crop insurance amount released ಮುಂಗಾರು ಹಂಗಾಮಿಗೆ ಬೆಳೆ ವಿಮೆ ಮಾಡಿಸಿದ 63566 ರೈತರಿಗೆ ಸುಮಾರು 50 ಕೋಟಿ ರೂಪಾಯಿ ಮಧ್ಯಂತರ ಬೆಳೆ ವಿಮೆ ಮಂಜೂರಾಗಿದೆ ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಡಗಡೆ ತಿಳಿಸಿದ್ದಾರೆ.
ಹೌದು, 2023ನೇ ಸಾಲಿನ ಮುಂಗಾರು ಹಂಗಾಮಿನ ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ ವಿಮೆ ಮಾಡಿಸಿದ ಧಾರವಾಡ ಜಿಲ್ಲೆಯ ರೈತರಿಗೆ ಬೆಳೆ ವಿಮೆ ಮಂಜೂರಾಗಿದೆ. ಭತ್ತ, ಮೆಕ್ಕೆಜೋಳ, ಹತ್ತಿ, ಈರುಳ್ಳಿ, ಕೆಂಪು ಮೆಣಸಿನ ಕಾಯಿ ಹಾಗೂ ಆಲಗಡ್ಡೆ ಬೆಳೆಗಳಡಿ ನೋಂದಾಯಿಸಿಕೊಂಡ ರೈರಿಗೆ ಮಧ್ಯಂತರ ವಿಮೆ ಜಮಾವಣೆ ಪ್ರಾರಂಭವಾಗಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಯಾವ ತಾಲೂಕಿಗೆ ಎಷ್ಟು ಬೆಳೆ ವಿಮೆ ಹಣ ಮಂಜೂರಾಗಿದೆ?
ಅಳ್ನಾವರ ತಾಲೂಕಿನ 3052 ರೈತರಿಗೆ 1.82 ಕೋಟಿ ರೂಪಾಯಿ ಬಿಡುಗಡೆಯಾಗಿದೆ. ಅದೇ ರೀತಿ ಅಣ್ಣಿಗೇರಿ ತಾಲೂಕಿನ 6044 ರೈತರಿಗೆ 6.45 ಕೋಟಿ ರೂಪಾಯಿಗಳು, ಧಾರವಾಡ ತಾಲೂಕಿನ ರೈತರಿಗೆ 9978 ರೈತರಿಗೆ 6.575 ಕೋಟಿ ರೂಪಾಯಿ, ಹುಬ್ಬಳ್ಳಿತಾಲೂಕಿನ 9472 ರೈತರಿಗೆ 0.365 ಕೋಟಿ ರೂಪಾಯಿ, ಕಲಘಟಗಿ ತಾಲೂಕಿನ15248 ರೈರಿಗೆ 9.7 ಕೋಟಿ ಮತ್ತು ನವಲಗುಂದ ತಾಲೂಕಿನ 5286 ರೈತರಿಗೆ 5.282 ಕೋಟಿ ರೂಪಾಯಿ ಮಧ್ಯಂತರ ಬೆಳೆ ವಿಮೆ ಪರಿಹಾರ ಜಮಾವಣೆಯಾಗಲಿದೆ ಎಂದು ತಿಳಿಸಿದ್ದಾರೆ.
ಇದನ್ನೂಓದಿ : ರೈತರ ಯಾವ ಜಮೀನಿನ ಮೇಲೆ ಎಷ್ಟು ಸಾಲವಿದೆ? ಇಲ್ಲೇ ಚೆಕ್ ಮಾಡಿ
ಮಳೆ ಕೊರತೆಯಿಂದಾಗಿ ಸಾಕಷ್ಟು ಪ್ರಮಾಣದಲ್ಲಿ ಬೆಳೆ ಹಾನಿ ಸಂಭವಿಸಿ ಬರ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ಬೆಳೆ ವಿಮೆ ಯೋಜನೆಯಡಿ ಈ ರೀತಿಯ ಪ್ರಕೃತಿ ವಿಕೋಪಗಳು ಸಂಭವಿಸಿದಾಗ ಮಧ್ಯಂತರ ವಿಮೆ ಪರಿಹಾರ ಪಡೆಯಲು ಅವಕಾಶವಿದೆ. ಹೀಗಾಗಿ ಜಿಲ್ಲಾಡಳಿತದಿಂದ ಸಕಾಲಿಕ ಕ್ರಮ ಕೈಗೊಂಡ ನಿಮಿತ್ತ ಜಿಲ್ಲೆಯ 63566 ಜನ ರೈತರಿಗೆ 50 ಕೋಟಿ ರೂಪಾಯಿ ಮಂಧ್ಯಂತರ ಬೆಳೆ ವಿಮೆ ಮಂಜೂರಾಗಿದೆ. ಪ್ರಕೃತಿ ವಿಕೋಪಗಳಿಂದ ಯಾವು ಅಧಿಸೂಚಿತ ಬೆಳೆ ವಿಫಲವಾದ ಪಕ್ಷದಲ್ಲಿ ರೈತರಿಗೆ ವಿಮಾ ರಕ್ಷಣೆ, ಆರ್ಥಿಕ ಬೆಂಬಲ ಮತ್ತು ಕೃಷಿ ಆದಾಯ ಸ್ಥಿರವಾಗುವಂತೆ ಮಾಡಲು ನೆರವಾಗುವುದು ಈ ಯೋಜನೆಯ ಉದ್ದೇಶವಾಗಿದೆ ಎಂದು ತಿಳಿಸಿದ್ದಾರೆ.
crop insurance amount released ನಿಮ್ಮ ಖಾತೆಗೆ ಬೆಳೆ ವಿಮೆ ಜಮೆಯಾಗಿದೆಯೇ? ಹೀಗೆ ಚೆಕ್ ಮಾಡಿ
ರೈತರಿಗೆ ಬೆಳೆ ವಿಮೆ ಹಣ ಜಮೆಯಾಗಿದೆಯೋ ಇಲ್ಲವೋ ಎಂಬುದನ್ನು ಚೆಕ್ ಮಾಡಲು ಈ
https://samrakshane.karnataka.gov.in/
ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ನಂತರ ಖಾರೀಫ್ ಆಯ್ಕೆ ಮಾಡಿಕೊಳ್ಳಬೇಕು. ಗೋ ಮೇಲೆ ಕ್ಲಿಕ್ ಮಾಡಿ ನಂತರ ಚೆಕ್ ಸ್ಟೇಟಸ್ ಮೇಲೆ ಕ್ಲಿಕ್ ಮಾಡಬೇಕು. ಅಲ್ಲಿ ಮೊಬೈಲ್ ನಂಬರ್ ಆಯ್ಕೆ ಮಾಡಿಕೊಳ್ಳಬೇಕು. ಕ್ಯಾಪ್ಚ್ಯಾ ಕೋಡ್ ಹಾಕಿ ಸರ್ಚ್ ಮೇಲೆ ಕ್ಲಿಕ್ ಮಾಡಿದರೆ ಸಾಕು, ನಿಮಗೆ ಬೆಳೆ ವಿಮೆ ಹಣ ಜಮೆಯಾಗಿದೆಯೋ ಇಲ್ಲವೋ ಎಂಬುದನ್ನು ಚೆಕ್ ಮಾಡಿಕೊಳ್ಳಬಹುದು. ಇದೇ ರೀತಿ ಹಿಂದಿನ ಸಾಲಿನ ಅಂದರೆ 2022-23ನೇ ಸಾಲಿನ ಮುಂಗಾರು ಹಿಂಗಾರು ಬೆಳೆ ವಿಮೆ ಸ್ಟೇಟಸ್ ಸಹ ಚೆಕ್ ಮಾಡಿಕೊಳ್ಳಬಹುದು.
ತುಮಕೂರು ಜಿಲ್ಲೆಯ ರೈತರಿಗೆ ಮಧ್ಯಂತರ ಖಾತೆಗೆ ಬೆಳೆ ವಿಮೆ ನಷ್ಟ ಪರಿಹಾರ ಬಿಡುಗಡೆ
2023ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಆದ ಮಳೆಯ ಕೊರತೆಯಿಂದ ಶೇ. 59 ಕ್ಕಿಂತ ಹೆಚ್ಚು ಬೆಳೆಯ ಇಳುವರಿ ನಷ್ಟವಾಗಿದ್ದರಿಂದ ಕರ್ನಾಟಕರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ ಮುಂಗಾರು 2023ರಡಿಯಲ್ಲಿ ಮಧ್ಯ ಋತುವಿನ ಪ್ರತಿಕೂಲ ಹವಾಮಾನ ನೇರ ಪಾವತಿಯಡಿ ಬೆಳೆ ವಿಮಾ ನಷ್ಟ ಪರಿಹಾರದಲ್ಲಿ ಶೇ. 25 ರಷ್ಟು ಮೊತ್ತವನ್ನು ರೈತರ ಖಾತೆಗೆ ಜಮಾ ಮಾಡಲು ಕ್ರಮವಹಿಸಲಾಗಿದೆ ಎಂದು ತುಮಕೂರು ಜಿಲ್ಲಾಧಿಕಾರಿ ಕೆ. ಶ್ರೀನಿವಾಸ್ ತಿಳಿಸಿದ್ದಾರೆ.
ಮುಂದಿನ ದಿನಗಳಲ್ಲಿ ಬೆಳೆಕಟಾವು ಪ್ರಯೋಗಗಳ ಆಧಾರದ ಮೇಲೆ ಬೆಳೆ ಇಳುವರಿ ಮಾಹಿತಿ ಲಭ್ಯವಾದ ನಂತರ ಬೆಳೆ ವಿಮಾ ನಷ್ಟ ಪರಿಹಾರದಲ್ಲಿ ಈಗಾಗಲೇ ಪಾವತಿಯಾದ ಮೊತ್ತವನ್ನು ಹೊಂದಾಣಿಕೆ ಮಾಡಿ ಉಳಿಕೆ ಮೊತ್ತವನ್ನುರೈತರಿಗೆ ಪಾವತಿ ಮಾಡಲಾಗುವುದು.