annabhagya scheme money credited ಅನ್ನಭಾಗ್ಯ ಯೋಜನೆಯಡಿ ಬಿಪಿಎಲ್, ಅಂತ್ಯೋದಯ ಕಾರ್ಡ್ ದಾರರ ಖಾತೆಗೆ ಹೆಚ್ಚುವರಿ ಐದು ಕೆಜಿ ಅಕ್ಕಿಯ ಹಣ ಜಮಾ ಮಾಡಲಾಗಿದೆ. ಹೌದು ಈ ವರೆಗೆ 31 ಜಿಲ್ಲೆಗಳ 1.03 ಕೋಟಿ ಪಡಿತರ ಕಾರ್ಡುಗಳ 3.36 ಕೋಟಿಗೂ ಅಧಿಕ ಫಲಾನುಭವಿಗಳ ಖಾತೆಗೆ ಆಗಸ್ಟ್ ತಿಂಗಳಿನ ಅನ್ನಭಾಗ್ಯ ಯೋಜನೆಯಡಿ 595.63 ಕೋಟಿ ರೂಪಾಯಿಗಳು ಸಂದಾಯ ಮಾಡಲಾಗಿದೆ.
ಆಹಾರ ಇಲಾಖೆಯ ಮಾಹಿತಿಯಂತೆ 31 ಜಿಲ್ಲೆಗಳಲ್ಲಿ 1.03 ಕುಟುಂಬಗಳು ಅಂತ್ಯೋದಯ ಮತ್ತು ಬಿಪಿಎಲ್ ಪಡಿತರ ಚೀಟಿಗಳನ್ನು ಹೊಂದಿದ್ದು, ಒಟ್ಟು 3,69,36,906 ಫಲಾನುಭವಿಗಳು ಅನ್ನಭಾಗ್ಯ ಯೋಜನೆಯ ಲಾಭ ಪಡೆಯುತಿದ್ದಾರೆ.
ಆಗಸ್ಟ್ ತಿಂಗಳು ಒಂದರಲ್ಲಿ ರಾಜ್ಯ ಸರ್ಕಾರ ಹೆಚ್ವುವರಿ ಐದು ಕೆಜಿ ಅಕ್ಕಿಗಾಗಿ ಸುಮಾರು 606.90 ಕೋಟಿ ರೂಪಾಯಿಗಳನ್ನು ಫಲಾನುಭವಿಗಳಿಗೆ ಸಂದಾಯ ಮಾಡಲಿದೆ. ಈಗಾಗಲೇ ಡಿಬಿಟಿ ಮೂಲಕ 1.03 ಕೋಟಿ ಕಾರ್ಡುಗಳ 3.36 ಕೋಟಿ ಫಲಾನುಭವಿಗಳಿಗೆ 595.63 ಕೋಟಿ ರೂಪಾಯಿಗಳು (ಶೇ. 98.30) ಸಂದಾಯವಾಗಿದೆ.
annabhagya scheme money credited ಯಾರಿಗೆ ಎಷ್ಟು ಅನ್ನಭಾಗ್ಯದ ಹಣ ಜಮೆಯಾಗಿದೆ? ಚೆಕ್ ಮಾಡಿ
ಅನ್ನಭಾಗ್ಯದ ಯೋಜನೆಯಡಿಯಲ್ಲಿ ಯಾರಿಗೆ ಎಷ್ಟು ಹಣ ಜಮೆಯಾಗಿದೆ ಎಂಬುದನ್ನು ಚೆಕ್ ಮಾಡಲು ಈ
https://ahara.kar.nic.in/lpg/
ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಪೇಜ್ ಕಾಣಿಸುತ್ತದೆ. ಅಲ್ಲಿ ನಿಮಗೆ ನಿಮ್ಮ ಜಿಲ್ಲೆಗಳು ಕಾಣಿಸುತ್ತವೆ. ನಿಮ್ಮ ಜಿಲ್ಲೆಯ ಮೇಲ್ಗಡೆಯಿರುವ ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಇನ್ನೊಂದು ಪೇಜ್ ಓಪನ್ ಆಗುತ್ತದೆ. ಅಲ್ಲಿ ನಿಮಗೆ ಕೆಲವು ಆಯ್ಕೆಗಳು ಕಾಣಿಸುತ್ತವೆ.ಅದರಲ್ಲಿ ನೀವು ನೇರ ನಗದು ವರ್ಗಾವಣೆಯ ಸ್ಥಿತಿ (DBT) ಮೇಲೆ ಕ್ಲಿಕ್ ಮಾಡಬೇಕು. ಆಗ ಇನ್ನೊಂದು ಪೇಜ್ ತೆರೆದುಕೊಳ್ಳುತ್ತದೆ.
ಅಲ್ಲಿ ನೀವು ತಿಂಗಳು ಆಯ್ಕೆ ಮಾಡಿಕೊಳ್ಳಬೇಕು. ನಿಮ್ಮ ಆರ್.ಸಿ ನಂಬರ್ (ರೇಶನ್ ಕಾರ್ಡ್ ನಂಬರ್) ನಮೂದಿಸಬೇಕು. ಅದರ ಕೆಳಗಡೆ ಕಾಣುವ ಕ್ಯಾಪ್ಚ್ಯಾ ಕೋಡ್ ನ್ನು ನಮೂದಿಸಿ ಗೋ ಮೇಲೆ ಕ್ಲಿಕ್ ಮಾಡಬೇಕು.
ಆಗ ನಿಮ್ಮ ಆರ್.ಸಿ ನಂಬರ್, ರೇಶನ್ ನಿಮ್ಮ ಹೆಸರು, ಬ್ಯಾಂಕ್ ಖಾತೆಯ ಕೊನೆಯ ನಾಲ್ಕು ಅಂಕಿಗಳು, ಬ್ಯಾಂಕಿನ ಹೆಸರು, ಯಾವ ದಿನಾಂಕದಂದು ನಿಮಗೆ ಹಣ ಜಮೆಯಾಗಿದೆ? ಬ್ಯಾಂಕ್ ಖಾತೆಯಲ್ಲಿರುವ ಹೆಸರು ಕೊನೆಗೆ ನಿಮಗೆಷ್ಟು ಹಣ ಜಮೆಯಾಗಿದೆ ಎಂಬ ಮಾಹಿತಿ ಕಾಣಿಸುತ್ತದೆ. ಇದೇ ರೀತಿ ಜುಲೈ ತಿಂಗಳ ಸ್ಟೇಟಸ್ ಸಹ ಚೆಕ್ ಮಾಡಬಹುದು.
ಸೆಪ್ಟೆಂಬರ್ ತಿಂಗಳಲ್ಲಿ ಪಡಿತರದಾರರಿಗೆ ಆಹಾರ ಧಾನ್ಯ ವಿತರಣೆ
ಕಲಬುರಗಿ ಜಿಲ್ಲೆಯ ಅಂತ್ಯೋದಯ (ಎಎವೈ) ಅನ್ನಭಾಗ್ಯ, ಪಿಎಚ್ಎಚ್ (ಬಿಪಿಎಲ್) ಆದ್ಯತಾ ಅನ್ನಭಾಗ್ಯ ಹಾಗೂ ಎಪಿಎಲ್ ಕಾರ್ಡ್ ದಾರರರಿಗೆ ಸೆಪ್ಟೆಂಬರ್ ತಿಂಗಳಲ್ಲಿ ಆಹಾರ ಧಾನ್ಯ ವಿತರಿಸಲಾಗುತ್ತದೆ ಎಂದು ಕಲಬುರಗಿ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ.
ಇದನ್ನೂ ಓದಿ : ಪಿಎಂ ಕಿಸಾನ್ ಅನರ್ಹ ರೈತರ ಪಟ್ಟಿ ಬಿಡುಗಡೆ: ಈ ಪಟ್ಟಿಯಲ್ಲಿರುವವರಿಗೆ ಹಣ ಜಮೆಯಾಗಲ್ಲ
ಜಿಲ್ಲೆಯ 62562 ಅಂತ್ಯೋದಯ ಅನ್ನ ಪಡಿತರ ಚೀಟಿಗಳ 242213 ಸದಸ್ಯರಿಗೆ ಮತ್ತು 501916 ಆದ್ಯತಾ ಪಡಿತರ ಚೀಟಿಗಳ 1714365 ಸದಸ್ಯರಿಗೆ ಹಾಗೂ 20858 ಎಪಿಎಲ್ ಪಡಿತರ ಚೀಟಿದಾರರಿಗೆ ಕೆಳಕಂಡ ಪ್ರಮಾಣದಂತೆ ಪಡಿತರ ವಿತರಿಸಲಾಗುವುದು.
ಅಂತ್ಯೋದಯ ಕಾರ್ಡ್ ದಾರರಿಗೆ ಒಟ್ಟು 35 ಕೆಜಿ ಅಕ್ಕಿ ಪಡಿತರವನ್ನು ಉಚಿತವಾಗಿ ವಿತರಿಸಲಾಗುವುದು. ಬಿಪಿಎಲ್ ಕಾರ್ಡ್ ದಾರರಿಗೆ ಪ್ರತಿ ಸದಸ್ಯರಿಗೆ ಒಟ್ಟು5 ಕೆಜಿ ಅಕ್ಕಿಯ ಪಡಿತರವನ್ನು ಉಚಿತವಾಗಿ ವಿತರಿಸಲಾಗುವುದು. ಅಂತರ್ ರಾಜ್ಯ ಪೋರ್ಟೇಬಿಲಿಟಿ ಮೂಲಕ ಪಡಿತರ ಪಡೆಯುವವರಿಗೆ ಕೇಂದ್ರ ಸರ್ಕಾರದ ಆದೇಶದಂತೆ ಉಚಿತವಾಗಿ ಪಡಿತರ ವಿತರಣೆ ಮಾಡಲಾಗುವುದು. ಕಲಬುರಗಿ ಜಿಲ್ಲೆಯ ಎಲ್ಲಾ ಪಡಿತರ ಚೀಟಿದಾರರು ಜಿಲ್ಲೆಯ ನ್ಯಾಯಬೆಲೆ ಅಂಗಡಿಗಳಲ್ಲಿ ಸೆಪ್ಟೆಂಬರ್ ತಿಂಗಳ ಪಡಿತರ ಆಹಾರಧಾನ್ಯ ಪಡೆಯಬೇಕೆಂದು ತಿಳಿಸಿದ್ದಾರೆ.