ration card family head : ರೇಷನ್ ಕಾರ್ಡ್ ದಾರರು ತಮ್ಮ ಕಾರ್ಡ್ ನಲ್ಲಿ ಕುಟುಂಬದ ಯಜಮಾನ ಯಾರೆಂಬುದನ್ನು ಮೊಬೈಲ್ ನಲ್ಲೇ ಚೆಕ್ ಮಾಡಿ ಬದಲಾಯಿಸಿಕೊಳ್ಳಬಹುದು.
ಹೌದು, ಈಗ ರೇಷನ್ ಕಾರ್ಡ್ ನಲ್ಲಿ ಮಹಿಳೆಯ ಹೆಸರಿದ್ದರೆ ಮಾತ್ರ ಆ ಮಹಿಳಾ ಖಾತೆಗೆ ಗೃಹಲಕ್ಷ್ಮೀ ಯೋಜನೆಯ 2 ಸಾವಿರ ರೂಪಾಯಿ ಜಮೆಯಾಗಲಿದೆ. ಹಾಗಾದರೆ ರೇಷನ್ ಕಾರ್ಡ್ ನಲ್ಲಿ ಯಜಮಾನಿ ಅಥವಾ ಯಜಮಾನ ಯಾರೆಂಬುದನ್ನು ಚೆಕ್ ಮಾಡುವುದು ಹೇಗೆ? ಹೆಸರು ಬದಲಾಯಿಸುವುದು ಹೇಗೆ? ಎಂಬುದರ ಮಾಹಿತಿ ಇಲ್ಲಿದೆ.
ration card family head ರೇಷನ್ ಕಾರ್ಡ್ ನಲ್ಲಿ ಕುಟುಂಬದ ಯಜಮಾನಿ ಯಾರಿದ್ದಾರೆ? ಹೀಗೆ ಚೆಕ್ ಮಾಡಿ
ಪಡಿತರ ಚೀಟಿದಾರರು ತಮ್ಮ ಕಾರ್ಡ್ ನಲ್ಲಿ ಕುಟುಂಬದ ಯಜಮಾನ ಅಥವಾ ಯಜಮಾನಿ ಯಾರೆಂಬುದನ್ನು ಒಂದೇ ನಿಮಿಷದಲ್ಲಿ ಚೆಕ್ ಮಾಡಬಹುದು. ಚೆಕ್ ಮಾಡಲು ಈ
https://ahara.kar.nic.in/Home/EServices
ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ಹಳ್ಳಿಪಟ್ಟಿ (Show village list) ಮೇಲೆ ಕ್ಲಿಕ್ ಮಾಡಬೇಕು. ಆಗ ತೆರೆದುಕೊಳ್ಳುವ ಪೇಜ್ ನಲ್ಲಿ ಜಿಲ್ಲೆ, ತಾಲೂಕು, ಗ್ರಾಮ ಪಂಚಾಯತ್ ಹಾಗೂ ಗ್ರಾಮ ಆಯ್ಕೆ ಮಾಡಿಕೊಂಡು ಗೋ ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮ್ಮ ಊರಿನಲ್ಲಿ ಯಾರು ಯಾರು ಪಡಿತರ ಚೀಟಿ ಪಡೆದಿದ್ದಾರೆ ಎಂಬ ಪಟ್ಟಿ ಕಾಣಿಸುತ್ತದೆ.
ಅಲ್ಲಿ ನಿಮ್ಮ ಪಡಿತರ ಚೀಟಿ ಸಂಖ್ಯೆ ಅದರ ಮುಂದೆ ಪಡಿತರ ಚೀಟಿಯಲ್ಲಿ ಕುಟುಂಬದ ಯಜಮಾನ ಅಥವಾ ಯಜಮಾನಿ ಹೆಸರು ಇರುತ್ತದೆ. ಒಂದು ವೇಳೆ ಮಹಿಳೆಯ ಹೆಸರಿದ್ದರೆ ಅವರೇ ಕುಟುಂಬದ ಯಜಮಾನಿ ಎಂದು ಪರಿಗಣಿಸಲಾಗುತ್ತದೆ. ಅವರ ಖಾತೆಗೆ ಗೃಹಲಕ್ಷ್ಮೀ ಯೋಜನೆಯ ಹಣ ಜಮೆಯಾಗುತ್ತದೆ.
ರೇಷನ್ ಕಾರ್ಡ್ ನಲ್ಲಿ ಮುಖ್ಯಸ್ಥರ ಹೆಸರು ಹೀಗೆ ಬದಲಾಯಿಸಬೇಕು
ರೇಷನ್ ಕಾರ್ಡ್ ನಲ್ಲಿ ಮುಖ್ಯಸ್ಥರ ಹೆಸರು ಬದಲಾಯಿಸಬೇಕಾದರೆ ನಿಮ್ಮ ಸಮೀಪದ ಪಡಿತರ ಚೀಟಿ ಸೇವಾ ಕೇಂದ್ರಗಳಿಗೆ ಭೇಟಿ ನೀಡಬೇಕು. ಅಲ್ಲಿ ಮುಖ್ಯಸ್ಥರಹೆಸರು ಬದಲಾವಣೆ ಮಾಡುವುದಕ್ಕೆ ಅರ್ಜಿ ಸಲ್ಲಿಸಬೇಕು. ಅರ್ಜಿಯೊಂದಿಗೆ ಅಗತ್ಯ ದಾಖಲೆ ಅಂದರೆ ಆಧಾರ್ ಕಾರ್ಡ್, ಚುನಾವಣೆ ಗುರುತಿನ ಚೀಟಿ ಸೇರಿದಂತೆ ಕೇಳಲಾದ ಅಗತ್ಯ ದಾಖಲೆಗಳನ್ನು ಸಲ್ಲಿಸಬೇಕು.
ಇದನ್ನೂ ಓದಿ : ರೇಷನ್ ಕಾರ್ಡ್ ದಾದರು ಇಕೆವೈಸಿ ಮಾಡಿಸುವುದು ಕಡ್ಡಾಯ- ಇಕೆವೈಸಿ ಆಗಿದೆಯೋ ಇಲ್ಲವೋ ಚೇಕ್ ಮಾಡಿ
ಬಯೋಮೆಟ್ರಿಕ್ ದೃಢೀಕರಣದ ಮೂಲಕ ದಾಖಲೆಗಳನ್ನು ಸಲ್ಲಿಬೇಕು. ಪಡಿತರ ಸೇವಾ ಕೇಂದ್ರಗಳಲ್ಲಿ ನೀವು ನೀಡುವ ಮಾಹಿತಿಯನ್ನು ಆನ್ಲೈನ್ ಮೂಲಕ ಅಪ್ಲೋಡ್ ಮಾಡಲಾಗುವುದು. ಅರ್ಜಿ ಸಲ್ಲಿಸಿದ ನಂತರ ಆಹಾರ ಕಚೇರಿಯಿಂದ ನಿಮ್ಮ ಮೊಬೈಲಿಗೆ ಎಸ್ಎಂಎಸ್ ಬರಲಿದೆ.
ಪಡಿತರ ಚೀಟಿ ಕಾರ್ಡ್ ನಲ್ಲಿ ಯಜಮಾನಿ ಹೆಸರು ಬದಲಿಸಲು ಈ ದಾಖಲೆ ಬೇಕು
ರೇಷನ್ ಕಾರ್ಡ್ ನಲ್ಲಿ ಕುಟುಂಬದ ಮುಖ್ಯಸ್ಥರ ಹೆಸರನ್ನು ಬದಲಾವಣೆ ಮಾಡಬೇಕಾದರೆ ಆಧಾರ್ ಕಾರ್ಡ್ ಸಲ್ಲಿಸಬೇಕು. ಕುಟುಂಬದ ಮುಖ್ಯಸ್ಥರು ಮರಣ ಹೊಂದಿದ್ದರೆ ಅವರ ಮರಣ ಪ್ರಮಾಣ ಪತ್ರ, ಪಡಿತರ ಚೀಟಿ, ಅಱ್ಜಿದಾರರ ವಿಳಾಸದ ಪುರಾವೆಯಾಗಿ ಆಧಾರ್ ಕಾರ್ಡ್ ಸಲ್ಲಿಸಬೇಕು. ಹೊಸ ಕುಟುಂಬದ ಸದಸ್ಯರ ಹೆಸರುಗಳನ್ನು ಸಹ ಸೇರ್ಪಡೆಗೆ ಅವಕಾಶವಿರುತ್ತದೆ. ಯಾವ ಸದಸ್ಯರ ಹೆಸರು ಸೇರಿಸಬೇಕೆಂದುಕೊಂಡಿದ್ದೀರೋ ಅವರ ಆಧಾರ್ ಕಾರ್ಡ್ ಸಲ್ಲಿಸಬೇಕು. ಪಾಸ್ ಪೋರ್ಟ್ ಸೈಜಿನ ಫೋಟೋ ಸಹ ಸಲ್ಲಿಸಬೇಕಾಗುತ್ತದೆ.
ಇದೇ ತಿಂಗಳು 30 ರಂದು ಗೃಹಲಕ್ಷ್ಮೀ ಯೋಜನೆಯ ಹಣ ಫಲಾನುಭವಿಗಳ ಖಾತೆಗೆ ಜಮೆ
ಕಾಂಗ್ರೆಸ್ ಸರ್ಕಾರದ ಮಹತ್ವದ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮೀ ಯೋಜನೆಯ ಹಣ ಫಲಾನುಭವಿಗಳ ಖಾತೆಗೆ ಇದೇ ತಿಂಗಳು ಆಗಸ್ಟ್ 30 ರಂದು ಫಲಾನುಭವಿಗಳ ಖಾತೆಗೆ ಜಮೆಯಾಗುವ ಸಾಧ್ಯತೆಯಿದೆ. ಹಾಗಾಗಿ ಕೊನೆಯ ದಿನಾಕಂದ ಮೊದಲೇ ಪಡಿತರ ಚೀಟಿ ಮುಖ್ಯಸ್ಥರ ಹೆಸರು ಬದಲಾಯಿಸಿಕೊಳ್ಳಬಹುದು.