ರಾಜ್ಯದ ಈ ಜಿಲ್ಲೆಗಳಲ್ಲಿ ಈ ದಿನದಿಂದ ಮಳೆಯಾಗಲಿದೆ

Written by Ramlinganna

Updated on:

Monsoon weather information ಮಳೆಗಾಲ ಆರಂಭವಾಗಿದ್ದರೂ ಇನ್ನೂ  ನಿರೀಕ್ಷೆಯಂತೆ ಈ ಸಲ ಮಳೆ ವಿಳಂಬವಾಗಿದೆ. ಆದರೂ ಸಹ ಮುಂದಿನ ವಾರದಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ.

ನೈರುತ್ಯ ಮುಂಗಾರು ಜೂನ್ 2 ಮನೇ ವಾರದಲ್ಲಿ ರಾಜ್ಯದಲ್ಲಿ ಪ್ರವೇಶಿಸುವ ಸಾಧ್ಯತೆಯಿದೆ. ಇನ್ನೊಂದೆಡೆ  ಬಿತ್ತನೆಗಾಗಿ ಕಾಯುತ್ತಿರುವ ರೈತರು ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದಾರೆ.

ಜೂನ್ ಮೊದಲ ವಾರದಲ್ಲಿ ಮಳೆ ಬರುವ ಮುನ್ಸೂಚನೆ ಇತ್ತು. ಆದರೆ ಮಳೆಯಾದ ರೈತ ಸಮುದಾಯದಲ್ಲಿ ಆತಂಕ ಉಂಟು ಮಾಡಿದೆ. ಇನ್ನೂ ಕೆಲವು ಕಡೆ ಮೋಡ ಕವಿದ ವಾತಾವರಣದಿಂದಾಗಿ ರೈತರು ನೆಮ್ಮದಿಯ ಉಸಿರುಬಿಡುತ್ತಿದ್ದಾರೆ. ಆದರೂ ಸಾಯಂಕಾಲದ ನಂತರ ಮಳೆಯಾಗದೆ ನಿರಾಶೆ ಮೂಡಿಸುತ್ತಿದೆ.

ಪ್ರತಿ ವರ್ಷ ಸಾಮಾನ್ಯವಾಗಿ ಜೂನ್ ಮೊದಲ ವಾರದ ವೇಳೆಗೆ ಮುಂಗಾರು ಕೇರಳ ಪ್ರವೇಶಿಸುತ್ತದೆ. ಆ ಮೂಲಕ ಕರ್ನಾಟಕ ಮೂಲಕ ಮಹಾರಾಷ್ಟ್ರ, ರಾಜಸ್ಥಾನದ ಕಡೆಗೆ ಹೋಗುತ್ತಿತ್ತು. ಆದರೆ ಈ ವರ್ಷ ಇನ್ನೂ ಮುಂಗಾರು ಮಳೆ ಕೇರಳ ಪ್ರವೇಶ ಮಾಡಿರುವ ಬಗ್ಗೆ ಇನ್ನೂ ದೃಡಪಟ್ಟಿಲ್ಲ.ಹಾಗಾಗಿ ಜೂನ್ 5 ರ ನಂತರ ಮಳೆಯಾಗುತ್ತಿತ್ತು. ಆಧರೆ ಇನ್ನೂ ಕೇರಳವನ್ನು ಮುಂಗಾರು ಪ್ರವೇಶ ಮಾಡಿಲ್ಲ. ಮುಂಗಾರು ಮಳೆ ಆರಂಭದಲ್ಲಿ ದುರ್ಬಲಗೊಂಡಿರುವುದು ರೈತರಲ್ಲಿ ಆತಂಕ ಉಂಟುಮಾಡಿದೆ.

ರಾಜ್ಯದಲ್ಲಿ ಮಳೆಯ ಅಬ್ಬರ ಇನ್ನೂಕಂಡುಬರುತ್ತಿಲ್ಲ. ಜೂನ್ 10 ರ ನಂತರ ರಾಜ್ಯದಲ್ಲಿ ಮುಂಗಾರು ಅಬ್ಬರ ಹೆಚ್ಚಾಗುವ ಸಾಧ್ಯತೆಯಿದೆ. ಎರಡನೇ ವಾರದಲ್ಲಿ ಕರಾವಳಿಯಲ್ಲಿ ಮಳೆ ಯಾಗಲಿದೆ. ರಾಜ್ಯದ ಒಳನಾಡಿನಲ್ಲಿ ಸಾಧಾರಣ ಮಳೆಯಾಗಲಿದೆ.

ಇದನ್ನೂ ಓದಿ : ಪಿಎಂ ಕಿಸಾನ್ ಸ್ಟೇಟಸ್ ಚೆಕ್ ಮಾಡುವ ವಿಧಾನ ಬದಲಾವಣೆ- ಮೊಬೈಲ್ ನಲ್ಲಿ ಹೀಗೆ ಚೆಕ್ ಮಾಡಿ

ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ನಿರ್ಮಾಣವಾಗುತ್ತಿದ್ದು, ಅದು ತೇವಾಂಶ ಸೆಳೆದುಕೊಳ್ಳುವ ಸಾಧ್ಯತೆಗಳು ಹೆಚ್ಚಿವೆ. ಮುಂಗಾರು ಚೇತರಿಕೆ ಲಕ್ಷಣಗಳು ಕಡಿಮೆಯಿದೆ. ಇನ್ನೊಂದೆಡೆ ರಾಜ್ಯದಲ್ಲಿ ಮುಂಗಾರು ಪೂರ್ವ ಮಳೆ ಅಲ್ಲಲ್ಲಿ ಚದುರಿದಂತೆ ಆಗುತ್ತಿದೆ.

Monsoon weather information ನಿಮ್ಮ ಜಿಲ್ಲೆಯಲ್ಲಿ ಮಳೆ ಯಾವಾಗ ಅಗುತ್ತದೆ? ತಿಳಿಯಬೇಕು?

ಹವಾಮಾನ ಇಲಾಖೆಯ ಪ್ರಕಾರ ನಿಮ್ಮ ಜಿಲ್ಲೆಯಲ್ಲಿ ಯಾವಾಗ ಮಳೆಯಾಗುತ್ತದೆ ಎಂಬುದನ್ನು ತಿಳಿಯಲು ಈ

https://mausam.imd.gov.in/

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಐಎಮ್.ಡಿ ಪೇಜ್ ಅಂದರೆ ಮೌಸಮ್  ಪೇಜ್ ತೆರೆದುಕೊಳ್ಳುತ್ತದೆ.  ಅಲ್ಲಿ ವಾರ್ನಿಂಗ್ ಕೆಳಗಡೆ ಡಿಸ್ಟ್ರಿಕ್ಟ್ ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮ್ಮ ಕರ್ನಾಟಕ ರಾಜ್ಯದ ಜಿಲ್ಲೆಗಳು ಕಾಣಿಸುತ್ತವೆ.

ನಿಮ್ಮ ಜಿಲ್ಲೆಯಲ್ಲಿ ಮಳೆ ಯಾವ ರೀತಿ ಆಗುತ್ತದೆ ಅಂದರೆ ಗುಡುಗು ಮಿಂಚಿನೊಂದಿಗೆ ಮಳೆಯಾಗುತ್ತೋ ಅಥವಾ ಮಳೆಯ ಎಚ್ಚರಿಕೆ ಇಲ್ಲವೋ ಎಂಬ ಮಾಹಿತಿ ಕಾಣಿಸುತ್ತದೆ. ಈ ಆಧಾರದ ಮೇಲೆ ಮುಂದಿನ ಐದು ದಿನದ ಮಳೆಯ ಮಾಹಿತಿ ಪಡೆಯಬಹುದು.

ಒಂದು ಕರೆ ಮಾಡಿ ಮಳೆಯ ಮಾಹಿತಿ ಪಡೆಯುವುದು ಹೇಗೆ?

ರೈತರು, ಸಾರ್ವಜನಿಕರು ಕೇವಲ ಒಂದು ಕರೆ ಮಾಡಿದರೆ ಸಾಕು, ನಿಮ್ಮ ಜಿಲ್ಲೆಯಲ್ಲಿ ಅದರಲ್ಲಿ ನಿಮ್ಮ ಊರಿನಲ್ಲಿಯಾವಾಗ ಮಳೆಯಾಗುತ್ತದೆ? ಮಳೆಯ ಪ್ರಮಾಣ ಹೇಗಿರುತ್ತದೆ. ಅಲ್ಲಿಯ ವಾತಾವರಣ ಹಾಗೂ ಗಾಳಿಯ ವೇಗ ದಿಕ್ಕು ಸೇರಿದಂತೆ ಇನ್ನಿತರ ಮಾಹಿತಿಯನ್ನು ಒಂದು ಕರೆಯ ಮೂಲಕ ತಿಳಿದುಕೊಳ್ಳಬಹುದು. ಹೌದು, ಹವಾಮಾನ ಇಲಾಖೆಯ ವರುಣ ಮಿತ್ರ ಸಹಾಯವಾಣಿಗೆ ಕರೆ ಮಾಡಬೇಕು. 92433 45433 ಈ ವರುಣಮಿತ್ರ ಸಹಾಯವಾಣಿಗೆ ಕರೆ ಮಾಡಿ ನೀವು ನಿಮ್ಮ ಜಿಲ್ಲೆಯಲ್ಲಿ, ತಾಲೂಕಿನಲ್ಲಿ ಹಾಗೂ ನಿಮ್ಮೂರಿನಲಿ ಮಳೆಯಾಗುವ ಮಾಹಿತಿಯನ್ನು ಪಡೆದುಕೊಳ್ಳಬಹುದು. ಇದು ಸಂಪೂರ್ಣವಾಗಿ ಉಚಿತವಾಗಿರುತ್ತದೆ. ಇದಕ್ಕೆ ಯಾವುದೇ ಹಣ ಪಾವತಿಸುವ ಅಗತ್ಯವಿಲ್ಲ, ಈ ಉಚಿತ ಸಹಾಯವಾಣಿಯು ದಿನದ 24 ಗಂಟೆ ಕಾರ್ಯನಿರ್ವಹಿಸುತ್ತಿದೆ. ಯಾವುದೇ ಸಮಯದಲ್ಲಿ ಮನೆಯಲ್ಲಿಯೇ ಕುಳಿತು ಕರೆ ಮಾಡಿ ಹವಾಮಾನದ ಮಾಹಿತಿಯನ್ನು ಪಡೆದುಕೊಳ್ಳಬಹುದು.

Leave a Comment