Free goat training ಕುರಿ ಮತ್ತು ಮೇಕೆ ಸಾಕಾಣಿಕೆಯಲ್ಲಿ ಆಸಕ್ತಿಯಿರುವ ರೈತರಿಗೆ ತರಬೇತಿ ನೀಡಲು ಅರ್ಹ ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ. ಹೌದು, ಕಲಬುರಗಿ ಎಸ್.ಬಿ.ಐ ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆಯಲ್ಲಿ ಜಿಲ್ಲೆಯ ಗ್ರಾಮೀಣ ಪ್ರದೇಶದ ಅಭ್ಯರ್ಥಿಗಳಿಗೆ ಉಚಿತವಾಗಿತ ತರಬೇತಿ ನೀಡಲು ಅರ್ಜಿ ಆಹ್ವಾನಿಸಲಾಗಿದೆ. ಇದೇ ತಿಂಗಳ ಡಿಸೆಂಬರ್ 18 ರಿಂದ 27 ರವರೆಗೆ 10 ದಿನಗಳ ಕಾಲ ಉಚಿತವಾಗಿ ಕುರಿ ಮತ್ತು ಆಡು ಸಾಕಾಣಿಕೆಗೆ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಇದಕ್ಕಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಸಂಸ್ಥೆಯ ಎಸ್.ಬಿ.ಐ ಆರ್.ಸೆಟ್ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ತರಬೇತಿ ಸಂದರ್ಭದಲ್ಲಿ ಉಚಿತ ಊಟ ಹಾಗೂ ವಸತಿ ಸೌಲಭ್ಯ ನೀಡಲಾಗುತ್ತದೆ. ವಯೋಮಿತಿ 18 ರಿಂದ 45 ವಯೋಮಾನದೊಳಗಿನ ಬಿಪಿಎಲ್, ಅಂತ್ಯೋದಯ ರೇಶನ್ ಕಾರ್ಡ್, ಎಮ್.ಜಿ.ಎನ್.ಆರ್.ಇಜಿಎ ಕಾರ್ಡ್ ಹೊಂದಿದ ಕುಟುಂಬದ ನಿರುದ್ಯೋಗಿ ಅಭ್ಯರ್ಥಿಗಳು ಸಂಸ್ಥೆಯಿಂದ ನಿಗದಿತ ಅರ್ಜಿ ನಮೂನೆಯನ್ನು ಪಡೆದು ಭರ್ತಿ ಮಾಡಿ ಅವಶ್ಯಕ ದಾಖಲಾತಿಗಳೊಂದಿಗೆ ಡಿಸೆಂಬರ್ 16 ರೊಳಗಾಗಿ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ತರಬೇತಿ ಸಂಸ್ಥೆಯಲ್ಲಿಇದೇ ಡಿಸೆಂಬರ್16 ರಿಂದ ಮಧ್ಯಾಹ್ನ3.30 ಗಂಟೆಯವರೆಗೆ ನಡೆಯುವ ಸಂದರ್ಶನಕ್ಕೆ ಹಾಜರಾಗಬೇಕು.
ಇದನ್ನೂ ಓದಿ : ಬರ ಪರಿಹಾರ ಲಿಸ್ಟ್ ನಲ್ಲಿ ನಿಮ್ಮ ಹೆಸರಿದೆಯೇ? ಇಲ್ಲೇ ಚೆಕ್ ಮಾಡಿ
ಮತ್ತಿತರ ಹೆಚ್ಚಿನ ಮಾಹಿತಿಗಾಗಿ ಸಂಸ್ಥೆಯನ್ನು ಹಾಗೂ ಮೊಬೈಲ್ ಸಂಖ್ಯೆ 9448994585, ಮೊಬೈಲ್ ಸಂಖ್ಯೆ 9886781239 ಹಾಗೂ 9900135705 ಗಳಿಗೆ ಸಂಪರ್ಕಿಸಲು ಕೋರಲಾಗಿದೆ.
Free goat training ಪಶು ಪಾಲನೆ ಕುರಿತು ಮಾಹಿತಿ ಬೇಕೆ?
ಪಶು ಪಾಲನೆಯಲ್ಲಿ ಆಸಕ್ತಿಯಿರುವ ರೈತರು ಮನೆಯಲ್ಲಿಯೇ ಕುಳಿತು ತಮ್ಮ ಬಳಿಯಿರು ಮೊಬೈಲ್ ನಿಂದ ಪಶು ಪಾಲನೆ ಕುರಿತಂತೆ ಮಾಹಿತಿ ಪಡೆಯಬಹುದು. ಹೌದು, ರೈತರು ಪ್ರಾಣಿ ಕಲ್ಯಾಣ ಸಹಾಯವಾಣಿ ನಂಬರ್ 8277100200 ಗೆ ಕರೆ ಮಾಡಿ ಮಾಹಿತಿ ಪಡೆಯಬಹುದು. ಈ ಉಚಿತ ಸಹಾಯವಾಣಿ ದಿನದ 24 ಗಂಟೆಗಳ ಕಾಲ ಕಾರ್ಯ ನಿರ್ವಹಿಸಲಿದೆ.
ರೈತರು ಕುರಿ, ಕೋಳಿ ಸಾಕಾಣಿಕೆ, ಮೊಲ ಸಾಕಾಣಿಕೆ, ಹೈನುಗಾರಿಕೆ ಸೇರಿದಂತೆ ಇನ್ನಿತರ ತರಬೇತಿ ಪಡೆಯಲು ಪ್ರಾಣಿ ಕಲ್ಯಾಣ ಸಹಾಯವಾಣಿನಂಬರ್ ಗೆ ಕರೆ ಮಾಡಬಹುದು. ಇದರೊಂದಿಗೆ ಪಶುಗಳಿಗೆ ಬರು ರೋಗಗಳ ನಿಯಂತ್ರಣದ ಮಾಹಿತಿಯನ್ನು ಸಹ ನೀಡಲಾಗುವುದು.
ಹೊಲಿಗೆ ತರಬೇತಿ ನೀಡಲು ಮಹಿಳೆಯರಿಂದ ಅರ್ಜಿ ಆಹ್ವಾನ
ಹಾವೇರಿ ಜಿಲ್ಲೆಯ ದೇವಗಿರಿ ಬ್ಯಾಂಕ್ ಆಫ್ ಬರೋಡಾ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆವಿಬ್ ಸೆಟಿಯಲ್ಲಿ ಜಿಲ್ಲೆಯ ನಿರುದ್ಯೋಗಿ ಯುವತಿಯರಿಗೆ ಡಿಸೆಂಬರ್ 27 ರಿಂದ ಜನವರಿ 25 ರವರೆಗೆ 30 ದಿನಗಳ ಕಾಲ ಹೊಲಿಗೆ ತರಬೇತಿ ನೀಡಲು ಅರ್ಜಿ ಆಹ್ವಾನಿಸಲಾಗಿದೆ.
ಇದನ್ನೂ ಓದಿ : ರೈತರಿಗೆ ಗುಡ್ ನ್ಯೂಸ್: ಬೆಳೆ ವಿಮೆ ಬಿಡುಗಡೆಃ ಚೆಕ್ ಮಾಡಿ
ಶಾಲಾ ಮಕ್ಕಳ ಸಮವಸ್ತ್ರವಿವಿಧ ಶೈಲಿಯ ಚೂಡಿದಾರ, ಬ್ಲೌಸ್, ಲಂಗಾ ಇತ್ಯಾದಿ ಹೊಲಿಗೆ ತರಬೇತಿ ನೀಡಲಾಗುವುದು. ಹಾವೇರಿಜ ರೇಶನ್ ಕಾರ್ಡ್ ಹೊಂದಿದವರಿಗೆ ಮಾತ್ರ ತರಬೇತಿಗೆ ಅವಕಾಶವಿದೆ. ಉಚಿತ ಊಟ ಮತ್ತು ವಸತಿಯೊಂದಿಗೆ ತರಬೇತಿಯನ್ನು ಉಚಿತವಾಗಿ ನೀಡಲಾಗುವುದು.
ಜಿಲ್ಲೆಯ 18 ರಿಂದ 45 ವಯೋಮಾನದ ಅಭ್ಯರ್ಥಇಗಳು ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್, ರೇಶನ್ ಕಾರ್ಡ್, ಇತ್ತೀಚಿನ ಭಾವಚಿತ್ರ, ಜನ್ಮ ದಿನಾಂಕ ದೃಢೀಕರಣ ಪ್ರಮಾಣ ಪತ್ರದ ಝರಾಕ್ಸ್ ಪ್ರತಿಗಳನ್ನು ಲಗತ್ತಿಸಿ ಅರ್ಜಿ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗಾಗಿ ನಿರ್ದೇಶಕರು, ವಿಜಯ ಬ್ಯಾಂಕ್ ಸ್ವ- ಉದ್ಯೋಗ ತರಬೇತಿ ಸಂಸ್ಥೆ, ದೇವಗಿರಿ, ಹಾವೇರಿ, ಡಿ.ಸಿ. ಆಫೀಸ್ ಕಟ್ಟಡದ ಹಿಂಬಾಗ, ದೇವಗಿರಿ- ಹಾವೇರಿ, ಮೊಬೈಲ್ ಸಂಖ್ಯೆ 9611645907 ಗೆ ಸಂಪರ್ಕಿಸಲು ಕೋರಲಾಗಿದೆ.