ಇನ್ನೂ ಮುಂದೆ ಈ ಪಟ್ಟಿಯಲ್ಲಿರುವ ರೈತರಿಗೆ ಪಿಎಂ ಕಿಸಾನ್ ಹಣ ಜಮೆ

Written by Ramlinganna

Updated on:

Pm kisan beneficiary list ಪಿಎಂ ಕಿಸಾನ್ ಯೋಜನೆಯ 17ನೇ ಕಂತಿನ ಫಲಾನುಭವಿಗಳ ರೈತರ ಪಟ್ಟಿ ಬಿಡುಗಡೆಯಾಗಿದೆ.

ಹೌದು, ಪಿಎಂ ಕಿಸಾನ್ ಯೋಜನೆಯ ಪೇಜ್ ನಲ್ಲಿ ರೈತರು ಮೊಬೈಲ್ ನಲ್ಲೇ ಚೆಕ್ ಮಾಡಬಹುದು. ಮುಂದಿನ ಕಂತು ಜಮೆ ಮಾಡಲು ಯಾವ ಯಾವ ರೈತರ ಹೆಸರು ಕೈಬಿಡಲಾಗಿದೆ? ಯಾವ ರೈತರ ಹೆಸರು ಸೇರಿಸಲಾಗಿದೆ? ಎಂಬುದನ್ನು ಮೊಬೈಲ್ ನಲ್ಲೇ ಚೆಕ್ ಮಾಡಬಹುದು. ಅದು ಹೇಗೆ ಅಂದುಕೊಂಡಿದ್ದೀರಾ? ಇಲ್ಲಿದೆ ನೋಡಿ ಮಾಹಿತಿ.

ಪಿಎಂ ಕಿಸಾನ್ ಯೋಜನೆಗೆ ನೋಂದಣಿ ಮಾಡಿಸಿದ ರೈತರಿಗೆ ಈಗಾಗಲೇ 16ನೇ ಕಂತಿನ ಹಣ ಕಳೆದ ತಿಂಗಳು ಜಮೆಯಾಗಿರುವುದು ತಮಗೆಲ್ಲಾ ಗೊತ್ತಿದೆ. ಕಳೆದ ಐದಾರು ತಿಂಗಳುಗಳಿಂದ ಇಕೆವೈಸಿ ಮಾಡಿಸುವುದು ಕಡ್ಡಾಯವೆಂದು ಕೃಷಿ ಇಲಾಖೆ ಪತ್ರಿಕೆ ಪ್ರಕಟಣೆಗಳ ಮೂಲಕ ಹಲವಾರು ಬಾರಿ ಮನವಿ ಮಾಡಿತ್ತು. ಕಾರ್ಯಕ್ರಮಗಳಲ್ಲಿಯೂ ಸಹ ಇಕೆವೈಸಿ ಮಾಡಿಸುವುದು ಕಡ್ಡಾಯವಾಗಿದೆ ಎಂದು ರೈತರಲ್ಲಿ ಮನವಿ ಮಾಡಿತ್ತು. ಹಾಗಾಗಿ ಬಹುತೇಕ ರೈತರು ಇಕೆವೈಸಿ ಮಾಡಿಸಿದ್ದಾರೆ. ಆದರೂ ಇನ್ನೂ ಹಲವಾರು ರೈತರು ಇಕೆವೈಸಿ ಮಾಡಿಸಿಲ್ಲ. ಈ ರೈತರಿಗೂ ಮುಂದಿನ ಕಂತು ಜಮೆಯಾಗುವುದೋ ಇಲ್ಲವೋ ಎಂಬುದನ್ನು ತಿಳಿದುಕೊಳ್ಳಬಹುದು.

Pm kisan beneficiary list ಪಿಎಂ ಕಿಸಾನ್ ಯೋಜನೆಯ ಫಲಾನುಭವಿಗಳ ಪಟ್ಟಿ ಚೆಕ್ ಮಾಡುವುದು ಹೇಗೆ?

ಪಿಎಂ ಕಿಸಾನ್ ಯೋಜನೆಯ 15ನೇ ಕಂತಿನ ಫಲಾನುಭವಿಗಳ ಹೆಸರು ಚೆಕ್ ಮಾಡಲು ಈ ಲಿಂಕ್

https://pmkisan.gov.in/Rpt_BeneficiaryStatus_pub.aspx

ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮಗೆ ಪಿಎಂ ಕಿಸಾನ್ ಯೋಜನೆಯ ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ನೀವು ನಿಮ್ಮ ರಾಜ್ಯ ಕರ್ನಾಟಕ ಆಯ್ಕೆ ಮಾಡಿಕೊಳ್ಳಬೇಕು. ನಂತರ ನಿಮ್ಮ ಜಿಲ್ಲೆ ಆಯ್ಕೆ ಮಾಡಿಕೊಳ್ಳಬೇಕು. ನಿಮ್ಮ ತಾಲೂಕು ಆಯ್ಕೆ ಮಾಡಿಕೊಂಡು ನಿಮ್ಮ ಊರು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ. ಇದಾದ ನಂತರ ನೀವು Get Report ಮೇಲೆ ಕ್ಲಿಕ್ ಮಾಡಬೇಕು.

ಇದನ್ನೂ ಓದಿ ಗೃಹ ಲಕ್ಷ್ಮೀ ಯೋಜನೆಯ ಹಣ ಈ ಪಟ್ಟಿಯಲ್ಲಿರುವ ಮಹಿಳೆಯರಿಗೆ ಜಮೆ

ಆಗ ಪಿಎಂ ಕಿಸಾನ್ ಯೋಜನೆಯ ಫಲಾನುಭವಿಗಳ ಪಟ್ಟಿ ಕಾಣಿಸುತ್ತದೆ. ಅಲ್ಲಿ ನೀವು ಆಯ್ಕೆ ಮಾಡಿಕೊಂಡ ಗ್ರಾಮದಲ್ಲಿ ಯಾವ ಯಾವ ರೈತರು ನೋಂದಣಿ ಮಾಡಿಸಿದ್ದಾರೆ ಅವರ ಹೆಸರು ಕಾಣಿಸುತ್ತದೆ.

ಇಕೆವೈಸಿ ಮಾಡಿಸಿದ್ದೀರೋ ಇಲ್ಲವೋ? ಚೆಕ್ ಮಾಡುವುದು ಹೇಗೆ?

ಪಿಎಂ ಕಿಸಾನ್ ಯೋಜನೆಗೆ ನೋಂದಣಿ ಮಾಡಿಸಿದ ರೈತರು ತಮ್ಮಇಕೆವೈಸಿ ಆಗಿದೆಯೋ ಇಲ್ಲವೋ ಎಂಬುದನ್ನು ಚೆಕ್ ಮಾಡಿಕೊಳ್ಳಬಹುದು. ಏಕೆಂದರೆ ನೀವು ಇಕೆವೈಸಿ ಮಾಡಿಸಿದರೆ ಮಾತ್ರ ನಿಮಗೆ ಮುಂದಿನ ಕಂತು ಜಮೆಯಾಗುತ್ತದೆ. ಹಾಗಾದರೆ ಇಕೆವೈಸಿ ಆಗಿದೆಯೋ ಇಲ್ಲವೋ ಎಂಬುದನ್ನು ಚೆಕ್ ಮಾಡಲು ಈ

https://exlink.pmkisan.gov.in/aadharekyc.aspx

ಲಿಂಕ್ ಮೇಲೆ ಕ್ಲಿಕ್ ಮಾಡಬೇಕಾಗುತ್ತದೆ. ನಂತರ ನಿಮ್ಮ ಆಧಾರ್ ಕಾರ್ಡ್ ನಮೂದಿಸಿ Search ಮೇಲೆ ಕ್ಲಿಕ್ ಮಾಡಬೇಕು. ನೀವು ಇಕೆವೈಸಿ ಮಾಡಿಸಿದ್ದರೆ ನಿಮ್ಮ ಇಕೆವೈಸಿ ಸಕ್ಸೆಸಫುಲಿ ಆಗಿದೆ ಎಂಬ ಮೆಸೆಜ್ ಕಾಣಿಸುತ್ತದೆ. ಇಲ್ಲದಿದ್ದರೆ ನಿಮ್ಮ ಮೊಬೈಲ್ ನಂಬರ್ ಹಾಕಿ ಓಟಿಪಿ ಮೂಲಕ ಇಕೆವೈಸಿ ಮಾಡಿಸಿಕೊಳ್ಳಬಹುದು.

ಪಿಎಂ ಕಿಸಾನ್ 17 ನೇ ಕಂತಿನ ಹಣ ಯಾವಾಗ ಜಮೆಯಾಗಲಿದೆ?

ಪಿಎಂ ಕಿಸಾನ್ ಯೋಜನೆಯ 17 ನೇ ಕಂತಿನ ಹಣ ಜೂನ್ಗ ತಿಂಗಳಲ್ಲಿ ಜಮೆಯಾಗಲಿದೆ. ಏಕೆಂದರೆ ಪ್ರತಿ ನಾಲ್ಕು ತಿಂಗಳಿಗೆ 2000 ರೂಪಾಯಿಯಂತೆ ಒಟ್ಟು ಒಂದು ವರ್ಷಕ್ಕೆ 6 ಸಾವಿರ ರೂಪಾಯಿ ರೈತರ ಖಾತೆಗೆ  ಜಮೆ ಮಾಡಲಾಗುವುದು. ಕಳೆದ ತಿಂಗಳು ರೈತರ ಖಾತೆಗೆ  ಪಿಎಂ ಕಿಸಾನ್ ಯೋಜನೆಯ 16 ನೇ ಕಂತಿನ ಹಣ ಜಮೆಯಾಗಿತ್ತು.ಈಗ ಅತೀ ಶೀಘ್ರದಲ್ಲಿ 17ನೇ ಕಂತಿನ ಹಣ ರೈತರಖಾತೆಗೆ ಜಮೆಯಾಗಲಿದೆ.

Leave a Comment