರ್ಷ 36500 ರೂಪಾಯಿ ಹಾಗೂ ಇತರೆ ಭತ್ಯೆ
ನಾಲ್ಕನೇ ವರ್ಷ 40 ಸಾವಿರ ಹಾಗೂ ಇತರೆ ಭತ್ಯೆ
ಅಗ್ನಿವೀರ ಹುದ್ದೆಯಿಂದ ನಿವೃತ್ತಿ ಪಡೆದ ಸಂದರ್ಭದಲ್ಲಿ ಸೇವಾವಧಿ ಪ್ಯಾಕೇಜ್ 10.4 ಲಕ್ಷ ರೂಪಾಯಿ ಅನ್ನು ಅಭ್ಯರ್ಥಿಗೆ ನೀಡಲಾಗುವುದು.
ಹೆಚ್ಚಿನ ಮಾಹಿತಿಗಾಗಿ
https://agnipathvayu.cdac.in
ವೆಬ್ಸೈಟ್ ನ್ನು ಸಂಪರ್ಕಿಸಲು ಕೋರಲಾಗಿದೆ. ಕಲಬುರಗಿ ಜಿಲ್ಲೆಯ ಅಭ್ಯರ್ಥಿಗಳು ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಹಾಗೂ ಕಚೇರಿ ದೂರವಾಣಿ ಸಂಖ್ಯೆ 08472 274846 ಗೆ ಸಂಪರ್ಕಿಸಲು ಕೋರಲಾಗಿದೆ.
Agniveer vayu appointment ಅಗ್ನಿವೀರ ವಾಯು ಹುದ್ದೆಗೆ ಜನವರಿ 23 ರಿಂದ ಉಚಿತ ತರಬೇತಿ ನೀಡಲು ಅರ್ಜಿ ಆಹ್ವಾನ
ಅಗ್ನಿಪಥ ಯೋಜನೆಯಡಿ ಭಾರತೀಯ ವಾಯು ಸೇನೆಯಲ್ಲಿ ಅಗ್ನಿವೀರ ವಾಯು ಹುದ್ದೆಗೆ ಸಂಬಂಧಿಸಿದಂತೆ ಜನವರಿ 23 ರಿಂದ 31 ರವರೆಗೆ ಪ್ರತಿ ದಿನ ಬೆಳಗ್ಗೆ 11 ರಿಂದ ಸಂಜೆ 5 ಗಂಟೆಯವರೆಗೆ ಕಲಬುರಗಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ನುರಿತ ಉಪನ್ಯಾಸಕರಿಂದ ಉಚಿತ ತರಬೇತಿಯನ್ನು ಹಮ್ಮಿಕೊಳ್ಳಲಾಗಿದೆಎಂದು ಕಲಬುರಗಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.
ಈ ತರಬೇತಿ ಪಡೆಯಲಿಚ್ಚಿಸುವ ಆಸಕ್ತಿಯುಳ್ಳ ಯುವಕ, ಯುವತಿಯರು ತಮ್ಮ ವಿದ್ಯಾರ್ಹತೆಯ ಮೂಲ ಪ್ರತಿಗಳು ಮತ್ತು ಝರಾಕ್ಸ್ ಪ್ರತಿ, ಭಾವಚಿತ್ರ, ಆಧಾರ್ ಕಾರ್ಡ್ ಹಾಗೂ ಅಗ್ನಿವೀರ ವಾಯು ಹುದ್ದೆಗೆ ನೋಂದಣಿ ಮಾಡಿಕೊಂಡಿರುವ ನೋಂದಣಿ ಸಂಖ್ಯೆಯೊಂದಿಗೆ ಮೇಲ್ಕಂಡ ದಿನದಂದು ನಡೆಯುವ ತರಬೇತಿಯಲ್ಲಿ ಭಾಗವಹಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಕಲಬುರಗಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯನ್ನು ಹಾಗೂ ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಲು ಕೋರಲಾಗಿದೆ.