ನಿಮಗೆ ಗೊತ್ತಿಲ್ಲದೆ ಆಧಾರ್ ಕಾರ್ಡ್ ಬೇರೆ ಕಡೆ ಬಳಕೆಯಾಗಿದೆಯೇ? ಹೀಗೆ ಚೆಕ್ ಮಾಡಿ

Written by Ramlinganna

Published on:

Aadhar card update : ಸಾರ್ವಜನಿಕರು ರೈತರು ಈಗ ತಮ್ಮ ಆಧಾರ್ ಕಾರ್ಡ್ ಎಲ್ಲೆಲ್ಲಿ ಬಳಕೆಯಾಗಿದೆ ಯಾವು ಯಾವುದಕ್ಕೆ ಲಿಂಕ್ ಆಗಿದೆ, ನಿಮಗೆ ಗೊತ್ತಿಲ್ಲದಂತೆ ಯಾರಾದರೂ ಆಧಾರ್ ಕಾರ್ಡ್ ದಿಂದ ಯಾವುದಾದರೂ ಸೌಲಭ್ಯ ಪಡೆದುಕೊಂಡಿದ್ದಾರೆಯೇ ಸೇರಿದಂತೆ ಇನ್ನಿತರ ಮಾಹಿತಿಯನ್ನು ಮೊಬೈಲ್ ನಲ್ಲೇ ಚೆಕ್ ಮಾಡಬಹುದು. ಅದು ಹೇಗೆ ಅಂದುಕೊಂಡಿದ್ದೀರಾ ಇಲ್ಲಿದೆ ನೋಡಿ ಮಾಹಿತಿ

ಆಧಾರ್ ಕಾರ್ಡ್ ಇತ್ತೀಚೆಗೆ ಬಹುತೇಕ ಎಲ್ಲಾ ಕೆಲಸಗಳಿಗೆ ಬೇಕಾಗುತ್ತದೆ. ಉದಾಹರಣೆಗೆ ಬ್ಯಾಂಕ್ ಅಕೌಂಟ್ ಓಪನ್ ಮಾಡಲು, ಹೊಸ ಸಿಮ್ ಖರೀದಿ ಮಾಡಲು, ಸರ್ಕಾರಿ ಸೌಲಭ್ಯ ಪಡೆಯಲು, ಪ್ಯಾನ್, ಕಾರ್ಡ್, ವೋಟರ್ ಹೀಗೆ ವಿವಿಧ ಕಾರ್ಯಗಳಿಗೆ ಆಧಾರ್ ಕಾರ್ಡ್ ಕಡ್ಡಾಯವಾಗಿ ಬೇಕಾಗುತ್ತದೆ. ನಮ್ಮ ಆಧಾರ್ ಕಾರ್ಡ್ ಕೆಲವು ಗೊತ್ತಿಲ್ಲದೆ ಇನ್ನೊಬ್ಬರು ಬಳಸಿಕೊಂಡಿದ್ದಾರಾ ಎಂಬುದನ್ನು ಸಹ ಮೊಬೈಲ್ ನಲ್ಲೇ ಚೆಕ್ ಮಾಡಬಹುದು.

Aadhar card update ನಿಮ್ಮ ಆಧಾರ್ ಕಾರ್ಡ್ ಎಲ್ಲೆಲ್ಲಿ ಬಳಕೆಯಾಗಿದೆ?

ನಿಮ್ಮ ಆಧಾರ್ ಕಾರ್ಡ್ ಎಲ್ಲೆಲ್ಲಿ ಬಳಕೆಯಾಗಿದ ಹೀಗೆ ಚೆಕ್ ಮಾಡಲು

https://uidai.gov.in/en/

ಈ ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಅಲ್ಲಿ ನಿಮಗೆ ಆಧಾರ್ ಕಾರ್ಡ್ ಚೆಕ್ ಮಾಡುವ ಪೇಜ್ ಓಪನ್ ಆಗುತ್ತದೆ. ಅಲ್ಲಿ ನೀವು ಮೈ ಆಧಾರ್ ಮೇಲೆ ಕ್ಲಿಕ್ ಮಾಡಬೇಕು. ನಂತರ ಆಧಾರ್ ಸರ್ವಿಸೆಸ್ ಕೆಳಗಡೆ  ಆಧಾರ್ ಅಥೆಂಟಿಕೇಶನ್  ಹಿಸ್ಟರಿ ಆಯ್ಕೆ ಮಾಡಿಕೊಳ್ಳಬೇಕು. ಇದಾದ ನಂತರ ನಿಮಗೆ ಇನ್ನೊಂದು ಪೇಜ್ ಓಪನ್ ಆಗುತ್ತದೆ. ಅಲ್ಲಿ ನೀವು ನಿಮ್ಮ 12 ಅಂಕಿಗಳ ಆಧಾರ್ ಕಾರ್ಡ್ ನಂಬರನ್ನು ಮತ್ತು  ನಂತರ ಕ್ಯಾಪ್ಚ್ಯಾ ಕೋಡ್ ಹಾಕಬೇಕು. ಇದಾದ ನಂತರ ಲಾಗಿನ್ ವಿತ್ ಓಟಿಪಿ ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮ್ಮ ಮೊಬೈಲಿಗೆ ಓಂದು ಓಟಿಪಿ ಬರುತ್ತದೆ. ಆ ಓಟಿಪಿಯನ್ನು ನಮೂದಿಸಿದ ನಂತರ ಲಾಗಿನ್ ಮೇಲೆ ಕ್ಲಿಕ್ ಮಾಡಬೇಕು. ನಂತರ ಆಲ್ ಮೇಲೆ ಕ್ಲಿಕ್ ಮಾಡಬೇಕು. ಇದಾದ ನಂತರ Fetch Authentication History ಮೇಲೆ ಕ್ಲಿಕ್ ಮಾಡಬೇಕಾಗುತ್ತದೆ.

ಆಗ ನಿಮದಗೆ ಕಳೆದ ಆರು ತಿಂಗಳಿನಿಂದ ನಿಮ್ಮ ಆಧಾರ್ ಕಾರ್ಡ್ ಎಲ್ಲೆಲ್ಲಿ ಬಳಕೆಯಾಗಿದೆ. ಅಂದರೆ ನಿಮಗೆ ಗೊತ್ತಿಲ್ಲದೆ ಯಾರಾದರೂ ಆಧಾರ್ ಕಾರ್ಡ್ ನಂಬರ್ ಪಡೆದು ಸೌಲಭ್ಯ ಪಡೆದುಕೊಂಡಿದ್ದಾರೆಯೇ ಎಂಬ ಮಾಹಿತಿ ಕಾಣಿಸುತ್ತದೆ.  ಈ ಮಾಹಿತಿಯನ್ನು ರೈತರು ಸಾರ್ವಜನಿಕರು ಯಾರ ಸಹಾಯವೂ ಇಲ್ಲದೆ ಚೆಕ್ ಮಾಡಬಹುದು. ಕೇವಲ ಸಾಮಾನ್ಯ ಮೊಬೈಲ್ ಬಳಕೆಯ ಜ್ಞಾನವಿದ್ದರೆ ಸಾಕು ಕೇವಲ ಒಂದೇ ನಿಮಿಷದಲ್ಲಿ ಚೆಕ್ ಮಾಡಬಹುದು.

ಇದನ್ನೂ ಓದಿ ನಿಮ್ಮ ಜಮೀನಿನ ಅಕ್ಕಪಕ್ಕದ ರೈತರ ಹೆಸರಿಗೆಷ್ಟು ಜಮೀನಿದೆ ಇಲ್ಲೇ ಚೆಕ್ ಮಾಡಿ

ಇದಕ್ಕೆ ನಿಮ್ಮ ಬಳಿ ಮೊಬೈಲ್ ಇದ್ದರೆ ಸಾಕು, ಇದರೊಂದಿಗೆ ನಿಮ್ಮ ಆಧಾರ್ ಕಾರ್ಡ್ ನಂಬರ್ ನೆನಪಿರಬೇಕು. ನೆನಪಿಲ್ಲದಿದ್ದರೆ ನಿಮ್ಮ ಮನೆಯಲ್ಲಿಯೇ ಆಧಾರ್ ಕಾರ್ಡ್ ನಂಬರ್ ನೋಡಿ ನಮೂದಿಸಬೇಕು. ನೀವು ಯಾವ ಆಧಾರ್ ಕಾರ್ಡಿಗೆ ಮೊಬೈಲ್ ನಂಬರ್ ಕೊಟ್ಟಿದ್ದೀರೋ ಆ ಮೊಬೈಲ್ ನಂಬರಿಗೆ ಓಟಿಪಿ ಬರುತ್ತದೆ.

ಆಧಾರ್ ಕಾರ್ಡ್ ಮಾಡುವಾಗ ಯಾವ ನಂಬರ್ ಕೊಟ್ಟಿದ್ದೀರೀ ಗೊತ್ತಿಲ್ಲವೇ?

ನೀವು ಆಧಾರ್ ಕಾರ್ಡ್ ಮಾಡಿಸುವಾಗ ಯಾವ ಮೊಬೈಲ್ ನಂಬರ್ ಕೊಟ್ಟಿದ್ದೀರಿ ಎಂಬುದು ಗೊತ್ತಿಲ್ಲದಿದ್ದರೆ ಅದನ್ನು ಸಹ ಅತೀ ಸುಲಭವಾಗಿ ಈಗ ಪ್ರಸ್ತುತದಲ್ಲಿರುವ ಮೊಬೈಲ್ ನಂಬರ್ ಬದಲಾಯಿಸಬಹುದು. ಹೌದು, ಈಗ ಪ್ರತಿಯೊಂದು ಬ್ಯಾಂಕುಗಳಲ್ಲಿ, ಗ್ರಾಮ ಒನ್ ಕೇಂದ್ರಗಳಲ್ಲಿಯೂ ಆಧಾರ್ ಕಾರ್ಡ್ ನಂಬರ್ ಬದಲಾಯಿಸುವ ಹೊಸ ಫೋಟೋ ಅಪ್ಲೋಡ್ ಮಾಡುವ ಹಾಗೂ ವಿಳಾಸ ಬದಲಾಯಿಸುವ ಅವಕಾಶವಿದೆ. ಇದಕ್ಕೆ ಪ್ರಸ್ತುತ ಮೊಬೈಲ್ ನಂಬರ್ ಕೊಟ್ಟರೆ ಸಾಕು ಕೇವಲ ಒಂದೆರಡು ನಿಮಿಷದಲ್ಲಿ ನಿಮ್ಮ ಆಧಾರ್ ಕಾರ್ಡ್ ನ್ನು ಅಪಡೆಟ್ ಮಾಡಬಹುದು.

Leave a Comment