Ration card list ನಿಂದ ಯಾರ ಯಾರ ಹೆಸರು ಡಿಲೀಟ್ ಮಾಡಲಾಗಿದೆ ಎಂಬುದನ್ನು ಫಲಾನುಭವಿಗಳು ಈಗ ತಮ್ಮ ಬಳಿಯಿರುವ ಮೊಬೈಲ್ ನಲ್ಲೇ ಚೆಕ್ ಮಾಡಬಹುದು. ಅದು ಹೇಗೆ ಅಂದುಕೊಂಡಿದ್ದೀರಾ? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ
ಅನ್ನಭಾಗ್ಯ ಯೋಜನೆಯಡಿ ನೋಂದಾಯಿಸಿಕೊಂಡು ಅನರ್ಹರಾಗಿರುವ ಹೆಸರುಗಳನ್ನು ತೆಗೆಯಲಾಗುತ್ತಿದೆ. ಪ್ರತಿ ತಿಂಗಳು ಆಯಾ ಜಿಲ್ಲಾ, ತಾಲೂಕುವಾರು ಸರ್ವೆ ನಡೆಸಿ ತೆಗೆಯಲಾಗುತ್ತಿದೆ. ಆದರೆ ಜುಲೈ ತಿಂಗಳಲ್ಲಿ ಅತೀ ಹೆಚ್ಚು ಅನರ್ಹರ ಹೆಸರುಗಳನ್ನು ಡಿಲೀಟ್ ಮಾಡಲಾಗಿದೆ. ಕೇವಲ ಅನರ್ಹರಷ್ಟೇ ಅಲ್ಲ, ಸತ್ತವರ ಹೆಸರುಗಳೂ ಸಹ ಅನ್ನಭಾಗ್ಯ ಯೋಜನೆಯಡಿಯಲ್ಲಿ ಇದ್ದವು. ಸತ್ತವರ ಹೆಸರಿನಲ್ಲಿ ಪಡಿತರ ಮತ್ತು ಡಿಬಿಟಿ ಮೂಲಕ ಹಣ ಪಡೆಯುತ್ತಿದ್ದ 5.18 ಲಕ್ಷಕ್ಕೂ ಹೆಚ್ಚು ಅನರ್ಹ ಫಲಾನುಭವಗಳನ್ನು ಪತ್ತೆ ಮಾಡಿ ಅವರ ಹೆಸರುಗಳನ್ನು ಫಲಾಭವಿಗಳ ಪಟ್ಟಿಯಿಂದೆ ರದ್ದುಗೊಳಿಸಲಾಗಿದೆ.
Ration card list ನಿಂದ ಯಾರ ಹೆಸರು ಡಿಲೀಟ್ ಮಾಡಲಾಗಿದೆ? ಚೆಕ್ ಮಾಡಿ
ಅನ್ನಭಾಗ್ಯ ಯೋಜನೆಯಡಿಯಲ್ಲಿ ನೋಂದಣಿ ಮಾಡಿಸಿಕೊಂಡ ಪಡಿತರ ಚೀಟಿದಾರರು ತಮ್ಮ ಹೆಸರನ್ನು ಡಿಲೀಟ್ ಮಾಡಲಾಗಿದೆಯೇ ಎಂಬುದನ್ನು ಚೆಕ್ ಮಾಡಲು ಈ
https://ahara.kar.nic.in/Home/EServices
ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆ ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ನಿಮಗೆ ಇ ಪಡಿತರ ಚೀಟಿ (e Ration card) ಮೇಲೆ ಕ್ಲಿಕ್ ಮಾಡಬೇಕು. ನಂತರ ರದ್ದುಗೊಳಿಸಲಾದ / ತಡೆಹಿಡಿಯಲಾದ ಪಟ್ಟಿ (Show cancelled / suspended list) ಮೇಲೆ ಕ್ಲಿಕ್ ಮಾಡಬೇಕು. ಆಗ ಇನ್ನೊಂದು ಪೇಜ್ ತೆರೆದುಕೊಳ್ಳುತ್ತದೆ.
ಅಲ್ಲಿ ನೀವು ನಿಮ್ಮ ಜಿಲ್ಲೆಯನ್ನು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ. ನಂತರ ನಿಮ್ಮ ತಾಲೂಕು ಆಯ್ಕೆ ಮಾಡಿಕೊಂಡು ತಿಂಗಳು ಆಯ್ಕೆ ಮಾಡಿಕೊಳ್ಳಬೇಕು. ಜುಲೈ ತಿಂಗಳಲ್ಲಿ ಎಷ್ಟು ಜನ ಯಾರ ಯಾರ ಹೆಸರು ತೆಗೆಯಲಾಗಿದೆ ಎಂಬುದನ್ನು ಚೆಕ್ ಮಾಡಬೇಕಾದರೆ ಜುಲೈ ತಿಂಗಳು ಆಯ್ಕೆ ಮಾಡಿಕೊಳ್ಳಬೇಕು.
ಅದೇ ರೀತಿ ಆಗಸ್ಟ್ ತಿಂಗಳಲ್ಲಿ ಯಾ ರ ಹೆಸರುಗಳನ್ನು ತೆಗೆಯಲಾಗಿದೆ ಎಂಬ ಪಟ್ಟಿಕಾಣಿಸುತ್ತದೆ.
ಇದನ್ನು ಓದಿ : ನಿಮ್ಮ ಜಮೀನಿನ ಒರಿಜಿನಲ್ ಸರ್ವೆ ಟಿಪ್ಪಣಿ ಪುಸ್ತಕ ಒಂದೇ ನಿಮಿಷದಲ್ಲಿ ಮೊಬೈಲ್ ನಲ್ಲೇ ಚೆಕ್ ಮಾಡಿ
ಅಲ್ಲಿಪಡಿತರ ಚೀಟಿ ಸಂಖ್ಯೆ, ಫಲಾನುಭವಿಗಳಹೆಸರು, ಯಾವ ದಿನಾಂಕದಂದು ತೆಗೆಯಲಾಗಿದೆ ಎಂಬ ಪಟ್ಟಿಯೇ ಕಾಣುಸುತ್ತದೆ. ಕೆಳಗಡೆ ಕ್ರಮ ಸಂಖ್ಯೆ ಅಂದರೆ ಪುಟಗಳ ಸಂಖ್ಯೆಯಿರುತ್ತದೆ. ಅದರ ಮೇಲೆ ಕ್ಲಿಕ್ ಮಾಡುತ್ತಾನಿಮ್ಮ ಹೆಸರಿದೆಯೇ ಎಂಬುದನ್ನು ಫಲಾನುಭವಿಗಳು ಮನೆಯಲ್ಲಿಯೇ ಕುಳಿತು ಚೆಕ್ ಮಾಡಿಕೊಳ್ಳಬಹುದು.
ಈಗೇಕೆ ಇಷ್ಟೊಂದು ಫಲಾನುಭವಿಗಳ ಹೆಸರು ಡಿಲೀಟ್?
ಸತ್ತವರ ಹೆಸರು ಹಾಗೂ ಅನರ್ಹರ ಹೆಸರುಗಳಲ್ಲಿ ಪಡಿತರ ಮತ್ತು ಡಿಬಿಟಿ ಮೂಲಕ ಹಣ ಪಡೆಯುತ್ತಿದ್ದರಿಂದ ಈ ಕೆಲಸಕ್ಕೆ ಸರ್ಕಾರ ಮುಂದಾಗಿದೆ. ಸುಮಾರು 5.18 ಲಕ್ಷಕ್ಕೂ ಹೆಚ್ಚಿನ ಅನರ್ಹ ಫಲಾನುಭವಿಗಳನ್ನು ಪತ್ತೆ ಮಾಡುವ ಮೂಲಕ ಸರ್ಕಾರ ಅವರ ಹೆಸರುಗಳನ್ನು ಡಿಲೀಟ್ ಮಾಡಿದೆ.
ಬದುಕಿರುವವರಿಗೆ ಅನ್ನಭಾಗ್ಯದಲ್ಲಿ ಪಡಿತರ ಕೊಡದ ಸರ್ಕಾರ ಸತ್ತವರಿಗೆ ವಿತರಿಸುವ ಮೂಲಕ ಸರ್ಕಾರದ ಬೊಕ್ಕಸಕ್ಕೆ ಕೋಟ್ಯಂತರ ರೂಪಾಯಿ ನಷ್ಟ ಉಂಟು ಮಾಡಲಾಗಿತ್ತು.ಈ ಬಗ್ಗೆ ದೂರುಗಳು ಬಂದಿದ್ದರಿಂದ ಆಹಾರ ಇಲಾಖೆ ಜುಲೈ ತಿಂಗಳಿಂದ ಆಗಸ್ಟ್ ತಿಂಗಳವರೆಗೆ ಅನರ್ಹರ ಹೆಸರುಗಳನ್ನು ಪತ್ತೆ ಹಚ್ಚಿ ಡಿಲೀಟ್ ಮಾಡುವ ಕಾರ್ಯಕ್ಕೆ ಮುಂದಾಗಿದೆ.
ಕುಟುಂಬದಲ್ಲಿ ಮರಣ ಹೊಂದಿದವರ ಹೆಸರು ತೆಗೆಸಬೇಕೆಂದು ಸರ್ಕಾರ ಸೂಚನೆ ನೀಡಿದ್ದರೂ ಸಹ ಹಲವಾರು ಜನ ಪಡಿತರ ಚೀಟಿಯಿಂದ ಸತ್ತವರ ಹೆಸರು ತೆಗೆಸುತ್ತಿರಲಿಲ್ಲ. ಹಾಗಾಗಿ ಸರ್ಕಾರ ಈ ಕಠಿಣ ಕ್ರಮ ಕೈಗೊಂಡಿದೆ.