Dharwad krishimela 2023 : ಧಾರವಾಡ ಕೃಷಿ ವಿಶ್ವವಿದ್ಯಾಲಯದಲ್ಲಿ ಸುಸ್ಥಿರ ಕೃಷಿಗಾಗಿ ಸಿರಿಧಾನ್ಯಗಳು ಎಂಬ ಶೀರ್ಷಿಕೆಯಡಿ ಸೆಪ್ಟೆಂಬರ್ 9 ರಿಂದ 12ರವರೆಗೆ ನಾಲ್ಕು ದಿನಗಳ ಕಾಲ ಕೃಷಿ ಮೇಳ ಆಯೋಜಿಸಲಾಗಿದೆ.
ಹೌದು, ಕೃಷಿ ಇಲಾಖೆ ಹಾಗೂ ಸಂಬಂಧಿತ ಇಲಾಖೆಗಳು ಮತ್ತು ಕರ್ನಾಟಕ ಪ್ರದೇಶ ಕೃಷಿ ಸಮಾಜ ಬೆಂಗಳೂರು ಇವರ ಸಹಯೋಗದೊಂದಿಗೆ ಸುಸ್ಥಿರ ಕೃಷಿಗಾಗಿ ಸಿರಿಧಾನ್ಯಗಳು ಎಂಬ ಶೀರ್ಷಿಕೆಯೊಂದಿಗೆ ಧಾರವಾಡದ ಕೃಷಿ ವಿಶ್ವವಿದ್ಯಾಲಯದಲ್ಲಿ 2023 ರ ಸೆಪ್ಟೆಂಬರ್ 9 ರಿಂದ 12 ರವರೆಗೆ ಕೃಷಿ ಮೇಳವನ್ನು ಯೋಜಿಸಲಾಗಿದೆ ಎಂದು ಧಾರವಾಡ ಕೃಷಿ ವಿಶ್ವವಿದ್ಯಾಲಯದ ಕೀಟಶಾಸ್ತ್ರ ಪ್ರಾದ್ಯಾಪಕರು ಹಾಗೂ ಕೃಷಿ ಮೇಳ 2023 ರ ಪ್ರಚಾರ ಸಮಿತಿಯ ಅಧ್ಯಕ್ಷ ಎಸ್.ಎನ್. ಜಾಧವ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Dharwad krishimela 2023 ಧಾರವಾಡ ಕೃಷಿ ಮೇಳದಲ್ಲಿ ಏನೇನಿರಲಿದೆ?
ಅಂತಾರಾಷ್ಟ್ರೀಯ ಸಿರಿಧಾನ್ಯಗಳ ವರ್ಷ 2023 , ಸಾವಯವ ಕೃಷಿ ಬೆಳೆಗಳು, ಸಿರಿಧಾನ್ಯ ಉತ್ಪಾದನೆ, ಮೌಲ್ಯವರ್ಧನೆ ಹಾಗೂ ಮಾರುಕಟ್ಟೆ, ಇದರ ಜೊತೆಗೆ ಸಂಶೋಧನೆ ಮಾಡಿದ ವಿವಿಧ ತಳಿಗಳ ಹಾಗೂ ಆಧುನಿಕ ಕೃಷಿ ತಂತ್ರಜ್ಞಾನಗಳ ಮಾಹಿತಿ, ಹಿಂಗಾರು ಬೆಳೆಗಳ ತಾಂತ್ರಿಕತೆಗಳು, ಕಿಸಾನ್ ಡ್ರೋನ್ ಬಳಕೆ, ಬರ ನಿರ್ವಹಣಾ ತಾಂತ್ರಿಕತೆಗಳು, ಒಣ ಬೇಸಾಯ, ಜಲಾನಯನ ಅಭಿವೃದ್ಧಿ ಮಣ್ಣು, ಆರೋಗ್ಯ, ಜಲ ಸಾಕ್ಷರತೆ, ಜಲ ಸಂರಕ್ಷಣೆ ತಾಂತ್ರಿಕತೆಗಳು, ಕೃಷಿ ಮತ್ತು ತೋಟಗಾರಿಕೆ ಹುಟ್ಟುವಳಿಗಳ ರಪ್ತು ಅವಕಾಶಗಳನ್ನು ಬಿಂಬಿಸುವ ಪ್ರದರ್ಶನಗಳು ಹಾಗೂ ಅನೇಕ ವಿಶಿಷ್ಟ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಕೃಷಿ ಮೇಳದ ಅಂಗವಾಗಿ ಫಲಪುಷ್ಪ ಮತ್ತು ತರಕಾರಿ ಬೆಳೆಗಳ ಪ್ರದರ್ಶನ, ವಿಸ್ಮಯಕಾರಿ ಕೀಟ ಪ್ರಪಂಚ, ಕೃಷಿ ಅರಣ್ಯ ಪದ್ಧತಿಗಳು, ಪರಿಸರ ಸಂರಕ್ಷಣೆ, ಕೃಷಿ ಯಂತ್ತೋಪಕರಣಗಳು, ಯಶಸ್ವಿ ರೈತರೊಂದಿಗೆ ಸಂವಾದ, ಕೃಷಿ ಸಮಾಲೋಚನೆ, ವಿವಿಧ ಜಾನುವಾರು ಪ್ರದರ್ಶನ, ವಸ್ತ್ರ ವಿನ್ಯಾಸ, ವಿವಿಧ ಸಂಘ- ಸಂಸ್ಥೆಗಳಿಂದ ಉತ್ಪನ್ನಗಳ ಮಾರಾಟ ಮಾಹಿತಿ ಇತ್ಯಾದಿ ವಿಶಿಷ್ಟ ಕಾರ್ಯಕ್ರಮಗಳನ್ನು ವ್ಯವಸ್ಥಿತ ರೀತಿಯಲ್ಲಿ ಸಂಘಟಿಸಲಾಗುತ್ತಿದೆ.
ಇದನ್ನೂ ಓದಿ : ಗೃಹ ಲಕ್ಷ್ಮೀ ಯೋಜನೆಯ ಹಣ ಈ ಪಟ್ಟಿಯಲ್ಲಿರುವ ಮಹಿಳೆಯರಿಗೆ ಜಮೆ- ಆಗಸ್ಟ್ 27 ರಂದು ಹಣ ಬಿಡುಗಡೆ
ಈ ಮೇಳದಲ್ಲಿ ಅಂದಾಜು 15 ಲಕ್ಷಕ್ಕಿಂತ ಹೆಚ್ಚು ರೈತರು, ರೈತ ಮಹಿಳೆಯರು, ವಿಸ್ತರಣಾ ಹಾಗೂ ಸ್ವಯಂ ಸೇವಾ ಕಾರ್ಯಕರ್ತರು ಭಾಗವಹಿಸುವ ನಿರೀಕ್ಷೆಯಿದೆ.
ಈ ಕೃಷಿ ಮೇಳದಲ್ಲಿ ಮಳಿಗೆಗಳನ್ನು ಕಾಯ್ದಿರಿಸಲು ಧಾರವಾಡ ಕೃಷಿ ಮೇಳದ ವಸ್ತು ಪ್ರದರ್ಶನ ಸಮಿತಿಯ ಅಧ್ಯಕ್ಷರ ದೂರವಾಣಿ ಸಂಖ್ಯೆ 0836 2214468, ಮೊಬೈಲ್ ಸಂಖ್ಯೆ 8277478507 ಗಳಿಗೆ ಸಂಪರ್ಕಿಸಲು ಕೋರಲಾಗಿದೆ.
ಸಿರಿಧಾನ್ಯಗಳ ವಿಶೇಷತೆ
ಸಿರಿಧಾನ್ಯ ಬೆಳೆಗಳಾದ ಬರಗು, ರಾಗಿ, ಊದಲು, ನವಣೆ, ಸಾವಿ, ಸಜ್ಜೆ ಈ ಬೆಳೆಗಳ ಪ್ರದರ್ಶನ ಇರಬಲಿದೆ. ಮಾಹಿತಿ, ಮಾರುಕಟ್ಟೆ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಒದಗಿಸಲಾಗುವುದು. ಜೊತೆಗೆ ರೈತರ ಜೊತೆಗೆ ಸಂವಾದ, ಚರ್ಚಾಗೋಷ್ಠಿ ಹಾಗೂ ನೂತನ ಯಂತ್ರೋಪಕರಣಗಳ ಪ್ರಾತ್ಯಕ್ಷಿಕೆ ಸಹ ನಡೆಯಲಿದೆ.
ಧಾರವಾಡ ಕೃಷಿ ವಿಶ್ವವಿದ್ಯಾಲಯ ವ್ಯಾಪ್ತಿಯಲ್ಲಿ ಬರುವ ಪ್ರತಿ ಜಿಲ್ಲೆಯ ಶ್ರೇಷ್ಠ ಕೃಷಿಕ ಹಾಗೂ ಶ್ರೇಷ್ಠ ಕೃಷಿ ಮಹಿಳೆಯರನ್ನು ಆಯ್ಕೆ ಮಾಡಿ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.
ರಾಜ್ಯದ ರೈತರಿಗೆ ಕೃ ಷಿ ಯಂತ್ರೋಪಕರಣಗಳು, ಹೊಸ ತಳಿಗಳು, ಕೃ ಷಿ ಕುರಿತಂತೆ ಆಧುನಿಕ ಮಾಹಿತಿ ನೀಡಲು ಪ್ರತಿ ವರ್ಷ ಈ ಮೇಳಗಳನ್ನು ಆಯೋಜಿಸಲಾಗುತ್ತದೆ. ಈ ಮೇಳದಲ್ಲಿ ರಾಜ್ಯದ ಮೂಲೆ ಮೂಲೆಗಳಲ್ಲಿ ರೈತರು ಆಗಮಿಸುತ್ತಾರೆ. ನಾಲ್ಕು ದಿನಗಳ ಕಾಲ ನಡೆಯುವ ಈ ಮೇಳ ರೈತಿರಿಗೆ ಹಬ್ಬವಾಗಲಿದೆ. ಪ್ರಗತಿಪರ ರೈತರು ಈ ಮೇಳದಲ್ಲಿ ಭಾಗವಹಿಸಿ ಕೃಷಿಗೆ ಸಂಬಂಧಿಸಿದ ಮಾಹಿತಿ ಪಡೆಯುತ್ತಾರೆ.