Anugraha Scheme ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವವರು ಮಂಡಿಸಿದ ಬಜೆಟ್ ನಲ್ಲಿ ಅನುಗ್ರಹ ಯೋಜನೆಯನ್ನು ಮತ್ತೆ ಮುಂದುವರೆಸುವುಕ್ಕೆ ಅನುಮತಿ ನೀಡಲಾಗಿದೆ. ಈ ಮೂಲಕ ಕುರಿಗಾಹಿಗಳಿಗೆ ಸಂತಸದ ಸುದ್ದಿ ನೀಡಿದ್ದಾರೆ. ಹೌದು, ಕುರಿ ಮೇಕೆಗಳು ಆಕಸ್ಮಿಕವಾಗಿ ಸಾವನ್ನಪ್ಪಿದ್ದರೆ ಅನುಗ್ರಹ ಯೋಜನೆಯಡಿಯಲ್ಲಿ ರೈತರಿಗೆ ಐದು ಸಾವಿರ ರೂಪಾಯಿಯವರೆಗೆIn the accidental death goats: owner get 5000 Rupees under Anugraha Scheme ಪರಿಹಾರ ನೀಡಲಾಗುವುದು.
ಕುರಿ ಹಾಗೂ ಮೇಕೆಗಳು ಆಕಸ್ಮಿಕ ಮರಣ ಹೊಂದಿದಲ್ಲಿ ಹಾಗೂ ದೃಢೀಕೃತ ಸಾಂಕ್ರಾಮಿಕ ರೋಗಗಳಿಂದ ಮರಣ ಹೊಂದಿದರೆ ಪರಿಹಾರ ಧನ ವಿತರಿಸುವ ಅನುಗ್ರಹ ಯೋಜನೆಯನ್ನುಸಿದ್ದರಾಮಯ್ಯನವವರು ಮುಖ್ಯಮಂತ್ರಿಯಾಗಿದ್ದಾಗ 2017 ರಲ್ಲಿ ಜಾರಿಗೆ ತಂದಿದ್ದರು. ಕುರಿಗಳಿಗೆ ಮೇಲಿಂದ ಮೇಲೆ ಆಗಮಿಸುವ ರೋಗ ಹಾಗೂ ನೈಸರ್ಗಿಕ ವಿಕೋಪಕ್ಕೆ ತುತ್ತಾಗುತ್ತಿರುವ ಮನಗಂಡು ಸರಕಾರ ಅನುಗ್ರಹ ಯೋಜನೆ ಜಾರಿಗೊಳಿಸಿತ್ತು. ಕುರಿಗಳು ಸತ್ತರೆ ಐದು ಸಾವಿರ ರೂಪಾಯಿಗಳ ಪರಿಹಾರ ನೀಡುವ ಅನುಗ್ರಹ ಯೋಜನೆಯನ್ನು ರಾಜ್ಯ ಸರ್ಕಾರ ಈ ಹಿಂದೆ ಹಿಂಪಡೆದಿತ್ತು. ರಾಜ್ಯ ಸರ್ಕಾರದ ಈ ನಿರ್ಣಯ ವಿರೋಧಿಸಿ ವಿಪಕ್ಷ ನಾಯಕ ಸಿದ್ದರಾಮಯ್ಯ ತೀವ್ರ ವಾಗ್ದಾಳಿ ನಡೆಸಿದ್ದರು. ಒಂದು ವೇಳೆ ಅನುಗ್ರಹ ಯೋಜನೆಯನ್ನು ಜಾರಿಗೊಳಿಸದಿದ್ದರೆ ರಾಜ್ಯ ಸರ್ಕಾರದ ವಿರುದ್ಧ ತೀವ್ರ ಪ್ರತಿಭಟನೆ ಮಾಡುವುದಾಗಿ ಸಿದ್ದರಾಮಯ್ಯ ಎಚ್ಚರಿಕೆ ನೀಡಿದ್ದರು.
ಏನಿದು ಅನುಗ್ರಹ ಯೋಜನೆ? (What is Anugraha Scheme)
ಕುರಿ ಹಾಗೂ ಮೇಕೆಗಳು ಆಕಸ್ಮಿಕ ಮರಣ ಹೊಂದಿದಲ್ಲಿ ಹಾಗೂ ದೃಢೀಕೃತ ಸಾಂಕ್ರಾಮಿಕ ರೋಗಗಳಿಂದ ಮರಣ ಹೊಂದಿದರೆ ವಿಮೆಗೆ ಒಳಪಡದ 6 ತಿಂಗಳ ಮೇಲ್ಪಟ್ಟ ಪ್ರತಿ ಕುರಿ, ಮೇಕೆಗೆ 5 ಸಾವಿರ ರೂಪಾಯಿ, 3 ರಿಂದ 6 ತಿಂಗಳ ಕುರಿ ಹಾಗೂ ಮೇಕೆ ಮರಿಗೆ 2,500 ರೂಪಾಯಿಗಳಂತೆ ಪರಿಹಾರ ಧನ ವಿತರಿಸಲಾಗುವುದು.
ಇದನ್ನೂ ಓದಿ : ಉಚಿತ ಕುರಿ ಸಾಕಾಣಿಕೆಗೆ ತರಬೇತಿ ನೀಡಲು ರೈತರಿಂದ ಅರ್ಜಿ ಅಹ್ವಾನ
ಅದರಂತೆ ಸಿದ್ದರಾಮಯ್ಯ ಒತ್ತಾಯಕ್ಕೆ ಮಣಿದಿರುವ ಸಿಎಂ ಬಿಎಸ್ವೈ ನೇತೃತ್ವದ ರಾಜ್ಯ ಸರ್ಕಾರ, ಅನುಗ್ರಹ ಯೋಜನೆಗೆ ಅನುದಾನ ಮೀಸಲಿಡುವುದಾಗಿ ಘೋಷಿಸಿದ್ದಾರೆ.
ಪಶುಪಾಲಕರಿಗೆ ಸಂತಸದ ಸುದ್ದಿ: ಕುರಿ ಸಾಕಾಣಿಕೆ, ಹೈನುಗಾರಿಕೆಗೆ ಮಾಹಿತಿ ನೀಡಲು ಆರಂಭವಾಗಿದೆ ಉಚಿತ ಸಹಾಯವಾಣಿ
ಅನುಗ್ರಹ ಯೋಜನೆಗೆ ರೈತರಿಗೆ ಉಪಯೋಗವಾಾಾಗಲಿದೆ. ಏಕೆಂದರೆ ರೈತರ ಜಾನುವಾರುಗಳು ಕೆಲವು ಸಲ ಯಾವುದೇ ರೋಗ ರುುಜಿನಗಳಿಲ್ಲದಿದ್ದರೂ ವಿಷ ಜಂತುಗಳಿಂದ ಸಾವನ್ನಪ್ಪುತ್ತವೆ. ಇದರಿಂದಾಗಿ ರೈತರಿಗೆ ಅಪಾರ ಹಾನಿಯಾಗುತ್ತದೆ. ಆಗ ಸರ್ಕಾರದ ಈ ಯೋಜನೆಯು ಕೈಹಿಡಿಯುತ್ತದೆ. ಇಂತಹ ಯೋಜನೆಗಳು ಕಾಗದ ರೂಪದಲ್ಲಿರದೆ ಕಾರ್ಯರೂಪದಲ್ಲಿ ಬರಬೇಕು. ಅಂದಾಗ ಮಾತ್ರ ಯೋಜನೆಗಳಿಗೆ ಅರ್ಥ ಬರುತ್ತದೆ. ಬಹುತೇಕ ಯೋಜನೆಗಳ ಲಾಭ ಸರಿಯಾಗಿ ರೈತರಿಗೆ ಅಂದರೆ ನಿಜವಾದ ಫಲಾನುಭವಿಗಳಿಗೆ ಸಿಗುವುದಿಲ್ಲ. ನಿಜವಾದ ಫಲಾನುಭವಿಗಳಿಗೆ ಪಾರದರ್ಶಕವಾಗಿ ಲಾಭ ಸಿಗುವಂತಾಗಬೇಕು. ಆಂದಾಗ ಮಾತ್ರ ಯೋಜನೆಗಳನ್ನು ಜಾರಿಗೆ ತರುವಲ್ಲಿ ಅರ್ಥ ಬರುತ್ತದೆ. ಯಾರದ್ದೋ ಸಂತೆ ಯಾರಿಗೂ ಜಾತ್ರೆ ಅಂದಂತೆ ಆಗಬಾರದು.