ಇಂದಿನಿಂದ ಮೂರು ದಿನ ಭಾರಿ ಮಳೆಯ ಮುನ್ಸೂಚನೆ

Written by Ramlinganna

Updated on:

Weather update rain alert ರಾಜ್ಯದ ಹಲವು ಜಿಲ್ಲೆಗಳಲ್ಲಿ ಇಂದಿನಿಂದ ಮೂರು ದಿನ ಗುಡುಗು ಸಹಿತ ಭಾರಿ ಮಳೆಯಾಗುವ ಸಾದ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಮೇ 8 ರಂದು ಶಿವಮೊಗ್ಗ, ಹಾಸನ, ಕೊಡಗು ಹಾಗೂ ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಳೆಯಾಗಲಿದೆ. ಮೇ 9 ರಂದು ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಯಲ್ಲಿ ಮಳೆಯಾಗಲಿದೆ ಹಾಗೂ ಮೇ 10 ರಂದು ಮೈಸೂರು, ಚಿಕ್ಕಬಳ್ಳಾಪುರ ಹಾಗೂ ಚಾಮರಾಜನಗರ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಈ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.

ದಕ್ಷಿಣ ಒಳನಾಡಿನ ವ್ಯಾಪ್ತಿಯ ಜಿಲ್ಲೆಗಲ್ಲಿಲ ಅಲ್ಲಲ್ಲಿ, ಕರಾವಳಿ ಹಾಗೂ ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆಯಿದೆ.

ಇದನ್ನೂ ಓದಿ ಈ ಲಿಸ್ಟ್ ನಲ್ಲಿರುವ ರೈತರಿಗೆ ಪಿಎಂ ಕಿಸಾನ್ ಹಣ ಜಮೆಯಾಗಲ್ಲ  ಇಲ್ಲೇ ಚೆಕ್ ಮಾಡಿ

ಕರಾವಳಿ ಭಾಗದ ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೂ ಮಳೆಯಾಗಲಿದೆ. ಅದೇ ರೀತಿ ಉತ್ತರ ಒಳನಾಡಿನ ಗದಗ, ರಾಯಚೂರು, ಕಲಬುರಗಿ, ಕೊಪ್ಪಳ, ಬೀದರ್ ಹಾಗೂ ಬಾಗಲಕೋಟೆಯಲ್ಲಿ ಚದುರಿದಂತೆ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ

ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ ಇರಲಿದೆ. ಸಾಯಂಕಾಲ ಅಥವಾ ರಾತ್ರಿ ಸಮಯದಲ್ಲಿ ಹಗುರದಿಂದ ಸಾಧಾರಣ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ.

Weather update rain alert ನಿಮ್ಮೂರಿನಲ್ಲಾಗುವ ಮಳೆಯ ಮಾಹಿತಿ ಮೊಬೈಲ್ ನಲ್ಲೇ ಪಡೆಯಿರಿ 

ಸಾರ್ವಜನಿಕರು ತಮ್ಮೂರಿನಲ್ಲಿ ಮಳೆಯಾಗುತ್ತೋ ಇಲ್ಲವೋ ಎಂಬುದನ್ನು ಈಗ ಮೊಬೈಲ್ ನಲ್ಲೇ ಚೆಕ್ ಮಾಡಬಹುದು. ಹೌದು, ಸರ್ಕಾರ ಆರಂಭಿಸಿದ ವರುಣಮಿತ್ರ  ಸಹಾಯವಾಣಿ ನಂಬರ್ 9243345433 ಗೆ ಕರೆ ಮಾಡಿದರೆ ಸಾಕು, ನೀವು ನಿಮ್ಮೂರಿನಲ್ಲಿ ಮಳೆ ಯಾವಾಗ ಬರುತ್ತೇ ಎಂಬುದರ ಬಗ್ಗೆ ಮಾಹಿತಿ ಪಡೆಯಬಹುದು.

ಐದು ದಿನ ಮೊದಲೇ ಮಳೆಯ ಮಾಹಿತಿ ಸಿಗುತ್ತದೆ ಮೊಬೈಲ್ ನಲ್ಲಿ (Five days before gives rain alert Meghdoot)

ನಿಮ್ಮೂರಿಲ್ಲಿ ಮಳೆಯಾಗುವ ಐದು ದಿನ ಮೊದಲೇ ನಿಮಗೆ ಮಾಹಿತಿ ನೀಡುತ್ತದೆ ಮೇಘದೂತ್ ಆ್ಯಪ್. ಹೌದು, ಮೇಘದೂತ್ ಆ್ಯಪ್ ಮೊಬೈಲ್ ನಲ್ಲಿ ಡೌನ್ಲೋಡ್ ಮಾಡಿಕೊಂಡರೆ ಸಾಕು, ನೀವು ಒಂದೇ ನಿಮಿಷದಲ್ಲಿ ನಿಮ್ಮೂರಿನಲ್ಲಿ ಐದು ದಿನ ಮೊದಲೇ ಮಳೆಯಾಗುವ ಮಾಹಿತಿ ಪಡೆಯಬಹುದು. ಅದು ಹೇಗೆ ಅಂದುಕೊಂಡಿದ್ದೀರಾ? ಇಲ್ಲಿದೆ ನೋಡಿ ಮಾಹಿತಿ.

ಮೇಘದೂತ್ ಆ್ಯಪ್ ನಿಮ್ಮ ಮೊಬೈಲ್ ನಲ್ಲಿ ಇನಸ್ಟಾಲ್ ಮಾಡಲು ಈ

https://play.google.com/store/apps/details?id=com.aas.meghdoot&hl=en_IN&gl=US

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಮೇಘದೂತ್ ಆ್ಯಪ್ ಓಪನ್ ಆಗುತ್ತದೆ. ಅಲ್ಲಿ ಕಾಣುವ install ಮೇಲೆ ಕ್ಲಿಕ್ ಮಾಡಬೇಕು. ನಂತರ ಅಲ್ಲಿ ಕೇಳಲಾಗುವ ಮಾಹಿತಿಗಳನ್ನು ಭರ್ತಿ ಮಾಡಿ ನಿಮ್ಮ ಮೊಬೈಲ್ ನಲ್ಲಿ ಆ್ಯಪ್ ಇನಸ್ಟಾಲ್ ಮಾಡಿಕೊಂಡು ಮಳೆಯ ಮಾಹಿತಿಯನ್ನು ಪಡೆದುಕೊಳ್ಳಬಹುದು.

ಸಿಡಿಲಿನ ಮಾಹಿತಿ ಸಹ ಮೊಬೈಲ್ ನಲ್ಲೇ ಪಡೆಯಬಹುದು

ಸಾರ್ವಜನಿಕರು ಸಿಡಿಲಿನಿಂದ ತಪ್ಪಿಸಿಕೊಳ್ಳಲು ಸರ್ಕಾರವು ಸಿಡಿಲು ಹಾಗೂ ದಾಮಿನಿ ಎಂಬ ಎರಡು ಆ್ಯಪ್ ಗಳನ್ನು ಆರಂಭಿಸಿದೆ. ಈ ಆ್ಯಪ್ ಗಳ ಸಹಾಯದಿಂದ ಸಾರ್ವಜನಿಕರು ಸಿಡಿಲಿನಿಂದ ತಪ್ಪಿಸಿಕೊಳ್ಳಬಹುದು. ಸಿಡಿಲು ಬೀಳುವ ಐದು ನಿಮಿಷ ಮೊದಲೇ ನಿಮ್ಮ ಮೊಬೈಲಿಗೆ ಸಂದೇಶ ರವಾನಿಸಲಿದೆ. ಅದಷ್ಟೇ ಅಲ್ಲ, ನಿಮ್ಮ ಸುತ್ತಮುತ್ತಲಿನ ವ್ಯಾಪ್ತಿಯಲ್ಲಿ ಅಂದರೆ ಎಷ್ಟು ಕಿ.ಮೀ ಅಂತರದಲ್ಲಿ ಸಿಡಿಲು ಬೀಳುತ್ತದೆ ಎಂಬ ಮಾಹಿತಿಯನ್ನು ಈ ಆ್ಯಪ್ ಗಳು ನೀಡುತ್ತವೆ.

ನೀವು ಗೂಗಲ್ ಪ್ಲೇ ಸ್ಟೋರ್ ನಲ್ಲಿ Damini ಅಥವಾ Sidilu ಎಂದು ಟೈಪ್ ಮಾಡಬೇಕು. ನಂತರ ಇನಸ್ಟಾಲ್ ಮೇಲೆ ಕ್ಲಿಕ್ ಮಾಡಿ ನಿಮ್ಮ ಮೊಬೈಲಿಗೆ ಇನಸ್ಟಾಲ್ ಮಾಡಿಕೊಳ್ಳಬಹುದು.

Leave a Comment