Panchatantra 2.0: ನಿಮ್ಮ ಗ್ರಾಪಂ ಮಾಹಿತಿ Mobileನಲ್ಲೇ ಚೆಕ್ ಮಾಡಿ

Written by Ramlinganna

Updated on:

Panchatantra 2.0: ಗ್ರಾಮ ಪಂಚಾಯತಿಗೆ ಸೇರಿದ ಎಲ್ಲಾ ಮಾಹಿತಿಗಳು ಅಂದರೆ ಗ್ರಾಪಂ ಸದಸ್ಯರು, ಅಧಿಕಾರಿಗಳ ಹಾಗೂ ತೆರಿಗೆ, ಕಾಮಗಾರಿಗಳ ಮಾಹಿತಿಯನ್ನು ಸಾರ್ವಜನಿಕರು ಮೊಬೈಲ್ ನಲ್ಲೇ ಚೆಕ್ ಮಾಡಬಹುದು.

ಹೌದು, ಪಂಚಮಿತ್ರವು ಕರ್ನಾಟಕದ ಗ್ರಾಮ ಪಂಚಾಯತ್ ಗಳ ಸಾರ್ವಜನಿಕ ಮಾಹಿತಿ ವೇದಿಕೆಯಾಗಿದೆ. ಯಾವುದೇ ಸಾರ್ವಜನಿಕ ಸದಸ್ಯರು, ಚುನಾಯಿತ ಪ್ರತಿನಿಧಿಗಳು, ಪಂಚಾಯತ್ ಸಿಬ್ಬಂದಿ, ಸಭೆಯ ನಡವಳಿಕೆ, ಪಂಚಾಯತ್ ಆದಾಯ ಮತ್ತು ಬಜೆಟ್ ವಿವರಗಳ ಮಾಹಿತಿ ನೋಡಬಹುದು. ಇದರೊಂದಿಗೆ ಮುಂಬರುವ ಸಭೆಗಳ ದಿನಾಂಕಗಳು ಇತ್ಯಾದಿಗಳಿಗೆ ಸಂಬಂಧಿಸಿದ ಸಾರ್ವಜನಿಕ ಮಾಹಿತಿಯನ್ನು ಚೆಕ್ ಮಾಡಬಹುದು. ಅದು ಹೇಗೆ ಅಂದು ಕೊಂಡಿದ್ದೀರಾ? ಇ್ಲಿದೆ ನೋಡಿ  ಮಾಹಿತಿ.

Panchatantra 2.0 ಪಂಚಮಿತ್ರದಲ್ಲಿ ಗ್ರಾಮ ಪಂಚಾಯತಿಯ ಮಾಹಿತಿ ಚೆಕ್ ಮಾಡುವುದು ಹೇಗೆ?

ಗ್ರಾಮ ಪಂಚಾಯತಿಗೆ ಸಂಬಂಧಿಸಿದ ಮಾಹಿತಿಗಳನ್ನು ಈಗ ಸಾರ್ವಜನಿಕರು ಮೊಬೈಲ್ ನಲ್ಲೇ ಚೆಕ್ ಮಾಡಬಹುದು. ಈ ಮಾಹಿತಿಗಳನ್ನು ಚೆಕ್ ಮಾಡಲು ಈ

https://panchatantra.karnataka.gov.in/USER_MODULE/userLogin/loadPanchamitra

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಪೇಜ್ ತೆರೆದುಕೊಳ್ಳುತ್ತದೆ. ಅದರ ಕೆಳಗಡೆ ನಿಮಗೆ ಪಂಚಮಿತ್ರದ ಕೆಳಗಡೆ ಏನೇನು ಮಾಹಿತಿ ಸಿಗುತ್ತದೆ ಎಂಬುದರ ಕುರಿತು ಸಂಕ್ಷೀಪ್ತವಾಗಿ ಬರೆಯಲಾಗಿರುತ್ತದೆ. ಅದರ ಕೆಳಗಡೆ ನೀವು ನಿಮ್ಮ ಜಿಲ್ಲೆಯನ್ನು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ. ನಂತರ ನಿಮ್ಮ ತಾಲೂಕು ಆಯ್ಕೆ ಮಾಡಿಕೊಳ್ಳಬೇಕು. ನಂತರ ನಿಮ್ಮಗ್ರಾಮ ಪಂಚಾಯತ್ ಆಯ್ಕೆ ಮಾಡಿಕೊಳ್ಳಬೇಕು. ಇದಾದಮೇಲೆ ಹುಡುಕು ಮೇಲೆ ಕ್ಲಿಕ್ ಮಾಡಬೇಕು. ಆಗ ಇನ್ನೊಂದು ಪೇಜ್ ತೆರೆದುಕೊಳ್ಳುತ್ತದೆ.

ಜನರಲ್ ಬಾಡಿ ಸದಸ್ಯರ ಮಾಹಿತಿ

ಜನರಲ್ ಬಾಡಿ ಸದಸ್ಯರ ಮಾಹಿತಿ ಬಾಕ್ಸ್ ನಲ್ಲಿ ಎಷ್ಟು ಜನ ಪುರುಷರು ಹಾಗೂ ಎಷ್ಟುಜನ ಮಹಿಳಾ ಸದಸ್ಯರಿದ್ದಾರೆ ಎಂಬ ಮಾಹಿತಿ ಇರುತ್ತದೆ.  ಅಲ್ಲಿ ಕಾಣುವ ಜಿಪಿ ಜನರಲ್ ಬಾಡಿ ಸದಸ್ಯರು ಮೇಲೆ ಕ್ಲಿಕ್ ಮಾಡಬೇಕು. ಆಗ ಗ್ರಾಮ ಪಂಚಾಯತ್ ಅಧ್ಯಕ್ಷ ಯಾರಿದ್ದಾರೆ ಅವರ ಹೆಸರು ಹಾಗೂ ಮೊಬೈಲ್ ನಂಬರ್ ಇರುತ್ತದೆ. ಇದರೊಂದಿಗೆ ಗ್ರಾಮ ಪಂಚಾಯತ್ ಯಾರ್ಯಾರು ಸದಸ್ಯರಿದ್ದಾರೆ? ಅವರ ಹೆಸರು ಹಾಗೂ ಅವರ ಮೊಬೈಲ್ ನಂಬರ್ ಗಳನ್ನು ಸಹ ನಮೂದಿಸಲಾಗಿರುತ್ತದೆ.  ಸದಸ್ಯರ ಹೆಸರಿನ ಮೇಲೆಕ್ಲಿಕ್ ಮಾಡಿದರೆ ಅವರ ಹುಟ್ಟಿದಜ ದಿನಾಂಕ ಹಾಗೂ ಈ ಮೇಲ್ ಆಡಿ ಸಹ ಇರುತ್ತದೆ.

ಇದನ್ನೂ ಓದಿ Ration card status ಮೊಬೈಲ್ ನಲ್ಲಿ ಚೆಕ್ ಮಾಡುವುದು ಹೇಗೆ? ಇಲ್ಲಿದೆ ಮಾಹಿತಿ

ನೀವು ನಿಮ್ಮ ಗ್ರಾಮ ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷು ಹಾಗೂ ಚುನಾಯಿತ ಸದ್ಯರಿಗೆ ನಿಮ್ಮ ಊರಿಗೆ ಸಂಬಂಧಿಸಿದ ಸಮಸ್ಯೆಗಳು, ಕಾಮಗಾರಿಗಳ ಮಾಹಿತಿಯನ್ನು ಮನೆಯಲ್ಲಿಯೇ ಕುಳಿತು ಪಡೆಯಬಹುದು. ಮಾಹಿತಿ ಕೇಳಲು ನೀವು ಗ್ರಾಮ ಪಂಚಾಯತಿಗೆ ಹೋಗಬೇಕಿಲ್ಲ. ಮನೆಯಲ್ಲಿಯೇ ಕುಳಿತು  ಗ್ರಾಪಂ ಅಧ್ಯಕ್ಷರಿಗೆ ಕರೆ ಮಾಡಿ ನಿಮ್ಮೂರಿನ ಮಾಹಿತಿಗಳನ್ನುಪಡೆದುಕೊಳ್ಳಬಹುದು.

ಒಟ್ಟು ಸಿಬ್ಬಂದಿಗಳ ಮಾಹಿತಿ

ನಿಮ್ಮ ಗ್ರಾಮ ಪಂಚಾಯತಿಯಲ್ಲಿರುವ ಎಲ್ಲಾ ಸಿಬ್ಬಂದಿಗಳ ಮಾಹಿತಿ ಪಡೆಯಲು ಒಟ್ಟು ಸಿಬ್ಬಂದಿ ಮೇಲೆ ಕ್ಲಿಕ್ ಮಾಡಬೇಕು. ಆಗ ಇನ್ನೊಂದು ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ನಿಮ್ಮ ಗ್ರಾಮ ಪಂಚಾಯತಿಯ ಪರಿಚಾರಕ, ಸ್ವಚ್ಛಗಾರರು, ವಾಟರ್ ಆಪರೇಟರ್,  ಕ್ಲರ್ಕ್, ಡಾಟಾ ಎಂಟ್ರಿ ಆಪರೇಟರ್ ಯಾರ್ಯಾರು ಇದ್ದಾರೆ ಎಲ್ಲಾ ಸಿಬ್ಬಂದಿಗಳ ಹೆಸರು ಹಾಗೂ ಅವರ ಮೊಬೈಲ್ ನಂಬರ್ ಸಹ ಕಾಣಿಸುತ್ತದೆ. ಡಾಟಾ ಎಂಟ್ರಿ ಆಪರೇಟರ್ ನಂಬರ್ ಹಾಗೂ ವಾಟರ್ ಆಪರೇಟರ್ ಅವರ ಮೊಬೈಲ್ ನಂಬರ್ ದಿಂದ ನೀವು ನಿಮಗೆ ಸಂಬಂಧಿಸಿದ ಸಮಸ್ಯೆಗಳಿಗೆ ಕರೆ ಮಾಡಬಹುದು.

ಚುನಾಯಿತ ಪ್ರತಿನಿಧಿ ವಿವರಗಳು, ಸಿಬ್ಬಂದಿ ವಿವರಗಳು, ಸಭೆಗಳು, ಆದಾಯ ಸಂಗ್ರಹ, ನಾಗರಿಕ ಸೇವೆಗಳು, ಸರ್ವೆ ಸೇರಿದಂತೆ ಇನ್ನಿತರ ಮಾಹಿತಿಗಳನ್ನು ಇಲ್ಲೇ ಪಡೆದುಕೊಳ್ಳಬೇಕು. ಕೇವಲ ನಿಮಗೆ ಕಾಣುವ ಮಾಹಿತಿ ಮೇಲೆ ಕ್ಲಿಕ್ ಮಾಡಿದರೆ ಸಾಕು, ನಿಮಗೆ ಎಲ್ಲಾ ಮಾಹಿತಿ ಸಿಗುತ್ತದೆ.

Leave a Comment