ಈ ಬೆಳೆಗಳ ಸಮೀಕ್ಷೆ ಮಾಡಿದರೆ ಮಾತ್ರ ಬೆಳೆ ಹಾನಿ ಜಮೆ

Written by Ramlinganna

Updated on:

crop survey get money ರೈತರು ಬೆಳೆ ವಿಮೆ ಹಣ ಪಾವತಿಸಿದ ನಂತರ ಪ್ರಾಕೃತಿಕ ವಿಕೋಪದಿಂದಾಗಿ ಬೆಳೆಹಾನಿಯಾದರೆ ಪರಿಹಾರ ಹಣ ಜಮೆಯಾಗಲು ಬೆಳೆ ಸಮೀಕ್ಷೆ ಕಡ್ಡಾಯವಾಗಿದೆ.

ಯಾವ ರೈತರು ಬೆಳೆ ಸಮೀಕ್ಷೆ ಮಾಡುವುದಿಲ್ಲವೋ ಅಂತಹ ರೈತರಿಗೆ ಬೆಳೆ ಹಾನಿ ಹಾಗೂ ಬೆಳೆ ವಿಮೆ ಪರಿಹಾರ ಹಣ ಜಮೆಯಾಗುವ ಸಾಧ್ಯತೆ ಕಡಿಮೆಯಿದೆ. ಹೌದು, ಮುಂಗಾರು ಹಂಗಾಮಿಗೆ ಬೆಳೆ ವಿಮೆ ಮಾಡಿಸಿದ ಪ್ರತಿಯೊಬ್ಬರ ರೈತರು ಯಾವ ಬೆಳೆಗೆ ವಿಮೆ ಮಾಡಿಸಿದ್ದಾರೋ ಆ ಬೆಳೆಗಳ ಸಮೀಕ್ಷೆಮಾಡಬೇಕಾಗುತ್ತದೆ.  ಯಾರು ಬೆಳೆ ಸಮೀಕ್ಷೆ ಮಾಡಿಲ್ಲವೋ ಅಂತಹ ರೈತರು ಇಂದೇ ಬೆಳೆ ಸಮೀಕ್ಷೆ ಮಾಡಿಕೊಳ್ಳಬಹುದು. ಬೆಳೆ ಸಮೀಕ್ಷೆ ಮಾಡುವುದು ಹೇಗೆ ಎಂಬುದರ ಕುರಿತು ಮಾಹಿತಿ ಇಲ್ಲಿದೆ.

 crop survey get money ಮೊಬೈಲ್ ನಲ್ಲಿ ಬೆಳೆ ಸಮೀಕ್ಷೆ ಮಾಡುವುದು ಹೇಗೆ?

ರೈತರು ತಮ್ಮ ಬೆಳೆಗಳ ಸಮೀಕ್ಷೆ ಮಾಡಲು ಈ

https://play.google.com/store/apps/details?id=com.csk.PR_Kharif_2023.cropsurvey

ಲಿಂಕ್ ಮೇಲೆ ಕ್ಲಿಕ್ ಮಾಡಬೇತಕು. install ಮೇಲೆ ಕ್ಲಿಕ್ ಮಾಡಬೇಕು. ನಂತರ open  ಮೇಲೆ ಕ್ಲಿಕ್ ಮಾಡಬೇಕು. ನಂತರ ಅಲೋ ಮೇಲೆ ಕ್ಲಿಕ್ ಮಾಡಬೇಕು. ಆಗ ಮುಂಗಾರು ಬೆಳೆ ಸಮೀಕ್ಷೆ 2023-24 ಕಾಣಿಸುತ್ತದೆ. ಅದರಲ್ಲಿ ನೀವು 2023-24 ವರ್ಷ ಆಯ್ಕೆ ಮಾಡಿಕೊಳ್ಳಬೇಕು. ಋತು ಮುಂಗಾರು ಆಯ್ಕೆ ಮಾಡಿಕೊಳ್ಳಬೇಕು. ನಂತರ ಸರಿ ಮೇಲೆ ಕ್ಲಿಕ್ ಮಾಡಿ  ವೈಲ್ ಯೂಸಿಂಗ್ ದಿ ಆ್ಯಪ್ ಹಾಗೂ ಅಲೋ ಮೇಲೆಕ್ಲಿಕ್ ಮಾಡಿ ಹೌದು ಆಯ್ಕೆ ಮಾಡಿಕೊಳ್ಳಬೇಕು. ನಂತರ ಆಧಾರ್ ಕಾರ್ಡ್ ನಲ್ಲಿರುವಂತೆ ನಿಮ್ಮ ಹೆಸರುಪ ಹಾಗೂ ಆಧಾರ್ ಕಾರ್ಡ್ ನಮೂದಿಸಿ ಸಕ್ರಿಯಗೊಳಿಸು ಮೇಲೆ ಕ್ಲಿಕ್ ಮಾಡಿ ನೀವೇ ಸ್ವತಃ ಬೆಳೆ ಸಮೀಕ್ಷೆಮಾಡಬಹುದು. ನಿಮ್ಮ ಸರ್ವೆ ನಂಬರ್ ನಮೂದಿಸಿದ ನಂತರ ಬೆಳೆಯ ಫೋಟೋ ಅಪ್ಲೋಡ್ ಮಾಡಿ ಸಬ್ಮಿಟ್ ಮೇಲೆ ಕ್ಲಿಕ್ ಮಾಡಬೇಕು.

ತುಮಕೂರು ಜಿಲ್ಲೆಯ ರೈತರಿಗೆ ಈ ತೋಟಗಾರಿಕೆ ಬೆಳೆ ವಿಮೆ ಮಾಡಿಸಲು ಸೆಪ್ಟೆಂಬರ್ 15 ಕೊನೆಯ ದಿನ

2023-24ನೇ ಸಾಲಿನಲ್ಲಿ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಯಲ್ಲಿ 2021-22, 202-23ನೇ ಸಾಲಿನಲ್ಲಿ ಬೆಳೆ ಸಮೀಕ್ಷೆಯಾಗದ ಅಡಿಕೆ, ಮಾವು, ಪರಂಗಿ ಹಾಗೂ ದಾಳಿಂಬೆ ಬೆಳೆಗಳಿಗೆ ಬೆಳೆ ವಿಮೆಗೆ ನೋಂದಾಯಿತ ರೈತರು ಸೆಪ್ಟೆಂಬರ್ 15 ರೊಳಗಾಗಿ ಬೆಳೆ ಸಮೀಕ್ಷೆ ಮಾಡಿಸಿಕೊಳ್ಳುವ ಷರತ್ತಿನ ಮೇಲೆ ಬೆಳೆ ವಿಮೆಗೆ ನೋಂದಾಯಿಸಿಕೊಳ್ಳಲಾಗಿರುತ್ತದೆ.

ಇದನ್ನೂ ಓದಿ ನಿಮ್ಮ ಜಮೀನಿನ ಒರಿಜಿನಲ್ ಸರ್ವೆ ಟಿಪ್ಪಣಿ ಪುಸ್ತಕ ಒಂದೇ ನಿಮಿಷದಲ್ಲಿ ಮೊಬೈಲ್ ನಲ್ಲೇ ಚೆಕ್ ಮಾಡಿ

ಆದ್ದರಿಂದ ಈ ಕೂಡಲೇ ರೈತರ ಬೆಳೆ ಸಮೀಕ್ಷೆ ಮೊಬೈಲ್ ಆ್ಯಪ್ ಅಥವಾ ಗ್ರಾಮದ ಬೆಳೆ ಸಮೀಕ್ಷೆದಾರರಿಂದ ಬೆಳೆ ಸಮೀಕ್ಷೆ ಮಾಡಿದಲ್ಲಿ  ಈ ವರ್ಷದ ಬೆಳೆ ವಿಮೆ ಯೋಜನೆಯಡಿ ಅರ್ಹರಾಗಿರುತ್ತೀರಿ.ಇಲ್ಲವಾದಲ್ಲಿ ಕಂತಿನ ವಿಮಾ ಮೊತ್ತವನ್ನು ಕಂಪನಿಯವರು ಮುಟ್ಟುಗೋಲು ಹಾಕಿಕೊಳ್ಳುವ ಜೊತೆಗೆ ತಮ್ಮ ಅರ್ಜಿಯನ್ನು ತಿರಸ್ಕರಿಸಲಾಗುವುದು. ಆದುದರಿಂದ ರೈತರು ಈ ಕೂಡಲೇ ಬೆಳೆ ಸಮೀಕ್ಷೆ ಮಾಡಿಕೊಳ್ಳುವಂತೆ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರಾದ ಸುಧಾಕರ್ ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ತಾಲೂಕು ತೋಟಗಾರಿಕೆ ಇಲಾಖೆ ಕಚೇರಿ, ಹೋಬಳಿಗಳ ಸಹಾಯಕ ತೋಟಗಾರಿಕೆ ಅಧಿಕಾರಿ, ರೈತ ಸಂಪರ್ಕ ಕೇಂದ್ರದ ಅಧಿಕಾರಿಗಳ ಮೊಬೈಲ್ ಸಂಖ್ಯೆ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ (ಜಿಪಂ) ಶಿರಾರವರ ದೂರವಾಣಿ ಸಂಖ್ಯೆ 9844942356, ಸಹಾಯಕ ತೋಟಗಾರಿಕೆ ನಿರ್ದೇಶಕರು (ಜಿಪಂ) ಶಿರಾರವರ ದೂರವಾಣಿ ಸಂಖ್ಯೆ9071280906, ಸಹಾಯಕ ತೋಟಗಾರಿಕೆ ಅಧಿಕಾರಿ ರೈತ ಸಂಪರ್ಕ ಕೇಂದ್ರ, ಕಳ್ಳಂಬೆಳ್ಳ ಹೋಬಳಿ ದೂರವಾಣಿ ಸಂಖ್ಯೆ 9164871157, ಸಹಾಯಕ ತೋಟಗಾರಿಕೆ ಅಧಿಕಾರಿ ರೈತರ ಸಂಪರ್ಕ ಕೇಂದ್ರ, ಗೌಡಗೆರೆ, ಹೋಬಳಿ ದೂರವಾಣಿ ಸಂಖ್ಯೆ 9964968020, ಸಹಾಯಕತೋಟಗಾರಿಕೆ ಅಧಿಕಾರಿ ರೈತ ಸಂಪರ್ಕ ಕೇಂದ್ರ, ಬುಕ್ಕಾಪಟ್ಟಣ ಹೋಬಳಿ ದೂರವಾಣಿ ಸಂಖ್ಯೆ 8217605223, ಸಹಾಯಕ ತೋಟಗಾರಿಕೆ ಅಧಿಕಾರಿ ರೈತ ಸಂಪರ್ಕ ಕೇಂದ್ರ, ಹುಲಿಕುಂಟೆ ಹೋಬಳಿ ದೂರವಾಣಿ ಸಂಖ್ಯೆ 6360706979, ಸಹಾಯಕ ತೋಟಗಾರಿಕೆ ಅಧಿಕಾರಿ, ರೈತ ಸಂಪರ್ಕ ಕೇಂದ್ರ, ಕಸಬಾ, ಹೋಬಳಿ ದೂರವಾಣಿ ಸಂಖ್ಯೆ 9964968020 ಗೆ ಸಂಪರ್ಕಿಸುವಂ ತಿಳಿಸಿದ್ದಾರೆ.

Leave a Comment