ಗೃಹಜ್ಯೋತಿ ಯೋಜನೆಯಡಿಯಲ್ಲಿ ನೋಂದಣಿ ಮಾಡಿದ ಫಲಾನುಭವಿಗಳಿಗೆ Free electricity bill calculation) ಉಚಿತ ವಿದ್ಯುತ್ ಲೆಕ್ಕಾಚಾರ) ಹೇಗೆ ಮಾಡುತ್ತಾರೆ ನಿಮಗೆ ಗೊತ್ತೇ? ಇಲ್ಲಿದೆ ನೋಡಿ ಮಾಹಿತಿ.
200 ಯೂನಿಟ್ ಗಿಂತ ಕಡಿಮೆ ಯೂನಿಟ್ ಬಳಸಿದ್ದರೂ ಶೂನ್ಯ ಬಿಲ್ ಬಂದಿಲ್ಲವೇ? ಪ್ರತಿ ತಿಂಗಳು 100 ಯೂನಿಟ್ ವರೆಗೆ ವಿದ್ಯುತ್ ಬಳಸಿದರೂ ನಿಮಗೆ ಬಿಲ್ ಬರುತ್ತಿದೆಯೇ? ಕಡಿಮೆ ಯೂನಿಟ್ ಬಳಸಿದರೂ ವಿದ್ಯುತ್ ಯೂನಿಟ್ ಲೆಕ್ಕಾಚಾರ ಹೇಗೆ ಮಾಡುತ್ತಾರೆ? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.
ರಾಜ್ಯ ಸರ್ಕಾರವು ಗೃಹ ಜ್ಯೋತಿ ಯೋಜನೆಯಡಿಯಲ್ಲಿ ನೋಂದಣಿ ಮಾಡಿಸಿದ ಫಲಾನುಭವಿಗಳಿಗೆ 200 ಯೂನಿಟ್ ವರೆಗೆ ಉಚಿತ ವಿದ್ಯುತ್ ನೀಡಲಾಗುವುದು ಎಂದು ಘೋಷಿಸಿತ್ತು. ನಂತರ ರಾಜ್ಯ ಸರ್ಕಾರವು ರಾಜ್ಯದ ಜನತೆಗೆ ನೀಡಿದ ಭರವಸೆಯಂತೆ ಉಚಿತ ವಿದ್ಯುತ್ ಗ್ಯಾರೆಂಟಿ ಯೋಜನೆಯನ್ನು ಚಾಲನೆ ನೀಡಿತು. ಈ ಯೋಜನೆಯಡಿಯಲ್ಲಿ ಈಗಾಗಲೇ ರಾಜ್ಯದ ಜನತೆ ಸೌಲಭ್ಯ ಪಡೆಯುತ್ತಿದ್ದಾರೆ.. ಆದರೆ ಬಹುತೇಕ ಫಲಾನುಭವಿಗಳಿಗೆ ವಾರ್ಷಿಕ ಬಳಕೆಯ ಯೂನಿಟ್ ಮೇಲೆ ಲೆಕ್ಕಾಚಾರ ಮಾಡಿ 200 ಯೂನಿಟ್ ವರೆಗೆ ಉಚಿತ ವಿದ್ಯುತ್ ನೀಡಲಾಗುವುದು. ಒಂದು ವರ್ಷದಲ್ಲಿ ನೀವು ಬಳಸುವ ವಿದ್ಯುತ್ ಯೂನಿಟ್ ಆಧಾರದ ಮೇಲೆ ಲೆಕ್ಕಾಚಾರ ಮಾಡಿ ಬಿಲ್ ನೀಡಲಾಗುವುದು.
Free electricity bill calculation ಲೆಕ್ಕಾಚಾರ ಹೇಗೆ ಮಾಡುತ್ತಾರೆ?
ಗೃಹ ಜ್ಯೋತಿ ಯೋಜನೆಯಡಿಯಲ್ಲಿ ಉಚಿತ ವಿದ್ಯುತ್ ಸೌಲಭ್ಯ ನೀಡಲು 2022 ರ ಜುಲೈ ತಿಂಗಳಿಂದ ಜೂನ್ 2023 ರವರೆಗೆ ಒಂದು ವರ್ಷದ ಯೂನಿಟ್ ಗಳನ್ನು ಲೆಕ್ಕಾಚಾರ ಮಾಡಲಾಗುವುದು. ಹೌದು ಉದಾಹರಣೆಗೆ ನೀವು ಜುಲೈ ತಿಂಗಳಲ್ಲಿ 90, ಆಗಸ್ಟ್ ತಿಂಗಳಲ್ಲಿ 70, ಸೆಪ್ಟೆಂಬರ್ ತಿಂಗಳಲ್ಲಿ 80, ಅಕ್ಟೋಬರ್ ತಿಂಗಳಲ್ಲಿ 90, ನವೆಂಬರ್ ತಿಂಗಳಲ್ಲಿ 80, ಡಿಸೆಂಬರ್ ತಿಂಗಳಲ್ಲಿ 80, ಜನವರಿ ತಿಂಗಳಲ್ಲಿ 80, ಫೆಬ್ರವರಿ ತಿಂಗಳಲ್ಲಿ 100, ಮಾರ್ಚ್ ತಿಂಗಳಲ್ಲಿ 80, ಏಪ್ರೀಲ್ ತಿಂಗಳಲ್ಲಿ 70, ಮೇ ತಿಂಗಳಲ್ಲಿ 60 ಹಾಗೂ ಜೂನ್ ತಿಂಗಳಲ್ಲಿ 90 ಯೂನಿಟ್ ಬಳಸಿದ್ದರೆ ಒಟ್ಟು ಯೂನಿಟ್ ಗಳನ್ನು ಕೂಡಿಸಿ 12 ರಿಂದ ಭಾಗಿಸಿದರೆ ಪ್ರತಿ ತಿಂಗಳು ಸರಾಸರಿ ಬರುತ್ತದೆ. ಇದರಿಂದ ನೀವು ಬಳಸುವ ಉಚಿತ ವಿದ್ಯುತ್ ಯೂನಿಟ್ ಎಷ್ಟು ಎಂಬುದು ತಿಳಿಯುತ್ತದೆ.
ಇದನ್ನೂ ಓದಿ : ಇಂದು ಗೃಹಲಕ್ಷ್ಮೀ 6ನೇ ಕಂತಿನ ಹಣ ಜಮೆ
ಮೇಲೆ ತಿಳಿಸಿದ ಯೂನಿಟ್ ಗಳನ್ನು ಲೆಕ್ಕಾಚಾರ ಮಾಡೋಣ. 90+ 70+ 80+ 90+ 80+ 80+ 80+ 100+ 80+ 70+ 60+ 90 = 970 ಯೂನಿಟ್ ಬಳಸಿದ್ದಿರೆಂದರ್ಥ. ಇದನ್ನೂ 12 ರಿಂದ ಭಾಗಿಸಿದರೆ 80.83 ಯೂನಿಟ್ ವರೆಗೆ ಉಚಿತ ವಿದ್ಯುತ್ ಬಿಲ್ ಸರಾಸರಿ ಆಗಲಿದೆ. ಇದಕ್ಕೆ ಮಾಸಿಕ ಸರಾಸರಿಗೆ ಶೇ. 10 ರಷ್ಟು ಅಂದರೆ 7.8% ರಷ್ಟು ಸೇರಿಸಿದರೆ 87.8 ಯೂನಿಟ್ ವರೆಗೆ ಉಚಿತ ವಿದ್ಯುತ್ ಸೌಲಭ್ಯ ದೊರೆಯಲಿದೆ.
ಸರಾಸರಿ ವಿದ್ಯುತ್ ಗಿಂತ ಕಡಿಮೆಯಿದ್ದರೂ ನಿಮಗೆ ಉಚಿತ ವಿದ್ಯುತ್ ಸಿಗುತ್ತಿಲ್ಲವೇ? ಹಾಗಾದರೆ ತಾಂತ್ರಿಕ ತೊಂದರೆ ಆಗಿರಬಹುದು. ನಿಮ್ಮ ವಿದ್ಯುತ್ ಬಿಲ್ ನಲ್ಲಿ ನಿಮಗೆ ಗೃಹಜ್ಯೋತಿ ಸಬ್ಸಿಡಿ ಎಷ್ಟು ಸಿಗುತ್ತಿದೆ ಎಂಬುದನ್ನು ನಮೂದಿಸಲಾಗಿರುತ್ತದೆ. ಅದು ಗೊತ್ತಾಗುತ್ತಿಲ್ಲವಾದರೆ ನೀವು ನಿಮ್ಮ ಹತ್ತಿರದ ಎಸ್ಕಾಂ ಕಚೇರಿಗೆ ಹೋಗಿ ವಿಚಾರಿಸಬೇಕಾಗುತ್ತದೆ.
ಗೃಹಜ್ಯೋತಿ ಅರ್ಜಿಯ ಸ್ಟೇಟಸ್ ಚೆಕ್ ಮಾಡುವುದು ಹೇಗೆ?
ಗೃಹಜ್ಯೋತಿಗೆ ಅರ್ಜಿ ಸಲ್ಲಿಸಿದವರು ಸ್ಟೇಟಸ್ ಚೆಕ್ ಮಾಡಲು ಈ
https://sevasindhu.karnataka.gov.in/StatucTrack/Track_Status
ಲಿಂಕ್ ಮೇಲೆ ಕ್ಲಿಕ್ ಮಾಡಿ ಸ್ಟೇಟಸ್ ಚೆಕ್ ಮಾಡಬಹುದು.
ಒಂದು ವರ್ಷದ ಒಳಗಡೆ ಮೀಟರ್ ತೆಗೆದುಕೊಂಡವರಿಗೆ ಲೆಕ್ಕ ಹೇಗೆ ಹಾಕಲಾಗುವುದು?
ಕಳೆದ ವರ್ಷ ಜುಲೈ ತಿಂಗಳಿಂದ ಜೂನ್ ತಿಂಗಳವರೆಗೆ ವಾರ್ಷಿಕ ಲೆಕ್ಕಾಚಾರ ಹಾಕಲಾಗುವುದು. ಆದರೆ ಒಂದು ವರ್ಷದ ಒಳಗಡೆ ಮನೆ ಕಟ್ಟಿದವರಿಗೆ ಹೇಗೆ 57 ಯೂನಿಟ್ ವರೆಗೆ ಲೆಕ್ಕಾಚಾರ ಮಾಡಲಾಗುವುದು. ಇದು ಯಾವ ತಿಂಗಳಲ್ಲಿ ಮನೆ ಕಟ್ಟಿ ವಿದ್ಯುತ್ ಮೀಟರ್ ಗೆ ಅಪ್ಲೈ ಮಾಡಿದ್ದೀರೋ ಆ ತಿಂಗಳಿನಿಂದ ಲೆಕ್ಕಾಚಾರ ಹಾಕಲಾಗುವುದು.
ನಿಮ್ಮ 12 ತಿಂಗಳ ವಿದ್ಯುತ್ ಬಿಲ್ ನಿಮ್ಮಲ್ಲಿರದಿದ್ದರೆ ನೀವು ಹೆಸ್ಕಾಂ ಕಚೇರಿಗೆ ಹೋಗಿ ವಿಚಾರಿಸಿ ತಿಂಗಳ ಸರಾಸರಿ ಬಿಲ್ ಪಡೆಯಬಹುದು. ಆಗ ನಿಮಗೆ 12 ತಿಂಗಳಲ್ಲಿ ಸರಾಸರಿ ಬಿಲ್ ಎಷ್ಟು ಬರುತ್ತದೆ ಎಂಬುದರ ಆಧಾರದ ಮೇಲೆ ನಿಮಗೆ ಸಿಗುವ ಉಚಿತ ವಿದ್ಯುತ್ ಬಿಲ್ ತಿಳಿದುಕೊಳ್ಳಬಹುದು.