Gram panchayat information ಮೊಬೈಲ್ ನಲ್ಲಿ ಹೀಗೆ ಚೆಕ್ ಮಾಡಿ

Written by Ramlinganna

Updated on:

Gram panchayat information:  ಗ್ರಾಮ ಪಂಚಾಯತ್ ನ ಸದಸ್ಯರು,  ಸಿಬ್ಬಂದಿಗಳು, ಗ್ರಾಪಂ  ಕಾರ್ಯ ನಡವಳಿಕೆ ಸೇರಿದಂತೆ ಇನ್ನಿತರ ಮಾಹಿತಿಗಳನ್ನು ಪಂಚಮಿತ್ರ ಬ್ಲಾಗ್ ನಲ್ಲಿಯೇ ಪಡೆಯಬಹುದು.

ಹೌದು, ಪಂಚಮಿತ್ರವು ಕರ್ನಾಟಕದ ಗ್ರಾಮ ಪಂಚಾಯತ್ ಗಳ ಸಾರ್ವಜನಿಕರ ಮಾಹಿತಿ ವೇದಿಕೆಯಾಗಿದೆ. ಯಾವುದೇ ಸಾರ್ವಜನಿಕ ಸದಸ್ಯರು, ಚುನಾಯಿತ ಪ್ರತಿನಿಧಿಗಳು, ಪಂಚಾಯತ್ ಸಿಬ್ಬಂದಿ, ಸಭೆಯ ನಡಾವಳಿಗಳು, ಪಂಚಾಯತ್ ಆದಾಯ ಮತ್ತು ಬಜೆಟ್ ವಿವರಗಳು, ಮುಂಬರುವ ಸಭೆಗಳ ದಿನಾಂಕಗಳು ಇತ್ಯಾದಿಗಳಿಗೆ ಸಂಬಂಧಿಸಿದ ಸಾರ್ವಜನಿಕ ಮಾಹಿತಿಯನ್ನು ನೋಡಬಹುದು. ಹೌದು, ಸಾರ್ವಜನಿಕರು ತಮ್ಮ ಬಳಿಯಿರುವ ಮೊಬೈಲ್ ನಲ್ಲೇ ಈ ಎಲ್ಲಾ ಮಾಹಿತಿಗಳನ್ನು ನೋಡಬಹುದು. ಹಾಗಾದರೆ ಯಾವ ಯಾವ ಮಾಹಿತಿಗಳನ್ನು ಚೆಕ್ ಮಾಡಬಹುದು. ಇಲ್ಲಿದೆ ಮಾಹಿತಿ.

Gram panchayat information ಚೆಕ್ ಮಾಡುವುದು ಹೇಗೆ?

ಸಾರ್ವಜನಿಕರು ತಮ್ಮ ಬಳಿಯಿರುವ ಮೊಬೈಲ್ ನಲ್ಲಿ ಗ್ರಾಮ ಪಂಚಾಯತ್ ಮಾಹಿತಿ ಚೆಕ್ ಮಾಡಲು ಈ

https://panchatantra.karnataka.gov.in/USER_MODULE/userLogin/loadPanchamitra

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಪಂಚಮಿತ್ರ ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ನಿಮ್ಮ ಜಿಲ್ಲೆ ಆಯ್ಕೆ ಮಾಡಿಕೊಳ್ಳಬೇಕು. ನಂತರ ತಾಲೂಕು ಆಯ್ಕೆ ಮಾಡಿಕೊಳ್ಳಬೇಕು. ನಂತರ ನಿಮ್ಮ ಗ್ರಾಮ ಪಂಚಾಯತ್ ಆಯ್ಕೆ ಮಾಡಿಕೊಳ್ಳಬೇಕು.  ನಂತರ ಹುಡುಕು ಮೇಲೆ ಕ್ಲಿಕ್ ಮಾಡಬೇಕು.  ಆಗ ಇನ್ನೊಂದು ಪೇಜ್ ತೆರೆದುಕೊಳ್ಳುತ್ತದೆ.

ಚುನಾಯಿತ ಗ್ರಾಮ ಪಂಚಾಯತ್ ಪ್ರತಿನಿಧಿ ವಿವರಗಳು

ನೀವು ಆಯ್ಕೆ ಮಾಡಿಕೊಂಡ ಗ್ರಾಮ ಪಂಚಾಯತ್ ಗಳ ಜನರಲ್ ಬಾಡಿ ಸದಸ್ಯರು ಅಂದರೆ ಚುನಾಯಿತ ಪ್ರತಿನಿಧಿ ವಿವರಗಳು  ಮೇಲೆ ಕ್ಲಿಕ್ ಮಾಡಿದರೆ ನೀವು ಆಯ್ಕೆ ಮಾಡಿಕೊಂಡ ಗ್ರಾಮ ಪಂಚಾಯತ್ ನಲ್ಲಿ ಯಾವ ಯಾವ ಸದಸ್ಯರು ಇದ್ದಾರೆ. ಅಧ್ಯಕ್ಷರು ಯಾರಿದ್ದಾರೆ ಅವರ ಹೆಸರುಗಳು ಹಾಗೂ ಅವರ ಮೊಬೈಲ್ ನಂಬರ್ ಸಹ ಕಾಣಿಸುತ್ತದೆ.

Gram panchayat information  ಪಂಚಾಯತ್ ಸಿಬ್ಬಂದಿಗಳ ಮಾಹಿತಿ

ನಿಮಗೆ ಗ್ರಾಮ ಪಂಚಾಯತ್ ಸಿಬ್ಬಂದಿಗಳ ಮಾಹಿತಿ ಬೇಕಾದರೆ ಒಟ್ಟು ಸಿಬ್ಬಂದಿ ಮೇಲೆ ಕ್ಲಿಕ್ ಮಾಡಬೇಕು. ಆಗ ನೀವು ಆಯ್ಕೆಮಾಡಿಕೊಂಡ ಗ್ರಾಪಂ ನಲ್ಲಿರುವ ಸಿಬ್ಬಂದಿಗಳ ಹೆಸರುಗಳು, ಅವರ ಮೊಬೈಲ್ ನಂಬರ್ ಕಾಣಿಸುತ್ತದೆ. ಈ ನಂಬರ್ ಗಳನ್ನು ನೀವು ನಿಮ್ಮ ಮೊಬೈಲ್ ನಲ್ಲಿ ಸೇವ್ ಮಾಡಿಕೊಳ್ಳಬಹುದು. ಏಕೆಂದರೆ ಮುಂದೆ ಗ್ರಾಮದಲ್ಲಿರುವ ಸಮಸ್ಯೆಗಳ ಬಗ್ಗೆ ಮಾಹಿತಿ ಕೇಳಲು ಅನುಕೂಲವಾಗುತ್ತದೆ.

ಇದನ್ನೂ ಓದಿ ರೈತರಿಗೆ ಭರ್ಜರಿ ಗುಡ್ ನ್ಯೂಸ್: ಈ ರೈತರ ಖಾತೆಗೆ ಬರ ಪರಿಹಾರ ಜಮೆ

ಇದೇ ರೀತಿ ನೀವುಗಳು ನಾಗರಿಕ ಸೇವೆಗಳು ಮೇಲೆ ಕ್ಲಿಕ್ ಮಾಡಿದರೆ ನಿಮ್ಮೂರಿನಲ್ಲಿ ಯಾವ ಯಾವ ಕಾರ್ಯಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿತ್ತು. ಅದೇ ರೀತಿ ಕಟ್ಟಡ ನಿರ್ಮಾಣ ಪರವಾನಗಿಗೆಅರ್ಜಗಳನ್ನು ಆಹ್ವಾನಿಸಿದ್ದರೆ ಎಷ್ಟು ಅರ್ಜಿಗಳು ಆಹ್ವಾನಿಸಲಾಗಿತ್ತು ಎಂಬ ಮಾಹಿತಿ ಕಾಣಿಸುತ್ತದೆ.

ಅದೀ ರೀತಿ ಬೀದಿ ದೀಪದ ನಿರ್ವಹಣೆ, ಗ್ರಾಮ ನೈರ್ಮಲ್ಯದ ನಿರ್ವಹಣೆ, ಹೊಸ ನೀರು ಸರಬರಾಜು ಸಂಪರ್ಕಗಳ ಅರ್ಜಿಯ ಮಾಹಿತಿಯನ್ನು ಚೆಕ್ ಮಾಡಬಹುದು.

ಗ್ರಾಮ ಒನ್ ಕೇಂದ್ರಗಳಲ್ಲಿ ಜಮೀನಿಗೆ ಸಂಬಂಧಿಸಿದ ದಾಖಲೆ ಪಡೆಯಿರಿ

ಹಳ್ಳಿಗಳ ಜನರು ತಮ್ಮ ದಾಖಲೆಗಳನ್ನು ಪಡೆಯಲು ಈಗ ಹೋಬಳಿಗಳಿಗೆ ಹೋಗಬೇಕಿಲ್ಲ. ತಾವಿದ್ದ ಊರಿನಲ್ಲಿಯೇ ಎಲ್ಲಾ ದಾಖಲೆಗಳನ್ನು ಪಡೆಯಲು ಗ್ರಾಮ ಒನ್ ಕೇಂದ್ರಗಳನ್ನು ಆರಂಭಿಸಲಾಗಿದೆ.

ಹೌಜು, ಜಮೀನಿಗೆ ಸಂಬಂಧಿಸಿದ ದಾಖಲೆಗಳನ್ನು ತಮ್ಮೂರಿನಲ್ಲಿಯೇ ಪಡೆದುಕೊಳ್ಳಬಹುದು. ಇದರೊಂದಿಗೆ ಜನನ, ಮರಣ ಪ್ರಮಾಣ ಪತ್ರ, ಜಾತಿ ಮತ್ತು ಆದಾಯ ಪ್ರಮಾಣ ಪತ್ರಗಳನ್ನು ಪಡೆಯಲು ಸಹ ತಹಶೀಲ್ದಾರ ಕಚೇರಿಗೆ ಹೋಗಬೇಕಿಲ್ಲ. ಹೋಬಳಿ ಕೇಂದ್ರಗಳಲ್ಲಿ ಸರತಿ ಸಾಲಿನಲ್ಲಿ ನಿಲ್ಲುವ ಅವಶ್ಯಕತೆಯೂ ಇಲ್ಲ. ತಾವಿದ್ದ ಊರಿನಲ್ಲಿಯೇ ಸರ್ವ ದಾಖಲೆಗಳನ್ನು ಪಡೆಯಲು ಅವಕಾಶವಿದೆ.

Leave a Comment