ಬರಗಾಲ ಪರಿಹಾರ: ಯಾವ ಬೆಳೆಗೆ ಎಷ್ಟು ಜಮೆ ಇಲ್ಲಿದೆ ಮಾಹಿತಿ

Written by Ramlinganna

Updated on:

Declaration of drought ರಾಜ್ಯದಲ್ಲಿ 195 ತಾಲೂಕುಗಳನ್ನು ಬರಗಾಲ ತಾಲೂಕುಗಳೆಂದು ಘೋಷಣೆ ಮಾಡಲಾಗಿದೆ. ಇದರೊಂದಿಗೆ ಯಾವ ಬೆಳೆಗೆ ಎಷ್ಟು ಪರಿಹಾರ ಹಣ ನೀಡಲಾಗುವುದೆಂಬುದರ ಮಾಹಿತಿ ಇಲ್ಲಿದೆ.

ರಾಜ್ಯದಲ್ಲಿ ತೀವ್ರ ಮಳೆ ಕೊರತೆ ಉಂಟಾಗಿದ್ದು, ಬರ ತಾಲೂಕುಗಳನ್ನು ಘೋಷಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. 161 ತಾಲೂಕುಗಳಲ್ಲಿ ತೀವ್ರ ಬರಗಾಲ, 34 ತಾಲೂಕುಗಳಲ್ಲಿ ಸಾಧಾರಣ ಬರ ಪೀಡಿತ ಪ್ರದೇಶಗಳೆಂದು ಆದೇಶದಲ್ಲಿ ತಿಳಿಸಲಾಗಿದೆ.

ರಾಜ್ಯದಲ್ಲಿ ತೀವ್ರ ಮಳೆ ಕೊರತೆ ಇರುವ ಒಟ್ಟು 195 ತಾಲೂಕುಗಳನ್ನು ಬರ ಪೀಡಿತ ಎಂದು ಘೋಷಣೆ ಮಾಡುವಂತೆ ಸಚಿವ ಸಂಪುಟದಲ್ಲಿ ಉಪಸಮಿತಿ ಮುಖ್ಯಮಂತ್ರಿಗಳಿಗೆ ಶಿಫಾರಸ್ಸು ಮಾಡಿತ್ತು. ಹಾಗಾಗಿ ಬರಗಾಲ ಪೀಡಿತ ಪ್ರದೇಶಗಳನ್ನು ಸರ್ಕಾರವು ಘೋಷಣೆ ಮಾಡಿದ್ದು ತಮಗೆಲ್ಲಾ ಗೊತ್ತಿದ್ದ ಸಂಗತಿ.

Declaration of drought ಯಾವ ಬೆಳೆಗೆ ಎಷ್ಟು ಪರಿಹಾರ ಘೋಷಣೆ ಮಾಡಲಾಗಿದೆ?

ಮಳೆಯಾಧಾರಿತ ಪ್ರದೇಶಗಳಲ್ಲಿ ಶೇ. 33 ಕ್ಕಿಂತ ಹೆಚ್ಚು ಬೆಳೆ ಹಾನಿಯಾಗಿದ್ದರೆ ಪ್ರತಿ ಹೆಕ್ಟೇರಿಗೆ 8500 ರೂಪಾಯಿ ಪರಿಹಾರ ನೀಡಲಾಗುವುದು. ಹಾನಿ ಕಡಿಮೆ ಆಗಿದ್ದರೆ ಪ್ರತಿ ಹೆಕ್ಟೇರಿಗೆ 1 ಸಾವಿರ ರೂಪಾಯಿ ಪರಿಹಾರ ನೀಡಲಾಗುವುದು.

ನೀರಾವರಿ ಪ್ರದೇಶದಲ್ಲಿನ ಬೆಳೆ ಹಾನಿಗೆ ಪ್ರತಿ ಹೆಕ್ಟೇರಿಗೆ 17 ಸಾವಿರ ರೂಪಾಯಿ ನೀಡಲಾಗುವುದು. ಕನಿಷ್ಠ 2 ಸಾವಿರ ರೂಪಾಯಿ ಪರಿಹಾರ ನೀಡಲಾಗುವುದು.

ತೆಂಗು, ಬಾಳೆ, ಟೊಮ್ಯಾಟೋ, ಆಲೂಗಡ್ಡೆಯಂತಹ ಬೆಳೆ ಹಾನಿಗೆ ಪ್ರತಿ ಹೆಕ್ಟೇರಿಗೆ 22500ರೂಪಾಯಿ ಹಾಗೂ ಕನಿಷ್ಠ 2500 ರೂಪಾಯಿ ಪರಿಹಾರ ನೀಡಲಾಗುವುದು.

ಇದನ್ನೂ ಓದಿ ಪಿಎಂ ಕಿಸಾನ್ ಅನರ್ಹ ರೈತರ ಪಟ್ಟಿ ಬಿಡುಗಡೆ: ಈ ಪಟ್ಟಿಯಲ್ಲಿರುವವರಿಗೆ ಹಣ ಜಮೆಯಾಗಲ್ಲ

ರೇಷ್ಮೆಗೆ ಸಂಬಂಧಪಟ್ಟಂತೆ ಇರಿ, ಮಲಬರಿ, ತುಸ್ಸಾರ್ ರೇಷ್ಮೆ ಹಾನಿಗೆ ಪ್ರತಿ ಹೆಕ್ಟೇರಿಗೆ 6 ಸಾವಿರ ರೂಪಾಯಿ ಪರಿಹಾರ ನೀಡಲಾಗುವುದು.

ಜಾನುವಾರು ಕೇಂದ್ರಗಳಲ್ಲಿರುವ ದೊಡ್ಡ ಜಾನುವಾರುಗಳಿಗೆ ನೀರು ಸೇರಿದಂತೆ ಮೇವು ಇತ್ಯಾದಿ ಪೂರೈಕೆಗೆ ಪ್ರತಿ ಜಾನುವಾರಿಗೆ ದಿನಕ್ಕೆ 80 ರೂಪಾಯಿ ಪರಿಹಾರ ನೀಡಲಾಗುವುದು. ಅದೇ ರೀತಿ ಸಣ್ಣ ಜಾನುವಾರಿಗೆ 45 ರೂಪಾಯಿ ನೀಡಲಾಗುವುದು.

ಕೇಂದ್ರ ತಂಡದ ಶಿಫಾರಸ್ಸಿನ ಮೇರೆಗೆ ಅಧಿಸೂಚಿತ ಪ್ರದೇಶಗಳಿಗೆ ಮೇವು ಸಾಗಾಣಿಕೆ ವೆಚ್ಚ ಸರ್ಕಾರದಿಂದ ಪಾವತಿ ಮಾಡಲಾಗುವುದು.

ಬರಗಾಲ ಪೀಡಿತ ತಾಲೂಕುಗಳ ಪಟ್ಟಿಯಲ್ಲಿ ನಿಮ್ಮ ತಾಲೂಕು ಇದೆಯೋ ಇಲ್ಲವೋ? ಹೀಗೆ ಚೆಕ್ ಮಾಡಿ

ರಾಜ್ಯ ಸರ್ಕಾರವು ಘೋಷಣೆ ಮಾಡಿದ ಬರಗಾಲ ತಾಲೂಕುಗಳಲ್ಲಿ ನಿಮ್ಮ ತಾಲೂಕು ಇದೆಯೋ ಇಲ್ಲವೋ ಎಂಬುದನ್ನು ಚೆಕ್ ಮಾಡಲು ಈ

file:///C:/Users/ADMIN/Downloads/%E0%B2%AC%E0%B2%B0%E0%B2%97%E0%B2%BE%E0%B2%B2%20%E0%B2%98%E0%B3%8B%E0%B2%B7%E0%B2%A3%E0%B3%86.pdf

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಬರಗಾಲ ಘೋಷಣೆಯಾದ ತಾಲೂಕುಗಳ ಪಟ್ಟಿ ಕಾಣಿಸುತ್ತದೆ. ಅಲ್ಲಿ ಆಯಾ ಜಿಲ್ಲೆಯ ಎದುರು ಯಾವ ಯಾವ ತಾಲೂಕುಗಳನ್ನು ಘೋಷಣೆ ಮಾಡಲಾಗಿದೆ ಎಂಬ ಪಟ್ಟಿ ಕಾಣಿಸುತ್ತದೆ. ನಿಮ್ಮತಾಲೂಕು ಬರಗಾಲ ಪಟ್ಟಿಯಲ್ಲಿದ್ದರೆ ನಿಮಗೆ ಬೆಳೆ ಹಾನಿ ಪರಿಹಾರ ಹಣ ನೀಡಲಾಗುವುದು.

ಪರಿಹಾರ ನೀಡಲು ಯಾವ ಪ್ರಕ್ರಿಯೆ ನಡೆಯುತ್ತದೆ?

ಬರಪೀಡಿತ ತಾಲೂಕುಗಳ ಘೋಷಣೆಯಾದ ನಂತರ ರಾಜ್ಯ ಸರ್ಕಾರ ನಿರ್ಧರಿಸಿದ ಬರಪೀಡಿತ ತಾಲೂಕುಗಳ ಅಂತಿಮ ಪಟ್ಟಿ ಕೇಂದ್ರ ಸರ್ಕಾರಕ್ಕೆ ರವಾನಿಸಲಾಗುವುದು. ರಾಜ್ಯದಲ್ಲಿ ಬರ ಪರಿಸ್ಥಿತಿ ಪರಿಶೀಲನೆಗೆ ಕೇಂದ್ರ ಸರ್ಕಾರದಿಂದ ತಜ್ಞರ ತಂಡ ಬಂದು ಪರಿಶೀಲನೆ ಮಾಡುವುದು. ತಜ್ಞರ ತಂಡದಿಂದ ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಿದ ನಂತರ ಕೇಂದ್ರದಿಂದ ಅಂತಿಮ ಪಟ್ಟಿ ಪ್ರಕಟಿಸಲಾಗುವುದು. ಇದಾದಮೇಲೆ ಕೇಂದ್ರ ಸರ್ಕಾರ ಒಪ್ಪಿಕೊಂಡ ಬರಪೀಡಿತ ಪ್ರದೇಶಗಳಲ್ಲಿನ ರೈತರಿಗೆ ಬೆಳೆ ನಷ್ಟ ಪರಿಹಾರ ವಿತರಣೆ ಮಾಡಲಾಗುದು.

ಬರಗಾಲ ತಾಲೂಕುಗಳಲ್ಲಿರುವ ರೈತರಿಗೆ ಮಾತ್ರ ಪರಿಹಾರ ಹಣ ನೀಡಲಾಗುವುದು. ಬರಗಾಲ ತಾಲೂಕಿನಲ್ಲಿ ಇರದ ರೈತರ  ಬೆಳೆ ಹಾನಿಯಾಗಿದ್ದರೂ ಸಹ ಅವರಿಗೆ ಬೆಳೆ ಹಾನಿ ಪರಿಹಾರ ಹಣ ಬರುವ ಸಾಧ್ಯತೆ ತುಂಬಾ ಕಡಿಮೆ ಇರುತ್ತದೆ.

Leave a Comment